-ಶೌರ್ಯ ಡೆಸ್ಕ್
ನಾನು ದೇಶದ ಬಗ್ಗೆ ಮಾತನಾಡಿದಾಗ ಟ್ರೋಲ್ ಮಾಡ್ತಾರೆ. ಪಾರ್ಲಿಮೆಂಟ್ ಏನ್ ಕಟ್ಟಿದ್ದಾರೆ ಅದರ ವಾಸ್ತು ಸರಿಯಿಲ್ಲ ಭಾರಿ ಘೋರವಾಗೋ ಸಂಭವ ಅನ್ನೋದು ವೀರ ಬ್ರಹ್ಮಸ್ವಾಮಿ ಚರಿತ್ರೆಯಲ್ಲಿ ಬರೆದಿದ್ದಾರೆ. ತ್ರೀಕೋನಾತ್ಮಿಕ ದೀಪಿಕ, ಯಾವುದೇ ಪಾರ್ಲಿಮೆಂಟ್ ಗುಂಡಾಗಿರಬೇಕು, ಇಲ್ಲ ಚೌಕವಾಗಿರಬೇಕು. ಚಂದ್ರ ಇಲ್ಲ ಪೂರ್ತಿಯಾಗಿ ಕುಜನಾಂಶವಾಗಿರಬೇಕು. ತ್ರಿಕೋನ ಮಾಡಿದಾಗ ಉಗ್ರವಾಗಿರುತ್ತೆ. ಇನ್ಮೇಲೆ ದೇಶದ ಮೇಲೆ, ಜನಗಳ ಮೇಲೆ ಒತ್ತಾಯ, ಒತ್ತಡಗಳು ಜಾಸ್ತಿ ಆಗುತ್ತವೆ.

ಕರ್ನಾಟಕ ರಾಜ್ಯ ಮೂರು ಭಾಗ ಆಗಿ, ಮೂರು ಮುಖ್ಯಮಂತ್ರಿ ಮೂವರು ರಾಜ್ಯಪಾಲರಾಗುತ್ತಾರೆ. ಹೊಸ ಸಂಸತ್ ಸೆಂಟ್ರಲ್ ವಿಸ್ತಾ ವಾಸ್ತು ಘೋರವಾಗಿದೆ ಇದರಿಂದ ದೇಶಕ್ಕೆ ಗಂಡಾಂತರ ಎಂದು ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.
ಹಾಸನದಲ್ಲಿ ಹಾಸನಾಂಬೆ ದೇವಿ ದರ್ಶನ ಪಡೆದ ಬಳಿಕ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ರಾಜ್ಯ, ದೇಶದ ಬಗ್ಗೆ ಭೀಕರ ಭವಿಷ್ಯ ನುಡಿದಿದ್ದಾರೆ.
ನಾನು ದೇಶದ ಬಗ್ಗೆ ಮಾತನಾಡಿದಾಗ ಟ್ರೋಲ್ ಮಾಡ್ತಾರೆ. ಪಾರ್ಲಿಮೆಂಟ್ ಏನ್ ಕಟ್ಟಿದ್ದಾರೆ ಅದರ ವಾಸ್ತು ಸರಿಯಿಲ್ಲ ಭಾರಿ ಘೋರವಾಗೋ ಸಂಭವ ಅನ್ನೋದು ವೀರ ಬ್ರಹ್ಮಸ್ವಾಮಿ ಚರಿತ್ರೆಯಲ್ಲಿ ಬರೆದಿದ್ದಾರೆ. ತ್ರೀಕೋನಾತ್ಮಿಕ ದೀಪಿಕ, ಯಾವುದೇ ಪಾರ್ಲಿಮೆಂಟ್ ಗುಂಡಾಗಿರಬೇಕು, ಇಲ್ಲ ಚೌಕವಾಗಿರಬೇಕು. ಚಂದ್ರ ಇಲ್ಲ ಪೂರ್ತಿಯಾಗಿ ಕುಜನಾಂಶವಾಗಿರಬೇಕು. ತ್ರಿಕೋನ ಮಾಡಿದಾಗ ಉಗ್ರವಾಗಿರುತ್ತೆ. ಇನ್ಮೇಲೆ ದೇಶದ ಮೇಲೆ, ಜನಗಳ ಮೇಲೆ ಒತ್ತಾಯ, ಒತ್ತಡಗಳು ಜಾಸ್ತಿ ಆಗುತ್ತವೆ.

ಮೊದಲು ಕದ್ದುಮುಚ್ಚಿ ಲಂಚ ತೆಗೆದುಕೊಳ್ಳುತ್ತಿದ್ದರು, ಈಗ ಎಲ್ಲಾ ಓಪನ್ ಖುಲ್ಲಾಂಖುಲ್ಲ ಆಗಿದೆ. ದಡಂದಶಗುಣಂ ಕಾದಿದೆ. ಭಗವಂತ ಸಮಯಕ್ಕೆ ಬಂದೇ ಬರುತ್ತಾನೆ. ಕಲಿಯುಗ ಅಂತ್ಯ ಕಾಲಕ್ಕೆ ರೋಗ ರುಜಿನಗಳು ಜಾಸ್ತಿ ಆಗುತ್ತೆ. ಡಿಸೆಂಬರ್ ಅಂತ್ಯಕ್ಕೆ ಐದು ಗ್ರಹಗಳು ಒಟ್ಟಿಗೆ ಬರುತ್ತೆ ಒಂಭತ್ತು ತಿಂಗಳು ಕೂರುತ್ತೆ. ಎರಡು ಗ್ರಹಣಗಳ ಹತ್ತಿರ ಬರಬಾರದು. ಜನರಿಗೆ ನೀರಿನ ಅಭಾವ, ಬೆಂಕಿ, ಗಲಾಟೆ, ಘರ್ಷಣೆ, ಸ್ವಂತದವರ ಹತ್ತಿರ ಘರ್ಷಣೆಗಳು ಆಗುತ್ತೆ ಎಂದಿದ್ದಾರೆ.

ಹಾಸನಾಂಬೆ ಸನ್ನಿಧಿಯಲ್ಲಿ ಹೇಳುತ್ತೇನೆ. ಭಾರತ ದೇಶ ಎರಡು ಭಾಗ ಆಗುತ್ತೆ, ಎರಡು, ಎರಡು ರಾಷ್ಟ್ರಪತಿ ಆಗೋದು ಸತ್ಯ. 31 ವರ್ಷದಲ್ಲಿ ಹೀಗೆ ಆಗಬೇಕು ಅಂತ ನಾನು ಹೇಳಿದ್ದಲ್ಲ. ವೀರ ಬ್ರಹ್ಮಯ್ಯ, ಕೈವಾರ ತಾತಯ್ಯ, ಮಂಟೆ ಸ್ವಾಮಿಗಳು ಶಾಸನ ಬರೆದು ಇಟ್ಟಿದ್ಧಾರೆ. ಇದು ನಡೆಯೋದು ನಿಜ, ಸತ್ಯ ಎಂದು ಬ್ರಹ್ಮಾಂಡ ಗುರೂಜಿ ದೇಶವೇ ಬೆಚ್ಚಿಬೀಳೋ ಭವಿಷ್ಯ ನುಡಿದಿದ್ದಾರೆ.