21.8 C
Bengaluru
Thursday, March 16, 2023
spot_img

ಹೈಕಮಾಂಡ್ ಇಕ್ಕಳದಲ್ಲಿ ಅಪ್ಪ-ಮಗ!

ಸರ್ವಶಕ್ತ ಯಡಿಯೂರಪ್ಪಗೆ ಅಷ್ಠದಿಗ್ಬಂಧನ

ರಾಜ್ಯದಲ್ಲಿ ಇಡೀ ಬಿಜೆಪಿಯ ಶಕ್ತಿಯ ತೂಕ ಯಡಿಯೂರಪ್ಪನವರ ರಾಜಕೀಯ ವರ್ಚಸ್ಸಿನ ತೂಕಕ್ಕೆ ಸಮನಲ್ಲ. ಯಡಿಯೂರಪ್ಪ ಬಿಟ್ಟರೆ ಕರ್ನಾಟಕದಲ್ಲಿ ಬಿಜೆಪಿಯ ಅಸ್ಥಿತ್ವ ಅಲುಗಾಡುವುದು ಸುಳ್ಳಲ್ಲ. ಅಷ್ಟರಮಟ್ಟಿಗೆ ಬಿಎಸ್‌ವೈ ಪ್ರಭಾವಿ ಹಾಗೂ ಜನಬೆಂಬಲಿತ ನಾಯಕ. ಲಿಂಗಾಯತ ಸಮುದಾಯದ ಪ್ರಶ್ನಾತೀತ ಲೀಡರ್ ಕೂಡಾ ಹೌದು. ಇದು ಬಿಜೆಪಿಗೂ ಗೊತ್ತು, ಯಡಿಯೂರಪ್ಪನವರಿಗೂ ಗೊತ್ತು. ಬಿಎಸ್‌ವೈ ಕಡೆಗಣಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗಂಡಾಂತರ ತಪ್ಪಿದ್ದಲ್ಲ ಎಂಬ ಮಾತು ಆ ಪಕ್ಷದೊಳಗೆ ಇದೆ. ಆದರೆ ಯಡಿಯೂರಪ್ಪ ಪಕ್ಷಕ್ಕೆ ಗಂಡಾಂತರ ಉಂಟು ಮಾಡಲು ವರಿಷ್ಟರು ಬಿಡುತ್ತಾರೆಯೇ? ಖಂಡಿತಾ ಇಲ್ಲ. ಹೀಗಾಗಿಯೇ ಅವರಿಗೆ ಅಷ್ಠದಿಗ್ಬಂಧನ ಹಾಕಲಾಗಿದೆ. ಏನು ಅಷ್ಠದಿಗ್ಬಂಧನದ ಮಹಾತ್ಮೆ ತಿಳಿಯೋಣ ಬನ್ನಿ.

ಯಡಿಯೂರಪ್ಪ ಬಿಟ್ಟರೆ ಕರ್ನಾಟಕ ಬಿಜೆಪಿಗೆ ಶಕ್ತಿಯಿಲ್ಲ ಎಂಬುದು ದೆಹಲಿಯಲ್ಲಿ ಕೂತ ವರಿಷ್ಟ ನಾಯಕರ ಅರಿವಿಗೆ ಬಂದಿದ್ದರೂ ಕುಟುಂಬ ರಾಜಕಾರಣ ವಿರೋಧಿ ಸಿದ್ಧಾಂತ ರಕ್ಷಣೆಯ ಭಾಗವಾಗಿ ಬಿ.ವೈ. ವಿಜಯೇಂದ್ರಗೆ ಹಿಂಬಾಗಿಲ ರಾಜಕೀಯ ಪ್ರವೇಶಕ್ಕೆ ತಡೆ ಹಾಕಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿ ಮುಂಬಾಗಿಲ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಹೈಕಮಾಂಡ್ ಮುಕ್ತ ಮನಸ್ಸು ಹೊಂದಿದೆ ಎಂದು ಹೇಳಲಾಗುತ್ತಿದೆಯಾದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ನಂಬರ್ ೨ ಸ್ಥಾನದಲ್ಲಿರುವ ಗೃಹ ಸಚಿವ ಅಮಿತ್ ಷಾ ಮಾತ್ರ ವಿಜಯೇಂದ್ರ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ. ಈ ವಿಚಾರದಲ್ಲಿ ದೆಹಲಿಯಲ್ಲಿ ಕುಳಿತಿರುವ ರಾಜ್ಯ ಮೂಲದ ಪ್ರಭಾವಿ ಸಂಘ ಪ್ರಮುಖರು ಮಹತ್ವದ ಪಾತ್ರ ವಹಿಸಲಿದ್ದಾರೆ. ವರಿಷ್ಟರ ಯಾವುದೇ ನಿರ್ಧಾರವನ್ನು ಯಡಿಯೂರಪ್ಪ ಪ್ರಶ್ನಿಸುವ ಸ್ಥಿತಿಯಲ್ಲಿಲ್ಲ. ಅಪ್ಪ-ಮಗನಿಗೆ ಅಷ್ಠದಿಗ್ಬಂಧನ ಹಾಕಿರುವ ವರಿಷ್ಟರು ಮುಂದಿನ ಅವರ ಭವಿಷ್ಯವನ್ನು ಬರೆಯಲಿದ್ದಾರೆ ಎಂಬ ಮಾತು ಈಗ ಮತ್ತೆ ಮುನ್ನೆಲೆಗೆ ಬಂದಿದೆ.


ಹೌದು, ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಟಿಕೆಟ್ ನೀಡಿ ಆಯ್ಕೆ ಮಾಡಿಕೊಂಡು ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗುತ್ತದೆ. ಯಡಿಯೂರಪ್ಪ ಪಕ್ಷಕ್ಕೆ ಎಷ್ಟು ಅಗತ್ಯ ಮತ್ತು ಅನಿವಾರ್ಯ ಎಂಬುದು ವರಿಷ್ಟರಿಗೆ ಮನದಟ್ಟಾಗಿದೆ. ಹೀಗಾಗಿ ಅವರ ಪುತ್ರ ವ್ಯಾಮೋಹಕ್ಕೆ ಪ್ರೋತ್ಸಾಹ ನೀಡಿ ವಿಜಯೇಂದ್ರ ರಾಜಕೀಯ ಭವಿಷ್ಯಕ್ಕೆ ಈಗಲೇ ನೀರೆರೆಯುವ ಕಾರ್ಯ ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ ವಿಜಯೇಂದ್ರ ಪರಿಷತ್ ಎಂಟ್ರಿಗೆ ತಡೆ ಹಾಕುವ ಮೂಲಕ ಹೈಕಮಾಂಡ್ ಈ ಬಾರಿಯೂ ಬಿಎಸ್‌ವೈಗೆ ನಿರಾಸೆ ಮಾಡಿದೆ. ಮಂತ್ರಿಮAಡಲದಲ್ಲಿ ವಿಜಯೇಂದ್ರಗೆ ಸ್ಥಾನ ನೀಡುವ ಉದ್ದೇಶವಿದ್ದಿದ್ದರೆ ಪರಿಷತ್ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಿತ್ತು. ಆದರೆ ಅದಾಗಿಲ್ಲ. ಹೀಗಾಗಿ ಸದ್ಯಕ್ಕಂತೂ ಅಧಿಕಾರ ಭಾಗ್ಯ ದೂರದ ಮಾತು. ಇನ್ನು ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರಗೆ ಅವಕಾಶ ಕಲ್ಪಿಸಲಾಗುತ್ತದೆಯೇ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ.


ರವಾನಿಸಿದ ಸಂದೇಶ ಏನು?
ವಿಜಯೇಂದ್ರ ಪರಿಷತ್ ಸದಸ್ಯರಾಗಿ ಮಂತ್ರಿ ಹುದ್ದೆಗೆ ಇಳಿದೇಬಿಟ್ಟರು ಎಂಬಲ್ಲಿಯವರೆಗೂ ಚರ್ಚೆಗಳು ನಡೆದಿದ್ದವು. ಆದರೆ ಈಗ ಹೈಕಮಾಂಡ್ ಹಾಕಿರುವ ಬ್ರೇಕ್ ಯಡಿಯೂರಪ್ಪ ಬಿಜೆಪಿಯಲ್ಲಿ ಇನ್ನೂ ಎಷ್ಟು ನಿಸ್ಸಹಾಯಕರು ಎಂಬುದನ್ನು ಸಾರಿ ತೋರಿಸಿದೆ. ಹೈಕಮಾಂಡ್ ನಾಯಕರಿಗೆ ಯಡಿಯೂರಪ್ಪನವರ ಬಗ್ಗೆ ನಿಜಕ್ಕೂ ಧನಾತ್ಮಕ ಭಾವನೆಯೇ ಇದೆ. ಕರ್ನಾಟಕದಲ್ಲಿ ಕಷ್ಟಪಟ್ಟು ಪಕ್ಷ ಕಟ್ಟಿ ಬೆಳೆಸಿ ಅಧಿಕಾರದ ಹೊಸ್ತಿಲಿಗೆ ತಂದ ಅವರ ಶ್ರಮ, ಸಾಧನೆಯ ಬಗ್ಗೆ ಅಭಿಮಾನವೂ ಇದೆ. ಆದರೆ ವಿಜಯೇಂದ್ರ ವಿಚಾರದಲ್ಲಿ ಈ ಮಾತು ಹೇಳುವಂತಿಲ್ಲ. ಯಡಿಯೂರಪ್ಪ ಅವರಂತಹ ಮಾಸ್ ಲೀಡರ್ ವರ್ಚಸ್ಸಿಗೆ ಮಸಿ ಬಳಿದು ಜೈಲು ಪಾಲಾಗುವಂತೆ ಮಾಡಿದ್ದೇ ಈತ. ಮೊನ್ನೆ ಸಲ ದೊಡ್ಡ ಭ್ರಷ್ಟಾಚಾರ ಆರೋಪಗಳು ಏಳಲೂ ಈತನೇ ಕಾರಣ. ಪಕ್ಷದ ವರ್ಚಸ್ಸು ಕುಗ್ಗಿದ್ದು ಕೂಡಾ ಈತನಿಂದಲೇ. ವೃದ್ಧಾಪ್ಯದಲ್ಲಿರುವ ಯಡಿಯೂರಪ್ಪ ಅವರಿಗೆ ಪುತ್ರ ವ್ಯಾಮೋಹ ಸಹಜ. ಅಲ್ಲದೆ ಅವರು ಕುಟುಂಬದವರ ಮಾತಿಗೆ ಕಟ್ಟುಬೀಳಲೇಬೇಕಾಗುತ್ತದೆ. ಒಂದರ್ಥದಲ್ಲಿ ಅವರೀಗ ಪುತ್ರ ಪರಿವಾರದವರ ಕೈಗೊಂಬೆ. ಹೀಗಾಗಿ ವಿಜಯೇಂದ್ರ ರಾಜಕೀಯ ಭವಿಷ್ಯ ವಿಚಾರದಲ್ಲಿ ಮಹತ್ವಾಕಾಂಕ್ಷೆಗಳು, ಆತುರಗಳಿವೆ. ಒತ್ತಡಗಳೂ ಇರಬಹುದು. ಹೀಗಾಗಿ ಯಡಿಯೂರಪ್ಪ ಅವರನ್ನು ಬಳಸಿಕೊಂಡು ಅವರ ಪರಿವಾರ ಹೇರುವ ಒತ್ತಡಗಳಿಗೆ ನಾವು ಮಣಿಯಬೇಕಿಲ್ಲ ಎಂಬುದು ದೆಹಲಿ ನಾಯಕರ ನಿಲುವು. ಇದೇ ನಿಲುವು ವಿಜಯೇಂದ್ರ ರಾಜಕೀಯ ಹಾದಿಯನ್ನು ದುರ್ಗಮಗೊಳಿಸುತ್ತಲೇ ಸಾಗಿದೆ.


ಅಂದಹಾಗೆ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಾಗಲೇ ಪುತ್ರನ ರಾಜಕೀಯ ಭವಿಷ್ಯದ ಬಗ್ಗೆ ವರಿಷ್ಟರ ಬಳಿ ಪ್ರಸ್ತಾಪಿಸಿದ್ದರು. ಆ ವಿಚಾರವನ್ನು ನಮಗೆ ಬಿಡಿ. ಯಾರಿಗೆ ಯಾವ ಜವಾಬ್ದಾರಿ, ಅಧಿಕಾರ ನೀಡಬೇಕೆಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದು ದೆಹಲಿ ನಾಯಕರು ಆಗ ಬಿಎಸ್‌ವೈಗೆ ನೇರವಾಗಿ ಹೇಳಿಕಳುಹಿಸಿದ್ದರು. ಮುಂದೆ ದೆಹಲಿಯಲ್ಲಿರುವ ಯಡಿಯೂರಪ್ಪ ವಿರೋಧಿ ಬಣ ಅವರನ್ನು ಹಂತಹAತವಾಗಿ ಮುಗಿಸಲು ಸ್ಕೆಚ್ಚು ಹಾಕಿತು. ಬಿಎಸ್‌ವೈ ಸಲಹೆಗಳು, ನಿರ್ಧಾರಗಳಿಗೆ ಕಮಲ ಹೈಕಮಾಂಡ್ ಕವಡೆಕಾಸಿನ ಕಿಮ್ಮತ್ತೂ ನೀಡದಂತೆ ನೋಡಿಕೊಂಡಿತ್ತು. ರಾಷ್ಟಿçÃಯ ನಾಯಕರಾಗಿದ್ದ ಎಲ್.ಕೆ. ಅಡ್ವಾಣಿ, ಮುರಳಿಮನೋಹರ ಜೋಷಿ ಅವರಂತೆ ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ ಹಿರಿಯ ಮುತ್ಸದ್ಧಿ ಪಟ್ಟ ಕಟ್ಟಿ ಸಲಹಾ ಮಂಡಳಿಗೆ ಸೀಮಿತಗೊಳಿಸುವ ಪ್ರಯತ್ನ ಜಾರಿಗೊಳಿಸಿತ್ತು. ಇದರಿಂದ ಕ್ರುದ್ಧರಾಗಿದ್ದ ಬಿಎಸ್‌ವೈ ಹೊಸ ಪಕ್ಷ ಕಟ್ಟುವ ದೃಢ ನಿರ್ಧಾರ ಮಾಡಿದ್ದರು. ಇದಕ್ಕಾಗಿ ರಾಜ್ಯದ ವಿರೋಧ ಪಕ್ಷದಲ್ಲಿರುವ ಮತ್ತೊಬ್ಬ ಮಾಸ್ ಲೀಡರ್ ಜೊತೆ ಚರ್ಚೆಯೂ ನಡೆದಿತ್ತು. ಯಾವಾಗ ಈ ವಿಚಾರ ವರಿಷ್ಟರ ಕಿವಿಗೆ ಬಿತ್ತೋ ಅವರು ತಮ್ಮದೇ ಮಾರ್ಗದಲ್ಲಿ ಬಿಸಿ ಮುಟ್ಟಿಸಿದರು. ಬಿಜೆಪಿ ದುರ್ಬಲಗೊಳಿಸುವ ಪ್ರಯತ್ನ ನಡೆಸಿದರೆ ದೊಡ್ಡ ಅನಾಹುತ ಮೈಮೇಲೆ ಎಳೆದುಕೊಳ್ಳುತ್ತೀರಿ. ಇದರಿಂದ ನಿಮ್ಮ ಪುತ್ರನ ರಾಜಕೀಯ ಭವಿಷ್ಯವೇ ಸಂಪೂರ್ಣ ಕಮರಿಹೋಗಬಹುದು ಎಂಬ ಸಂದೇಶವನ್ನು ರವಾನಿಸುವಂತೆ ಆದಾಯ ತೆರಿಗೆ ಇಲಾಖೆ ಮೂಲಕ ಎದುರು ಹೊಡೆತದ ಟೀಸರ್’ ತೋರಿಸಿದರು. ಬೆಟ್ಟದಷ್ಟು ಅಕ್ರಮ, ಅವ್ಯವಹಾರ, ಭ್ರಷ್ಟಾಚಾರದ ದಾಖಲೆಗಳು ನಮ್ಮ ಬಳಿ ಇವೆ. ಗೌರವಾನ್ವಿತರಾಗಿ ಪಕ್ಷದಲ್ಲಿದ್ದರೆ ನಿಮ್ಮ ಮಗನ ವಿಚಾರದಲ್ಲಿ ಸಕಾರಾತ್ಮಕ ನಿರ್ಣಯವನ್ನು ನಾವು ಕೈಗೊಳ್ಳುತ್ತೇವೆ. ಇಲ್ಲದಿದ್ದರೆ ಕಾನೂನು ಅದರ ಕ್ರಮ ಜಾರಿ ಮಾಡುತ್ತದೆ ಎಂದು ಕಟುವಾಗಿಯೇ ಹಿರಿಯ ನಾಯಕನಿಗೆ ತಿಳಿ ಹೇಳಿದರು. ಹೀಗಾದ ನಂತರ ಬಿಎಸ್‌ವೈ ಎಲ್ಲಾ ಅವಗಣನೆ, ನಿರ್ಲಕ್ಷö್ಯ, ಮೂಲೆಗುಂಪು ಮಾಡುವ ಪ್ರಯತ್ನವನ್ನು ಸಹಿಸುತ್ತಾ ಮೌನಕ್ಕೆ ಜಾರಿಬಿಟ್ಟಿದ್ದರು. ಇತ್ತೀಚೆಗೆ ಯಡಿಯೂರಪ್ಪ ಅವರ ಮಹತ್ವವು ಪ್ರಧಾನಿ ಮೋದಿಯಿಂದ ಹಿಡಿದು ಎಲ್ಲಾ ಹೈಕಮಾಂಡ್ ನಾಯಕರಿಗೂ ಮನವರಿಕೆ ಆಗಿತ್ತು. ಪಕ್ಷ ಸಂಘಟನೆ, ಚುನಾವಣೆಗೆ ಅವರ ಪೂರ್ಣ ಶಕ್ತಿ, ಸೇವೆಯನ್ನು ಬಳಸಿಕೊಳ್ಳಲು, ಆದರೆ ಪುತ್ರನ ವಿಚಾರದಲ್ಲಿನ ಹಿಂದಿನ ನಿರ್ಣಯದ ಬದಲಾವಣೆ ಮಾಡದಿರಲು ನಿರ್ಧರಿಸಿತ್ತು. ಪರಿಷತ್ ಚುನಾವಣೆ ಟಿಕೆಟ್ ನಿರಾಕರಣೆ ಈ ಅಂಶವನ್ನೇ ಎತ್ತಿಹಿಡಿದಿದೆ. ಯಡಿಯೂರಪ್ಪಗೆ ಅಷ್ಠದಿಗ್ಬಂಧನ ರಾಜ್ಯದಲ್ಲಿ ಇಡೀ ಬಿಜೆಪಿಯ ಶಕ್ತಿಯ ತೂಕ ಯಡಿಯೂರಪ್ಪನವರ ರಾಜಕೀಯ ವರ್ಚಸ್ಸಿನ ತೂಕಕ್ಕೆ ಸಮನಲ್ಲ. ಯಡಿಯೂರಪ್ಪ ಬಿಟ್ಟರೆ ಕರ್ನಾಟಕದಲ್ಲಿ ಬಿಜೆಪಿಯ ಅಸ್ಥಿತ್ವ ಅಲುಗಾಡುವುದು ಸುಳ್ಳಲ್ಲ. ಅಷ್ಟರಮಟ್ಟಿಗೆ ಬಿಎಸ್‌ವೈ ಪ್ರಭಾವಿ ಹಾಗೂ ಜನಬೆಂಬಲಿತ ನಾಯಕ. ಲಿಂಗಾಯತ ಸಮುದಾಯದ ಪ್ರಶ್ನಾತೀತ ಲೀಡರ್ ಕೂಡಾ ಹೌದು. ಇದು ಬಿಜೆಪಿಗೂ ಗೊತ್ತು, ಯಡಿಯೂರಪ್ಪನವರಿಗೂ ಗೊತ್ತು. ಬಿಎಸ್‌ವೈ ಕಡೆಗಣಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗಂಡಾAತರ ತಪ್ಪಿದ್ದಲ್ಲ ಎಂಬ ಮಾತು ಆ ಪಕ್ಷದೊಳಗೆ ಇದೆ. ಆದರೆ ಯಡಿಯೂರಪ್ಪ ಪಕ್ಷಕ್ಕೆ ಗಂಡಾAತರ ಉಂಟು ಮಾಡಲು ವರಿಷ್ಟರು ಬಿಡುತ್ತಾರೆಯೇ? ಖಂಡಿತಾ ಇಲ್ಲ. ಹೀಗಾಗಿಯೇ ಅವರಿಗೆ ಅಷ್ಠದಿಗ್ಬಂಧನ ಹಾಕಲಾಗಿದೆ. ಪಕ್ಷದ ನಿರ್ಧಾರಗಳನ್ನು ಉಲ್ಲಂಘಿಸುವುದು, ಗುಂಪುಗಾರಿಕೆ ಮಾಡುವುದು, ಹೊಸ ಪಕ್ಷ ಕಟ್ಟಲು ಪ್ರಯತ್ನಿಸುವುದು ಮಾಡದಂತೆ ಬಿಎಸ್‌ವೈ ಮೇಲೆ ನಿಯಂತ್ರಣ ಸಾಧಿಸಲಾಗಿದೆ. ಪಕ್ಷ ನಿಮಗೆ ಎಲ್ಲವನ್ನೂ ನೀಡಿದೆ. ನೀವು ಪಕ್ಷಕ್ಕಾಗಿ ದುಡಿಯಿರಿ. ಹಿರಿಯ ಮುತ್ಸದ್ಧಿಯ ಸ್ಥಾನ ಪಡೆಯಿರಿ. ಪಕ್ಷಕ್ಕೆ ಡ್ಯಾಮೇಜ್ ಮಾಡಿದರೆ ಅದರ ಪರಿಣಾಮಗಳನ್ನು ನೀವು ಅನುಭವಿಸಬೇಕಾಗುತ್ತದೆ. ಕಳೆದ ಸಲ ತೋರಿಸಿದಟೀಸರ್’ನ ಪೂರ್ಣ ಕರಾಳ ದೃಶ್ಯಗಳನ್ನು ನೋಡಬೇಕಾಗುತ್ತದೆ ಎಂಬ ಸಂದೇಶ ನೀಡಿಯೇ ಅವರನ್ನು ಕಟ್ಟಿಹಾಕಲಾಗಿದೆ. ಹಿಂದಿದ್ದ ಬಿಜೆಪಿಗೂ ಈಗಿನ ಬಿಜೆಪಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬ ಅರಿವು ಬಿಎಸ್‌ವೈಗೂ ಇದೆ. ಹೀಗಾಗಿಯೇ ಪುತ್ರನ ರಾಜಕೀಯ ಭವಿಷ್ಯದ ವಿಚಾರದಲ್ಲಿ ಅವರು ಪಕ್ಷವನ್ನು ಎದುರು ಹಾಕಿಕೊಳ್ಳುವ ಸಾಧ್ಯತೆಗಳು ತೀರಾ ಕಮ್ಮಿ. ಇದೇ ಅಷ್ಠದಿಗ್ಬಂಧನದ ಮಹಾತ್ಮೆ ಕತೆ. ಸರ್ವಶಕ್ತ ನಾಯಕನ ನಿಸ್ಸಹಾಯಕತೆಯ ವ್ಯಥೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles