ಮಣಿಪುರದಲ್ಲಿ ವಿಶ್ವದ ಅತಿ ಎತ್ತರದ ಸೇತುವೆಯ ಕಂಬವನ್ನು ನಿರ್ಮಿಸಲಾಗುತ್ತಿದೆ. ೧೪೧ ಮೀಟರ್‌ಗಳ (೪೬೨ ಅಡಿ) ಎತ್ತರದಲ್ಲಿ ನಿರ್ಮಿಸಲಾಗುತ್ತಿರುವ ಈ ಸೇತುವೆಯ ಕಂಬವು ಯುರೋಪಿನ ಮಾಂಟೆನೆಗ್ರೊದ ಮಾಲಾ-ರಿಜೆಕಾ ವಯಾಡಕ್ಟ್ ಪಿಯರ್ ಬ್ರಿಡ್ಜ್ನ ಎತ್ತರದ ದಾಖಲೆಯನ್ನು ಮೀರಿಸುತ್ತಿದೆ.
ಭಾರತೀಯ ರೈಲ್ವೆಯು ಈಶಾನ್ಯ ರಾಜ್ಯ ಮಣಿಪುರದಲ್ಲಿ ವಿಶ್ವದ ಅತಿ ಎತರದ ಸೇತುವೆಯ ಕಂಬವನ್ನು ನಿರ್ಮಿಸುತ್ತಿದೆ. ಇದು ೧೧೧ ಕಿ.ಮೀ. ಉದ್ದದ ಜಿರಿಬಾಮ್-ಇಂಫಾಲ್ ರೈಲ್ವೆ ಯೋಜನೆಯ ಭಾಗವಾಗಿದೆ.
ಮಣಿಪುರದ ಮಹತ್ವಾಕಾಂಕ್ಷೆಯ ಯೋಜನೆಯು ಮಣಿಪುರದ ರಾಜಧಾನಿಯನ್ನು ದೇಶದ ಬ್ರಾಡ್‌ಗೇಜ್ ಜಾಲದೊಂದಿಗೆ ಸಂಪರ್ಕಿಸಲು ೧೧೧ ಕಿ.ಮೀ. ಉದ್ದದ ಜಿರಿಬಾಮ್-ಇಂಫಾಲ್ ರೈಲು ಮಾರ್ಗದ ಭಾಗವಾಗಿದೆ. ೧೪೧ ಮೀಟರ್‌ಗಳ (೪೬೨ ಅಡಿ) ಎತ್ತರದಲ್ಲಿ ನಿರ್ಮಿಸಲಾಗುತ್ತಿರುವ ಈ ಸೇತುವೆಯ ಕಂಬವು ಯುರೋಪಿನ ಮಾಂಟೆನೆಗ್ರೊದ ಮಾಲಾ-ರಿಜೆಕಾ ವಯಾಡಕ್ಟ್ ಪಿಯರ್ ಬ್ರಿಡ್ಜ್ನ ಎತ್ತರದ ದಾಖಲೆಯನ್ನು ಮೀರಿಸುತ್ತಿದೆ. ಮಾಂಟನೆಗ್ರೊದ ಮಾಲಾ-ರಿಜೆಕಾ ವಯಾಡಕ್ಟ್ ಪಿಯರ್ ಬ್ರಿಡ್ಜ್ನ ಎತ್ತರ ೧೩೯ ಮೀಟರ್ ಇದೆ.
ಪ್ರಪಂಚದಲ್ಲಿಯೇ ಅತಿ ಎತ್ತರದ ರೈಲು ಸೇತುವೆ ನಿರ್ಮಾಣ ಕಾರ್ಯವನ್ನು ಈಶಾನ್ಯ ಗಡಿ ರೈಲ್ವೆ ನಿರ್ಮಾಣ ಸಂಸ್ಥೆ ಕೈಗೆತ್ತಿಕೊಂಡಿದೆ. ಈ ಯೋಜನೆಯ ಪೂರ್ಣಗೊಳ್ಳುವಿಕೆಯೊಂದಿಗೆ ೧೧೧ ಕಿ.ಮೀ. ದೂರವನ್ನು ೨ ರಿಂದ ೨.೫ ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ಪ್ರಸ್ತುತ ಜಿರಿಬಾಮ್-ಇಂಫಾಲ್ ಎನ್‌ಎಚ್-೩೭ ನಡುವಿನ ಅಂತರವು ೨೨೦ ಕಿ.ಮೀ. ಆಗಿದ್ದು, ಇದು ಸುಮಾರು ೧೦ರಿಂದ ೧೨ ಗಂಟೆ ತೆಗೆದುಕೊಳ್ಳುತ್ತದೆ. ನಿರ್ಮಾಣ ಪೂರ್ಣಗೊಂಡ ನಂತರ ನೋನಿ ಕಣಿವೆಯನ್ನು ದಾಟುವ ಈ ಸೇತುವೆಯು ವಿಶ್ವದ ಅತಿ ಎತ್ತರದ ಕಂಬವಿರುವ ಸೇತುವೆಯಾಗಲಿದೆ ಎಂದು ಯೋಜನೆಯ ಮುಖ್ಯ ಇಂಜಿನಿಯರ್ ಸಂದೀಪ್ ಶರ್ಮಾ ತಿಳಿಸಿದರು.

ಈಗಾಗಲೇ ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದ್ದು ೨ನೇ ಹಂತದ ಕೆಲಸ ಸುಮಾರು ಶೇ. ೯೮ರಷ್ಟು ಪೂರ್ಣಗೊಂಡಿದೆ. ಫೆಬ್ರವರಿ ೨೦೨೨ನೇ ವೇಳೆಗೆ ಅದೂ ಸಹ ಮುಕ್ತಾಯವಾಗಲಿದೆ. ೩ನೇ ಹಂತವು ನವೆಂಬರ್ ೨೦೨೨ರೊಳಗೆ ಪೂರ್ಣಗೊಳ್ಳಲಿದೆ. ಪುಲ್‌ನಿಂದ ಇಂಫಾಲ್ ಕಣಿವೆಯವರೆಗೆ ಸೇತುವೆ ವಿಸ್ತರಿಸಿರುವ ೪ನೇ ಮತ್ತು ಕೊನೆಯ ಹಂತದ ಕಾರ್ಯ ಡಿಸೆಂಬರ್ ೨೦೨೩ರ ವೇಳೆಗೆ ಮುಗಿಯಲಿದೆ ಎಂದು ಸಂದೀಪ್ ಶರ್ಮ ಹೇಳಿದ್ದಾರೆ.
ಸೇತುವೆಯ ನಿರ್ಮಾಣದಲ್ಲಿ ಎದುರಿಸುತ್ತಿರುವ ಅಡೆತಡೆಗಳ ಬಗ್ಗೆ ಮಾತನಾಡಿದ ಶರ್ಮಾ, ಮಳೆಗಾಲದಲ್ಲಿ ಎನ್‌ಎಚ್-೩೭ನಲ್ಲಿ ಆಗಾಗ ಭೂಕುಸಿತಗಳು ಸಂಭವಿಸುತ್ತವೆ. ಇದು ಈ ಸ್ಥಳಕ್ಕೆ ಏಕೈಕ ಮಾರ್ಗವಾಗಿದೆ. ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಇಲ್ಲಿ ಹೆಚ್ಚು ಮಳೆಯಾಗುತ್ತದೆ. ಆ ಸಮಯದಲ್ಲಿ ಇಲ್ಲಿ ಕೆಲಸ ಮಾಡುವುದು ಕಷ್ಟ ಎಂದರು. ೧೧೧ ಕಿ.ಮೀ. ಉದ್ದದ ಈ ರೈಲ್ವೆ ಮಾರ್ಗ ಸುಮಾರು ೬೧ ಸುರಂಗಗಳನ್ನು ಒಳಗೊಂಡಿದೆ. ಸೇತುವೆಯ ಅಂದಾಜು ವೆಚ್ಚ ೩೭೪ ಕೋಟಿ ರೂ. ಆಗಿದೆ.