-ಶೌರ್ಯ ಡೆಸ್ಕ್
ಏಡ್ಸ್ ಮತ್ತು ಇತರ ಲೈಂಗಿಕವಾಗಿ ಹರಡುವ ರೋಗಗಳ ಹರಡುವಿಕೆಯನ್ನು ಎದುರಿಸಲು ಕ್ರಮವಾಗಿ, ದೇಶದ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯಲ್ಲಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ತರಲು ನಿರ್ಧರಿಸಿದೆ.

ಲೈಂಗಿಕ ಸಂಬಂಧಿ ರೋಗಗಳ ಹರಡುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಮುಂದಿನ ವರ್ಷದಿಂದ ಫ್ರಾನ್ಸ್ ಯುವಜನರು ಕಾಂಡೋಮ್‌ಗಳನ್ನು ಉಚಿತವಾಗಿ ಪಡೆಯಬಹುದು ಎಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಘೋಷಿಸಿದ್ದಾರೆ. ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ಭಾಗವಹಿಸಿದ್ದ ಮ್ಯಾಕ್ರನ್, “ಮೆಡಿಕಲ್ ಶಾಪ್‌ಗಳಲ್ಲಿ, ಜನವರಿ 1 ರಿಂದ 18-25 ವರ್ಷ ವಯಸ್ಸಿನವರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು” ಎಂದು ಹೊಸ ಕಾರ್ಯಕ್ರಮ ಪ್ರಕಟಿಸಿದ್ದಾರೆ.
ಫ್ರಾನ್ಸ್ನಲ್ಲಿ 2020 ಮತ್ತು 2021 ರಲ್ಲಿ ಲೈಂಗಿಕ ರೋಗಗಳ ದರವು ಸುಮಾರು 30% ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಹಿನ್ನೆಲೆ ಯುವಜನರಲ್ಲಿ ಅನಗತ್ಯ ಗರ್ಭಧಾರಣೆಯನ್ನು ಕಡಿಮೆ ಮಾಡಲು ಮತ್ತು ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಯಲು 18 ರಿಂದ 25 ವರ್ಷ ವಯಸ್ಸಿನವರಿಗೆ ಉಚಿತವಾಗಿ ಕಾಂಡೋಮ್‌ಗಳನ್ನು ಫಾರ್ಮಸಿಗಳು ಒದಗಿಸುತ್ತವೆ.

ಈ ವರ್ಷದ ಆರಂಭದಲ್ಲಿ, ಫ್ರೆಂಚ್ ಸರ್ಕಾರವು 25 ವರ್ಷದೊಳಗಿನ ಎಲ್ಲಾ ಮಹಿಳೆಯರಿಗೆ ಉಚಿತ ಜನನ ನಿಯಂತ್ರಣವನ್ನು ನೀಡಲು ಪ್ರಾರಂಭಿಸಿತು, ಆರ್ಥಿಕ ತೊಂದರೆಗಳಿಂದಾಗಿ ಯುವತಿಯರು ಗರ್ಭನಿರೋಧಕವನ್ನು ತ್ಯಜಿಸುವುದನ್ನು ತಡೆಯಲು 18 ವರ್ಷದೊಳಗಿನವರಿಗೆ ಈ ಕಾರ್ಯಕ್ರಮವನ್ನು ವಿಸ್ತರಿಸಿತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಏಡ್ಸ್ ಮತ್ತು ಇತರ ಲೈಂಗಿಕವಾಗಿ ಹರಡುವ ರೋಗಗಳ ಹರಡುವಿಕೆಯನ್ನು ಎದುರಿಸಲು ಕ್ರಮವಾಗಿ, ದೇಶದ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯಲ್ಲಿ ಈ ಯೋಜನೆಯನ್ನು ಫ್ರಾನ್ಸ್ ಸರ್ಕಾರ ಜಾರಿಗೆ ತರಲು ನಿರ್ಧರಿಸಿದೆ.