-ವಿಜಯ್ ದಾರಿಹೋಕ
ಇತ್ತೀಚೆಗೆ ರಷ್ಯಾ ಕೀವ್‌ನಿಂದ ಹಿಂದೆಗೆಯುತ್ತಲೇ ಸುಮಾರು ಹನ್ನೆರಡಕ್ಕೂ ಹೆಚ್ಚು ಪ್ರದೇಶಗಳನ್ನು ಯುಕ್ರೆöÊನ್‌ನ ಸೈನ್ಯ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಎಲ್ಲರಿಗೂ ತಿಳಿದ ವಿಷಯ. ಆದರೆ ಈ ಪ್ರದೇಶಗಳಿಗೆ ಯುಕ್ರೇನ್ ಅಧಿಕಾರಿಗಳು, ಮಾನವ ಹಕ್ಕು ಅಧಿಕಾರಿಗಳು ಕಾಲಿಡುತ್ತಲೇ ಜಗತ್ತು ಬೆಚ್ಚಿ ಬೀಳುವ ಸತ್ಯ ಹೊರ ಬೀಳತೊಡಗಿದೆ. ಇಷ್ಟು ದಿನ ರಷ್ಯಾದ ಸೈನಿಕರ ವಶದಲ್ಲಿದ್ದ ಕೀವ್‌ನ ಸಮೀಪದ ಪ್ರದೇಶದಲ್ಲಿ ಸಾಮಾನ್ಯ ನಾಗರಿಕರ ಮಾರಣಹೋಮ ಕೂಡ ನಡೆದಿದ್ದು, ರಸ್ತೆಗಳಲ್ಲಿ, ಮನೆಯ ಆವರಣದಲ್ಲಿ ಮಕ್ಕಳು, ವೃದ್ಧರು ಸೇರಿದಂತೆ ಸುಮಾರು ನಾಲ್ಕು ನೂರಾ ಹತ್ತಕ್ಕೂ ಹೆಚ್ಚು ಮುಗ್ಧ ನಾಗರಿಕರ ಹೆಣಗಳು ಸಿಕ್ಕಿದ್ದು, ರಷ್ಯಾ ಯುಕ್ರೆöÊನ್ ಯುದ್ಧದ ಕಾವನ್ನು ಇನ್ನಷ್ಟು ಹೆಚ್ಚಿಸಿದೆ. ಬುಖಾದಲ್ಲಿ ದೊಡ್ಡ ಗುಂಡಿ ತೋಡಿ ಅನೇಕ ನಾಗರಿಕರ ಹೆಣ ಚೆಲ್ಲಿದ್ದು ಕಂಡು ಬಿದ್ದಿದ್ದು, ಹಲ್ಲು ಮುರಿದ ವೃದ್ಧ ದೇಹಗಳು, ಕೈ ಕಟ್ಟಿ ಬಾಯಲ್ಲಿ ಗುಂಡು ಹಾರಿಸಲ್ಪಟ್ಟ ಮೃತದೇಹಗಳು ಒಂದು ಕಡೆ, ಸ್ಲೀಪಿಂಗ್ ಬ್ಯಾಗ್‌ನಲ್ಲಿ ಸುಟ್ಟ ಗಾಯದ ಗುರುತುಗಳ ಬೆತ್ತಲೆ ಮಹಿಳೆಯರ ದೇಹಗಳೂ ದೊರೆತಿದ್ದು ರಷ್ಯಾ ಸೈನಿಕರು ಎಸಗಿದ ಸಾಮೂಹಿಕ ಲೈಂಗಿಕ ಅತ್ಯಾಚಾರಗಳ ಬಗ್ಗೆ, ಪೈಶಾಚಿಕ ಕೃತ್ಯಗಳ ಬಗ್ಗೆ ಪುಷ್ಟಿ ನೀಡುವ ಬಗ್ಗೆ ಪ್ರಖರ ಸಾಕ್ಷö್ಯಗಳು ದೊರೆತಿವೆ. ಅಳಿದುಳಿದ ಹಳ್ಳಿಗರು, ಮಕ್ಕಳ ಮುಂದೆಯೇ ರಷ್ಯನ್ನರು ನಡೆಸಿದ ನರಮೇಧಗಳ ಬಗ್ಗೆ ಸವಿವರವಾಗಿ ಬಿಚ್ಚಿಡುತ್ತಿದ್ದಾರೆ. ಇವೆಲ್ಲ ಸಂಗತಿಗಳು ಹೊರಬರುತ್ತಿದ್ದಂತೆಯೇ ವಿಶ್ವ ಒಮ್ಮೆಲೇ ಬೆಚ್ಚಿಬಿದ್ದಿದೆ.

ಸತತ ನಲವತ್ತು ದಿನಗಳ ಯುದ್ಧದ ಬಳಿಕ ರಷ್ಯಾ ಕೀವ್ ಸೇರಿದಂತೆ ಉತ್ತರದ ಭಾಗಗಳಿಂದ ಹಿಂತೆಗೆದು ಪೂರ್ವ ಯುಕ್ರೇನ್ ಪ್ರದೇಶದ ಕಡೆಗೆ ತನ್ನ ಗಮನವನ್ನು ಪೂರ್ಣವಾಗಿ ಕೇಂದ್ರೀಕರಿಸುತ್ತಿದೆ. ಅಂದುಕೊಂಡಷ್ಟು ಸುಲಭದಲ್ಲಿ ಕೀವ್ ವಶವಾಗದೆ ಇದ್ದದ್ದು ಒಂದು ಕಾರಣವಾದರೆ, ಪುಟಿನ್‌ಗೆ ಆದಷ್ಟು ಬೇಗ, ತಾರ್ಕಿಕವಾಗಿ ತನ್ನ ಜಯ ಘೋಷಿಸುವ ಮುನ್ನ ಆಗಬೇಕಾಗಿರುವುದು ಡಾನ್ ಬಾಸ್ ಪ್ರದೇಶವನ್ನು ಸಂಪೂರ್ಣ ವಶಪಡಿಸಿಕೊಂಡು, ಯುಕ್ರೆöÊನ್‌ನಿಂದ ಪ್ರತ್ಯೇಕಗೊಳಿಸಿ ತನ್ನ ಹತೋಟಿಯನ್ನು ಸ್ಥಾಪಿಸುವುದು. ಇದರ ಜೊತೆಗೆ ತಾನು ತಟಸ್ಥ ರಾಷ್ಟç ಎಂದು ಯುಕ್ರೆöÊನ್ ಘೋಷಿಸುವಂತೆ ನೋಡಿಕೊಳ್ಳುವುದು. ಆಲಿಪ್ತ ನೀತಿಗೆ ಯುಕ್ರೇನ್ ಈಗಾಗಲೇ ಒಪ್ಪಿಗೆ ನೀಡುವ ಇಂಗಿತ ವ್ಯಕ್ತಪಡಿಸಿದೆ. ಆದರೆ, ಲುಹಾನ್ಸ್ ಮತ್ತು ಡೊನೆಕ್ಕ್÷್ಸ ಪ್ರದೇಶಗಳಲ್ಲಿ ರಷ್ಯನ್ ಭಾಷಿಗರು ಅಧಿಕವಾಗಿದ್ದರೂ, ಯುಕ್ರೆöÊನ್‌ಗೆ ಅದು ಮುಖ್ಯ ಕೈಗಾರಿಕಾ ವಲಯವಾಗಿದ್ದು ತನ್ನ ಜನತೆಯ ತ್ಯಾಗ, ಬಲಿದಾನಗಳ ನಡುವೆ ದೇಶದ ಸಾರ್ವಭೌಮತೆಗೆ ಧಕ್ಕೆ ತರುವುದಾಗಲಿ, ಒಂದಿAಚೂ ಭೂಮಿಯನ್ನು ಕಳೆದುಕೊಳ್ಳುವುದಾಗಲಿ ಯುಕ್ರೇನ್ ಸುತಾರಾಂ ಇಷ್ಟವಿಲ್ಲ.

ಅತ್ತ ಪ್ಯಾಕ್ ಮಾಡಿದ ಆಹಾರ ತಿಂದು ಬೇಸತ್ತು ಚಡಪಡಿಸುವ, ಅರೆ ಮನಸ್ಸಿನ, ಮಹಾ ಕಾರಣವಿಲ್ಲದೇ ಯುದ್ಧ ಮಾಡಬೇಕಾದ ರಷ್ಯನ್ ಸೈನಿಕರು ಹಾಗೂ ಅವರ ಕಳಪೆ ಪ್ರದರ್ಶನ, ಅಪರಾಧಿ ಹಿಂಸಾತ್ಮಕ ಧೋರಣೆ ಒಂದು ಕಡೆಯಾದರೆ, ತಮ್ಮ ತಪ್ಪಿಲ್ಲದೆಯೂ ಒಂದು ಬಲಿಷ್ಠ ದೇಶ ವಿನಾಕಾರಣ ಚಿಕ್ಕ ದೇಶವೊಂದರ ಮೇಲೆ ಸಾರಿದ ಯುದ್ಧದಲ್ಲಿ ಸ್ವರಕ್ಷಣೆಗಾಗಿ, ತಮ್ಮ ಪರಿವಾರ, ಮನೆ, ಮಠ ಉಳಿಸಿಕೊಳ್ಳಲು ಜೀವದ ಹಂಗು ತೊರೆದು ಕಾದಾಡುತ್ತಿರುವ ಯುಕ್ರೆöÊನ್‌ನ ವೀರ ಸೈನಿಕರು, ಜನತೆ ಒಂದು ಕಡೆ. ಹೀಗಾಗಿಯೇ ಅತ್ಯಾಧುನಿಕ ಯುದ್ಧಾಸ್ತçಗಳಿದ್ದರೂ ಗೆಲ್ಲಲಾಗದೇ ಹಿನ್ನೆಡೆ ಅನುಭವಿಸಿ ಇದೀಗ ಅವಮಾನದ ಬೇಗುದಿಯಲ್ಲ್ಲಿ ಬೇಯುತ್ತಿರುವ ಪುಟಿನ್‌ಗೆ ಕ್ರೆಮ್ಲಿನ್‌ನಲ್ಲಿ ನಿದ್ದೆ ಬರುತ್ತಿಲ್ಲ.

ಬುಖಾದಲ್ಲಿನ ರಷ್ಯಾದ ಘೋರ ಯುದ್ಧಾಪರಾಧ
ಇಂಥ ಪರಿಸ್ಥಿತಿಯಲ್ಲಿ ರಷ್ಯಾದ ಪಾಲಿಗೆ ಇನ್ನೊಂದು ಹೊಸ ಅಗ್ನಿ ಪರೀಕ್ಷೆ ಎದುರಾಗಿದೆ. ಇತ್ತೀಚೆಗೆ ರಷ್ಯಾ ಕೀವ್‌ನಿಂದ ಹಿಂದೆಗೆಯುತ್ತಲೇ ಸುಮಾರು ಹನ್ನೆರಡಕ್ಕೂ ಹೆಚ್ಚು ಪ್ರದೇಶಗಳನ್ನು ಯುಕ್ರೆöÊನ್‌ನ ಸೈನ್ಯ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಎಲ್ಲರಿಗೂ ತಿಳಿದ ವಿಷಯ. ಆದರೆ ಈ ಪ್ರದೇಶಗಳಿಗೆ ಯುಕ್ರೆöÊನ್‌ನ ಅಧಿಕಾರಿಗಳು, ಮಾನವ ಹಕ್ಕು ಅಧಿಕಾರಿಗಳು ಕಾಲಿಡುತ್ತಲೇ ಜಗತ್ತು ಬೆಚ್ಚಿ ಬೀಳುವ ಸತ್ಯ ಹೊರ ಬೀಳತೊಡಗಿದೆ. ಇಷ್ಟು ದಿನ ರಷ್ಯಾದ ಸೈನಿಕರ ವಶದಲ್ಲಿದ್ದ ಕೀವ್‌ನ ಸಮೀಪದ ಪ್ರದೇಶದಲ್ಲಿ ಸಾಮಾನ್ಯ ನಾಗರಿಕರ ಮಾರಣಹೋಮ ಕೂಡ ನಡೆದಿದ್ದು, ರಸ್ತೆಗಳಲ್ಲಿ, ಮನೆಯ ಆವರಣದಲ್ಲಿ ಮಕ್ಕಳು, ವೃದ್ಧರು ಸೇರಿದಂತೆ ಸುಮಾರು ನಾಲ್ಕು ನೂರಾ ಹತ್ತಕ್ಕೂ ಹೆಚ್ಚು ಮುಗ್ಧ ನಾಗರಿಕರ ಹೆಣಗಳು ಸಿಕ್ಕಿದ್ದು, ರಷ್ಯಾ ಯುದ್ಧದ ಕಾವನ್ನು ಇನ್ನಷ್ಟು ಹೆಚ್ಚಿಸಿದೆ.
ಬುಖಾದಲ್ಲಿ ದೊಡ್ಡ ಗುಂಡಿ ತೋಡಿ ಅನೇಕ ನಾಗರಿಕರ ಹೆಣ ಚೆಲ್ಲಿದ್ದು ಕಂಡು ಬಿದ್ದಿದ್ದು, ಹಲ್ಲು ಮುರಿದ ವೃದ್ಧ ದೇಹಗಳು, ಕೈ ಕಟ್ಟಿ ಬಾಯಲ್ಲಿ ಗುಂಡು ಹಾರಿಸಲ್ಪಟ್ಟ ಮೃತದೇಹಗಳು ಒಂದು ಕಡೆ, ಸ್ಲೀಪಿಂಗ್ ಬ್ಯಾಗ್‌ನಲ್ಲಿ ಸುಟ್ಟ ಗಾಯದ ಗುರುತುಗಳ ಬೆತ್ತಲೆ ಮಹಿಳೆಯರ ದೇಹಗಳೂ ದೊರೆತಿದ್ದು ರಷ್ಯಾ ಸೈನಿಕರು ಎಸಗಿದ ಸಾಮೂಹಿಕ ಲೈಂಗಿಕ ಅತ್ಯಾಚಾರಗಳ ಬಗ್ಗೆ, ಪೈಶಾಚಿಕ ಕೃತ್ಯಗಳ ಬಗ್ಗೆ ಪುಷ್ಟಿ ನೀಡುವ ಬಗ್ಗೆ ಪ್ರಖರ ಸಾಕ್ಷö್ಯಗಳು ದೊರೆತಿವೆ. ಅಳಿದುಳಿದ ಹಳ್ಳಿಗರು, ಮಕ್ಕಳ ಮುಂದೆಯೇ ರಷ್ಯನ್ನರು ನಡೆಸಿದ ನರಮೇಧಗಳ ಬಗ್ಗೆ ಸವಿವರವಾಗಿ ಬಿಚ್ಚಿಡುತ್ತಿದ್ದಾರೆ. ಇವೆಲ್ಲ ಸಂಗತಿಗಳು ಹೊರಬರುತ್ತಿದ್ದಂತೆಯೇ ವಿಶ್ವ ಒಮ್ಮೆಲೇ ಬೆಚ್ಚಿಬಿದ್ದಿದೆ. ರಷ್ಯಾ ಹಾಗೂ ಪುಟಿನ್‌ನ ಮೇಲೆ ವಿಶ್ವ ಇನ್ನಷ್ಟು ಕೆಂಡ ಕಾರಲು ಕಾರಣವಾಗಿದೆ. ಅತ್ತ ಯುಕ್ರೆöÊನ್‌ನ ಅಧ್ಯಕ್ಷ ಜೆಲೆಸ್ಕಿ ಬುಖಾ ನಗರಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪ್ರತ್ಯಕ್ಷದರ್ಶಿಯಾಗಿ ಕಂಡು ಅಲ್ಲಿನ ಬೀಭತ್ಸö್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಅಮೆರಿಕಾದ ಅಧ್ಯಕ್ಷ ಬೈಡೆನ್, ಪುಟಿನ್‌ಅನ್ನು ಯುದ್ಧಾಪರಾಧಿ ಎಂದು ಘೋಷಿಸಿ ವಿಚಾರಣೆ ನಡೆಸುವಂತೆ ಕರೆ ಕೊಟ್ಟಿದ್ದಾರೆ.
ಸಾಮಾನ್ಯವಾಗಿ ಒಂದು ಯುದ್ಧ ಎಂದು ನಡೆದರೆ ಅಲ್ಲಿ ಎರಡೂ ಕಡೆಯ ಸೈನಿಕರು ಪರಸ್ಪರ ಕಾದಾಡುತ್ತಾರೆ. ಆದರೆ ಯಾವುದೇ ಸೇನೆ ಸಾಮಾನ್ಯ ನಾಗರಿಕರ ಮೇಲೆ ದಾಳಿ ಮಾಡಿ, ಹಿಂಸೆ ಮಾಡಿ, ಸಾಮೂಹಿಕ ಸಂಹಾರ ಮಾಡುವುದು, ಆಸ್ತಿಪಾಸ್ತಿ ನಷ್ಟ ಮಾಡುವುದು, ಮಹಿಳೆ, ಮಕ್ಕಳನ್ನು ಹಿಂಸಿಸುವುದು ಮಾಡಿದರೆ ಅದನ್ನು ಯುದ್ಧಾಪರಾಧವೆಂದು ಪರಿಗಣಿಸಲಾಗುತ್ತದೆ. ಇಂಥ ವಿಷಯಗಳನ್ನು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ೨೦೦೨ರಲ್ಲಿ ನೆದರ್‌ಲ್ಯಾಂಡ್‌ನ ಹೇಗ್ ನಗರದಲ್ಲಿ ನ್ಯಾಯಾಲಯ ಸ್ಥಾಪಿತವಾಗಿದೆ.
ಕೀವ್‌ನಿಂದ ಕೇವಲ ೪೫ ಕಿ.ಮೀ. ದೂರ ಇರುವ ಬುಖಾ ಸೇರಿದಂತೆ ಕೆಲವು ಕಡೆ, ನಿಶ್ಶಸ್ತç ನಾಗರಿಕರ ಮೇಲೆ ರಷ್ಯನ್ ಸೇನೆ ಎಸಗಿದ ಯುದ್ಧಾಪರಾಧ ಕ್ರೌರ್ಯಕ್ಕೆ ಕೂಡ ನ್ಯಾಯಾಲಯ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ.
ಬುಖಾ ಘಟನೆಯ ಬಳಿಕ ಯುರೋಪಿಯನ್ ಮುಖಂಡರುಗಳು ಸೇರಿದಂತೆ ಜಾಗತಿಕ ಬಹುತೇಕ ನಾಯಕರು ರಷ್ಯಾದ ಮೇಲಿನ ಇನ್ನಷ್ಟು ಕಠಿಣ ದಿಗ್ಭಂಧನಗಳನ್ನು ವಿಧಿಸುವಂತೆ ಕೋರಿಕೊಳ್ಳುತ್ತಿದ್ದಾರೆ. ಲಿಥುವೇನಿಯಾ, ಸಂಪೂರ್ಣ ತೈಲ ಆಮದು ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡ ಯುರೋಪಿಯನ್ ಯೂನಿಯನ್‌ನ ಮೊದಲ ದೇಶವಾಗಿದೆ. ಬುಖಾನ ಸಾಮೂಹಿಕ ನರಮೇಧ ಸೇರಿದಂತೆ ವಿವಿಧ ಯುದ್ಧಾಪರಾಧಗಳಿಗೆ ಪ್ರತಿಯಾಗಿ ದಿಗ್ಬಂಧನಗಳನ್ನು ಇನ್ನಷ್ಟು ಹೆಚ್ಚಿಸಬೇಕಾಗಿ, ಜರ್ಮನಿ ಒಟ್ಟಾರೆ ನೈಸರ್ಗಿಕ ಅನಿಲಗಳ ಆಮದನ್ನೇ ನಿಲ್ಲಿಸಬೇಕು ಎಂದು ಅಲ್ಲಿನ ರಕ್ಷಣಾ ಮಂತ್ರಿ ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ. ಅತ್ತ ಮಾರಿಯುಪೋಲ್‌ಅನ್ನು ರಷ್ಯನ್ ಪಡೆಗಳು ಸುತ್ತುವರೆದಿದ್ದು, ಅಲ್ಲಿ ಸಿಲುಕಿದ ಸಾವಿರಾರು ನಾಗರಿಕರು ಸಾವನ್ನಪ್ಪಿರುವ ಸಾಧ್ಯತೆ ಇದ್ದು ಬೀಭತ್ಸ ಚಿತ್ರಣ ಇನ್ನಷ್ಟೇ ಹೊರಬರಬೇಕಿದೆ.

ಯುಕ್ರೇನ್ಗೆ ಮುಂದುವರೆದ ಅಮೆರಿಕಾದ ಬೆಂಬಲ
ಯುಕ್ರೇನ್ ಯುದ್ಧದಲ್ಲಿ ಸೋತು ಬಸವಳಿಯದೆ ಗಟ್ಟಿಯಾಗಿ ನಿಲ್ಲುವಂತೆ ಸಹಾಯ ಮಾಡಲು ಅಮೆರಿಕಾ ಸುಮಾರು ಮುನ್ನೂರು ಮಿಲಿಯನ್ ಡಾಲರುಗಳಷ್ಟು ಹೆಚ್ಚಿನ ಮೌಲ್ಯದ ಯುದ್ಧ ಸಾಮಗ್ರಿಗಳನ್ನು ನೀಡಲು ನಿರ್ಧರಿಸಿದೆ. ಈ ಹಿಂದೆ ಯುರೋಪಿನ ಪ್ರವಾಸದಲ್ಲಿದ್ದ ಅಧ್ಯಕ್ಷ ಬೈಡೆನ್ ಪುಟಿನ್ ಒಬ್ಬ ಕಟುಕ ಎಂದಿದ್ದೂ, ಆತನನ್ನು ರಷ್ಯಾದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ನೇರ ಹೇಳಿಕೆ ನೀಡಿದ್ದು ವಿವಾದ ಸೃಷ್ಟಿಸಿತ್ತು. ಮುಂಬರುವ ಚುನಾವಣೆಯಲ್ಲಿ ಸೋಲು ಅನುಭವಿಸುವ ಸಂಭಾವ್ಯತೆಯಲ್ಲಿ ಇರುವ ಬೈಡೆನ್‌ಗೆ ರಷ್ಯಾ ಯುಕ್ರೆöÊನ್ ಯುದ್ಧದಲ್ಲಿ ಆಕ್ರಮಣಕಾರಿ ನೀತಿ ಅನುಸರಿಸಿ, ತನ್ನ ದೇಶದಲ್ಲಿ ಜನಪ್ರಿಯತೆ ವೃದ್ಧಿಗೊಳಿಸಿ ತಮ್ಮ ಪಕ್ಷ ಚುನಾವಣೆಯಲ್ಲಿ ಮೇಲುಗೈ ಸಾಧಿಸುವಂತೆ ಮಾಡುವ ಉದ್ದೇಶ ಕೂಡ ಇದೆ ಎನ್ನಲಾಗುತ್ತಿದೆ. ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸದೆ ಶಾಂತಿ ಸಂಧಾನ ಪ್ರಕ್ರಿಯೆಗೆ ಇಂಬು ಕೊಡುವಂತೆ ಅಮೆರಿಕಾಕ್ಕೆ ಆಗ್ರಹಿಸಿ ಕೆಲವು ಟೀಕಾಕಾರರು ಹೇಳಿಕೆ ನೀಡಿದ್ದಾರೆ.
ಇನ್ನೂ ಮರೀಚಿಕೆಯಾಗಿರುವ ಶಾಂತಿ ಸಂಧಾನ
ಕ್ರೆöÊಮಿಯಾ ಬಗ್ಗೆ ಯುಕ್ರೇನ್ನಲ್ಲಿ ಜನಾಭಿಪ್ರಾಯ ಸಂಗ್ರಹಿಸುವ ಹಾಗೂ ಸ್ಥಾನಮಾನದ ಬಗ್ಗೆ ಚರ್ಚಿಸಲು ಇನ್ನಷ್ಟು ಸಮಯ ನೀಡುವುದು, ನ್ಯಾಟೋ ಸೇರದೇ ತಟಸ್ಥವಾಗಿ ಉಳಿಯುವುದು. ಯಾವುದೇ ವಿದೇಶಿ ಸೇನೆಗೆ ನೆಲೆ ಒದಗಿಸದೆ ಇರುವುದು ಒಪ್ಪುವುದು ಆದರೆ ತನ್ನ ಅರ್ಥಿಕ ವ್ಯವಹಾರಗಳಿಗಾಗಿ ಮಾತ್ರ ಯುರೋಪ್ ಯೂನಿಯನ್ ಸೇರುವ ಬಗ್ಗೆ ಪ್ರಸ್ತಾಪಗಳು ಕಡೆಯಿಂದ ಬಂದಿದ್ದು ಅವನ್ನು ಪುಟಿನ್‌ನ ಮುಂದೆ ಇರಿಸಲಾಗಿದೆ. ಡಾನ್ ಬಾಸ್ ಪ್ರತ್ಯೇಕಗೊಳಿಸುವ ಬಗ್ಗೆ ಇನ್ನೂ ಸ್ಪಷ್ಟ ನಿಲುವುಗಳ ಚರ್ಚೆ ಆಗಿಲ್ಲ. ಇತ್ತೀಚೆಗೆ ಬೆಳಕಿಗೆ ಬಂದ ಬುಖಾದ ಯುದ್ಧಾಪರಾಧ ಪ್ರಕರಣಗಳು ಈ ಮಾತುಕತೆ, ಸಂಧಾನ ಪ್ರಯತ್ನಕ್ಕೆ ಅಡ್ಡಿಯಾಗಬಹುದು. ಅತ್ತ ರಷ್ಯಾ ಕೂಡ ಶಾಂತಿ ಮಾತುಕತೆಗೆ ಅಷ್ಟು ಪರಿಣಾಮಕಾರಿಯಾಗಿ ಸ್ಪಂದಿಸದೆ ಇರುವುದು ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದೆ.
ಮುAಬರುವ ದಿನಗಳಲ್ಲಿ ಅಂಕಾರಾ ಅಥವಾ ಇಸ್ತಾಂಬುಲ್‌ನಲ್ಲಿ ಪುಟಿನ್ ಹಾಗೂ ಜೆಲೆನ್ಸಿ÷್ಕ ನಡುವೆ ಮಾತುಕತೆ ಏರ್ಪಡಿಸುವುದಕ್ಕೆ ಇಬ್ಬರಿಗೂ ಆಪ್ತವಾಗಿರುವ ಟರ್ಕಿ ಮುಂದೆ ಬಂದಿದ್ದು ಎರಡೂ ಕಡೆಯ ನಾಯಕರೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ ಅಲ್ಲಿಯವರೆಗೆ ಅನೇಕ ವಿಷಯಗಳ ಬಗ್ಗೆ ರಷ್ಯಾ ಹಾಗೂ ಯುಕ್ರೇನ್ ನಡುವೆ ಸಹಮತ ಉಂಟಾಗುವ ದಾರಿ ಸುಗಮವಲ್ಲ. ಬೆಳವಣಿಗೆಗಳನ್ನು ಕಾದು ನೋಡುತ್ತಾ ಕೊನೆಯ ಕ್ಷಣದಲ್ಲಿ ಉಂಟಾಗುವ ಯಾವುದೇ ಅಹಿತಕರ ಘಟನೆಗಳಿಂದ ಸಾಂಕೇತಿಕವಾಗಿ ಕೂಡ ಅಣು ಬಾಂಬ್ ಉಪಯೋಗಿಸುವ ಹಂತಕ್ಕೆ ತಲುಪದೇ, ಆದಷ್ಟು ಬೇಗ ಸಾಮಾನ್ಯ ಸೂತ್ರ ಒಪ್ಪಂದವಾಗಿ ಯುದ್ಧ ಮುಗಿದು ಶಾಂತಿ ಸ್ಥಾಪಿತವಾಗಲಿ ಎಂದು ಹಾರೈಸಬಹುದು.