29 C
Bengaluru
Thursday, March 16, 2023
spot_img

ಬೆಂಗಳೂರಿನಲ್ಲಿ ಶುರುವಾಯ್ತು 5G ಸೇವೆ

-ಶೌರ್ಯ ಡೆಸ್ಕ್

ದೇಶದ ಒಟ್ಟು 12 ನಗರಗಳಾದ ದೆಹಲಿ, ಬೆಂಗಳೂರು, ಅಹಮದಾಬಾದ್, ಚಂಡೀಗಢ, ಚೆನ್ನೈ, ಕೋಲ್ಕತ್ತಾ, ಪುಣೆ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮನಗರ, ಲಕ್ನೋದಲ್ಲಿ ಸೇವೆ ಆರಂಭಗೊಂಡಿದೆ.

ಬಹು ನಿರೀಕ್ಷಿತ ನೆಟ್‍ವರ್ಕ್ ಕ್ರಾಂತಿ 5ಜಿ ಸೇವೆಗಳು ಇಂದಿನಿಂದ ಭಾರತದಲ್ಲಿ ಆರಂಭವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊದಲಿಗೆ ಸೇವೆ ದೊರೆತಿದೆ.  ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

6ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ಈವೆಂಟ್‍ನಲ್ಲಿ 5ಜಿ ಸೇವೆಗಳನ್ನು ಉದ್ಘಾಟಿಸಲಾಯಿತು. ದೆಹಲಿಯ ಪ್ರಗತಿ ಮೈದಾನದಲ್ಲಿ 4 ದಿನಗಳ ಕಾಲ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಡೆಯುತ್ತಿದೆ. 5ಜಿ ಉದ್ಘಾಟನೆಯ ಬಳಿಕ ಭಾರತದಲ್ಲಿ 5ಜಿ ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸಲು ದೇಶದ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಪ್ರಾತ್ಯಕ್ಷಿಕೆ ನೀಡಿದವು.

ದೇಶದ ಒಟ್ಟು 12 ನಗರಗಳಾದ ದೆಹಲಿ, ಬೆಂಗಳೂರು, ಅಹಮದಾಬಾದ್, ಚಂಡೀಗಢ, ಚೆನ್ನೈ, ಕೋಲ್ಕತ್ತಾ, ಪುಣೆ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮನಗರ, ಲಕ್ನೋದಲ್ಲಿ ಸೇವೆ ಆರಂಭಗೊಂಡಿದೆ.

ಏರ್‌ಟೆಲ್‌ 8 ನಗರಗಳಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುತ್ತಿದೆ. ಶನಿವಾರ ನಾಲ್ಕು ಮಹಾನಗರಗಳು ಸೇರಿದಂತೆ ಎಂಟು ನಗರಗಳಲ್ಲಿ 5ಜಿ ಟೆಲಿಕಾಂ ಸೇವೆಗಳನ್ನು ಪ್ರಾರಂಭಿಸುತ್ತಿದೆ. ಮತ್ತು ಮಾರ್ಚ್ 2024ರ ವೇಳೆಗೆ ಇಡೀ ದೇಶದಲ್ಲಿ ಹಂತಹಂತವಾಗಿ ಆವರಿಸಲಿದೆ ಎಂದು ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಭರವಸೆ ನೀಡಿದರು.

ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಮಾತನಾಡಿ, ತಮ್ಮ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಡಿಸೆಂಬರ್ 2023ರ ವೇಳೆಗೆ ದೇಶಾದ್ಯಂತ 5ಜಿ ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಘೋಷಿಸಿದರು.

5ಜಿ ತಂತ್ರಜ್ಞಾನವು ಸಾಮಾನ್ಯ ಜನರಿಗೆ ತಡೆರಹಿತ ಇಂಟರ್‌ನೆಟ್‌ ಸೇವೆ ನೀಡಲಿದೆ. ಕಡಿಮೆ ಸುಪ್ತತೆ ಮತ್ತು ಹೆಚ್ಚು ವಿಶ್ವಾಸಾರ್ಹ ಸಂವಹನಗಳನ್ನು ಒದಗಿಸಲು ಸಹಾಯ ಮಾಡಲಿದೆ. 5ಜಿ ಶತಕೋಟಿ ಇಂಟರ್‌ನೆಟ್‌ ಆಫ್ ಥಿಂಗ್ಸ್ ಡಿವೈಸ್‍ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ವೇಗದಲ್ಲಿ ಚಲನಶೀಲತೆಯೊಂದಿಗೆ ಉತ್ತಮ ಗುಣಮಟ್ಟದ ವೀಡಿಯೋ ಸೇವೆಗಳನ್ನು ಅನುಮತಿಸುತ್ತದೆ. ಈಗಿರುವ ಮೊಬೈಲ್ ಸಂವಹನ ನೆಟ್‍ವರ್ಕ್‍ಗಳಿಗಿಂತ ಭಿನ್ನವಾಗಿ, 5ಜಿ ನೆಟ್‍ವರ್ಕ್‍ಗಳು ಒಂದೇ ನೆಟ್‍ವರ್ಕ್‍ನಲ್ಲಿ ಈ ಪ್ರತಿಯೊಂದು ವಿಭಿನ್ನ ಬಳಕೆಯ ಸಂದರ್ಭಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತವೆ.

5ಜಿ ವಿಶೇಷತೆ?:

4ಜಿ ಗರಿಷ್ಠ ವೇಗವು 100 ಎಂಬಿಪಿಎಸ್ (ಮೆಗಾ ಬಿಟ್ಸ್ ಪರ್ ಸೆಕೆಂಡ್) ಇದ್ದರೆ, 5ಜಿಯಲ್ಲಿ ಗರಿಷ್ಠ ವೇಗವು 20ಜಿಬಿಪಿಎಸ್ (ಸೆಕೆಂಡಿಗೆ 20 ಗಿಗಾಬಿಟ್ಸ್) ವರೆಗೂ ಇದೆ. 5ಜಿ ಹೊಸ ಆರ್ಥಿಕ ಅವಕಾಶಗಳು ಮತ್ತು ಸಾಮಾಜಿಕ ಪ್ರಯೋಜನಗಳನ್ನು ನೀಡಲಿದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles