21.8 C
Bengaluru
Saturday, March 18, 2023
spot_img

ಬ್ರಿಟಿಷರ ವಿರುದ್ಧ ಟಿಪ್ಪು ವಿಜಯದ ವರ್ಣಚಿತ್ರ ಆರು ಕೋಟಿಗೆ ಹರಾಜು

ಈಸ್ಟ್ ಇಂಡಿಯಾ ಕಂಪನಿಯ ಮೇಲೆ ಮೈಸೂರು ದೊರೆ ಹೈದರ್ ಅಲಿ, ಟಿಪ್ಪು ೧೭೮೦ರಲ್ಲಿ ಸಾಧಿಸಿದ ವಿಜಯವನ್ನು ಪ್ರತಿಬಿಂಬಿಸುವ ವರ್ಣಚಿತ್ರ ಲಂಡನ್‌ನಲ್ಲಿ ೬.೨೮ ಕೋಟಿ ರು.ಗಳಿಗೆ ಹರಾಜಾಗಿದೆ.
ಎರಡನೇ ಆಂಗ್ಲೋ- ಮೈಸೂರು ಯುದ್ಧದಲ್ಲಿ ಸೆಪ್ಟೆಂಬರ್ ೧೦, ೧೭೮೦ ರಲ್ಲಿ ನಡೆದ ‘ಪೊಲ್ಲಿಲೂರ್ʼ ಕದನದಲ್ಲಿ ಟಿಪ್ಪು ಸಾಧಿಸಿದ ವಿಜಯದ ಚಿತ್ರಣ ಈ ವರ್ಣಚಿತ್ರದಲ್ಲಿದೆ.


ಈ ಕದನದ ವಿಜಯದ ಸ್ಮರಣಾರ್ಥ ಟಿಪ್ಪು ೧೭೮೪ರಲ್ಲಿ ಸೆರಿಂಗಪಟ್ಟಣಂನಲ್ಲಿ ಕಟ್ಟಿಸಿದ ದರಿಯಾ ದೌಲತ್ ಬಾಗ್ ಅರಮನೆಯಲ್ಲಿ ಈ ಕದನದ ವರ್ಣಚಿತ್ರವನ್ನು ಮಾಡಿಸಿದ್ದ. ಈ ತೈಲಚಿತ್ರವು ಸುಮಾರು ೩೨ ಅಡಿ ಉದ್ದ ಹಾಗೂ ೧೦ ಅಡಿಗಳಷ್ಟು ಎತ್ತರವಿದೆ. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪುವನ್ನು ಸೋಲಿಸಿದ್ದ ಬ್ರಿಟಿಷರು ಈ ಚಿತ್ರವನ್ನು ಹೊತ್ತೊಯ್ದಿದ್ದರು.
ಲಂಡನ್‌ನ ಸೊಥೆಬಿ ಎಂಬಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಚಿತ್ರವು ಹರಾಜಿನ ಕೇಂದ್ರಬಿಂದುವಾಗಿತ್ತು. ಅಂತಿಮವಾಗಿ ವರ್ಣಚಿತ್ರವು ದಾಖಲೆ ಮೊತ್ತವಾದ ೬.೨೮ ಕೋಟಿ ರೂ.ಗೆ ಹರಾಜಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles