-ಶೌರ್ಯ ಡೆಸ್ಕ್
ಅಪ್ಪ ಉಪೇಂದ್ರ ಮತ್ತು ಅಮ್ಮ ಪ್ರಿಯಾಂಕಾ ಕನ್ನಡ ಚಿತ್ರರಂಗದಲ್ಲಿ ಸಖತ್ ಬ್ಯುಸೀ ಆರ್ಟಿಸ್ಟುಗಳಾಗಿದ್ದಾರೆ. ಈಗ ಮಗಳು ಕೂಡಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾಳೆ. ಎಲ್ಲವೂ ಅಂದುಕೊಂಡಂತೇ ಆದರೆ ಮುಂದೊಂದು ದಿನ ಸ್ವತಃ ಅಪ್ಪ-ಅಮ್ಮನ ಸಿನಿಮಾ ಎದುರು ಮಗಳು ಪ್ರತಿಸ್ಪರ್ಧೆ ನೀಡೋದರಲ್ಲಿ ಯಾವ ಡೌಟೂ ಇಲ್ಲ.

ಐಶ್ವರ್ಯಾ ನೋಡನೋಡುತ್ತಿದ್ದಂತೇ ಮತ್ತೊಂದು ಪೀಳಿಗೆ ಬಣ್ಣದ ಜಗತ್ತಿಗೆ ಎಂಟ್ರಿ ಕೊಡುತ್ತಿದೆ. ಮೊದಲೆಲ್ಲಾ ಹೀರೋಗಳು ರಿಟೇರ್ಡಾಗುವ ಹೊತ್ತಿಗೆ ತಮ್ಮ ಮಕ್ಕಳನ್ನೂ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದರು. ಈಗ ಕಾಲ ಬದಲಾಗಿದೆ ಅಪ್ಪ ಅಮ್ಮಂದಿರು ಇನ್ನೂ ಸ್ಟಾರ್ ಗಳಾಗಿ ಮೆರೆಯುತ್ತಿರುವಾಗಲೇ ಮಕ್ಕಳೂ ಸಿನಿಮಾಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಮಾಲಾಶ್ರೀ ಈವತ್ತಿಗೂ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಅವರ ಮಗಳು ರಾಧನಾ ರಾಮ್ ದರ್ಶನ್ ಗೆ ನಾಯಕಿಯಾಗಿ ನಟಿಸುತ್ತಿದ್ದಾಳೆ. ಮೊನ್ನೆ ತಾನೆ ನೆನಪಿರಲಿ ಪ್ರೇಮ್ ಮಗಳು ಅಮೃತಾ ನಟನೆಯ ಸಿನಿಮಾ ಶುರುವಾಗಿದೆ. ಈಗ ರಿಯಲ್ ಸ್ಟಾರ್ ಉಪೇಂದ್ರ ಮಗಳು ಐಶ್ವರ್ಯಾ ಹೀರೋಯಿನ್ ಆಗೋದು ಬಹುತೇಕ ಖಚಿತವಾಗಿದೆ.
ಅದೂ ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಉಪ್ಪಿ ಮಗಳು ಲಾಂಚ್ ಆಗುತ್ತಿರೋದು ವಿಶೇಷ. ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್ ನಟನೆಯ ಸಿನಿಮಾವನ್ನು ಹೊಂಬಾಳೆ ನಿರ್ಮಿಸುತ್ತಿದೆ. ಈ ಸಿನಿಮಾದಲ್ಲಿ ಉಪ್ಪಿಮಗಳನ್ನು ನಾಯಕಿಯಾಗಿಸುವಲ್ಲಿ ನಿರ್ದೇಶಕ ಸಂತೋಷ್ ಆನಂದರಾಮ್ ಯಶಸ್ವಿಯಾಗಿದ್ದಾರೆ.

ಹಾಗೆ ನೋಡಿದರೆ, ಉಪ್ಪಿ ಮಗಳು ತೆರೆಮೇಲೆ ಕಾಣಿಸಿಕೊಳ್ಳುತ್ತಿರೋದು ಇದೇ ಮೊದಲೇನಲ್ಲ. ಲೋಹಿತ್ ನಿರ್ದೇಶನದ ದೇವಕಿ ಚಿತ್ರದಲ್ಲಿ ಪ್ರಿಯಾಂಕಾ ಅವರ ಜೊತೆಗೆ ಮಗಳಾಗಿಯೇ ಐಶ್ವರ್ಯಾ ತೆರೆ ಹಂಚಿಕೊಂಡಿದ್ದಳು. ಆಗಿನ್ನೂ ಬಾಲನಟಿಯಾಗಿದ್ದ ಐಶ್ವರ್ಯಾ ಈಗ ನಾಯಕ ನಟಿಯಾಗಿದ್ದಾಳಷ್ಟೇ.
ಅಪ್ಪ ಉಪೇಂದ್ರ ಮತ್ತು ಅಮ್ಮ ಪ್ರಿಯಾಂಕಾ ಕನ್ನಡ ಚಿತ್ರರಂಗದಲ್ಲಿ ಸಖತ್ ಬ್ಯುಸೀ ಆರ್ಟಿಸ್ಟುಗಳಾಗಿದ್ದಾರೆ. ಈಗ ಮಗಳು ಕೂಡಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾಳೆ. ಎಲ್ಲವೂ ಅಂದುಕೊಂಡಂತೇ ಆದರೆ ಮುಂದೊಂದು ದಿನ ಸ್ವತಃ ಅಪ್ಪ-ಅಮ್ಮನ ಸಿನಿಮಾ ಎದುರು ಮಗಳು ಪ್ರತಿಸ್ಪರ್ಧೆ ನೀಡೋದರಲ್ಲಿ ಯಾವ ಡೌಟೂ ಇಲ್ಲ.
ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಜನ ನಿರ್ದೇಶಕರು ಉಪ್ಪಿ ಮಗಳನ್ನು ಹೀರೋಯಿನ್ ಮಾಡುವ ಪ್ರಯತ್ನ ಮಾಡಿದ್ದರು. ʻʻಈಗಲೇ ಬೇಡ. ಅವಳು ಓದು ಮುಂದುವರೆಸಲಿ. ಆಮೇಲೆ ನೋಡೋಣʼʼ ಅನ್ನುತ್ತಿದ್ದ ಉಪೇಂದ್ರ ದಂಪತಿ ಈಗ ಇಂಡಿಯಾದ ದೊಡ್ಡ ಬ್ಯಾನರಿನಲ್ಲಿ ದೊಡ್ಮನೆ ಹುಡುಗನ ಜೊತೆಗೆ ನಟಿಸುವ ಆಫರ್ ಬಂದಾಗ ಓಕೆ ಅಂದಿದ್ದಾರೆ.

ಯುವ ರಾಜ್ ಕುಮಾರ್ ಜೊತೆಗೆ ಸುಧಾ ರಾಣಿ ಮಗಳು ನಿಧಿ ನಾಯಕಿಯಾಗಬಹುದು ಎನ್ನುವ ಮಾತು ಓಡಾಡುತ್ತಿತ್ತು. ಆದರೆ ಉಪ್ಪಿ ಮಗಳು ಅಂತಿಮವಾಗಿದ್ದಾಳೆ. ಇನ್ನು ಸುಧಾರಾಣಿ ಮಗಳು ಕೂಡಾ ದೊಡ್ಡ ಸಿನಿಮಾವೊಂದಕ್ಕೆ ಹೀರೋಯಿನ್ ಆಗೋದು ಖಚಿತ. ಸೈಕೋ ಖ್ಯಾತಿಯ ಅನಿತಾ ಭಟ್ ಮಗಳು ಅನುಶಾ ಹೆಗ್ಡೆ ಕೂಡಾ ಚಿತ್ರರಂಗದಲ್ಲಿ ಲಾಂಚ್ ಆಗೋದು ಖಚಿತ. ಇನ್ನೂ ಯಾರ ಮಕ್ಕಳೆಲ್ಲಾ ಬೆಳೆದು ನಿಂತಿದ್ದಾರೆ ಅಂತಾ ಡೈರೆಕ್ಟರುಗಳೆಲ್ಲಾ ಹುಡುಕುತ್ತಿದ್ದಾರೇನೋ…
