30.6 C
Bengaluru
Wednesday, March 15, 2023
spot_img

ಇಟಲಿಯ ನಿಗೂಢ  ಸಾವಿನ ದ್ವೀಪದ ಕಥೆ!

-ಶೌರ್ಯ ಡೆಸ್ಕ್

ಜಗತ್ತು ಸ್ವಾಭಾವಿಕವಾಗಿ ಇಟಲಿಯನ್ನು ಶ್ರೀಮಂತ ಪ್ರಾಕೃತಿಕ ಸೌಂದರ್ಯ ಹೊಂದಿರುವ ಅಮೋಘ ತಾಣವೆಂದು ಪರಿಗಣಿಸಿದೆ. ಇದು ನಿಜವೂ ಹೌದು. ಆದರೆ ಇಂತಹ ಸುಂದರವಾದ ದೇಶದಲ್ಲಿ ಶಾಪಗ್ರಸ್ತವಾದ ನಿಗೂಢ ದ್ವೀಪವೊಂದಿದೆ. ಅಲ್ಲಿಗೆ ಕಾಲಿಡಲು ಜನ ಹೆದರುತ್ತಾರೆ. ಮನಸ್ಸು ಗಟ್ಟಿ ಮಾಡಿ ಹೋದವರು ಬರುವಷ್ಟರಲ್ಲಿ ಹಿಂದಿನಂತೆ ಇರುವುದಿಲ್ಲ. ಗಯೋಲಾ ದ್ವೀಪ ನೋಡುವುದಕ್ಕೆ ಅದ್ಭುತವಾಗಿದೆ. ಆದರೆ ಅಲ್ಲಿಗೆ ತೆರಳಿದವರು ನಿಗೂಢ ಸಾವುಗಳನ್ನು ಹೊಂದುತ್ತಾರೆ.

ಪ್ರಪಂಚದಲ್ಲಿ ಅಸಂಖ್ಯಾತ ನಿಗೂಢ ದ್ವೀಪಗಳಿವೆ. ಸಪ್ತಸಾಗರಗಳಲ್ಲಿ ಮನುಷ್ಯನ ಹೆಜ್ಜೆ ಗುರುತು ಮೂಡದ, ನೀರಿನಿಂದ ಸುತ್ತುವರಿದ ನೆಲಗಳಿವೆ. ಅನೇಕ ದ್ವೀಪಗಳ ಬಗ್ಗೆ ನಿಗೂಢವಾದ ಕಥೆಗಳು, ರಹಸ್ಯಗಳಿವೆ. ಇಂಥದ್ದೇ ಒಂದು ದ್ವೀಪ ಇಟಲಿಯ ಗಯೋಲಾ ದ್ವೀಪ.

ಜಗತ್ತು ಸ್ವಾಭಾವಿಕವಾಗಿ ಇಟಲಿಯನ್ನು ಶ್ರೀಮಂತ ಪ್ರಾಕೃತಿಕ ಸೌಂದರ್ಯ ಹೊಂದಿರುವ ಅಮೋಘ ತಾಣವೆಂದು ಪರಿಗಣಿಸಿದೆ. ಇದು ನಿಜವೂ ಹೌದು. ಆದರೆ ಇಂತಹ ಸುಂದರವಾದ ದೇಶದಲ್ಲಿ ಶಾಪಗ್ರಸ್ತವಾದ ನಿಗೂಢ ದ್ವೀಪವೊಂದಿದೆ. ಅಲ್ಲಿಗೆ ಕಾಲಿಡಲು ಜನ ಹೆದರುತ್ತಾರೆ. ಮನಸ್ಸು ಗಟ್ಟಿ ಮಾಡಿ ಹೋದವರು ಬರುವಷ್ಟರಲ್ಲಿ ಹಿಂದಿನಂತೆ ಇರುವುದಿಲ್ಲ. ಇಟಲಿಯ ನೇಪಲ್ಸ್ನಲ್ಲಿರುವ ಈ ಸಣ್ಣ ದ್ವೀಪ ಈ ಕಾರಣಕ್ಕಾಗಿ ಕುಖ್ಯಾತಿ ಪಡೆದಿದೆ. ಗಯೋಲಾ ದ್ವೀಪ ನೋಡುವುದಕ್ಕೆ ಅದ್ಭುತವಾಗಿದೆ. ಆದರೆ ಅಲ್ಲಿಗೆ ತೆರಳಿದವರು ಮತ್ತು ಅದರ ಮೇಲೆ ಹಕ್ಕುಸ್ವಾಮ್ಯ ಮಾಡಿದವರು ಅಕಾಲಿಕ ಮರಣ, ಮಾನಸಿಕ ಅಸ್ವಸ್ಥತೆ, ನಿಗೂಢ ಸಾವುಗಳನ್ನು ಹೊಂದುತ್ತಾರೆ ಎಂಬುದು ನಿರಂತರವಾಗಿ ವರದಿಯಾಗಿದೆ.

ಏನಿದು ಕಥೆ?

19ನೇ ಶತಮಾನದಲ್ಲಿ ಗಯೋಲಾ ದ್ವೀಪದಲ್ಲಿ ವಿರಕ್ತರು (ಎಲ್ಲದರ ಬಗ್ಗೆಯೂ ನಿರಾಸಕ್ತಿ ಹೊಂದಿದವರು) ವಾಸಿಸುತ್ತಿದ್ದರು. ಅವರನ್ನು ದ ವಿಸಾರ್ಟ್ ಎಂದು ಕರೆಯಲಾಗುತ್ತಿತ್ತು. ನಂತರ ಈ ದ್ವೀಪವನ್ನು ಮೀನುಗಾರಿಕಾ ಸಂಸ್ಥೆ ಹೊಂದಿದ್ದ ಲೂಯಿಗಿ ನೇಗ್ರಿ ಎಂಬುವವರು 1800 ರ ದಶಕದಲ್ಲಿ ಖರೀದಿಸಿ ಅಲ್ಲಿ ವಿಲ್ಲಾವೊಂದನ್ನು ನಿರ್ಮಿಸಿದರು. ಅಲ್ಲಿಯೇ ಉಳಿದಿದ್ದವರು ನಿಗೂಢವಾಗಿ ಕಣ್ಮರೆಯಾದರು. ಅವರು ನಿರ್ಮಿಸಿದ ವಿಲ್ಲಾ ಮಾತ್ರ ಹಾಗೆಯೇ ಇತ್ತು. ಅದರ ಒಡೆತನ ಕೈ ಬದಲಾಗುತ್ತಿತ್ತು. ಖರೀದಿಸಿದವರೆಲ್ಲ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಬಲಿಯಾಗುತ್ತಿದ್ದರು.

1920 ರ ಸುಮಾರಿಗೆ ಈ ದ್ವೀಪವನ್ನು ಹ್ಯಾನ್ಸ್ ಬ್ರಾನ್ ಎಂಬ ಶ್ರೀಮಂತ ಖರೀದಿ ಮಾಡಿದನು. ಸ್ವಲ್ಪ ದಿನದ ಬಳಿಕ ಅವನ ಮೃತದೇಹವು ಕಂಬಳಿಗೆ ಸುತ್ತಿದ ರೀತಿಯಲ್ಲಿ ಪತ್ತೆಯಾಯಿತು. ಅವನ ಪತ್ನಿ ಸಮುದ್ರದಲ್ಲಿ ಮುಳುಗಿ ಅಸುನೀಗಿದರು. ಅನಂತರ ದ್ವೀಪವನ್ನು ಜರ್ಮನಿಯ ಒಟ್ಟೋ ಗ್ರುನ್ ಬ್ಯಾಕ್ ಎಂಬುವವರು ವಹಿಸಿಕೊಂಡರು. ಅವರು ಸಹ ಮಾರಣಾಂತಿಕ ಕಾಯಿಲೆಯಿಂದ ವಿಲ್ಲಾದಲ್ಲಿಯೇ ಸಮಯ ಕಳೆಯುತ್ತಿದ್ದ ವೇಳೆ ಮೃತಪಟ್ಟರು. ಅನಂತರ ದ್ವೀಪವನ್ನು ಫಾರ್ಮಾಸ್ಯುಟಿಕಲ್  ಉದ್ಯಮಿ ಮಾರಿಸ್-ಯ್ವೆಸ್ ಸ್ಯಾಂಡೋಜ್ ಖರೀದಿಸಿದರು. ಇವರಿಗೆ ಹುಚ್ಚು ಹಿಡಿದು ಸ್ವಿಸ್ ಆಶ್ರಯದಲ್ಲಿ ಕೆಲವು ದಿನಗಳನ್ನು ಕಳೆದರು. ಕೊನೆಗೊಂದು ದಿನ ಮಾನಸಿಕ ಆಸ್ಪತ್ರೆಯೊಳಗೆ ಆತ್ಮಹತ್ಯೆ ಮಾಡಿಕೊಂಡರು. ಸ್ಯಾಂಡೋಜ್ ನಿಧನದ ನಂತರ ಜರ್ಮನಿಯ ಕೈಗಾರಿಕೋದ್ಯಮಿ ಬ್ಯಾರನ್ ಕರ್ಲ್ ಪೌಲ್ ಲ್ಯಾಂಗ್ಹೆಮ್ ದ್ವೀಪವನ್ನು ಖರೀದಿಸಿದರು. ಕೆಲವೇ ದಿನಗಳಲ್ಲಿ ಅವರ ಕಂಪೆನಿ ದಿವಾಳಿಯಾಯಿತು. ಕುಟುಂಬದ ಅನೇಕರು ದುರಂತ ಸಾವು ಕಂಡರು.

ಮುಂದೆ ಇವರು ದ್ವೀಪವನ್ನು ಆಟೋಮೊಬೈಲ್ ದಿಗ್ಗಜ, ಪಿಯೆಟ್‌ನ ಮುಖ್ಯಸ್ಥ ಗಿಯಾನಿ ಅಗ್ನೆಲ್ಲಿಗೆ ಮಾರಾಟ ಮಾಡಬೇಕಾಯಿತು. ಇವರ ಕುಟುಂಬವೂ ತೀವ್ರ ಕಷ್ಟನಷ್ಟ ಅನುಭವಿಸಿತು. ಸಾಕಷ್ಟು ತೊಂದರೆಗೆ ಸಿಲುಕಿಕೊಂಡಿತು. ಅನೇಕರು ಮೃತಪಟ್ಟರು. ಮುಂದೆ ಅಮೇರಿಕದ ಕೈಗಾರಿಕೋದ್ಯಮಿ ಜೀನ್ ಪೌಲ್ ಗೆಟ್ಟಿಗೆ ಖರೀದಿ ಮಾಡಿದರು. ಖರೀದಿ ಮಾಡಿದ ಕೆಲವು ದಿನಗಳಲ್ಲಿ ಅವರು ತಮ್ಮ ಹಿರಿಯ ಮಗನನ್ನು ಕಳೆದುಕೊಂಡರು. ಆದಾದ ನೋವಿನಲ್ಲಿರುವಾಗಲೇ ಕಿರಿಯ ಮಗ ಕೂಡಾ ನಿಗೂಢವಾಗಿ ಸಾವನ್ನಪ್ಪಿದ. ಇನ್ನು ಆತನ ಮೊಮ್ಮಗ ಅಪಹರಣಕ್ಕೊಳಗಾಗಿ ತೊಂದರೆ ಅನುಭವಿಸಬೇಕಾಯಿತು.

ಕೊನೆಯಲ್ಲಿ ದ್ವೀಪ ಖರೀದಿ ಮಾಡಿದವರು ಜಿಯಾನ್ಪಾಸ್ಕೆವಲ್  ಗ್ರಾಪೋನ್. ಇವರು ಪ್ರಕರಣವೊಂದರಲ್ಲಿ ಬಂಧಿತರಾಗಿ ಜೈಲಿನಲ್ಲಿ ಮೃತಪಟ್ಟರು. ಅವರ ಪತ್ನಿ ಕಾರು ಅಪಘಾತವೊಂದರಲ್ಲಿ ಮೃತಪಟ್ಟರು. ಅನಂತರ ದ್ವೀಪದ ಎದುರಿನ ಕಿನಾರೆಯಲ್ಲಿ ವಿಲ್ಲಾ ಹೊಂದಿದ್ದ ಫ್ರಾಂಕೋ ಅಂಬ್ರೊಸಿಯೋ ಮತ್ತು ಅವರ ಪತ್ನಿ ಜಿಯೋವಾನ್ನಾ ಸಾಕೋ ಅವರ ನಿಗೂಢ ಹತ್ಯೆಯಾಯಿತು. ಈ ವೇಳೆ 2009 ರಲ್ಲಿ ಈ ದ್ವೀಪದ ನಿಗೂಢ ಘಟನಾವಳಿಗಳ ಬಗ್ಗೆ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿದವು.

ಸರ್ಕಾರದ ನಿಯಂತ್ರಣಕ್ಕೆ ಬಂದ ದ್ವೀಪ

ಜನರಲ್ಲಿ ದೊಡ್ಡ ಮಟ್ಟದ ಭಯ ಉಂಟಾದ ನಂತರ ಅಂತಿಮವಾಗಿ ಗಯಾಲೋ ದ್ವೀಪವು 1978 ರಲ್ಲಿ ಸರ್ಕಾರದ ನಿಯಂತ್ರಣಕ್ಕೆ ಬಂದಿತ್ತು. ಜೊತೆಗೆ ಇದನ್ನು ಸಾಗರ ಮೀಸಲು ಪ್ರದೇಶವಾಗಿ ಘೋಷಿಸಲಾಯಿತು. ಈಗ ಇದನ್ನು ಅಂಡರ್ ವಾಟರ್ ಪಾರ್ಕ್ ಮಾಡಲಾಗಿದೆ. ದ್ವೀಪದಲ್ಲಿ ಯಾರೂ ವಾಸಿಸುತ್ತಿಲ್ಲ.

ಜನವಸತಿಯಿಲ್ಲದೆ 40 ವರ್ಷಗಳು ಉರುಳಿವೆ. ಇರುಳಿನ ಹೊತ್ತು ದ್ವೀಪದಲ್ಲಿ ಯಾರೂ ಇರುವಂತಿಲ್ಲ. ದ್ವೀಪದ ನಿಗೂಢತೆ, ಸುತ್ತಮುತ್ತಲಿನ ರಹಸ್ಯವನ್ನು ಬೇಧಿಸಲು ಈಗಲೂ ಯಾರಿಂದಲೂ ಆಗಿಲ್ಲ. ಗಯಾಲೋ ದ್ವೀಪದಲ್ಲಿ ವಾಸಿಸುತ್ತಿದ್ದ ಮತ್ತು ಅದನ್ನು ಖರೀದಿ ಮಾಡಿದ ಮಾಲೀಕರೆಲ್ಲಾ ನಿಗೂಢವಾಗಿ ಸಾವನ್ನಪ್ಪಿರುವುದು ದ್ವೀಪದ ರಹಸ್ಯಗಳ ಬಗ್ಗೆ ಭಯಾನಕತೆ ಮೂಡಿಸಿದೆ.

ಎಚ್ಚರಿಕೆಯ ಪ್ರವಾಸಿ ತಾಣ

ಇತ್ತೀಚೆಗೆ ದ್ವೀಪವನ್ನು ಪ್ರವಾಸೋದ್ಯಮಕ್ಕೆ ತೆರೆಯಲಾಗಿದೆ. ಆದರೆ  ತೀವ್ರ ಎಚ್ಚರಿಕೆ ವಹಿಸಲಾಗಿದೆ. `ಐಸೋಲಾ ಡೆಲ್ಲಾ ಗಯೋಲಾ’ಎಂದು ಹೆಸರಿಟ್ಟು ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ. ದ್ವೀಪದ ವಿಹಂಗಮ ನೋಟ, ಪ್ರಶಾಂತತೆ ಇಲ್ಲಿಗೆ ಬರುವವರನ್ನು ಹಿಡಿದಿಡುತ್ತದೆ.

ದ್ವೀಪದಲ್ಲಿರುವ ವಿಲಕ್ಷಣ ಸೇತುವೆ ನೋಡುಗರನ್ನು ಸೆಳೆಯುತ್ತದೆ. ಇದು ಕೂಡಾ ವಿಲ್ಲಾದಂತೆಯೇ ನಿಗೂಢವಾಗಿದೆ. ಪೊಸಿಲ್ಲಿಪೋದ ದಕ್ಷಿಣದ ಅತ್ಯಂತ ತುದಿಯಲ್ಲಿದ್ದು ಕರಾವಳಿಗೆ ಸಾಕಷ್ಟು ಹತ್ತಿರವಿರುವ ಎರಡು ಸಣ್ಣ ದ್ವೀಪಗಳ ಗುಂಪಾಗಿರುವ ಗಯೋಲಾವನ್ನು ಇಟಲಿಯಿಂದ 6 ಗಂಟೆ 52 ನಿಮಿಷಕ್ಕೆ ತಲುಪಬಹುದಾಗಿದೆ. ದ್ವೀಪದಲ್ಲಿ ಉಳಿಯುವವರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆಯೂ ಇದೆ. ಸಾಹಸಿಗಳು ಸವಾಲಿನ ರೂಪದಲ್ಲಿ ಇಲ್ಲಿ ಉಳಿಯುತ್ತಾರೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles