30.6 C
Bengaluru
Wednesday, March 15, 2023
spot_img

ಸ್ವೀಡನ್‌ನ ಸ್ಟಾಕ್‌ಹೋಂನ ೧೦೯ ವರ್ಷ ಹರೆಯದ ಶತಾಯುಷಿ ಅಜ್ಜಿ ಇತ್ತೀಚೆಗೆ ತೀರಿಕೊಂಡಿದ್ದಾರೆ. ಸದಾ ಜೀವನ ಪ್ರೀತಿಯನ್ನಿಟ್ಟುಕೊಂಡು ಬದುಕುವ ಕಲೆಯ ವಿಚಾರದಲ್ಲಿ ಎಲ್ಲರಿಗೂ ಮಾದರಿಯಾಗಿದ್ದ ಆಕೆ ತನ್ನ ನೂರು ವರ್ಷದ ನಂತರವೂ ಹೊಸ ಕಲಿಕೆ, ಜೀವನ ಅನುಭವಗಳನ್ನು ತನ್ನದಾಗಿಸಿಕೊಳ್ಳಲು ಉತ್ಸುಕಳಾಗಿದ್ದಳು. ಮತ್ತು ಇಡೀ ದೇಶದ ಜನತೆಗೆ ಪ್ರೇರಣೆಯಾಗಿದ್ದಳು. ಆಕೆಯ ಕುರಿತ ನುಡಿನಮನ ಇಲ್ಲಿದೆ.

ಮೊನ್ನೆ ಮೊನ್ನೆ ಮಾರ್ಚ್ ಇಪ್ಪತ್ನಾಲ್ಕಕ್ಕೆ ಸ್ಟಾಕ್‌ಹೋಂನ ಓರ್ವ ಮಹಿಳೆ ತೀರಿಕೊಂಡಳು. ಅದರಲ್ಲೇನು ವಿಶೇಷ ಅಂತೀರಾ, ಆಕೆಗೆ ಬರೋಬ್ಬರಿ ನೂರಾ ಒಂಬತ್ತು ವರ್ಷ ವಯಸ್ಸಾಗಿತ್ತು. ಆಕೆ ಓರ್ವ ಬ್ಲಾಗರ್ ಆಗಿದ್ದಳು. ಅದೆಲ್ಲ ಸರಿ. ಅಚ್ಚರಿಯ ವಿಷಯ ಏನು ಗೊತ್ತೇ? ಆಕೆ ಬ್ಲಾಗ್ ಶುರು ಮಾಡಿದ್ದು ತನ್ನ ನೂರನೇ ವಯಸ್ಸಿಗೆ. ಕಂಪ್ಯೂಟರ್ ಕೋರ್ಸ್ಗೆ ಸೇರಿಕೊಂಡಿದ್ದು ತನ್ನ ೯೯ನೇ ವಯಸ್ಸಿಗೆ! ಈಗ ನಿಧಾನವಾಗಿ ನಿಮ್ಮ ಪರಿಚಿತ, ಸಂಬAಧಿ ಹಿರಿಯರನ್ನು ಕಣ್ಣು ಮುಂದೆ ತಂದುಕೊಳ್ಳಿ. ಅವರೆಲ್ಲ ಖಂಡಿತ ಡ್ಯಾಗ್ನಿಗಿಂತ ವಯಸ್ಸಲ್ಲಿ ತುಂಬಾ ಚಿಕ್ಕವರೇ ಆಗಿರುತ್ತಾರೆ. ಆದರೆ, ಹೊಸದು ಕಲಿಯಲು, ಆರಂಭಿಸಲು ಈಗ ತುಂಬಾ ಲೇಟ್ ಆಯ್ತು, ವಯಸ್ಸಾಯ್ತು ಬಿಡ್ರೀ ಅಂತೇನಾದರೂ ಎಂದರೆ ಕೂಡಲೇ ಈ ಡ್ಯಾಗ್ನಿ ಕಾರ್ಲ್ಸನ್ ಬಗ್ಗೆ ಕೊಂಚ ತಿಳಿಸಿ ಬಿಡಿ.


ಆಕೆ ತನ್ನ ಬ್ಲಾಗ್‌ನಲ್ಲಿ ಸುತ್ತಮುತ್ತ ಕಂಡ ವಿಷಯಗಳ ಬಗ್ಗೆ ಆಸಕ್ತಿಕರವಾಗಿ, ಅಚ್ಚುಕಟ್ಟಾಗಿ ಬರೆಯುತ್ತಾಳೆ. ಜಗತ್ತಿನ ಅತ್ಯಂತ ಹಿರಿಯ ಬ್ಲಾಗರ್ ಖ್ಯಾತಿಯ ಈಕೆಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಓದುಗರಿದ್ದಾರೆ. ಅಭಿಮಾನಿ ಓದುಗರಿಂದ ಆಕೆಗೆ ಅಸಂಖ್ಯ ಪತ್ರಗಳು, ಹೂಗುಚ್ಛಗಳು, ಉಡುಗೊರೆಗಳ ಮಹಾಪೂರವೇ ಹರಿದು ಬರುತಿತ್ತು. ತನ್ನ ನೂರಾ ಆರನೇ ವಯಸ್ಸಿನ ಹುಟ್ಟಿದ ಹಬ್ಬಕ್ಕೆ ಹಂಗೇರಿಗೆ ಪ್ರವಾಸ ಹೋಗಿ ಬಂದಿದ್ದಳು. ತೀರಾ ಇತ್ತೀಚೆಗೆ ಕಿವಿ ಕೇಳುವ ಮಷೀನ್ ಉಪಯೋಗಿಸಿದ್ದು ಬಿಟ್ಟರೆ ಹೇಳಿಕೊಳ್ಳುವಂತ ಕಾಯಿಲೆ ಕಸಾಲೆಗಳಿಲ್ಲ. ಒಂಟಿಯಾಗಿ ತನ್ನ ವಿಶಾಲವಾದ ಫ್ಲಾಟ್‌ನಲ್ಲಿ ವಾಸ ಮಾಡುತ್ತಿದ್ದಳು. ತುರ್ತು ಸಹಾಯಕ್ಕಾಗಿ ಅಲಾರ್ಮ್ ಬ್ರೇಸ್‌ಲೆಟ್ ಕೈಗೆ ಧರಿಸಿರುತ್ತಿದ್ದಳು. ಮನೆ ಸ್ವಚ್ಛಗೊಳಿಸುವುದು ಒಂದು ಬಿಟ್ಟರೆ ಹೆಚ್ಚು ಕಮ್ಮಿ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವ ರೂಢಿ ಇಟ್ಟುಕೊಂಡಿದ್ದಳು. ಒಂದು ವರ್ಷದ ಹಿಂದಷ್ಟೇ ನರ್ಸಿಂಗ್ ಹೋಂಗೆ ವಾಸ್ತವ್ಯವನ್ನು ಬದಲಿಸಿದ್ದಳು.


ಪ್ರತಿ ರಾತ್ರಿ ಆಕೆ ಬ್ಲಾಗ್‌ನಲ್ಲಿ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದಳು. ಸ್ಫೂರ್ತಿಯ ಸೆಲೆಯಾಗಿ, ಮಾದರಿಯಾಗಿ, ಪ್ರಭಾವ ಬೀರುವಲ್ಲಿ ಆಕೆ ಸ್ವೀಡನ್ ಉದ್ದಕ್ಕೂ ಜನಪ್ರಿಯಳಾಗಿದ್ದಳು. ಸ್ವೀಡನ್ನಿನ ಅರಸ ಕುಟುಂಬ ಈಕೆಯನ್ನು ತಮ್ಮ ಅರಮನೆಗೆ ವಿಶೇಷ ಅತಿಥಿಯಾಗಿ ಆಹ್ವಾನಿಸಿತ್ತು. ಅನೇಕ ಟಿವಿ ಕಾರ್ಯಕ್ರಮಗಳಲ್ಲಿ, ಸಾಕ್ಷö್ಯಚಿತ್ರಗಳಲ್ಲಿ ಅಷ್ಟೇ ಏಕೆ ತನ್ನ ನೂರಾ ಒಂದನೇ ಇಸವಿಯಲ್ಲಿ ಚಲನಚಿತ್ರದ ಒಂದು ಚಿಕ್ಕ ಪಾತ್ರದಲ್ಲಿ ಕೂಡ ನಟಿಸಿದ್ದಾಳೆ.
ಸಾಮಾಜಿಕ ಸಂದೇಶಗಳಿಗೆ, ವಿಶೇಷವಾಗಿ ವೃದ್ಧಾಪ್ಯ ಶಾಪವಲ್ಲ ಎಂಬುದಕ್ಕೆ ದೃಷ್ಟಾಂತವಾಗಿರುವ ಆಕೆ ಮೀ ಟೂ ಅಂದೋಲನ ಸೇರಿದಂತೆ ಅನೇಕ ಸಾಮಾಜಿಕ ಕಳಕಳಿಗಳಿಗೆ ಬೆಂಬಲಿಸಿ ಬರೆದಿದ್ದಳು.
ನಿಮ್ಮ ದೀರ್ಘಾಯುಷ್ಯದ ಗುಟ್ಟೇನು ಎಂದು ಕೇಳಿದರೆ ಅದು ಅನುವಂಶಿಕತೆಯ ಜೊತೆಗೆ ಮುಖ್ಯವಾಗಿ ತನಗೆ ಜೀವನದ ಬಗ್ಗೆ ಸದಾ ಇರುವ ಕುತೂಹಲ ಹಾಗೂ ಧನಾತ್ಮಕ ಆಗುಹೋಗುಗಳಿಗೆ ಎದುರು ನೋಡುವ ಪ್ರವೃತ್ತಿ ಎನ್ನುತ್ತಿದ್ದಳು. ಆಕೆ ಪೂರ್ಣ ಪ್ರಮಾಣದಲ್ಲಿ ಜೀವಿಸಲು ಸದಾ ಇಷ್ಟಪಡುತ್ತಿದ್ದಳು.


ಡ್ಯಾಗ್ನಿ ಕಾರ್ಲ್ಸನ್ ಹುಟ್ಟಿದ್ದು ಇಸವಿ ೧೯೧೨ರಲ್ಲಿ. ಅವಳು ಹುಟ್ಟಿದ ವರ್ಷ ಟೈಟಾನಿಕ್ ಮುಳುಗಿತ್ತು. ಎರಡು ಜಾಗತಿಕ ಮಹಾ ಯುದ್ಧಗಳನ್ನು ಕಂಡಿದ್ದಾಳೆ. ಮಾನವ ಚಂದ್ರಗ್ರಹಕ್ಕೆ ಹೋದದ್ದು. ಗುದ್ದಲಿಯಿಂದ ಯಂತ್ರದವರೆಗೆ ತಂತ್ರಜ್ಞಾನ ಕ್ರಾಂತಿ ಹಾಗೂ ಇತ್ತೀಚೆನ ಇನ್ಸ್ಟಾಗ್ರಾಂವರೆಗೂ ಕಾಲಕ್ರಮೇಣ ಬದಲಾದದ್ದೂ ಗೊತ್ತು. ಕೋವಿಡ್ ಯುಗವನ್ನೂ ನೋಡಿದ್ದಳು. ಸ್ವೀಡನ್‌ನಲ್ಲಿ ಆಗಿಹೋದ ೨೬ ಪ್ರಧಾನಿಗಳನ್ನು ಕಂಡಿದ್ದಳು.
ಸಾಮಾನ್ಯ ಬಾಲ್ಯ ಕಳೆದ ಆಕೆಗೆ ಅಜ್ಜಿ ಮರ್ಲಿನ್ ಸದಾ ಆದರ್ಶ. ಅವಳ ಅಜ್ಜಿ ತನ್ನ ಮೂವತ್ತನೇ ವಯಸ್ಸಿನಲ್ಲಿ ಐದು ಮಕ್ಕಳ ವಿಧವೆ ಆಗಿದ್ದವಳು. ಯಾವುದೇ ಸಹಕಾರ ಇಲ್ಲದೇ ಒಂಟಿಯಾಗಿ ತಾನೇ ದುಡಿದು ಮಕ್ಕಳನ್ನು ಸತ್ಪçಜೆಗಳನ್ನಾಗಿ ಮಾಡಿದ ದಿಟ್ಟ ಮಹಿಳೆ ಅವಳ ಅಜ್ಜಿ. ಆಕೆ ಹೇಳುತ್ತಿದ್ದ ಜೀವನ ಮಂತ್ರಗಳನ್ನು ಡ್ಯಾಗ್ನಿ ನೆನೆಸಿಕೊಳ್ಳುತ್ತಿದ್ದಳು. ಜೀವನದಲ್ಲಿ ಸದಾ ಸಂತಸದಲ್ಲಿರು, ಅತ್ಯಂತ ಕುತೂಹಲಿಯಾಗಿರು ಮತ್ತು ನಿರ್ಭೀತವಾಗಿರು. ಒಂದು ವೇಳೆ ದೊಡ್ಡ ಕಷ್ಟ, ಬಿಕ್ಕಟ್ಟು ಎದುರಾದರೆ ಒಮ್ಮೆಲೇ ಆಘಾತಕ್ಕೊಳಗಾಗುವ ಬದಲು ಮುಂದೆ ಏನು ಮಾಡಬಹುದು ಎಂಬ ಯೋಚಿಸುವ ನಿಟ್ಟಿಗೆ ಗಮನ ಕೊಡು ಎಂಬುದು.
ಡ್ಯಾಗ್ನಿ ಮೊದಲು ಒಂದು ಶರ್ಟ್ ಕಾರ್ಖಾನೆಯಲ್ಲಿ ಹೊಲಿಗೆ ಕೆಲಸಕ್ಕೆ ಸೇರಿಕೊಂಡಿದ್ದಳು. ನಂತರ ಸಾಮಾಜಿಕ ವಿಮಾ ಕಚೇರಿಯಲ್ಲಿ ಬಹುಕಾಲ ಕೆಲಸ ಮಾಡಿ ನಿವೃತ್ತಿ ಹೊಂದಿದವಳು. ಮೊದಲ ಗಂಡನ ಜೊತೆಗೆ ಬದುಕು ಸುಖದಾಯಕವಾಗಿರಲಿಲ್ಲ. ಆತನ ಕುಡಿತ, ಗ್ಯಾಂಬ್ಲಿAಗ್ ಇತ್ಯಾದಿಗಳಿಂದ ರೋಸಿ ಪ್ರತ್ಯೇಕಗೊಂಡಿದ್ದಳು. ತನ್ನ ಮೂವತ್ತೊಂಬತ್ತನೆಯ ವಯಸ್ಸಿನಲ್ಲಿ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿ ಅಂಗಡಿಯಿಟ್ಟುಕೊAಡಿದ್ದ ಹ್ಯಾರಿಯನ್ನು ಮದುವೆಯಾಗಿ ಸುಮಾರು ೫೩ ವರ್ಷ ಒಟ್ಟಿಗೆ ನೆಮ್ಮದಿಯ ಸಂಸಾರ ನಡೆಸಿದವಳು. ಈಕೆಯ ಗಂಡ ಹ್ಯಾರಿ ತನ್ನ ತೊಂಬತ್ತೊAದನೆಯ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದ. ಹ್ಯಾರಿ ತೀರಿಕೊಂಡಾಗ ತಾನು ಕೂಡ ಮೂರು ದಿನಗಳಲ್ಲಿ ಸಾಯಬಹುದು ಅನ್ನಿಸಿದವಳಿಗೆ ಬದುಕು ಮತ್ತೆ ಮುನ್ನಡೆಸಿತು. ಅಂದ ಹಾಗೆ ಆಕೆಗೆ ಮಕ್ಕಳಿರಲಿಲ್ಲ.
ದಿನಚರಿಯಲ್ಲಿ ಸಾಮಾನ್ಯವಾಗಿ ಊಟವಾದ ಮೇಲೆ ನಲವತ್ತು ನಿಮಿಷ ನಡೆಯುವುದು, ದಿನಪತ್ರಿಕೆಯತ್ತ ಕಣ್ಣು ಹಾಯಿಸಿ ಪ್ರಚಲಿತ ಸುದ್ದಿಗಳನ್ನು ತಿಳಿಯುವುದು, ಕ್ರಾಸ್‌ವರ್ಡ್ ಪರಿಹರಿಸುವುದು ಆಕೆಯ ಹವ್ಯಾಸವಾಗಿತ್ತು. ಸಾಹಿತ್ಯ ಓದುವುದರಲ್ಲಿ ಅತೀವ ಆಸಕ್ತಿಯಿತ್ತು. ತಾನು ಬರೆದ ಒಂದು ಪುಸ್ತಕದಿಂದ ಬಂದ ದುಡ್ಡನ್ನು ಕ್ಯಾನ್ಸರ್ ಫೌಂಡೇಷನ್‌ಗೆ ದಾನವಾಗಿ ಕೊಟ್ಟಿದ್ದಳು. ೧೦೪ರಲ್ಲಿ ‘ಡ್ಯಾಗ್ನಿ ಕಂಡAತೆ ಬದುಕು’ ಎಂಬ ಪುಸ್ತಕ ಒಬ್ಬ ಪತ್ರಕರ್ತ ಬರೆದು ೨೦೦೪ರಲ್ಲಿ ಪ್ರಕಟವಾಗಿತ್ತು. ಅಷ್ಟೇ ಅಲ್ಲ ತನ್ನ ಮನೆ ಹಾಗೂ ಬೆಲೆ ಬಾಳುವ ಪೇಂಟಿAಗ್‌ಗಳನ್ನೂ ಆಕೆ ಫೌಂಡೇಷನ್ ಹೆಸರಿಗೆ ಬರೆದಿದ್ದಾಳೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles