30.6 C
Bengaluru
Wednesday, March 15, 2023
spot_img

ಡಬಲ್ ಎಂಜಿನ್ ಸರಕಾರ ಬೇಕೇ? ಮತ್ತೆ ಬಿಜೆಪಿ ಗೆಲ್ಲಿಸಿ: ಶಿವರಾಜ್ ಸಿಂಗ್ ಚೌಹಾಣ್

-ಶೌರ್ಯ ಡೆಸ್ಕ್

ಬಿಜೆಪಿಯಲ್ಲಿ ಸಾಮಾನ್ಯ ಪರಿವಾರದಿಂದ ಬಂದವರು ನಮ್ಮ ಪ್ರಧಾನಿಯಾಗುತ್ತಾರೆ. ಇನ್ನೊಂದೆಡೆ ಕಾಂಗ್ರೆಸ್ ಕೇವಲ ಪರಿವಾರದ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಬಲಿಪಶುವಾಗಲು ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದೊಳಗೆ ಒಳಜಗಳವಿದೆ. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್- ಸಿದ್ದರಾಮಯ್ಯ- ಖರ್ಗೆ ನಡುವೆ ಕಾಂಗ್ರೆಸ್ ಪಕ್ಷ ಹಂಚಿಹೋಗಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿಶ್ಲೇಷಿಸಿದರು.

ಡಬಲ್ ಎಂಜಿನ್ ಸರಕಾರ ಬೇಕೇ? ಬಿಜೆಪಿಯನ್ನು ಮತ್ತೆ ಗೆಲ್ಲಿಸಿ: ಶಿವರಾಜ್ ಸಿಂಗ್ ಚೌಹಾಣ್

ಕರ್ನಾಟಕದಲ್ಲಿ ಅನೇಕ ಜನಕಲ್ಯಾಣ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಬಿಜೆಪಿಯನ್ನು ಮತ್ತೆ ಗೆಲ್ಲಿಸಿ. ಡಬಲ್ ಎಂಜಿನ್ ಸರಕಾರವನ್ನು ಮುಂದುವರಿಸಿ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮನವಿ ಮಾಡಿದರು.

ಕಲ್ಬುರ್ಗಿಯಲ್ಲಿ ಇಂದು ಬಿಜೆಪಿ ಒಬಿಸಿ ಮೋರ್ಚಾ ವಿರಾಟ್ ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ದೇಶವು ಸರ್ವತೋಮುಖ ಅಭಿವೃದ್ಧಿ ಸಾಧಿಸಿದೆ. ಧರ್ಮಕ್ಕೆ ಹಾನಿ ಆದಾಗ ಮತ್ತು ಅಧರ್ಮ ಹೆಚ್ಚಿದಾಗ ಮತ್ತೆ ಬರುವುದಾಗಿ ಭಗವಾನ್ ಕೃಷ್ಣ ಹೇಳಿದ್ದನ್ನು ನೆನಪಿಸಿದ ಅವರು, ಅದೇ ಮಾದರಿಯಲ್ಲಿ ದೇಶದಲ್ಲಿ ಮೋದಿ ಅವರ ನೇತೃತ್ವದಲ್ಲಿ ಸಮೃದ್ಧ ಭಾರತ ನಿರ್ಮಾಣವಾಗುತ್ತಿದೆ ಎಂದು ನುಡಿದರು.

ಮೋದಿಜಿ ಅವರು ನಮ್ಮ ಹೆಮ್ಮೆಯ ನಾಯಕರಾಗಿದ್ದಾರೆ. ಒಂದೆಡೆ ಮೋದಿಜಿ ಇದ್ದರೆ ಮತ್ತೊಂದೆಡೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಹಾಗಿದ್ದರೆ ಭಾರತವನ್ನು ವಿಭಜಿಸಿದ್ದು ನೆಹರೂ ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ರಾಹುಲ್ ರನ್ನು ಪ್ರಶ್ನಿಸಿದರು.

ಬಿಜೆಪಿ ಮತ್ತೆ ಅಧಿಕಾರ ಪಡೆಯಲಿದೆ ಎಂಬುದಕ್ಕೆ ಇಲ್ಲಿನ ಜನಸಮುದ್ರವೇ ಸಾಕ್ಷಿ. ಚಿಂಚೋಳಿಗೆ ಬಂದು ಹಿಂತಿರುಗಿದ ಬಳಿಕ ನನಗೆ ನಾಲ್ಕನೇ ಬಾರಿ ಸಿಎಂ ಹುದ್ದೆ ಸಿಕ್ಕಿದೆ ಎಂದು ವಿವರಿಸಿದರು.

ಬಿಜೆಪಿಯಲ್ಲಿ ಸಾಮಾನ್ಯ ಪರಿವಾರದಿಂದ ಬಂದವರು ನಮ್ಮ ಪ್ರಧಾನಿಯಾಗುತ್ತಾರೆ. ಇನ್ನೊಂದೆಡೆ ಕಾಂಗ್ರೆಸ್ ಕೇವಲ ಪರಿವಾರದ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಬಲಿಪಶುವಾಗಲು ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದೊಳಗೆ ಒಳಜಗಳವಿದೆ. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್- ಸಿದ್ದರಾಮಯ್ಯ- ಖರ್ಗೆ ನಡುವೆ ಕಾಂಗ್ರೆಸ್ ಪಕ್ಷ ಹಂಚಿಹೋಗಿದೆ ಎಂದು ಅವರು ವಿಶ್ಲೇಷಿಸಿದರು.

ಒಬಿಸಿ ಕಲ್ಯಾಣಕ್ಕಾಗಿ ಕಾಂಗ್ರೆಸ್ ಯಾಕೆ ಪ್ರಯತ್ನ ಮಾಡಿಲ್ಲ ಎಂದು ಕೇಳಿದ ಅವರು, ಮೊರಾರ್ಜಿ ದೇಸಾಯಿ ಅವರು ಪ್ರಧಾನಿ ಆಗಿದ್ದಾಗ, ಅಟಲ್, ಅಡ್ವಾಣಿ ಅವರು ಸಚಿವರಾಗಿದ್ದಾಗ ಒಬಿಸಿ ಅಭಿವೃದ್ಧಿಗೆ ಶ್ರಮಿಸಿದ್ದರು. ಇದೀಗ ಒಬಿಸಿಗೆ ಸಾಂವಿಧಾನಿಕ ಆಯೋಗ ಮಾಡಿದ ಮೋದಿಜಿ ಅವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು ಎಂದರು.

ವೈದ್ಯಕೀಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ಹೆಚ್ಚಿಸಿದ ಕೀರ್ತಿ ಮೋದಿಜಿ ಅವರಿಗೆ ಸಲ್ಲುತ್ತದೆ. ಮಹಾರಾಷ್ಟ್ರದಲ್ಲಿ ಶಿವಸೇನೆ- ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಬಿಸಿ ಮೀಸಲಾತಿಗೆ ವಿರುದ್ಧವಾಗಿ ಕೆಲಸ ಮಾಡಿತ್ತು. ಬೊಮ್ಮಾಯಿಯವರು ಎಸ್‍ಸಿ, ಎಸ್‍ಟಿ, ಒಬಿಸಿ ಕಲ್ಯಾಣ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದರಲ್ಲದೆ, ಸಿದ್ರಾಮಯ್ಯ ಅವಧಿಯಲ್ಲಿ ಇದೆಲ್ಲವೂ ಕೇವಲ ಕನಸಾಗಿತ್ತು ಎಂದು ಟೀಕಿಸಿದರು.

ಯಡಿಯೂರಪ್ಪ, ಬೊಮ್ಮಾಯಿಯವರು ಶಿಕ್ಷಣ, ಉದ್ಯೋಗ, ಬಜೆಟ್ ಹೆಚ್ಚಳ ವಿಚಾರದಲ್ಲಿ ಒಬಿಸಿ ಪರವಾಗಿ ಕೆಲಸ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಉಮಾಶ್ರೀ, ಬಾಬುಲಾಲ್ ಗೌರ್ ಒಬಿಸಿ ಸಮುದಾಯದ ಸಿಎಂ ಆಗಿದ್ದಾರೆ. ಆದರೆ, ಕಾಂಗ್ರೆಸ್ ಒಬಿಸಿಗೆ ಅಂಥ ಅವಕಾಶ ನೀಡಲಿಲ್ಲ ಎಂದು ಆಕ್ಷೇಪಿಸಿದರು.

ಮತಾಂತರ ವಿರುದ್ಧ ಕಾನೂನು ಮಾಡಿದ್ದೇವೆ. ಇಲ್ಲಿಯೂ ಅದೇ ಮಾದರಿಯ ಕಾನೂನು ಮಾಡಿದ್ದೇವೆ. ಕರ್ನಾಟಕದಲ್ಲಿ ಗೋಹತ್ಯಾ ನಿಷೇಧದ ಕಾನೂನು ಜಾರಿಯಾಗಿದೆ. ಪಿಎಫ್‍ಐ ಆತಂಕವಾದಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲ ಕೊಟ್ಟಿತ್ತು. ಆದರೆ, ನಾವು ಪಿಎಫ್‍ಐ ನಿಷೇಧಿಸಿದ್ದೇವೆ ಎಂದರು. ಆತಂಕವಾದಿಗಳು, ದೇಶದ್ರೋಹಿಗಳನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಕರ್ನಾಟಕದಲ್ಲಿ 2023ರಲ್ಲಿ ಬಿಜೆಪಿ ಗೆಲ್ಲಲಿದೆ. ಅಲ್ಲದೆ, 2024ರಲ್ಲಿ ಮೋದಿಜಿ ಮತ್ತೆ ಗೆದ್ದು ಪ್ರಧಾನಿ ಆಗುವುದು ಖಚಿತ ಎಂದು ನುಡಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ಡಬಲ್ ಎಂಜಿನ್ ಸರಕಾರದ ಕನಸು ನನಸಾಗಲಿದೆ. ಸಿಎಂ ಕುರ್ಚಿಗೆ ಟವೆಲ್ ಹಾಕಿದವರು ಕನಸನ್ನಷ್ಟೇ ಕಾಣಲು ಸಾಧ್ಯ. ರಾಜ್ಯದಲ್ಲಿ ಮತ್ತೆ ಅಧಿಕಾರದ ಕಾಂಗ್ರೆಸ್‍ನ ಕನಸು ಕನಸಾಗಿಯೇ ಉಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿಗರಿಗೆ ಪರಪ್ಪನ ಅಗ್ರಹಾರದ ಪಟ್ಟ ಗ್ಯಾರಂಟಿ ಎಂದು ನುಡಿದರು.

ಈ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ್, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ. ನರೇಂದ್ರಬಾಬು, ಕೇಂದ್ರ- ರಾಜ್ಯದ ಸಚಿವರು, ಮಾಜಿ ಸಚಿವರು, ಶಾಸಕರು, ಪಕ್ಷದ ಮುಖಂಡರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles