-ಎಸ್.ವಿ. ಜ್ಯೋತಿ
ಹಳೆಯ ಸಿನಿಮಾಗಳಲ್ಲಿ ಹೀರೋಗಳು ಧರಿಸುತ್ತಿದ್ದ ಹೈ ವೇಸ್ಟ್ ಪ್ಯಾಂಟ್ ಈಗಿನ ಜಮಾನದ ಹುಡುಗಿಯರ ಹಾಟ್ ಫೇವರಿಟ್ ಆಗಿದೆ. ಈಗ ಕೌ ಪ್ರಿಂಟ್‌ನಲ್ಲೂ ಹೈ ವೇಸ್ಟ್ ಪ್ಯಾಂಟ್ ಬಂದಿದ್ದು ಹೆಣ್ಣುಮಕ್ಕಳ ಮನ ಸೆಳೆದಿದೆ. ಈ ಪ್ಯಾಂಟ್ ಮೇಲೆ ಕ್ರಾಪ್ ಟಾಪ್, ಶರ್ಟ್, ಸ್ಲೀವ್ ಲೆಸ್ ಇಂತಹವನ್ನು ಧರಿಸುವುದರಿಂದ ಸುಂದರವಾಗಿ ಕಾಣಬಹುದು. ಡಾಟ್ ಇರುವ ಟಾಪ್ ಧರಿಸುವುದರಿಂದ ಈ ಪ್ಯಾಂಟ್‌ಗೆ ಇನ್ನಷ್ಟು ಲುಕ್ ಮೂಡಿಸಬಹುದು.

ಇತ್ತೀಚೆಗೆ ಹೊಸದೊಂದು ಟ್ರೆಂಡ್ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ. ಇದೇ ಕೌ ಪ್ರಿಂಟ್ (ಹಸುವಿನ ಮೈ ಬಣ್ಣದ) ಡ್ರೆಸ್ ಟ್ರೆಂಡ್.
ಮೊದ ಮೊದಲು ಬಿಳಿ ಬಟ್ಟೆಯ ಮೇಲೆ ಕಂದು ಅಥವಾ ಕಪ್ಪು ಬಣ್ಣದ ಡಾಟ್‌ಗಳನ್ನು ಮೂಡಿಸುವುದು ಹೆಚ್ಚು ಪ್ರಚಲಿತವಾಗಿತ್ತು. ಆದರೆ ಇತ್ತೀಚೆಗೆ ಎಲ್ಲ ರೀತಿಯ ಗಾಢ ಬಣ್ಣದ ಮೇಲೆ ಡಾಟ್‌ಗಳನ್ನು ಮೂಡಿಸಲಾಗುತ್ತಿದೆ. ಪ್ಯಾಂಟ್, ಟಾಪ್, ಶರ್ಟ್, ಆಭರಣಗಳು ಹೀಗೆ ಎಲ್ಲದರಲ್ಲೂ ಕೌ ಪ್ರಿಂಟ್ ಅಳವಡಿಸಲಾಗಿದೆ. ಸೆಲೆಬ್ರೆಟಿಗಳು ಈ ವಿನ್ಯಾಸವನ್ನು ಹೆಚ್ಚು ಮೆಚ್ಚಿ ಧರಿಸುತ್ತಿದ್ದಾರೆ. ಕೌ ಪ್ರಿಂಟ್ ಡ್ರೆಸ್ ಜೊತೆಗೆ ಇಂತಹದ್ದೇ ಪ್ರಿಂಟ್ ಇರುವ ಶೂ, ಪರ್ಸ್, ಟೋಪಿ ಧರಿಸುವುದರಿಂದ ಭಿನ್ನವಾಗಿ ಕಾಣಬಹುದು.
ಹೈ ವೇಸ್ಟ್ ಪ್ಯಾಂಟ್

ಹಳೆಯ ಸಿನಿಮಾಗಳಲ್ಲಿ ಹೀರೋಗಳು ಧರಿಸುತ್ತಿದ್ದ ಹೈ ವೇಸ್ಟ್ ಪ್ಯಾಂಟ್ ಈಗಿನ ಜಮಾನದ ಹುಡುಗಿಯರ ಹಾಟ್ ಫೇವರಿಟ್ ಆಗಿದೆ. ಈಗ ಕೌ ಪ್ರಿಂಟ್‌ನಲ್ಲೂ ಹೈ ವೇಸ್ಟ್ ಪ್ಯಾಂಟ್ ಬಂದಿದ್ದು ಹೆಣ್ಣುಮಕ್ಕಳ ಮನ ಸೆಳೆದಿದೆ. ಈ ಪ್ಯಾಂಟ್ ಮೇಲೆ ಕ್ರಾಪ್ ಟಾಪ್, ಶರ್ಟ್, ಸ್ಲೀವ್ ಲೆಸ್ ಇಂತಹವನ್ನು ಧರಿಸುವುದರಿಂದ ಸುಂದರವಾಗಿ ಕಾಣಬಹುದು. ಡಾಟ್ ಇರುವ ಟಾಪ್ ಧರಿಸುವುದರಿಂದ ಈ ಪ್ಯಾಂಟ್‌ಗೆ ಇನ್ನಷ್ಟು ಲುಕ್ ಮೂಡಿಸಬಹುದು.
ನೆಕ್ ಟೈ ಶರ್ಟ್
ನೆಕ್ ಟೈ ಶರ್ಟ್ ಇತ್ತೀಚೆಗೆ ಹೆಚ್ಚು ಟ್ರೆಂಡ್‌ನಲ್ಲಿದೆ. ಇದರಲ್ಲಿ ಕೌ ಪ್ರಿಂಟ್ ವಿನ್ಯಾಸವನ್ನು ಮಿಲೇನಿಯಲ್ ಯುವತಿಯರು ಹೆಚ್ಚು ಮೆಚ್ಚುತ್ತಿದ್ದಾರೆ. ಶರ್ಟ್ಗೆಟೈಯನ್ನು ಅಳವಡಿಸಲಾಗಿದ್ದು ಇದೊಂದು ಹೊಸ ವಿನ್ಯಾಸದ ಡ್ರೆಸ್‌ನಂತೆ ಕಾಣಿಸುತ್ತದೆ. ಟೈ ಕೂಡ ಶರ್ಟ್ನಂತೆ ಕೌ ಪ್ರಿಂಟ್ ಚಿತ್ತಾರವನ್ನೇ ಹೊಂದಿದ್ದು ಇದನ್ನು ಸ್ಕರ್ಟ್, ಜೀನ್ಸ್, ಲೆಗ್ಗಿಂಗ್ಸ್, ಜಗ್ಗಿಂಗ್ಸ್ ಜೊತೆ ಧರಿಸಬಹುದು. ಶರ್ಟ್ ಬಣ್ಣದ್ದೇ ಬಾಟಮ್ ಉಡುಪು ಧರಿಸುವುದರಿಂದ ಅಂದವಾಗಿ ಕಾಣಬಹುದು.
ಅರೈಡರ್ ಬೂಟ್ಸ್
ಅರೈಡರ್ ಬೂಟ್ಸ್ ಟ್ರೆಂಡ್‌ನಲ್ಲಿದೆ. ಹಾಫ್‌ಜೀನ್ಸ್, ಸ್ಕರ್ಟ್ ಧರಿಸಿದಾಗ ಇದನ್ನು ಧರಿಸಿದರೆ ನೋಟವೇ ಬದಲಾಗುತ್ತದೆ. ಈಗ ಇದರ ಮೇಲೂ ಕೌ ಪ್ರಿಂಟ್ ಮೂಡಿಸಲಾಗಿದ್ದು ಇದನ್ನು ನೈಟ್‌ಔಟ್, ಡಿನ್ನರ್ ಪಾರ್ಟಿಯಂತಹ ಸಂದರ್ಭಗಳಲ್ಲಿ ಧರಿಸಲು ಹೆಚ್ಚು ಸೂಕ್ತ ಎನ್ನಿಸುತ್ತದೆ.
ಕೌ ಪ್ರಿಂಟ್ ಬಕೆಟ್ ಹ್ಯಾಂಟ್
ತಲೆ ಮೇಲೆ ಧರಿಸಿದರೆ ಪೂರ್ತಿ ತಲೆಯನ್ನು ಕವರ್ ಮಾಡುವ ಈ ಬಕೆಟ್ ಹ್ಯಾಟ್ ಬೇಸಿಗೆಯಲ್ಲಿ ಧರಿಸಲು ಸೂಕ್ತ. ಅಲ್ಲದೇ ನೀವು ಬೇಸಿಗೆಯಲ್ಲಿ ಯಾವುದೇ ಪ್ರವಾಸ, ಪಿಕ್‌ನಿಕ್ ಅಂತ ಹೋದಾಗ ಅಲ್ಲಿ ಧರಿಸಲು ಚೆನ್ನಾಗಿರುತ್ತದೆ. ಇದು ಬಿಸಿಲು ನೇರವಾಗಿ ಮುಖಕ್ಕೆ ಬೀಳುವುದನ್ನು ತಡೆಯುವುದಲ್ಲದೇ ಟ್ರೆಂಡಿ ಆಗಿಯೂ ಕಾಣಿಸುತ್ತದೆ. ಈ ಹ್ಯಾಟ್ ಮೇಲೆ ಕೌ ಪ್ರಿಂಟ್ ಚಿತ್ತಾರ ಮೂಡಿಸುವುದು ಈಗಿನ ವಿಶೇಷ.

ಶಾಕೆಟ್ ಮತ್ತುಜಾಗರ್ ಪ್ಯಾಂಟ್
ಜಾಕೆಟ್‌ನಂತೆ ಉದ್ದಕ್ಕೆ ಇರುವ ಶಾಕೆಟ್‌ನಲ್ಲೂ ಕೌ ಪ್ರಿಂಟ್ ವಿನ್ಯಾಸವನ್ನು ಮೂಡಿಸಲಾಗುತ್ತದೆ. ಈ ಶಾಕೆಟ್ ನೈಟ್ ಪಾರ್ಟಿ, ಔಟಿಂಗ್‌ನಂತಹ ಸಂದರ್ಭದಲಿ ಧರಿಸಲು ಹೆಚ್ಚು ಸೂಕ್ತ ಎನ್ನಿಸುತ್ತದೆ. ಇದನ್ನು ಮಿಕ್ಸ್ ಅಂಡ್ ಮ್ಯಾಚ್ ಪ್ಯಾಂಟ್, ಟಾಪ್ ಜೊತೆ ಧರಿಸಬಹುದು.

ಇನ್ನು ಜಾಗಿಂಗ್ ಹೋಗುವಾಗ ಒಂದೇ ರೀತಿಯ ಪ್ಯಾಂಟ್ ಧರಿಸಿ ಬೇಸರ ಮೂಡಿದ್ದರೆ ಕೌ ಪ್ರಿಂಟ್ ಜಾಗರ್ ಪ್ಯಾಂಟ್ ಧರಿಸಬಹುದು. ಇದರೊಂದಿಗೆ ಟೀ ಶರ್ಟ್, ಸ್ಲೀವ್ ಲೆಸ್ ಟಾಪ್ ಮುಂತಾದುವನ್ನು ಧರಿಸಬಹುದು.
ಇಷ್ಟೇ ಅಲ್ಲದೇ ಕೌ ಪ್ರಿಂಟ್ ವಿನ್ಯಾಸದ ಡ್ರೆಸ್, ಪೈಜಾಮ ಪ್ಯಾಂಟ್ ಮತ್ತು ಶರ್ಟ್, ಹೈ ವೇಸ್ಟ್ ಮಿನಿ ಸ್ಕರ್ಟ್, ಚಪ್ಪಲಿ, ಫ್ಲೇರ್ ಪ್ಯಾಂಟ್, ಡೆನಿಮ್ ಸ್ಕರ್ಟ್, ಪುಲ್ಲೋವರ್, ಹೆಡ್‌ಬ್ಯಾಂಡ್, ಜಾಗರ್ ಪ್ಯಾಂಟ್, ಕ್ಲಾಗ್ಸ್ ಎಲ್ಲವೂ ಇವೆ. ಇವನ್ನು ಸಂದರ್ಭಕೆ ತಕ್ಕಂತೆ ಧರಿಸಿ ಅಂದ ಹೆಚ್ಚಿಸಿಕೊಳ್ಳುವ ಜಾಣ್ಮೆ ನಿಮಗಿರಬೇಕಷ್ಟೆ.