-ಎಸ್.ವಿ. ಜ್ಯೋತಿ

ಅಂದ. ಸಾಂಪ್ರದಾಯಿಕ ಶೈಲಿಯ ವಸ್ತç ಉಡುಪುಗಳನ್ನು ಧರಿಸುವ ಮೂಲಕ ಸಾಂಪ್ರದಾಯಿಕ ನೆಲೆಗಟ್ಟಿಗೆ ಒತ್ತು ನೀಡುವ ಜೊತೆಗೆ ಸೌಂದರ್ಯ ಹೆಚ್ಚಿಸಿಕೊಳ್ಳುವತ್ತಲೂ ಗಮನ ಹರಿಸುತ್ತಾರೆ. ಹಬ್ಬದ ದಿನಗಳಲ್ಲಿ ಇತ್ತೀಚೆಗೆ ಹೆಣ್ಣುಮಕ್ಕಳು ಹೆಚ್ಚಾಗಿ ಘಾಗ್ರಾ ಧರಿಸಲು ಇಷ್ಟಪಡುತ್ತಾರೆ. ಘಾಗ್ರಾ ಸೆಟ್ ಧರಿಸುವುದರಿಂದ ಅಂದ ಹೆಚ್ಚುವುದರಲ್ಲಿ ಸಂಶಯ”ಲ್ಲ. ಇದು ದಪ್ಪಗೆ, ತೆಳ್ಳಗೆ ಪ್ರತಿಯೊಬ್ಬರಿಗೂ ಹೊಂದುತ್ತದೆ. ಇದನ್ನು ಧರಿಸಿದರೆ ಸಂಪ್ರದಾಯಕ್ಕೂ ಒತ್ತು ಕೊಡಬಹುದು. ಇದನ್ನು ಧರಿಸಿದಾಗ ಇದರೊಂದಿಗೆ ಹೊಂದುವಂತಹ ಓಡ್ನಿ, ಬಳೆ, ಚಪ್ಪಲಿ, ಆಭರಣಗಳನ್ನು ಧರಿಸಿದರೆ ಪರಿಪೂರ್ಣವಾಗಿ ತಯಾರಾಗಬಹುದು.
ಓಡ್ನಿ
ಘಾಗ್ರಾ ಅಂದಾಕ್ಷಣ ನೆನಪಾಗುವುದು ದುಪ್ಪಟ್ಟಾ ಅಥವಾ ಓಡ್ನಿ. ʻʻಒಂದೆಲ್ಲಾ ಘಾಗ್ರಾದೊಂದಿಗೆ ಓಡ್ನಿ ಸಿಗುತ್ತಿತ್ತು. ಈಗ ಓಡ್ನಿಯನ್ನು ಬೇರೆಯಾಗಿಯೇ ಖರೀದಿಸಬಹುದು. ಘಾಗ್ರಾ ಸೆಟ್‌ನೊಂದಿಗೆ ಬೇರೆಯದ್ದೇ ಬಣ್ಣದ ಓಡ್ನಿಯನ್ನು ಮ್ಯಾಚಿಂಗ್ ಮಾಡಿಕೊಳ್ಳಬಹುದು. ಸರಳ ಡಿಸೈನ್ ಇರುವ ಘಾಗ್ರಾ ಸೆಟ್‌ನೊಂದಿಗೆ ಗ್ರಾಂಡ್ ಡಿಸೈನ್‌ನ ಓಡ್ನಿ ಧರಿಸಬಹುದು. ಇದು ಸಿಲ್ಕ್, ಕಾಟನ್, ಸಿಂಥೆಟಿಕ್‌ನಲ್ಲೂ ಲಭ್ಯವಿದೆ. ಸರಳ ಡ್ರೆಸ್‌ನೊಂದಿಗೆ ಐಷಾರಾಮಿ ದುಪ್ಪಟ್ಟಾ ಧರಿಸುವುದರಿಂದ ಸುಂದರವಾಗಿ ಕಾಣಬಹುದು.

ನೂಲಿನ ಬಳೆ
ಘಾಗ್ರಾದೊಂದಿಗೆ ಕೈ ತುಂಬಾ ಬಳೆ ಧರಿಸಬೇಕು. ಅದೇ ಬಣ್ಣದ್ದೇ ಬಳೆಯನ್ನು ಕೈ ಪೂರ್ತಿ ಧರಿಸುವುದರಿಂದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಇದರೊಂದಿಗೆ ನೂಲಿನ ಬಳೆ ಹೆಚ್ಚು ಹೊಂದುತ್ತದೆ. ಬಳೆಗೆ ಸಂಪೂರ್ಣವಾಗಿ ನೂಲು ಸುತ್ತಿದ್ದು ಅದರ ಮೇಲೆ ಕುಂದನ್ ಹರಳನ್ನು ಕೂರಿಸಿರುತ್ತಾರೆ. ಹರಳಿನಲ್ಲಿ “”ಧ ಚಿತ್ತಾರವನ್ನು ಮೂಡಿಸಿದ್ದು ಇದು ನೋಟವನ್ನೇ ಬದಲಿಸುವಂತೆ ಮಾಡುವುದಲ್ಲದೇ ಕೈಯ ಅಂದವನ್ನೂ ಹೆಚ್ಚಿಸುತ್ತದೆ.
ಜೈಪುರ ಝುಟ್ಟಿ
ಇದಕ್ಕೆ ರಾಜಸ್ತಾನಿ ಅಥವಾ ಕೊಲ್ಲಾಪುರಿ ಚಪ್ಪಲಿ ಹೆಚ್ಚು ಹೊಂದುತ್ತದೆ. ಘಾಗ್ರಾ ಬಣ್ಣದ್ದೇ ಚಪ್ಪಲಿ ಧರಿಸಬಹುದು. ಇದರಲ್ಲೂ ಹರಳು ಹಾಗೂ ಕನ್ನಡಿಗಳನ್ನು ಜೋಡಿಸಿರುವ ಕಸೂತಿ ಚಪ್ಪಲಿ ಹೊಂದುತ್ತವೆ. ಹಾಗೆಯೇ ಜೈಪುರ ಝುಟ್ಟಿ-ಮೊಜಾರಿ ಚಪ್ಪಲಿಯನ್ನು ಕೂಡ ಮ್ಯಾಚಿಂಗ್ ಮಾಡಿಕೊಳ್ಳಬಹುದು. ಇದರೊಂದಿಗೆ ಬಣ್ಣದ ಅರೇಬಿಯನ್ ಚಪ್ಪಲಿಯನ್ನೂ ಧರಿಸಬಹುದು.

ಆಭರಣಗಳು
ಘಾಗ್ರಾ ಬಣ್ಣದ ಮ್ಯಾಚಿಂಗ್ ಆಭರಣಗಳನ್ನು ಧರಿಸಬಹುದು. ಇದರಿಂದ ನಿಮ್ಮ ನೋಟವೇ ಬದಲಾಗುತ್ತದೆ. ಜೊತೆಗೆ ಹರಳಿನ ನೆಕ್ಲೇಸ್ ನಿಮ್ಮ ಕೊರಳನ್ನು ಅಲಂಕರಿಸುವುದರಿAದ ಸೌಂದರ್ಯಕ್ಕೆ ಇನ್ನಷ್ಟು ಒತ್ತು ಸಿಕ್ಕಂತಾಗುತ್ತದೆ. ಇದರೊಂದಿಗೆ ಝುಮ್ಕಾ, ಬಾಂಧನಿ ಕಿ”ಯೋಲೆಗಳನ್ನೂ ಧರಿಸಬಹುದು. ಈ ಕಿ”ಯೋಲೆಗಳು ಸೌಂದರ್ಯ ಹೆಚ್ಚಿಸುವುದಲ್ಲಿ ಸಂಶಯ”ಲ್ಲ.
ಬ್ಯಾಗ್
ಈ ಉಡುಪಿಗೆ ಕ್ಲಚ್ ಅಥವಾ ನೆಯ್ಗೆಯ ಬ್ಯಾಗ್‌ಗಳು ಹೆಚ್ಚು ಸೂಕ್ತ ಎನ್ನಿಸುತ್ತವೆ. ಕೈಯಲ್ಲಿ “ಡಿಯುವ ಅಥವಾ ಬಗಲಿಗೆ ನೇತು ಹಾಕಿಕೊಳ್ಳುವ ಬ್ಯಾಗ್‌ಗಳು ಸೂಕ್ತ.
ಬೈತಲೆ ಬೊಟ್ಟು
ಬೈತಲೆ ಬೊಟ್ಟು ಧರಿಸುವುದರಿಂದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಅದರಲ್ಲೂ ಬರೀ ಚಿನ್ನದ ಬೈತಲೆ ಬೊಟ್ಟು ಧರಿಸುವುದಕ್ಕಿಂತ ಹರಳಿನ ಅಥವಾ “”ಧ ಚಿತ್ತಾರ”ರುವ ಬೊಟ್ಟನ್ನು ಧರಿಸಬಹುದು.