-ಶೌರ್ಯ ಡೆಸ್ಕ್
ಅಭಿ ಪ್ರೀತಿಸಿ ಮದುವೆಯಾಗುತ್ತಿರುವ ಅವಿವಾ ಬಿದ್ದಪ್ಪ ಹಲವಾರು ವರ್ಷದಿಂದ ಸ್ನೇಹಿತರಾಗಿದ್ದರು. ಇದು ಅವರಿಬ್ಬರ ಆಪ್ತ ವಲಯಕ್ಕೆ ತಿಳಿದಿತ್ತು. ಅವಿವಾ ಮತ್ತು ಅಭಿಷೇಕ್ ಜೊತೆ ಪ್ರೇಮ ಮೊಳೆತು ಮದುವೆಯಲ್ಲಿಗೆ ಹೋಗಿರಬಹುದು ಎನ್ನುತ್ತಾರೆ ಚಿತ್ರರಂಗದ ಪ್ರಮುಖರೊಬ್ಬರು.

ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಹಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿದ್ದವು. ನಿಶ್ಚಿತಾರ್ಥ ಮುಗಿದಿದೆ ಎಂಬಲ್ಲಿಯವರೆಗೆ ಮಾತುಗಳು ಹರಡಿದ್ದವು. ಈ ಸುದ್ದಿಗಳನ್ನು ತಳ್ಳಿ ಹಾಕಿದ್ದರು ಸುಮಲತಾ ಅಂಬರೀಶ್. ‘ಹುಡುಗಿಯನ್ನು ನೀವೇ ಹುಡುಕಿಕೊಡಿ’ ಎಂದು ಅಭಿಷೇಕ್ ತಮ್ಮ ಎಂದಿನ ಶೈಲಿಯಲ್ಲಿ ನಕ್ಕಿದ್ದರು ಆದರೆ, ಅಭಿಷೇಕ್ ಅವರ ನಿಶ್ಚಿತಾರ್ಥದ ಕುರಿತು ಅವರ ಆಪ್ತರು ಖಚಿತ ಪಡಿಸಿದ್ದಾರೆ. ಗುರುವಾರ ಅಂಬರೀಶ್ ಅವರ ಮನೆಯಲ್ಲೇ ತಾಂಬೂಲ ಬದಲಿಸಿಕೊಳ್ಳುವ ಶಾಸ್ತ್ರ ಕೂಡ ಮುಗಿದಿದೆ. ಡಿಸೆಂಬರ್ 11 ರಂದು ಅಭಿಷೇಕ್ ಎಂಗೇಜ್ ಆಗಲಿದ್ದಾರೆ ಎನ್ನಲಾಗುತ್ತಿದೆ.

ಹಲವು ವರ್ಷಗಳಿಂದ ಪರಿಚಯವಿರುವ ತಮ್ಮ ಗೆಳತಿಯನ್ನೇ ಅಭಿಷೇಕ್ ಮದುವೆಯಾಗಲಿದ್ದಾರೆ. ಆ ಗೆಳತಿ ಖ್ಯಾತ ಫ್ಯಾಷನ್ ಡಿಸೈನರ್, ಅಂಬರೀಷ್ ಕುಟುಂಬಕ್ಕೂ ಆಪ್ತರಾಗಿರುವ ಪ್ರಸಾದ್ ಬಿದ್ದಪ್ಪ ಪುತ್ರಿ ಎನ್ನುತ್ತವೆ ಮೂಲಗಳು. ಅಭಿಷೇಕ್ ನಿಶ್ಚಿತಾರ್ಥ ಡಿ. 11 ರಂದು ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ ನಲ್ಲಿ ನಡೆಯಲಿದ್ದು, ಈಗಾಗಲೇ ಚಿರಂಜೀವಿ, ರಜನಿಕಾಂತ್ ಸೇರಿದಂತೆ ದಕ್ಷಿಣ ಚಿತ್ರರಂಗದ ಹಲವು ಹಿರಿ ಕಿರಿ ನಟರಿಗೆ ಆಹ್ವಾನ ಹೋಗಿದೆಯಂತೆ.

ಅಭಿ ಪ್ರೀತಿಸಿ ಮದುವೆಯಾಗುತ್ತಿರುವ ಅವಿವಾ ಬಿದ್ದಪ್ಪ ಹಲವಾರು ವರ್ಷದಿಂದ ಸ್ನೇಹಿತರಾಗಿದ್ದರು. ಇದು ಅವರಿಬ್ಬರ ಆಪ್ತ ವಲಯಕ್ಕೆ ತಿಳಿದಿತ್ತು. ಅವಿವಾ ಮತ್ತು ಅಭಿಷೇಕ್ ಜೊತೆ ಪ್ರೇಮ ಮೊಳೆತು ಮದುವೆಯಲ್ಲಿಗೆ ಹೋಗಿರಬಹುದು ಎನ್ನುತ್ತಾರೆ ಚಿತ್ರರಂಗದ ಪ್ರಮುಖರೊಬ್ಬರು.

ಗುರುವಾರವೇ ಅಭಿಷೇಕ್ ಅವರ ಹೊಸ ಸಿನಿಮಾದ ಮುಹೂರ್ತವಾಗಿದ್ದು, ಈ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಮುಂಗಾರು ಮಳೆ ಖ್ಯಾತಿಯ ಕೃಷ್ಣ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಭಿ ಅವರ ಎಂಗೇಜ್ ಮೆಂಟ್ ಮುಗಿದ ನಂತರ ಚಿತ್ರೀಕರಣ ಶುರು ಆಗಲಿದೆ.

ಅಲ್ಲದೇ, ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲೂ ಅಭಿ ನಟಿಸಿದ್ದು, ಈ ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿದೆ. ರಿಲೀಸ್ ಗೆ ರೆಡಿಯಾಗಿದೆ.
