21.8 C
Bengaluru
Thursday, March 16, 2023
spot_img

ಬ್ರಿಟಿಷ್ ಕಾನೂನು ಕಟ್ಟಲೆಗಳ ಸಂಕೋಲೆಯಿಂದ ಬಿಡುಗಡೆ ಯಾವಾಗ? ಭಾರತದಲ್ಲಿ ಬಿಳಿಯರ ದಾಸ್ಯ ಜೀವಂತ

-ನವರಂಗ್ ಕೊಬ್ಬೆ

ಇಂದಿಗೂ ಬ್ರಿಟಿಷರ ಕಾನೂನು ಕೈಕೆಳಗೆ ಭಾರತವಿದೆ. ಬಿಳಿಯರ ದಾಸ್ಯದ ಸಂಕೋಲೆ ಪೂರ್ಣವಾಗಿ ಕಳಚಿಲ್ಲ. ನಮ್ಮ ನಿತ್ಯದ ಬದುಕಿನಲ್ಲಿ ಆಂಗ್ಲರ ಕಾನೂನುಗಳ ಹಸ್ತಕ್ಷೇಪ ನಡೆಯುತ್ತಲೇ ಇದೆ. ಇದರಿಂದ ಮುಕ್ತಿ ಯಾವಾಗ ಎಂಬ ಪ್ರಶ್ನೆ ಬೃಹದಾಕಾರವಾಗಿ ಕಾಡುತ್ತಿದೆ. ಸ್ವಾತಂತ್ರ‍್ಯ ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತಕ್ಕೊಂದು ಸಂವಿಧಾನ ರಚಿಸಿಕೊಟ್ಟರು. ಈ ಸಂವಿಧಾನ ದೇಶದ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಿತು. ಆದರೆ ಆಡಳಿತದಲ್ಲಿನ ಅನೇಕ ಬ್ರಿಟಿಷ್ ಕಾಯಿದೆಗಳನ್ನು ಪ್ರಜಾಪ್ರಭುತ್ವದಡಿ ಆಯ್ಕೆಯಾದ ಸಂಸತ್ತು ರದ್ದುಪಡಿಸಲೇ ಇಲ್ಲ. ಹೀಗಾಗಿ ನಾವು ಇಂದಿಗೂ ಬ್ರಿಟಿಷರು ನಡೆಸಿದ್ದ ಜಾತಿ ಜನಗಣತಿ ನಂಬುತ್ತೇವೆ. ಅವರೇ ನಡೆಸುತ್ತಿದ್ದ ಭೌಗೋಳಿಕ ಸರ್ವೇಯನ್ನು ಒಪ್ಪುತ್ತೇವೆ. ದೇಶದ ಗಡಿಗಳನ್ನು ನಂಬುತ್ತೇವೆ. ಅವರದೇ ಪೊಲೀಸ್ ಕಾಯಿದೆಗಳನ್ನು ಅಪ್ಪಿ ಮುದ್ದಾಡುತ್ತಿದ್ದೇವೆ.

ಬ್ರಿಟಿಷರು ಪ್ಲಾಸಿ ಕದನದ ಮೂಲಕ ಭಾರತವನ್ನು ತಮ್ಮ ಕಪಿಮುಷ್ಠಿಗೆ ತೆಗೆದುಕೊಂಡು ವಸಾಹತು ಮಾಡಿಕೊಂಡವು. ೧೭೫೬-೫೭ರಲ್ಲಿ ಬಿಳಿಯರ ಆಡಳಿತ ಆರಂಭವಾಯಿತು. ಆದಾದ ೧೯೦ ವರ್ಷಗಳ ನಂತರ ಬ್ರಿಟಿಷರ ಆಳ್ವಿಕೆ ಅಂತ್ಯವಾಯಿತು. ಈ ಅವಧಿಯಲ್ಲಿ ಆಂಗ್ಲರು ಈ ದೇಶದ ಸಂಪನ್ಮೂಲ ಕೊಳ್ಳೆ ಹೊಡೆದರು. ಗುಲಾಮಗಿರಿ ಮನಸ್ಥಿತಿ ಹಾಗೂ ಪಾಶ್ಚಾತ್ಯರ ಆಧುನಿಕತೆಯನ್ನು ಇಲ್ಲಿನ ಜನರಿಗೆ ವ್ಯವಸ್ಥಿತವಾಗಿ ಬೋಧಿಸಿದರು. ಆರ್ಥಿಕತೆ, ಶಿಕ್ಷಣ ಪದ್ಧತಿ, ಸಂಸ್ಕೃತಿ, ಸಂಪ್ರದಾಯಗಳನ್ನು ನಾಶಪಡಿಸಿದರು. ಸಾಮಾಜಿಕ ವ್ಯವಸ್ಥೆಯನ್ನು ಕದಡಿ ತಮ್ಮ ಸಂಹಿತೆಯನ್ನು ಜಾರಿ ಮಾಡಿದರು. ಮತಾಂತರದ ಮೂಲಕ ಹಿಂದೂ ಧರ್ಮವನ್ನೇ ಅಪೋಶನ ತೆಗೆದುಕೊಳ್ಳಲು ಪ್ರಯತ್ನಿಸಿದರು. ತಿರುಗಿಬಿದ್ದವರ ನರಮೇಧ ಮಾಡಿದರು. ಈ ನೆಲದ ಭಾಷೆ, ಸಾಹಿತ್ಯ, ಲಲಿತಕಲೆ, ಕುಶಲ ಕಲೆ, ಸಾಂಪ್ರದಾಯಿಕ ವಿದ್ಯೆಗಳನ್ನು ಹಾಳುಗೆಡವಿದರು. ತಮ್ಮ ಲೂಟಿಗೆ ಅಗತ್ಯವಾದ ಕಾನೂನು ರೂಪಿಸಿ ಜಾರಿಗೆ ತಂದರು. ಸ್ವಾತಂತ್ರö್ಯ ನಂತರ ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ನಾಶಪಡಿಸಿ ನಮ್ಮತನಕ್ಕೆ ಮರಳಬೇಕಿತ್ತು. ಆದರೆ ಅದಾಗಲಿಲ್ಲ. ಬದಲಿಗೆ ಅವರೇ ಮಾಡಿದ ಕಾನೂನು ಕಟ್ಟಲೆಗಳ ದಾಸ್ಯದಲ್ಲಿ ಬದುಕತೊಡಗಿದೆವು. ಇಂದಿಗೂ ಬ್ರಿಟಿಷರ ಕಾನೂನು ಕೈಕೆಳಗೆ ಭಾರತವಿದೆ. ಬಿಳಿಯರ ದಾಸ್ಯದ ಸಂಕೋಲೆ ಪೂರ್ಣವಾಗಿ ಕಳಚಿಲ್ಲ. ನಮ್ಮ ನಿತ್ಯದ ಬದುಕಿನಲ್ಲಿ ಆಂಗ್ಲರ ಕಾನೂನುಗಳ ಹಸ್ತಕ್ಷೇಪ ನಡೆಯುತ್ತಲೇ ಇದೆ. ಇದರಿಂದ ಮುಕ್ತಿ ಯಾವಾಗ ಎಂಬ ಪ್ರಶ್ನೆ ಬೃಹದಾಕಾರವಾಗಿ ಕಾಡುತ್ತಿದೆ. ಸ್ವಾತಂತ್ರ‍್ಯ ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತಕ್ಕೊಂದು ಸಂವಿಧಾನ ರಚಿಸಿಕೊಟ್ಟರು. ಈ ಸಂವಿಧಾನ ದೇಶದ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಿತು. ಆದರೆ ಆಡಳಿತದಲ್ಲಿನ ಅನೇಕ ಬ್ರಿಟಿಷ್ ಕಾಯಿದೆಗಳನ್ನು ಪ್ರಜಾಪ್ರಭುತ್ವದಡಿ ಆಯ್ಕೆಯಾದ ಸಂಸತ್ತು ರದ್ದುಪಡಿಸಲೇ ಇಲ್ಲ. ಹೀಗಾಗಿ ನಾವು ಇಂದಿಗೂ ಬ್ರಿಟಿಷರು ನಡೆಸಿದ್ದ ಜಾತಿ ಜನಗಣತಿ ನಂಬುತ್ತೇವೆ. ಅವರೇ ನಡೆಸುತ್ತಿದ್ದ ಭೌಗೋಳಿಕ ಸರ್ವೇಯನ್ನು ಒಪ್ಪುತ್ತೇವೆ. ದೇಶದ ಗಡಿಗಳನ್ನು ನಂಬುತ್ತೇವೆ. ಅವರದೇ ಪೊಲೀಸ್ ಕಾಯಿದೆಗಳನ್ನು ಅಪ್ಪಿ ಮುದ್ದಾಡುತ್ತಿದ್ದೇವೆ.
ಬ್ರಿಟಿಷ್ ಕಾನೂನುಗಳೇ ಬೆನ್ನೆಲುಬು
ಬ್ರಿಟಿಷರು ಮೊದಲು ಪರಿಚಯಿಸಿದ ವಿವಿಧ ಶಾಸನಗಳು ಮಾರ್ಪಡಿಸಿದ ರೂಪಗಳಲ್ಲಿ ಭಾರತದಲ್ಲಿ ಇನ್ನೂ ಜಾರಿಯಲ್ಲಿವೆ. ೧೮೬೦ರಲ್ಲಿ ಬ್ರಿಟಿಷ್ ರಾಜ್ ಸಮಯದಲ್ಲಿ ರೂಪಿಸಿದ ಭಾರತೀಯ ದಂಡ ಸಂಹಿತೆಯು ಇಂದಿಗೂ ಜೀವಂತ. ಇದೇ ಐಪಿಸಿ ನಮ್ಮ ನೆಲದ ಕ್ರಿಮಿನಲ್ ಕಾನೂನಿನ ಬೆನ್ನೆಲುಬು. ಕ್ರಿಮಿನಲ್ ಪ್ರೊಸಿಜರ್ ಕೋಡ್ (ಸಿಆರ್‌ಪಿಸಿ) ೧೯೭೩ ಕ್ರಿಮಿನಲ್ ಕಾನೂನಿನ ಕಾರ್ಯ ವಿಧಾನದ ಅಂಶಗಳನ್ನು ನಿಯಂತ್ರಿಸುತ್ತದೆ. ಭಾರತದಲ್ಲಿನ ಮುಖ್ಯ ಗುತ್ತಿಗೆ ಕಾಯಿದೆಯನ್ನು ಭಾರತೀಯ ಒಪ್ಪಂದ ಕಾಯಿದೆಯಲ್ಲಿ ಕ್ರೋಢೀಕರಿಸಲಾಗಿದೆ. ಇದು ಸೆಪ್ಟಂಬರ್ ೧, ೧೮೭೨ರಂದು ಬ್ರಿಟಿಷರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಈಗಲೂ ಇದೇ ಕಾನೂನು ಭಾರತೀಯ ಗುತ್ತಿಗೆ ಕಾನೂನನ್ನು ನಿಯಂತ್ರಿಸುತ್ತದೆ. ಇದನ್ನು ಭಾರತ ಮರ್ಕೆಂಟೈಲ್ ಕಾನೂನು ಎಂದು ಕರೆಯಲಾಗುತ್ತದೆ. ಮೂಲತಃ ಭಾರತೀಯ ಸರಕುಗಳ ಮಾರಾಟ ಕಾಯಿದೆ ಮತ್ತು ಪಾಲುದಾರಿಕೆ ಕಾಯಿದೆಯು ಭಾರತೀಯ ಗುತಿಗೆ ಕಾಯಿದೆಯ ಭಾಗವಾಗಿತ್ತು. ಆದರೆ ಕೆಲ ತಿದ್ದುಪಡಿಗಳಿಂದ ಈ ಕಾಯಿದೆಗಳನ್ನು ಒಪ್ಪಂದದ ಕಾಯಿದೆಗಳು ಎಂದು ಪ್ರತ್ಯೇಕಿಸಲಾಗಿದೆ. ಆದರೂ ಬ್ರಿಟಿಷರು ಮಾಡಿರುವ ಕಾನೂನೇ ಜೀವಂತವಿದೆ. ಅಂತೆಯೇ ನಮ್ಮ ಕಾರ್ಮಿಕ ಕಾನೂನು ಕೂಡಾ ಬ್ರಿಟಿಷರ ಕಾಲದ್ದೇ. ಟಾರ್ಟ್ ಕಾನೂನು, ಆಸ್ತಿ ಕಾನೂನು, ತೆರಿಗೆ ಕಾನೂನುಗಳ ಮೇಲೂ ಬ್ರಿಟಿಷ್ ಕಾಯಿದೆಗಳ ಪ್ರಭಾವವಿದೆ. ಇತ್ತೀಚೆಗಷ್ಟೆ ಹೊಸ ಹೊಸ ತೆರಿಗೆ ಪದ್ಧತಿಗಳನ್ನು ಸೃಷ್ಟಿಸಲಾಗಿದೆ. ಅರಣ್ಯ ಕಾಯಿದೆಗಳು, ನಂಬಿಕೆ ಕಾನೂನು, ಕುಟುಂಬ ಕಾನೂನು, ವೈಯಕ್ತಿಕ ಕಾನೂನುಗಳು ಬ್ರಿಟಿಷರು ಮಾಡಿರುವಂಥವೆ.


೧೭೭೨ರಲ್ಲಿ ವಾರನ್ ಹೇಸ್ಟಿಂಗ್ಸ್ ಹಿಂದುಗಳಿಗೆ ಹಿಂದು ಕಾನೂನನ್ನು ಮತ್ತು ಮುಸ್ಲಿಮರಿಗೆ ಇಸ್ಲಾಮಿಕ್ ಕಾನೂನನ್ನು ವೈಯಕ್ತಿಕ ವಿಷಯಗಳಿಗೆ ಸಂಬAಧಿಸಿದAತೆ ರಚಿಸಿದಾಗ ಭಾರತದಲ್ಲಿನ ಕೌಟುಂಬಿಕ ಕಾನೂನುಗಳು ಬ್ರಿಟಿಷರ ಮೂಗಿನ ನೇರಕ್ಕಿದ್ದವು. ಸ್ವಾತಂತ್ರö್ಯದ ನಂತರ ವೈಯಕ್ತಿಕ ಕಾನೂನಿನ ವಿವಿಧ ಅಂಶಗಳನ್ನು ಆಧುನೀಕರಿಸಲು ಮತ್ತು ವಿವಿಧ ಧರ್ಮಗಳ ನಡುವೆ ಏಕರೂಪತೆಯನ್ನು ತರಲು ಪ್ರಯತ್ನಗಳನ್ನು ಮಾಡಲಾಗಿದೆ. ಈಸ್ಟ್ ಇಂಡಿಯಾ ಕಂಪನಿಯ ಕಾಲದಲ್ಲಿ ಜಾರಿಗೆ ತಂದ ಕಾನೂನುಗಳು ಇಂದು ನಮ್ಮನ್ನು ಆಳುತ್ತಿವೆ ಎಂದರೆ ನಾವಿನ್ನೂ ಬಿಳಿಯರ ದಾಸ್ಯದಲ್ಲೇ ಇದ್ದೇವೆ ಎಂದು ಅರ್ಥ ತಾನೇ?
ಬ್ರಿಟಿಷರ ಕಾಲದ ಕಾನೂನು ಕೈ ಬಿಡಲು ಅಡ್ಡಿಯೇನು?
ಬ್ರಿಟಿಷ್ ಕಾಲದ ಐಪಿಸಿ ಸೆಕ್ಷನ್‌ಗಳಡಿಯಲ್ಲಿ ನಮ್ಮ ರಕ್ಷಣಾ ವ್ಯವಸ್ಥೆ ನಡೆಯುತ್ತಿದೆ. ಆಂತರಿಕ ರಕ್ಷಣೆ, ಅಪರಾಧಿಗಳಿಗೆ ಶಿಕ್ಷೆ, ನಿರಪರಾಧಿಗಳ ರಕ್ಷಣೆ ಎಲ್ಲದರಲ್ಲೂ ನಾವು ಬ್ರಿಟಿಷ್ ಕಾನೂನಿನ ಮುಂದೆ ಕೈ ಕಟ್ಟಿ ನಿಲ್ಲಬೇಕು. ನಿವೃತ್ತ ಮೇಜರ್ ಜನರಲ್ ಎಸ್.ಜಿ. ಒಂಬತ್ತು ಕೆರೆ ಅವರು ಭಾರತೀಯ ದಂಡ ಸಂಹಿತೆಯ ೧೨೪ನೇ ಎ ಸೆಕ್ಷನ್‌ನ ಸಾಂವಿಧಾನಿಕ ಸಿಂಧೂತ್ವವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರು. ವಸಾಹತುಶಾಹಿ ಆಳ್ವಿಕೆ ಅವಧಿಯಲ್ಲಿ ಸ್ವಾತಂತ್ರö್ಯವನ್ನು ದಮನ ಮಾಡುವುದಕ್ಕಾಗಿ ಈ ಕಾನೂನು ಬಳಕೆಯಾಗುತ್ತಿತ್ತು. ಮತ್ತು ಸ್ವಾತಂತ್ರö್ಯ ನಂತರದ ಈಗಿನ ದಿನಗಳಲ್ಲಿ ಈ ಕಾನೂನಿನ ಅಗತ್ಯ ಏನು ಎಂಬುದು ಈ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ಪ್ರಶ್ನೆಯಾಗಿತ್ತು. ಮಹಾತ್ಮ ಗಾಂಧಿಯೂ ಸೇರಿದಂತೆ ಸರ್ಕಾರದ ವಿರುದ್ಧ ಮಾತನಾಡಿದ್ದ ಭಾರತೀಯ ನಾಯಕರನ್ನು ಜೈಲಿಗಟ್ಟಲು ೧೨೪ ಎ ಸೆಕ್ಷನ್‌ಅನ್ನು ಬ್ರಿಟಿಷ್ ಸರ್ಕಾರವು ಬಳಸಿಕೊಂಡಿತ್ತು. `ಪೌರರ ಸ್ವಾತಂತ್ರö್ಯವನ್ನು ದಮನ ಮಾಡಲು ರೂಪಿಸಲಾದ ಐಪಿಸಿಯ ಸೆಕ್ಷನ್‌ಗಳಲ್ಲಿ ಇದು ಬಹಳ ಮುಖ್ಯವಾದುದು’ ಎಂದು ಗಾಂಧೀಜಿ ಹೇಳಿದ್ದರು. ಈ ಕಾನೂನು ಸರ್ಕಾರದ ವಿರುದ್ಧ ಮಾತನಾಡಿದವರನ್ನು ಗುರಿ ಮಾಡಿಕೊಂಡಿದೆಯೇ ವಿನಾ ದೇಶದ ವಿರುದ್ಧ ಮಾತನಾಡಿದವರನ್ನು ಅಲ್ಲ ಎಂಬುದೇ ವಸಾಹತುಶಾಹಿ ಸರ್ಕಾರದ ಉದ್ದೇಶ ಏನಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈ ಕಾನೂನು ಜಾರಿ ಮಾಡಿದ್ದ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿ ೭೫ ವರ್ಷಗಳಾಗಿವೆ. ಬ್ರಿಟನ್‌ನಲ್ಲಿ ಕೂಡಾ ಈ ಕಾನೂನು ಈಗಾಗಲೇ ರದ್ದಾಗಿದೆ. ಆಧುನಿಕ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಇಂತಹ ಸೆಕ್ಷನ್‌ಗೆ ಜಾಗವೇ ಇಲ್ಲ. ಆದರೂ ಇಂತಹ ಕಾನೂನುಗಳು ರದ್ದಾಗುವುದೇ ಇಲ್ಲ. ಇದೊಂದೇ ಕಾನೂನು ಅಂಥಲ್ಲ. ಐಪಿಎಸ್‌ನಲ್ಲಿರುವ ಅನೇಕ ಸೆಕ್ಷನ್‌ಗಳು ನಿರ್ಜೀವವಷ್ಟೆ ಅಲ್ಲ, ಕಾನೂನಿನ ಬಲೆಯ ತಂತುಗಳನ್ನು ಸಾಕಷ್ಟು ಸಡಿಲಗೊಳಿಸುವಂತೆಯೂ ಇವೆ. ಇಂತಹ ಕಾಯಿದೆ ಕಾನೂನುಗಳಿಗೆ ತಿಲಾಂಜಲಿ ಹೇಳಲು ಅಡ್ಡಿ ಏನು ಎಂಬುದು ಅರ್ಥವಾಗುತ್ತಿಲ್ಲ.


ತಮಗೆ ಅನುಕೂಲವಾಗುವ ಕಾನೂನು ಮಾಡಿಕೊಂಡಿದ್ದರು
ಬಿಳಿಯರು ಭಾರತವನ್ನು ಆಳಲು ಮತ್ತು ಜನರನ್ನು ದಾಸ್ಯದಲ್ಲಿ ಹಿಡಿದಿಡಲು ತಮ್ಮ ಅನುಕೂಲಕ್ಕೆ ತಕ್ಕಂತೆ ಕಾನೂನು ಕಾಯಿದೆಗಳನ್ನು ಮಾಡಿಕೊಂಡಿದ್ದರು. ಮತಾಂತರಕ್ಕೆ ಸಂಬAಧಿಸಿದ ಕಾನೂನುಗಳು ಕೂಡಾ ಅವರ ಧರ್ಮ ಪ್ರಸಾರಕ್ಕೆ ಅನುಕೂಲ ಮಾಡಿಕೊಡುವಂತಿದ್ದವು. ಬ್ರಿಟಿಷರ ಆಡಳಿತದ ಅವಧಿಯಲ್ಲಿ ೧೯೩೦ರ ಮಧ್ಯ ಭಾಗದವರೆಗೆ ಭಾರತದಲ್ಲಿ ಮತಾಂತರ ನಿರ್ಬಂಧಿಸುವ ಅಥವಾ ನಿಷೇಧಿಸುವ ಕಾನೂನೇ ಇರಲಿಲ್ಲ. ಅಂದರೆ ಮನಸೋಇಚ್ಛೆ ಹಿಂದೂಗಳನ್ನು ಕ್ರೆöÊಸ್ತರನ್ನಾಗಿ ಅವರು ಪರಿವರ್ತಿಸಬಹುದಿತ್ತು. ಅನಂತರ ಹಲವೆಡೆ ನಡೆದ ತೀವ್ರ ಧಾರ್ಮಿಕ ಸಂಘರ್ಷಗಳು ನಂತರದ ವರ್ಷಗಳಲ್ಲಿ ನೆಪಕ್ಕೆಂಬAತೆ ಮತಾಂತರ ನಿಷೇಧ ಕಾನೂನು ಜಾರಿಗೆ ಬರುವಂತೆ ಮಾಡಿದವು. ಆದರೂ ಇತ್ತೀಚಿನವರೆಗೆ ಮತಾಂತರ ನಿರ್ಬಂಧಿಸುವ ಕಾನೂನುಗಳು ಬ್ರಿಟಿಷರು ಮಾಡಿದ ಸಡಿಲ ಸ್ಥಿತಿಯಲ್ಲೇ ಇದ್ದವು. ಬ್ರಿಟಿಷರು ೧೯೨೦ರಲ್ಲಿ ಜಾರಿಗೆ ತಂದ ಮಾಂಟೆಗೂ ಚೆಲ್ಮ್ ್ಸ ಫರ್ಡ್ ಸುಧಾರಣೆ ಪ್ರತಿ ೨೫೦ ಜನರಲ್ಲಿ ಕೇವಲ ಒಬ್ಬ ಭಾರತೀಯನಿಗೆ ಮಾತ್ರ ವೋಟು ಹಾಕುವ ಅಧಿಕಾರ ನೀಡಿತ್ತು. ಭಾರತಕ್ಕೆ ಸ್ವಾತಂತ್ರö್ಯ ಬಂದ ನಂತರ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಬಂದಿದೆ. ಆದರೆ ಬ್ರಿಟಿಷರ ಕಾನೂನುಗಳ ಸಂಕೋಲೆ ಮಾತ್ರ ಕಳಚಿಲ್ಲ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಈ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿದ್ದು ಅನೇಕ ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನಗಳೂ ನಡೆಯುತ್ತಿವೆ. ಕೆಲವು ಯಶಸ್ಸು ಕಂಡಿವೆ ಕೂಡ. ಇದು ಮುಂದುವರೆಯಲಿ. ಭಾರತ ಬ್ರಿಟಿಷರು ಮಾಡಿಹೋದ ಕಾಯಿದೆ ಕಾನೂನುಗಳ ಅಡಿಯಿಂದ ಹೊರಬರಲಿ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles