-ಶೌರ್ಯ ಡೆಸ್ಕ್
ಸಿಎಂ ಕಚೇರಿಯಿಂದ ಬಂದಿದ್ದ ದೀಪಾವಳಿ ಗಿಫ್ಟ್ ಹಣವನ್ನು ಹಿಂದಿರುಗಿಸಿದ್ದಾರೆಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಕನ್ನಡಪ್ರಭ ಪತ್ರಿಕೆಯ ಸಂಪಾದಕ ರವಿ ಹೆಗಡೆ ಪ್ರಾಮಾಣಿಕತೆ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ರವಿ ಹೆಗಡೆ ಅವರು ಪತ್ರಿಕಾ ರಂಗದ ಘನತೆ ಎತ್ತಿಹಿಡಿಯುವ ಅವಕಾಶ ಸಿಕ್ಕಿದೆ.

ಸಿಎಂ ಕಚೇರಿಯಿಂದ ಬಂದಿದ್ದ ದೀಪಾವಳಿ ಗಿಫ್ಟ್ ಹಣವನ್ನು ಹಿಂದಿರುಗಿಸಿದ್ದಾರೆಂದು ವರದಿಯಾಗಿರುವ ಹಿನ್ನೆಲೆಯಲ್ಲಿ ಕನ್ನಡಪ್ರಭ ಪತ್ರಿಕೆಯ ಸಂಪಾದಕ ರವಿ ಹೆಗಡೆ ಪ್ರಾಮಾಣಿಕತೆ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ರವಿ ಹೆಗಡೆ ಅವರು ಪತ್ರಿಕಾ ರಂಗದ ಘನತೆ ಎತ್ತಿಹಿಡಿಯುವ ಅವಕಾಶ ಸಿಕ್ಕಿದೆ ಇದನ್ನು ಅವರು ಉಪಯೋಗಿಸಿಕೊಳ್ಳುತ್ತಾರೆಂದು ನಿರೀಕ್ಷಿಸುತ್ತೇನೆ ಎಂದು ಹಿರಿಯ ಪತ್ರಕರ್ತ ಚಂದ್ರಕಾಂತ ವಡ್ಡು ಹೇಳಿದ್ದಾರೆ.
ಅವರು ಅಂದು ನಡೆದ ಪ್ರಾಥಮಿಕ ಸತ್ಯಸಂಗತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಅವಕಾಶವಿದೆ. ಆ ಮೂಲಕ ಅವರು ಮಾಧ್ಯಮರಂಗದ ಮೇಲಿನ ಕಳಂಕ ತೊಡೆಯುವ ನಿಟ್ಟಿನಲ್ಲಿ ಮೇಲ್ಪಂಕ್ತಿ ಹಾಕಬಹುದು:
ಸಿಎಂ ಕಚೇರಿಯಿಂದ ಗಿಫ್ಟ್ ತಂದವರು ಯಾರು? ಎಷ್ಟು ಹಣ ಇತ್ತು? ಒಟ್ಟು ಎಷ್ಟು ಗಿಫ್ಟ್ ಬಾಕ್ಸುಗಳನ್ನು ತಂದಿದ್ದರು? ಸಂಪಾದಕರಿಗೆ ಮಾತ್ರ ನೀಡಿದರಾ ಅಥವಾ ಇತರ ಸಹೋದ್ಯೋಗಿ ಮಿತ್ರರಿಗೂ ವಿತರಿಸಲು ಯತ್ನಿಸಿದರಾ? ಈ ಪ್ರಸಂಗ ಸಹಜವಾಗಿಯೇ ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರಬಹುದಲ್ಲವೇ?
ಪ್ರಜಾವಾಣಿಯಂತೆ ಕನ್ನಡಪ್ರಭ ಪತ್ರಿಕೆಯಿಂದಲೂ ಸಿಎಂ ಕಚೇರಿಗೆ ಅಧಿಕೃತವಾಗಿ ಪ್ರತಿಭಟನೆ/ದೂರು ಪತ್ರ ಬರೆಯಲಾಗಿದೆಯೇ?
ಇಂತಹ ಭ್ರಷ್ಟಾಚಾರದ ಗಂಭೀರ ಪ್ರಕರಣಕ್ಕೆ ಸಾಕ್ಷಿಯಾಗಿರುವ, ಜವಾಬ್ದಾರಿಯುತ ಸ್ಥಾನದಲ್ಲಿರುವ ರವಿ ಹೆಗಡೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಈ ಕುರಿತು ಲೋಕಾಯುಕ್ತರಿಗೆ/ಪೊಲೀಸರಿಗೆ ದೂರು ನೀಡಿ ಸಂಪೂರ್ಣ ತನಿಖೆ ನಡೆಯುವಂತಾದರೆ ಒಟ್ಟಾರೆ ಕನ್ನಡ ಪತ್ರಿಕಾರಂಗದ ಘನತೆಗೆ, ಅವಮಾನದಿಂದ ಕುದಿಯುತ್ತಿರುವ ಪ್ರಾಮಾಣಿಕ ಪತ್ರಕರ್ತ ಬಳಗಕ್ಕೆ ಮಹದುಪಕಾರವಾಗುತ್ತದೆ.
ಇಷ್ಟನ್ನು ನಿರೀಕ್ಷಿಸಬಹುದೇ? ಎಂದು ಚಂದ್ರಕಾಂತ ವಡ್ಡು ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
