30.6 C
Bengaluru
Wednesday, March 15, 2023
spot_img

ಬಿಟ್ ಕಾಯಿನ್ ಬ್ಲಾಕ್‌ಚೈನ್ ಕಥೆ!

-ಡಾ| ಯು.ಬಿ. ಪವನಜ

ಬ್ಯಾಂಕಿನಲ್ಲಿ ನಿಮಗೊಂದು ಖಾತೆ ಇದೆ ಎಂದಿಟ್ಟುಕೊಳ್ಳಿ. ನೀವು ಬ್ಯಾಂಕಿನಿಂದ ಹಣ ತೆಗೆಯುವಾಗ ಅಥವಾ ಹಣ ಹಾಕುವಾಗ ಒಂದು ಪುಸ್ತಕದಲ್ಲಿಅದನ್ನು ಬರೆಯುತ್ತಾರೆ. ಈ ಪುಸ್ತಕವನ್ನು ಲೆಡ್ಜರ್‌ ಎನ್ನುತ್ತಾರೆ. ಯಾವುದೇ ಹಣಕಾಸು ವ್ಯವಹಾರದಲ್ಲಿ ಪ್ರಮುಖವಾಗಿರುವುದು ಲೆಡ್ಜರ್‌ ಅಂದರೆ ಖಾತಾಪುಸ್ತಕ. ಡಿಜಿಟಲ್ ವ್ಯವಹಾರದಲ್ಲಿ ಈ ಲೆಡ್ಜರ್‌ಕೂಡ ಡಿಜಿಟಲ್‌ ರೂಪದಲ್ಲಿರುತ್ತದೆ. ಬಿಟ್‌ಕಾಯಿನ್ ಮಾಹಿತಿಯನ್ನು ಒಳಗೊಂಡ ಲೆಡ್ಜರ್‌ ಯಾವುದೋ ಒಂದು ಬ್ಯಾಂಕಿನ ಒಂದು ಗಣಕದಲ್ಲಿಇರುವುದಿಲ್ಲ. ಬದಲಿಗೆ ಜಗತ್ತಿನಾದ್ಯಂತ ಹಬ್ಬಿರುವ ಗಣಕಜಾಲದಲ್ಲಿರುವ ಹಲವು ಗಣಕಗಳಲ್ಲಿ ಪ್ರತಿಯಾಗಿರುತ್ತದೆ. ಎಲ್ಲಗಣಕದಲ್ಲೂಒಂದೇ ಮಾಹಿತಿ ಪ್ರತಿಯಾಗಿರುತ್ತದೆ. ಒಂದುಗಣಕವು ಈ ಜಾಲದಿಂದ ಕಳಚಿಕೊಂಡರೂ ಮಾಹಿತಿಗೆ ನಷ್ಟವಾಗುವುದಿಲ್ಲ. ಅದು ಇನ್ನೊಂದೆಡೆ ಸುರಕ್ಷಿತವಾಗಿರುತ್ತದೆ. ಈ ಲೆಡ್ಜರ್‌ಜಾಲದ ಹೆಸರೇ ಬ್ಲಾಕ್‌ಚೈನ್.

ಹಿಂದಿನ ಸಂಚಿಕೆಯಲ್ಲಿ ಗೂಢನಾಣ್ಯಗಳ ಬಗ್ಗೆ ತಿಳಿದುಕೊಂಡೆವು. ಗೂಢನಾಣ್ಯಗಳಲ್ಲಿ ಮೊದಲನೆಯದು ಹಾಗೂ ಅತಿಜನಪ್ರಿಯವಾದುದು ಬಿಟ್‌ಕಾಯಿನ್. ಈಗಂತೂ ಅದು ಕರ್ನಾಟಕದಲ್ಲಿ ತುಂಬ ಸುದ್ದಿಯಲ್ಲಿದೆ. ಈ ಬಿಟ್‌ಕಾಯಿನ್ ಬಗ್ಗೆ ಹೇಳುತ್ತ ಗೂಢನಾಣ್ಯಗಳು ಕೆಲಸ ಮಾಡುವುದು ವಿಕೇಂದ್ರಿತದತ್ತ ಸಂಗ್ರಹ (ಡಾಟಾಬೇಸ್) ಮೂಲಕ ಎಂದಿದ್ದೆ. ಹಾಗೂ ಅದರ ಹೆಸರು ಬ್ಲಾಕ್‌ಚೈನ್‌ ಎಂದಿದ್ದೆ. ಹಾಗಂದರೇನು? ಈ ಸಂಚಿಕೆಯಲ್ಲಿಅದರ ಬಗ್ಗೆ ತಿಳಿಯೋಣ.

ಬ್ಯಾಂಕಿನಲ್ಲಿ ನಿಮಗೊಂದು ಖಾತೆ ಇದೆ ಎಂದಿಟ್ಟುಕೊಳ್ಳಿ. ನೀವು ಬ್ಯಾಂಕಿನಿಂದ ಹಣ ತೆಗೆಯುವಾಗ ಅಥವಾ ಹಣ ಹಾಕುವಾಗ ಒಂದು ಪುಸ್ತಕದಲ್ಲಿಅದನ್ನು ಬರೆಯುತ್ತಾರೆ. ಈ ಪುಸ್ತಕವನ್ನು ಲೆಡ್ಜರ್‌ ಎನ್ನುತ್ತಾರೆ. ಯಾವುದೇ ಹಣಕಾಸು ವ್ಯವಹಾರದಲ್ಲಿ ಪ್ರಮುಖವಾಗಿರುವುದು ಲೆಡ್ಜರ್‌ ಅಂದರೆ ಖಾತಾಪುಸ್ತಕ. ಡಿಜಿಟಲ್ ವ್ಯವಹಾರದಲ್ಲಿ ಈ ಲೆಡ್ಜರ್‌ ಕೂಡ ಡಿಜಿಟಲ್‌ರೂಪದಲ್ಲಿರುತ್ತದೆ. ಬಿಟ್‌ಕಾಯಿನ್ ಮಾಹಿತಿಯನ್ನು ಒಳಗೊಂಡ ಲೆಡ್ಜರ್‌ಯಾವುದೋಒಂದು ಬ್ಯಾಂಕಿನ ಒಂದು ಗಣಕದಲ್ಲಿಇರುವುದಿಲ್ಲ. ಬದಲಿಗೆ ಜಗತ್ತಿನಾದ್ಯಂತ ಹಬ್ಬಿರುವ ಗಣಕಜಾಲದಲ್ಲಿರುವ ಹಲವು ಗಣಕಗಳಲ್ಲಿ ಪ್ರತಿಯಾಗಿರುತ್ತದೆ. ಎಲ್ಲಗಣಕದಲ್ಲೂಒಂದೇ ಮಾಹಿತಿ ಪ್ರತಿಯಾಗಿರುತ್ತದೆ. ಒಂದುಗಣಕವು ಈ ಜಾಲದಿಂದ ಕಳಚಿಕೊಂಡರೂ ಮಾಹಿತಿಗೆ ನಷ್ಟವಾಗುವುದಿಲ್ಲ. ಅದು ಇನ್ನೊಂದೆಡೆ ಸುರಕ್ಷಿತವಾಗಿರುತ್ತದೆ. ಈ ಲೆಡ್ಜರ್‌ಜಾಲದ ಹೆಸರೇ ಬ್ಲಾಕ್‌ಚೈನ್.

ಎಲ್ಲ ಕಡೆ ಪ್ರತಿ ಮಾಡಿಟ್ಟಿರುವ ಲೆಡ್ಜರ್ ಏನೋ ಸರಿ. ಆದರೆ ಇದಕ್ಕೆ ಬ್ಲಾಕ್‌ಚೈನ್ ಎಂಬ ಹೆಸರು ಯಾಕೆ ಬಂತು? ಈಗಾಗಲೇ ತಿಳಿಸಿದಂತೆ ಇದೊಂದು ವಿಕೇಂದ್ರಿತ ಲೆಡ್ಜರ್‌ಜಾಲ. ಈ ಜಾಲದಲ್ಲಿ ಹಲವಾರು ಘಟಕಗಳು, ಅಂದರೆ ಇಂಗ್ಲಿಷಿನಲ್ಲಿ ಹೇಳುವುದಾದರೆ ಬ್ಲಾಕ್‌ಗಳು ಇರುತ್ತವೆ. ಈ ಬ್ಲಾಕ್‌ಗಳು ಒಂದಕ್ಕೊಂದು ಬೆಸೆದಿರುತ್ತವೆ. ಈ ಬ್ಲಾಕ್‌ಗಳಲ್ಲಿ ಗೂಢನಾಣ್ಯ ವ್ಯವಹಾರದ ಡಿಜಿಟಲ್ ಲೆಡ್ಜರ್‌ ಇರುತ್ತದೆ. ಈ ಬ್ಲಾಕ್‌ಗಳ ಸರಪಣಿಯಲ್ಲಿಒಂದು ಬ್ಲಾಕ್‌ ಇನ್ನೊಂದಕ್ಕೆ ಹ್ಯಾಶ್ ವ್ಯವಸ್ಥೆಯ ಮೂಲಕ ಬೆಸೆಯುತ್ತದೆ. ಏನಿದು ಹ್ಯಾಶ್? ಇದನ್ನು ವ್ಯವಹಾರದ ಗೂಢಲಿಪೀಕೃತ ಸಹಿ ಎನ್ನಬಹುದೇನೋ? ಈ ಗೂಢಲಿಪೀಕೃತ ವ್ಯವಹಾರದ ಸಂದೇಶ ಏನು ಬೇಕಾದರೂ ಆಗಿರಬಹುದು. ಉದಾಹರಣೆಗೆ ಸಂದೇಶವು ಈ ರೀತಿ ಇದೆ ಎಂದಿಟ್ಟುಕೊಳ್ಳೋಣ –“ಪವನಜ ಅವರು ಶಿವಕುಮಾರರಿಗೆ 0.001 ಬಿಟ್‌ಕಾಯಿನ್‌ವರ್ಗಾಯಿಸಿದ್ದಾರೆ”. ಇದನ್ನುಹ್ಯಾಶ್‌ಮಾಡಿ ದಾಗ ಅದು ಈ ರೀತಿ ಆಗಬಹುದು – 692ea3260a8c197543835aca88bf3435a65e89656686c6b23e799db1daba2adc. ಇದು ಕೇವಲ ಉದಾಹರಣೆ ಮಾತ್ರ. ಬ್ಲಾಕ್-1 ಹ್ಯಾಶ್ ಮೂಲಕ ಬ್ಲಾಕ್ 2ಕ್ಕೆ,  ಬ್ಲಾಕ್-3 ಬ್ಲಾಕ್-4 ಕ್ಕೆ ಇನ್ನೊಂದು ಹ್ಯಾಶ್ ಮೂಲಕ,  ಹೀಗೆ ಈ ಸರಪಣಿ ಇರುತ್ತದೆ. ಈ ಸರಪಣಿಯಲ್ಲಿ ಯಾವುದೇ ಬ್ಲಾಕ್‌ ಅನ್ನು ಬದಲಿಸಲು ಸಾಧ್ಯವಿಲ್ಲ. ಯಾಕೆಂದರೆ ಎಲ್ಲ ಸಂದೇಶಗಳೂ ಎಲ್ಲ ಬ್ಲಾಕ್‌ಗಳಲ್ಲಿ ಪ್ರತಿ ಆಗಿರುತ್ತವೆ. ಒಂದು ಬ್ಲಾಕ್‌ ಅನ್ನು ಬದಲಿಸಬೇಕಾದರೆ ಇಡಿಯ ಬ್ಲಾಕ್‌ಚೈನ್‌ನ ಕನಿಷ್ಠ 51% ನಷ್ಟು ಬ್ಲಾಕ್‌ಗಳನ್ನು ಬದಲಿಸಬೇಕಾಗುತ್ತದೆ. ಈ ರೀತಿ ಬ್ಲಾಕ್‌ಚೈನ್ ವ್ಯವಸ್ಥೆಯಿಂದಾಗಿ ಇಡಿಯ ಗೂಢನಾಣ್ಯ ವ್ಯವಹಾರವುಒಂದು ವಿಕೇಂದ್ರಿತ ಮಾದರಿಯಲ್ಲಿಎಲ್ಲೂ ಮೋಸ ಆಗದ ಹಾಗೆ ನಡೆಯುತ್ತದೆ.

ಪ್ರತಿಯೊಂದು ಬ್ಲಾಕ್ ಹೀಗೆಯೇ ಇರಬಹುದು ಎಂದು ಊಹಿಸುವ ಪ್ರಕ್ರಿಯೆ ಮಾಡಬಹುದು. ಇದನ್ನು ಪ್ರೋಗ್ರಾಮ್ ಮೂಲಕ ಮಾಡಲಾಗುತ್ತದೆ. ನಿಮ್ಮ ಊಹೆ ಸರಿಯಾಗಿದ್ದರೆ ಅದನ್ನು ಬ್ಲಾಕ್ ಸರಪಣಿಗೆ ಜೋಡಿಸಲಾಗುತ್ತದೆ. ಹೀಗೆ ಮಾಡುವುದುನ್ನು ಬ್ಲಾಕ್‌ಚೈನ್ ಮೈನಿಂಗ್‌ಎನ್ನುತ್ತಾರೆ. ಹೀಗೆ ಮಾಡಿದವರು ತಮ್ಮಅಮೂಲ್ಯ ಗಣಕ ಸಮಯ, ಅಂತರಜಾಲ ಸಂಪರ್ಕ, ವಿದ್ಯುತ್, ಇವುಗಳನ್ನೆಲ್ಲ ಖರ್ಚು ಮಾಡಿರುತ್ತಾರೆ. ಅವರಿಗೆ ಇದಕ್ಕಾಗಿ ಸ್ವಲ್ಪ ಹಣ ನೀಡಬೇಡವೇ? ಹೌದು. ಈ ರೀತಿ ಮಾಡುವುದು ಮತ್ತುಅದರ ಮೂಲಕ ಹಣ ಸಂಪಾದಿಸುವುದನ್ನು ಬಿಟ್‌ಕಾಯಿನ್ ಮೈನಿಂಗ್ (ಗೂಢನಾಣ್ಯಗಣಿಗಾರಿಕೆ) ಎನ್ನುತ್ತಾರೆ. ಇದಕ್ಕಾಗಿ ಹಲವು ತಂತ್ರಾಂಶಗಳು ಲಭ್ಯವಿವೆ. ನಿಮ್ಮಗಣಕದಲ್ಲಿ ಈ ತಂತ್ರಾಂಶವನ್ನು ದಿನವಿಡೀ ನಡೆಸಿದರೆ ನಿಮಗೆ ಅತಿಚಿಕ್ಕ ಮೊತ್ತ ದೊರೆಯಬಹುದು. ಹತ್ತು ವರ್ಷಗಳ ಹಿಂದೆ ಮೈನಿಂಗ್ ಮೂಲಕ ಈಗಿನ ಕಾಲಕ್ಕೆ ಹೋಲಿಸಿದರೆ ಸ್ವಲ್ಪ ವೇಗವಾಗಿ ಹಣ ಸಂಪಾದಿಸಬಹುದಿತ್ತು.ಈಗ ಈ ಜಾಲ ಎಷ್ಟು ದೊಡ್ಡದಾಗಿ ಬೆಳೆದಿದೆ ಎಂದರೆ ಇದರ ಮೂಲಕ ತಿಂಗಳುಗಟ್ಟಲೆ ಮೈನಿಂಗ್ ಮಾಡಿದರೂ ಅತಿಚಿಕ್ಕ ಮೊತ್ತ ದೊರೆಯುತ್ತದೆ. ಮೈನಿಂಗ್ ಮಾಡಲೆಂದೇ ತುಂಬ ಶಕ್ತಿಶಾಲಿಯಾದ ಯಂತ್ರಾಂಶಗಳು ಮಾರುಕಟ್ಟೆಗೆ ಬಂದಿವೆ. ಅವುಗಳನ್ನು ಅಂತರಜಾಲಕ್ಕೆ ಜೋಡಿಸಿಬಿಟ್ಟರೆ ಅದು ತನ್ನ ಪಾಡಿಗೆತಾನು ಮೈನಿಂಗ್ ಮಾಡಿ ಹಣ ಸಂಪಾದನೆ ಮಾಡುತ್ತಿರುತ್ತದೆ.

ಬ್ಲಾಕ್‌ಚೈನ್‌ಎಂಬುದು ಒಂದು ತಂತ್ರಜ್ಞಾನ. ಇದನ್ನು ಮೊದಲಿಗೆ ಬಿಟ್‌ಕಾಯಿನ್‌ಗೆ ಬಳಸಲಾಯಿತಾದರೂ ಇದನ್ನು ಕೇವಲ ಗೂಢನಾಣ್ಯ ವ್ಯವಹಾರಕ್ಕೆ ಬಳಸಬೇಕಾಗಿಲ್ಲ. ಯಾವುದೇ ವಿಕೇಂದ್ರಿತ ನಂಬಿಕಾರ್ಹ ವ್ಯವಹಾರಕ್ಕೆ ಬಳಸಬಹುದು. ಒಂದು ಉದಾಹರಣೆ ನೋಡೋಣ. ನೀವು ಕಾರು ಕೊಳ್ಳುವಾಗ ಅದು ಎಷ್ಟು ಕಿ.ಮೀ. ಓಡಿದೆ ಎಂದು ನೋಡಿಅದರ ಬೆಲೆ ನಿರ್ಧರಿಸುತ್ತೀರಿ.ಅದುಎಷ್ಟು ಕಿ.ಮೀ. ಓಡಿದೆ ಎಂಬುದನ್ನು ಕಾರಿನಲ್ಲಿರುವ ಓಡೋಮೀಟರ್‌ ಎನ್ನುವ ಸಾಧನ ದಾಖಲೀಕರಿಸಿರುತ್ತದೆ. ಇದರಲ್ಲಿಯ  ಮೊತ್ತವನ್ನು ಬದಲಾವಣೆ ಮಾಡಿದ್ದಿದ್ದರೆ? ಈಗಿನ ಕಾರುಗಳಲ್ಲಿ ಓಡೋ ಮೀಟರ್‌ ಡಿಜಿಟಲ್‌ಆಗಿರುತ್ತದೆ. ಅಂದರೆ ಅದರಲ್ಲಿ ತೋರಿಸುವ ಮೊತ್ತವನ್ನು ಸಾಮಾನ್ಯ ಮೆಕ್ಯಾನಿಕ್‌ಗೆ ಬದಲಿಸಲು ಆಗುವುದಿಲ್ಲ. ಆದರೂ ಅದನ್ನು ಗಣಕಕ್ಕೆ ಸಂಪರ್ಕಿಸಿ ಅದರಲ್ಲಿಯ ಮೊತ್ತವನ್ನು ಬದಲಿಸಲು ಸಾಧ್ಯವಿದೆ. ಕಾರಿನ ಓಡೋಮೀಟರ್ ಬ್ಲಾಕ್‌ಚೈನ್‌ ಜಾಲಕ್ಕೆ ಜೋಡಿಸಲ್ಪಟ್ಟಿದ್ದರೆ? ಆಗ ಅದರ ಮೊತ್ತವನ್ನು ಬದಲಿಸಲು ಸಾಧ್ಯವಾಗುವುದಿಲ್ಲ. ಇನ್ನೊಂದು ಉದಾಹರಣೆ ಹೇಳುವುದಾದರೆ ಭೂಮಿಯ ದಾಖಲೆಗಳು. ಎಲ್ಲರ ಆಸ್ತಿ ವಿವರಗಳನ್ನು ಸರ್ಕಾರವು ತನ್ನದೇ ಆದ ಬ್ಲಾಕ್‌ಚೈನ್‌ ಜಾಲ ತಯಾರಿಸಿ ಅದರಲ್ಲಿಡಬಹುದು. ಆಗ ಯಾವ ಹ್ಯಾಕರ್‌ಗೂ ಅದರಲ್ಲಿರುವ ಮಾಹಿತಿಯನ್ನು ಬದಲಿಸಲು ಆಗುವುದಿಲ್ಲ. ಇನ್ನೂ ಹಲವು ವ್ಯವಹಾರಗಳಲ್ಲಿ ಬ್ಲಾಕ್‌ಚೈನ್ ವ್ಯವಸ್ಥೆಯನ್ನು ಬಳಸಬಹುದು. ಹಲವು ಪ್ರಯೋಗಗಳು ಈಗಾಗಲೇ ನಡೆಯುತ್ತಿವೆ. ಕೆಲವು ವರ್ಷಗಳಲ್ಲಿ ಅವೆಲ್ಲ ಸಾಧ್ಯವಾಗಲಿವೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles