-ಶೌರ್ಯ ಡೆಸ್ಕ್
ನಿದ್ರಾ ಹೀನತೆಯಿಂದ ಒದ್ದಾಡುವವರು ಬಾಳೆಹಣ್ಣನ್ನು ಸೇವಿಸುವುದರಿಂದ ಈ ಸಮಸ್ಯೆಯಿಂದ ಹೊರಬರಬಹುದು. ಬಾಳೆಹಣ್ಣಿನಲ್ಲಿ ಇರುವಂತಹ ಟ್ರಿಫ್ಟೋಪಾನ್ ಅಂಶ ನಿದ್ರೆ ಬರುವಂತೆ ಮಾಡುತ್ತದೆ. ಬಿ.ಪಿ. ಕಡಿಮೆ ಮಾಡುವಲ್ಲಿ ಇದು ಬಹಳ ಉಪಯೋಗಕಾರಿಯಾಗಿದೆ. ಈರುಳ್ಳಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೊರಿಗಳಿದ್ದು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹಸಿ ಈರುಳ್ಳಿ ಸೇವಿಸುವುದರಿಂದ ಬಾಯಿ ಹುಣ್ಣು, ಬಾಯಿ ದುರ್ವಾಸನೆ ಹಾಗೂ ಇತರೆ ರೋಗಗಳು ಕಡಿಮೆಯಾಗುತ್ತದೆ.

ಬಾಳೆಹಣ್ಣು ಭಾರತೀಯರ ಆಹಾರ ಪದ್ಧತಿಯಲ್ಲಿ ಮಹತ್ತರ ಸ್ಥಾನ ಪಡೆದಿದೆ. ಭಾರತವೇ ಬಾಳೆಹಣ್ಣಿನ ಉಗಮ ಸ್ಥಾನ. ಹೀಗಾಗಿ ಎಲ್ಲೆಡೆ ಬಾಳೆಹಣ್ಣು ಬೆಳೆಯಲಾಗುತ್ತದೆ. ವಿಶ್ವದ ಬಾಳೆಹಣ್ಣು ಉತ್ಪಾದನೆಯಲ್ಲಿ ಭಾರತಕ್ಕೆ ಮೊದಲ ಸ್ಥಾನ. ಇದೆಲ್ಲ ಬಾಳೆಹಣ್ಣಿನ ಇತಿಹಾಸವಾಯಿತು. ಬಾಳೆಹಣ್ಣಿನಲ್ಲಿರುವ ಔಷಧಿ ಗುಣಗಳನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.
ಇತ್ತೀಚೆಗೆ ಸಂಸ್ಥೆಯೊಂದು ನಡೆಸಿದ ಸರ್ವೇಕ್ಷಣೀಯ ಪ್ರಕಾರ ಖಿನ್ನತೆಗೆ ಒಳಗಾದವರು ನಿಯಮಿತವಾಗಿ ಬಾಳೆಹಣ್ಣು ಸೇವಿಸಿದ ಬಳಿಕ ಹೆಚ್ಚಿನವರಲ್ಲಿ ಸುಧಾರಣೆ ಕಂಡುಬಂದಿದೆ. ಟ್ರಿಪ್ಟೋಪ್ಯಾನ್ ಎಂಬ ಪ್ರೋಟೀನ್ ಇದಕ್ಕೆ ಕಾರಣ. ನಮ್ಮ ದೇಹ ಈ ಪ್ರೋಟೀನ್‌ಅನ್ನು ಸೆರೋಟಿನ್ ಆಗಿ ಪರಿವರ್ತಿಸುತ್ತದೆ. ಇದರಿಂದ ಉದ್ವೇಗ ಶಮನಗೊಂಡು ಪ್ರಫುಲ್ಲ ಚಿತ್ತರನ್ನಾಗಿಸುತ್ತದೆ.
ಬಾಳೆಹಣ್ಣು ನಮ್ಮ ದೇಹಕ್ಕೆ ಮೆಗ್ನೀಸಿಯಂ ಮತ್ತು ರಂಜಕದ ಉತ್ತಮ ಮೂಲವೆಂದು ಹೇಳುತ್ತಾರೆ. ಇದರ ಜೊತೆಗೆ, ಇದು ವಿಟಮಿನ್ ಎ ಮತ್ತು ಸಿ ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ. ಹೀಗಾಗಿ ದಿನಕ್ಕೆ ಒಂದು ಬಾಳೆಹಣ್ಣು ತಿನ್ನುವುದರಿಂದ ವೈದ್ಯರಿಂದ ದೂರವಿರಬಹುದು. ದಿನಕ್ಕೆ ಒಂದು ಲೋಟ ಹಾಲು ಮತ್ತು ಬಾಳೆಹಣ್ಣು ಸೇವಿಸಿದರೆ ಅನೇಕ ರೋಗಗಳಿಂದ ದೂರವಿರಬಹುದು ಎಂದು ಹೇಳುತ್ತಾರೆ.

ಮಲಬದ್ಧತೆ ನಿವಾರಣೆಗೆ ಬಾಳೆಹಣ್ಣು ಬಹಳ ಒಳ್ಳೆಯದು. ದಿನಕ್ಕೆ ಒಂದು ಬಾಳೆಹಣ್ಣು ಸೇವಿಸಿದರೂ ಸಾಕು ಮಲಬದ್ಧತೆ ಸಮಸ್ಯೆಯಿಂದ ದೂರವಿರಬಹುದು. ಬಾಳೆಹಣ್ಣು ಸೇವಿಸಿದರೆ ಹೃದಯ ಸಂಬಂಧಿ ರೋಗಗಳು ಬರುವುದಿಲ್ಲ. ರಕ್ತದ ಒತ್ತಡ ಕಡಿಮೆ ಆಗುತ್ತದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳು ಬರುವುದಿಲ್ಲ.
ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಬಾಳೆಹಣ್ಣಿನಲ್ಲಿ ಇರುವ ಗುಣಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಊಟ, ತಿಂಡಿ ನಂತರ ಬಾಳೆ ಹಣ್ಣು ತಿಂದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದಾದರೆ ಬಾಳೆಹಣ್ಣನ್ನು ಸೇವಿಸಬೇಕು. ಬಾಳೆಹಣ್ಣು ಸೇವಿಸಿದರೆ ಹಸಿವು ಆಗದಂತೆ ತಡೆಯುತ್ತದೆ. ಬಾಳೆಹಣ್ಣಿನ ಅಂಶ ಹೊಟ್ಟೆಯಲ್ಲಿ ಇದ್ದು ಆಗುವುದಿಲ್ಲ. ಈ ಮೂಲಕ ತಿನ್ನುವುದು ಕಡಿಮೆ ಆದರೆ ಸಹಜವಾಗಿಯೇ ತೂಕ ಇಳಿಕೆಯಾಗುತ್ತದೆ.
ನಿದ್ರಾ ಹೀನತೆಯಿಂದ ಒದ್ದಾಡುವವರು ಬಾಳೆಹಣ್ಣನ್ನು ಸೇವಿಸುವುದರಿಂದ ಈ ಸಮಸ್ಯೆಯಿಂದ ಹೊರಬರಬಹುದು. ಬಾಳೆಹಣ್ಣಿನಲ್ಲಿ ಇರುವಂತಹ ಟ್ರಿಫ್ಟೋಪಾನ್ ಅಂಶ ನಿದ್ರೆ ಬರುವಂತೆ ಮಾಡುತ್ತದೆ. ಬಿ.ಪಿ. ಕಡಿಮೆ ಮಾಡುವಲ್ಲಿ ಇದು ಬಹಳ ಉಪಯೋಗಕಾರಿಯಾಗಿದೆ.
ಮನೆ ಮದ್ದು ಈರುಳ್ಳಿ
ಮನೆಯಲ್ಲಿ ಅಡುಗೆ ಮಾಡುವಾಗ ಮಸಾಲಾ ಪದಾರ್ಥವಾಗಿ ಈರುಳ್ಳಿಯನ್ನು ಬಳಸುತ್ತಾರೆ. ಆದರೆ ನೆನಪಿಡಿ ಇನ್ನು ಮುಂದೆ ಊಟದ ಜತೆ ಹಸಿ ಈರುಳ್ಳಿ ತಪ್ಪದೇ ಸೇವಿಸಿ.

ಹಸಿ ಈರುಳ್ಳಿ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಿ, ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಶ್ವಾಸನಾಳವನ್ನು ಸಡಿಲಗೊಳಿಸಿ ಕೆಮ್ಮು, ಶೀತ, ಆಸ್ತಮಾ ಸಮಸ್ಯೆಯಿಂದ ಬಿಡುಗಡೆ ಮಾಡುತ್ತದೆ.
ಈರುಳ್ಳಿಯಲ್ಲಿರುವ ನಾರಿನಾಂಶ ಕರುಳನ್ನು ಆಕ್ಟಿವ್ ಆಗಿರಿಸಲು ಸಹಕಾರಿಯಾಗಲಿದೆ. ತಾಯಂದಿರಿಗೆ ಸ್ತನದಲ್ಲಿ ಹಾಲು ವೃದ್ಧಿಸೋಕೆ ಕೂಡ ಹಸಿ ಈರುಳ್ಳಿ ಸಹಕಾರಿಯಾಗಲಿದೆ.
ಈರುಳ್ಳಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೊರಿಗಳಿದ್ದು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹಸಿ ಈರುಳ್ಳಿ ಸೇವಿಸುವುದರಿಂದ ಬಾಯಿ ಹುಣ್ಣು, ಬಾಯಿ ದುರ್ವಾಸನೆ ಹಾಗೂ ಇತರೆ ರೋಗಗಳು ಕಡಿಮೆಯಾಗುತ್ತದೆ.