-ನವರಂಗ್ ಕೊಬ್ಬೆ
ಓಮಿಕ್ರಾನ್ ಕಡಿಮೆ ಮಾರಕ. ಆದರೆ ಡೆಲ್ಟಾ ರೂಪಾಂತರಿಗಿಂತ ಹೆಚ್ಚು ವೇಗವಾಗಿ ಹಬ್ಬುವ ಸಾಂಕ್ರಾಮಿಕ ಎನ್ನುತ್ತಿದ್ದಾರೆ ದಕ್ಷಿಣ ಆಫ್ರಿಕಾ ಆರೋಗ್ಯ ತಜ್ಞರು. ಓಮಿಕ್ರಾನ್ ರೂಪಾಂತರವು ೩೦ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ. ಇದು ಡೆಲ್ಟಾ ರೂಪಾಂತರಕ್ಕಿಂತ ಎರಡು ಪಟ್ಟು ಹೆಚ್ಚು. ಇದು ವೇಗವಾಗಿ ಹರಡುತ್ತದೆ ಮತ್ತು ಈ ಮುನ್ನ ಕೋವಿಡ್ ಸೋಂಕಿಗೆ ನೀಡಲಾದ ಲಸಿಕೆಯ ರಕ್ಷಣೆಯನ್ನು ಬೇಧಿಸಿ ಮಾನವ ದೇಹದೊಳಕ್ಕೆ ನುಗ್ಗುತ್ತದೆ ಎನ್ನುವುದೂ ಅಲ್ಲಿನ ತಜ್ಞರಿಂದ ದೃಢಪಟ್ಟಿದೆ. ಮತ್ತೊಂದು ಅಚ್ಚರಿಯ ಅಂಶವೆಂದರೆ ಜರ್ಮನಿ, ನೆದರ್‌ಲ್ಯಾಂಡ್ಸ್, ಆಸ್ಟೆಲಿಯಾ, ಜೆಕ್ ರಿಪಬ್ಲಿಕ್, ಇಟಲಿ ಮತ್ತು ಯುಕೆ ದೇಶಗಳಲ್ಲಿ ಪತ್ತೆಯಾಗಿರುವುದು ಓಮಿಕ್ರಾನ್‌ನ ವಿವಿಧ ರೂಪಾಂತರಗಳೇ ಹೊರತು ಒಂದೇ ವೈರಸ್ ಅಲ್ಲ ಎಂಬುದು. ಓಮಿಕ್ರಾನ್ ಸೋಂಕು ಪರೀಕ್ಷೆಯು ಸುಲಭವಲ್ಲ. ಸೋಂಕಿತನೊಳಗೆ ಇದೇ ವೈರಸ್ ಇದೆ ಎಂಬುದನ್ನು ಪತ್ತೆಹಚ್ಚಿ ಫಲಿತಾಂಶ ಬರಬೇಕಾದರೆ ವಾರ ಕಾಲ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು.

ಮಾರುವೇಷ ಧರಿಸಿ ಬಂದಿರುವ ಕೋವಿಡ್ ವಿಶ್ವವನ್ನು ಮತ್ತೆ ತಲ್ಲಣಗೊಳಿಸಿದೆ. ಮೊದಲ ಅಲೆಯ ಕೋವಿಡ್‌ನ ಸಂದರ್ಭದAತೆಯೇ ಈಗಲೂ ರೋಗ, ರೋಗಲಕ್ಷಣಗಳು, ಅದು ವರ್ತಿಸುವ ರೀತಿಯ ಬಗ್ಗೆ ತಜ್ಞರಲ್ಲಿ ಅನೇಕ ಗೊಂದಲಗಳು ಮೂಡಿವೆ. ಆದರೆ ಓಮಿಕ್ರಾನ್ ಅಬ್ಬರಿಸುತ್ತಿರುವ ದಕ್ಷಿಣ ಆಫ್ರಿಕಾದ ವರದಿಗಳ ಪ್ರಕಾರ ಹೊಸ ರೂಪಾಂತರಿ ವೈರಸ್ ಅಸಾಮಾನ್ಯ ಆದರೆ ತುಂಬಾ ಸೌಮ್ಯ’. ದಕ್ಷಿಣ ಆಫ್ರಿಕಾದಾದ್ಯಂತ ಸೋಂಕು ವೇಗವಾಗಿ ಹರಡಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಜೋಹಾನ್ಸ್ ಬರ್ಗ್ ಪ್ರದೇಶದಲ್ಲಿನ ಎಲ್ಲಾ ಹೊಸ ಸೋಂಕಿತರಲ್ಲಿ ೯೦ ಪ್ರತಿಶತ ಓಮಿಕ್ರಾನ್ ಸೋಂಕಿತರೇ ಆಗಿದ್ದಾರೆ. ಗಮನಾರ್ಹವೆಂದರೆ ಜಗತ್ತು ಭಯ ಪಡುವಂತೆ ಈ ವೈರಸ್ ವರ್ತನೆಗಳಿಲ್ಲ. ಕೋವಿಡ್ ಸಾವಿನ ಪ್ರಮಾಣ ಅಷ್ಟೇನೂ ಹೆಚ್ಚಾಗುತ್ತಿಲ್ಲ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ರೋಗದ ಸಂಪೂರ್ಣ ಗುಣಲಕ್ಷಣಗಳು ಹೊರಹೊಮ್ಮುವವರೆಗೂ ನಿಟ್ಟುಸಿರು ಬಿಡಲು ಅಡ್ಡಿಯಿಲ್ಲ. ಓಮಿಕ್ರಾನ್ ಕಡಿಮೆ ಮಾರಕ. ಆದರೆ ಡೆಲ್ಟಾ ರೂಪಾಂತರಿಗಿAತ ಹೆಚ್ಚು ವೇಗವಾಗಿ ಹಬ್ಬುವ ಸಾಂಕ್ರಾಮಿಕ ಎನ್ನುತ್ತಿದ್ದಾರೆ ದಕ್ಷಿಣ ಆಫ್ರಿಕಾ ಆರೋಗ್ಯ ತಜ್ಞರು. ಓಮಿಕ್ರಾನ್ ರೂಪಾಂತರವು ೩೦ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ. ಇದು ಡೆಲ್ಟಾ ರೂಪಾಂತರಕ್ಕಿAತ ಎರಡು ಪಟ್ಟು ಹೆಚ್ಚು. ಇದು ವೇಗವಾಗಿ ಹರಡುತ್ತದೆ ಮತ್ತು ಈ ಮುನ್ನ ಕೋವಿಡ್ ಸೋಂಕಿಗೆ ನೀಡಲಾದ ಲಸಿಕೆಯ ರಕ್ಷಣೆಯನ್ನು ಬೇಧಿಸಿ ಮಾನವ ದೇಹದೊಳಕ್ಕೆ ನುಗ್ಗುತ್ತದೆ ಎನ್ನುವುದೂ ಅಲ್ಲಿನ ತಜ್ಞರಿಂದ ದೃಢಪಟ್ಟಿದೆ. ಮತ್ತೊಂದು ಅಚ್ಚರಿಯ ಅಂಶವೆAದರೆ ಜರ್ಮನಿ, ನೆದರ್‌ಲ್ಯಾಂಡ್ಸ್, ಆಸ್ಟೆçÃಲಿಯಾ, ಜೆಕ್ ರಿಪಬ್ಲಿಕ್, ಇಟಲಿ ಮತ್ತು ಯುಕೆ ದೇಶಗಳಲ್ಲಿ ಪತ್ತೆಯಾಗಿರುವುದು ಓಮಿಕ್ರಾನ್‌ನ ವಿವಿಧ ರೂಪಾಂತರಗಳೇ ಹೊರತು ಒಂದೇ ವೈರಸ್ ಅಲ್ಲ ಎಂಬುದು. ಓಮಿಕ್ರಾನ್ ಸೋಂಕು ಪರೀಕ್ಷೆಯು ಸುಲಭವಲ್ಲ. ಸೋಂಕಿತನೊಳಗೆ ಇದೇ ವೈರಸ್ ಇದೆ ಎಂಬುದನ್ನು ಪತ್ತೆಹಚ್ಚಿ ಫಲಿತಾಂಶ ಬರಬೇಕಾದರೆ ವಾರ ಕಾಲ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು. ಕೊರೋನಾ ವೈರಸ್‌ನ ರೂಪಾಂತರ ತಳಿ ಓಮಿಕ್ರಾನ್‌ನ ಸಾಂಕ್ರಾಮಿಕಗೊಳ್ಳುವಿಕೆಯ ಸಾಮರ್ಥ್ಯದ ಬಗ್ಗೆ ನಿಖರತೆ ಇಲ್ಲವಾದರೂ, ಅದು ಅತ್ಯಂತ ಹೆಚ್ಚು ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಹೇಳಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ತಳಿಯು
ಹೆಚ್ಚಿನ ರೂಪಾಂತರಗಳೊAದಿಗೆ ಅತ್ಯಂತ ವಿಭಿನ್ನವಾಗಿ ರೂಪುಗೊಂಡಿದೆ. ಹೀಗಾಗಿ ಈ ವೈರಸ್ ಪ್ರತಿರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಮತ್ತು ದೊಡ್ಡ ಮಟ್ಟದಲ್ಲಿ ಪ್ರಸರಣ ಹೊಂದುವ ಸಾಧ್ಯತೆಗಳಿವೆ. ಜಾಗತಿಕ ಮಟ್ಟದಲ್ಲಿ ಓಮಿಕ್ರಾನ್ ಮತ್ತಷ್ಟು ಹರಡುವ ಸಾಧ್ಯತೆ ಹೆಚ್ಚು. ಓಮಿಕ್ರಾನ್ ತಳಿಯಿಂದ ಸೋಂಕಿಗೆ ಒಳಗಾದರೂ ಮೃತಪಟ್ಟ ಪ್ರಕರಣಗಳು ಈವರೆಗೆ ಒಂದು ಪತ್ತೆಯಾಗಿಲ್ಲ’ ಎಂದು ಕೂಡಾ ಆರೋಗ್ಯ ಸಂಸ್ಥೆ ಹೇಳಿರುವುದು ಓಮಿಕ್ರಾನ್ ಭೂತವನ್ನು ಕುಣಿಸುತ್ತಿರುವ ಮಾಧ್ಯಮಗಳಿಗೆ ನಿರಾಸೆ ತರುವಂತಿದೆ.

ಹೊಸ ರೂಪಾಂತರವು ಹಿಂದಿನದಕ್ಕಿಂತಲೂ ಹೆಚ್ಚು ಅಪಾಯಕಾರಿ, ಮಾರಣಾಂತಿಕವೆAದು ಸಾಬೀತಾಗದೇ ಇರಬಹುದು. ಆದರೆ, ಅದು ಹೆಚ್ಚು ಸುಲಭವಾಗಿ ಹರಡಿದರೆ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತವೆ. ಆರೋಗ್ಯ ವ್ಯವಸ್ಥೆಗಳ ಮೇಲೆ ವಿಪರೀತ ಒತ್ತಡ ಸೃಷ್ಟಿಯಾಗುತ್ತದೆ. ಇದರಿಂದಾಗಿ ಹೆಚ್ಚಿನ ಸಾವುಗಳು ಸಂಭವಿಸುತ್ತವೆ’ ಎಂದು ಸಂಸ್ಥೆ ಹೇಳಿದೆ.
ಕೊರೋನಾ ವೈರಸ್ ಎಲ್ಲಿ ಮತ್ತು ಎಷ್ಟು ವೇಗವಾಗಿ ಹರಡುತ್ತಿದೆ ಎಂಬುದರ ಸ್ಪಷ್ಟ ಚಿತ್ರಣ ಪಡೆಯಲು ದೇಶಗಳು ತಮ್ಮ ತಪಾಸಣಾ ವ್ಯವಸ್ಥೆಯನ್ನು ಬಲಪಡಿಸಬೇಕು. ಜತೆಗೆ, ಕೋವಿಡ್ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಬೇಕು. ಆದರೆ, ಹೊಸ ಮಾದರಿ ಪತ್ತೆಯಾದ ರಾಷ್ಟçಗಳಿಗೆ ವಿಮಾನಯಾನ ರದ್ದು ಮಾಡುವುದು ಸರಿಯಲ್ಲ’ ಎಂದು WTO ಹೇಳಿದೆ.