21.9 C
Bengaluru
Monday, March 20, 2023
spot_img

ಡ್ರೈಕ್ಲೀನಿಂಗ್ ಚಾಲ್ತಿಗೆ ಬಂದಿದ್ದು ಹೇಗೆ ಗೊತ್ತೇ?

-ಶೌರ್ಯ ಡೆಸ್ಕ್

ಬಟ್ಟೆಯ ಮೊಟ್ಟ ಮೊದಲ ಡ್ರೈಕ್ಲೀನಿಂಗ್ ಆಗಿದ್ದು 1855 ರಲ್ಲಿ, ಬಟ್ಟೆಗಳಿಗೆ ಬಣ್ಣ ಹಾಕುವ ವೃತ್ತಿಯಲ್ಲಿದ್ದ ಫ್ರಾನ್ಸಿನ ಜೀನ್ ಬ್ಯಾಪ್ಟಿಸ್ಟ್ ಜಾಲಿ, ಬಟ್ಟೆ ಒಗೆಯುವ ಈ ಹೊಸ ಬಗೆಯನ್ನು ಕಂಡುಹಿಡಿದ.

ನಿಮಗೆ ಡ್ರೈಕ್ಲೀನಿಂಗ್ ಗೊತ್ತಲ್ಲ. ಇದಕ್ಕೆ ನೂರೈವತ್ತು ವರ್ಷಗಳ ಇತಿಹಾಸವಿದೆ ಅನ್ನೋದು ಗೊತ್ತಾ?

ಹೌದು, ಬಟ್ಟೆಯ ಮೊಟ್ಟ ಮೊದಲ ಡ್ರೈಕ್ಲೀನಿಂಗ್ ಆಗಿದ್ದು 1855 ರಲ್ಲಿ, ಬಟ್ಟೆಗಳಿಗೆ ಬಣ್ಣ ಹಾಕುವ ವೃತ್ತಿಯಲ್ಲಿದ್ದ ಫ್ರಾನ್ಸಿನ ಜೀನ್ ಬ್ಯಾಪ್ಟಿಸ್ಟ್ ಜಾಲಿ, ಬಟ್ಟೆ ಒಗೆಯುವ ಈ ಹೊಸ ಬಗೆಯನ್ನು ಕಂಡುಹಿಡಿದ.

ಬಟ್ಟೆಗಳು ಮತ್ತು ಅವುಗಳನ್ನು ಒಗೆಯುವ ವಿಷಯದಲ್ಲಿ ಸಾಕಷ್ಟು ಅನುಭವ ಮತ್ತು ಪರಿಣಿತಿಯನ್ನು ಹೊಂದಿದ್ದ ಜಾಲಿಗೆ, ನೀರಿನ ಒಗೆತ ಅಪಾಯಕಾರಿ ಅಂತ ಅನಿಸಿಬಿಟ್ಟಿತ್ತಂತೆ. ವುಲ್ಲನ್ ಬಟ್ಟೆಗಳು ನೀರಿನಲ್ಲಿ ಅದ್ದಿದಾಗ ಶ್ರಿಂಕ್ ಆಗೋದನ್ನ, ನಂತರ ಮುದ್ದೆಯಾಗೋದನ್ನ ಅವನು ಗಮನಿಸಿದ್ದ. ಹಾಗೆಯೇ ರೇಷ್ಮೆ ಬಟ್ಟೆಗಳನ್ನು ನೀರಿನಲ್ಲಿ ಅದ್ದಿ ತೊಳೆದಾಗ ಮುದುಡಿ ಹೋಗೋದು, ಕಾಟನ್ ಬಟ್ಟೆಗಳು ಬಣ್ಣ ಕಳೆದುಕೊಳ್ಳೋದು ಅವನ ಅನುಭವಕ್ಕೆ ಬಂದಿತ್ತು.

ಜೀನ್ ಬ್ಯಾಪ್ಟಿಸ್ಟ್ ಜಾಲಿ.

ಇದಕ್ಕೊ ದು ಪರಿಹಾರ ಕಂಡುಕೊಳ್ಳಬೇಕಿತ್ತು ಅಂತ ಯೋಚಿಸುತ್ತಿದ್ದವನಿಗೆ ಒಮ್ಮೆ ಆಕಸ್ಮಾತ್ತಾಗಿ ಒಂದು ಅಂಶ ಗಮನಕ್ಕೆ ಬಂತು, ಟರ್ಪೆಂಟೈನ್ ಥರದ ಕ್ಯಾಂಫೀನ್ ಅನ್ನೋ ದ್ರಾವಣವು ಬಟ್ಟೆಯ ಮೇಲಿನ ಕೊಳೆಯನ್ನು ತೊಡೆದು ಹಾಕಿತ್ತು, ಅದು ಆಕಸ್ಮಿಕವೋ, ನಿಜವೋ ಅಂತ ತಿಳಿದುಕೊಳ್ಳಲು ಹಲವಾರು ಪ್ರಯೋಗಗಳನ್ನು ಮಾಡಿದ. ಅವನನ್ನು ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು. ಕೊಳೆಯನ್ನು ಇಲ್ಲವಾಗಿಸುವ ಶಕ್ತಿ ಕ್ಯಾಂಫೀನ್‌ಗಿದೆ ಮತ್ತು ಅದರಿಂದ ಬಟ್ಟೆ ತೊಳೆದರೆ ಬಟ್ಟೆ ಸುಕ್ಕಾಗುವುದಿಲ್ಲ, ಮುದುಡುವುದಿಲ್ಲ, ಶ್ರಿಂಕಾಗುವುದಿಲ್ಲ ಅನ್ನೋದನ್ನ ಅವನು ಮನಗಂಡ. ಹಾಗೆಯೇ, ತನ್ನ ಪ್ರಯೋಗಗಳಿಗೆ ಕಮರ್ಷಿಯಲ್ ಟಚ್ ಕೊಟ್ಟು ಮೊಟ್ಟ ಮೊದಲ ಡ್ರೈಕ್ಲೀನಿಂಗ್ ಬಿಸಿನೆಸ್ ಶುರು ಮಾಡಿದ.

ಕೆಲವು ಉತ್ಸಾಹಿ ವ್ಯಾಪಾರೋದ್ಯಮಿಗಳು ಜಾಲಿಯ ನೆರವಿಗೆ ಬಂದರು. ಡ್ರೈಕ್ಲೀನಿಂಗ್ ಅನ್ನುವ ಶಬ್ದವನ್ನ ಹುಟ್ಟು ಹಾಕಿದರು. ಆದರೆ ವಾಸ್ತವದಲ್ಲಿ ಅದು ಸರಿಯಾದ ಶಬ್ದವಲ್ಲ, ಡ್ರೈಕ್ಲೀನಿಂಗ್‌ನಲ್ಲಿ ಬಟ್ಟೆಯನ್ನು ನೆನೆಸಲಾಗುತ್ತದೆ. ಆದರೆ ನೀರಿನಲ್ಲಿ ಅಲ್ಲ, ಬದಲಿಗೆ ಒಂದು ದ್ರಾವಣದಲ್ಲಿ, ಈ ದ್ರಾವಣವು ಕೊಳೆಯನ್ನು ಕರಗಿಸಿ ಹೋಗಲಾಡಿಸುತ್ತದೆ. ಬಟ್ಟೆಗಂಟಿದ ಜಿಡ್ಡು spinning ಮೂಲಕ ಹೋಗುತ್ತದೆ. ನಂತರ ಬಟ್ಟೆಯ ಕ್ವಾಲಿಟಿಯ ಆಧಾರದ ಮೇಲೆ, ಅದನ್ನು ಒಂದೋ ಬಿಸಿಗಾಳಿಯಲ್ಲಿ ಒಣಗಿಸಲಾಗುತ್ತದೆ. ಇಲ್ಲವೇ drying cabinet ನಲ್ಲಿ ತೂಗು ಹಾಕಲಾಗುತ್ತದೆ. ಹೀಗೆ ಮಾಡೋದ್ರಿಂದ ದ್ರಾವಣದ ಅಂಶವೆಲ್ಲ ಇಂಗಿ ಹೋಗಿ ಬಟ್ಟೆ ಇಸ್ತ್ರಿಗೆ ಸಿದ್ಧವಾಗುತ್ತದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles