-ಜೋಷಿ
ತಮ್ಮ ಪುರಾತನ ಶತ್ರು, ಈಗ ಕೇಂದ್ರದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯ ಇಶಾರೆಯಂತೆ ಬೊಮ್ಮಾಯಿ ತಮ್ಮನ್ನು ರಾಜಕೀಯವಾಗಿ ಮುಗಿಸಲು ಹಂತ ಹಂತವಾಗಿ ಕಾರ್ಯ ಯೋಜನೆ ರೂಪಿಸುತ್ತಿದ್ದಾರೆ ಎಂಬುದು ಯಡಿಯೂರಪ್ಪ ಗಮನಕ್ಕೆ ಬಂದಿದೆ. ಇಂತಹ ಬೊಮ್ಮಾಯಿ ಅಧಿಕಾರದಿಂದ ಕೆಳಗಿಳಿದು, ಶತ್ರುಗಳ ಕೈಯೊಳಗಿನ ಅಸ್ತçವಾಗಿ ತಮ್ಮನ್ನು ಬಾಧಿಸುತ್ತಿರುವ ವ್ಯಕ್ತಿಯ ಬದಲಿಗೆ ಅನ್ಯ ಸಮುದಾಯದ ನಾಯಕ ಬಂದು ಕುಳಿತರೆ, ತಮಗೆ ಖಂಡಿತಾ ವರದಾನವಾಗಲಿದೆ. ತಮ್ಮ ಪುತ್ರನ ಮಾರ್ಗವೂ ಸುಗಮವಾಗಲಿದೆ. ಅಲ್ಲದೆ ಲಿಂಗಾಯತ ನಾಯಕತ್ವದ ವಾರಸುದಾರಿಕೆಗೆ ವಿಜಯೇಂದ್ರ ಹತ್ತಿರವಾಗುತ್ತಾರೆ ಎಂಬ ಲೆಕ್ಕಾಚಾರ ಯಡಿಯೂರಪ್ಪ ಅವರದು ಎನ್ನಲಾಗಿದೆ. ಇನ್ನು ಜಗದೀಶ್ ಶೆಟ್ಟರ್‌ಗೆ ಬೊಮ್ಮಾಯಿ ಮುಖ್ಯಮಂತ್ರಿಯಾದ ದಿನದಿಂದಲೂ ಇನ್ನಿಲ್ಲದ ಅಸಹನೆ ಇದೆ. ಜನತಾ ದಳದಲ್ಲಿದ್ದ ಬಸವರಾಜ ಬೊಮ್ಮಾಯಿಯನ್ನು ತಮ್ಮ ನಾಯಕತ್ವಕ್ಕೆ ಎಂತಹ ಸಂದರ್ಭದಲ್ಲೂ ಸೆಡ್ಡು ಹೊಡೆಯದಂತೆ ಷರತ್ತುವೊಡ್ಡಿ ಬಿಜೆಪಿಗೆ ಕರೆತಂದಿದ್ದ ಶೆಟ್ಟರ್, ಹುಬ್ಬಳ್ಳಿಯಲ್ಲಿ ಬೊಮ್ಮಾಯಿ ಹವಾ ನಡೆಯದಂತೆ ನೋಡಿಕೊಳ್ಳುತ್ತಲೇ ಬಂದಿದ್ದರು. ಆದರೀಗ ತಾವೇ ಕರೆತಂದ ವ್ಯಕ್ತಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮೆರೆಯುತ್ತಿರುವುದನ್ನು ಶೆಟ್ಟರ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅಲ್ಲದೆ ಲಿಂಗಾಯತ ನಾಯಕ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ನಮ್ಮ ರಾಜಕೀಯ ಬದುಕು ಮುಗಿದಂತೆಯೇ ಎಂಬುದು ಶೆಟ್ಟರ್‌ಗೆ ಅರ್ಥವಾಗಿರುವುದರಿಂದಲೇ ಯಡಿಯೂರಪ್ಪ ಅವರ ಜೊತೆ ಕೈ ಜೋಡಿಸಿ ಬೊಮ್ಮಾಯಿ ವಿರುದ್ಧ ಸಮರ ಸಾರಿದ್ದಾರೆ.

ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವಾಗ ಕಣ್ಣೀರು ಹಾಕುವಷ್ಟು ದುಃಖ ಎದೆಯಲ್ಲಿ ಮಡುಗಟ್ಟಿದ್ದರೂ ತಡೆದುಕೊಂಡ, ಹೆಜ್ಜೆ ಹೆಜ್ಜೆಗೂ ಪಕ್ಷದಲ್ಲಿ ತಮ್ಮ ಪ್ರಭಾವ ತಗ್ಗಿಸಲು ನಡೆದ ಸಂಚುಗಳನ್ನು ಸಹಿಸಿಕೊಂಡ, ಈಗಲೂ ಹಿತಶತ್ರುಗಳು ಹಾಗೂ ದಿಲ್ಲಿಯಲ್ಲಿ ಕೂತ ರಾಜ್ಯಮಟ್ಟದ ನಾಯಕರ ಹಿಕಮತ್ತುಗಳನ್ನು ಅವಡುಗಚ್ಚಿ ನುಂಗಿಕೊAಡು ಒಡಲಾಳದ ವೇದನೆಗಳನ್ನು ಬಯಲಿಗಿಡದೆ ಮೌನ ಮುನಿಯಂತೆ ವರ್ತಿಸುತ್ತಾ ಬಂದ ಬಿ.ಎಸ್. ಯಡಿಯೂರಪ್ಪ ಸ್ಫೋಟಿಸುವ ಕಾಲ ಹತ್ತಿರವಾಗುತ್ತಿದೆ. ಬಹಿರಂಗವಾಗಿ ಸ್ಫೋಟಿಸದಿದ್ದರೂ ಬಿಜೆಪಿಗೆ ಮರ್ಮಾಘಾತ ನೀಡಲು ಮಾಜಿ ಸಿಎಂ ಸಿದ್ಧತೆ ನಡೆಸಿದ್ದಾರೆ. ತಮ್ಮ ಪುತ್ರರತ್ನರ ಭವಿಷ್ಯಕ್ಕಾಗಿ ಸಹನೆಯೇ ತಾಯಿ, ತಾಳ್ಮೆಯೇ ತಂದೆ ಎಂಬAತಿದ್ದ ಯಡಿಯೂರಪ್ಪ, ಚುನಾವಣಾ ಹೊಸ್ತಿಲಲ್ಲಿ ಸಿಡಿಯಲಿದ್ದಾರೆ. ತಮ್ಮ ಮನದ ಬಯಕೆಗಳಿಗೆ ವರಿಷ್ಠರು ಮನ್ನಣೆ ನೀಡದಿದ್ದರೆ ಕಮಲ ಪಕ್ಷಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ಕೊಡಲು ಅವರು ಸದ್ದಿಲ್ಲದೆ ವ್ಯೂಹ ರಚಿಸುತ್ತಿದ್ದಾರೆ.

ಹೌದು, ಕಳೆದ ವರ್ಷದ ಜುಲೈ ಕೊನೆಯ ವಾರದಲ್ಲಿ ಕಣ್ಣೀರುಗರೆಯುತ್ತಲೇ ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ಕೊಟ್ಟ ಯಡಿಯೂರಪ್ಪ ಅವರಿಗೆ ಬಿಜೆಪಿ ನೀಡಿರುವ ನೋವು ಅಷ್ಟಿಷ್ಟಲ್ಲ. ಅಡಿಗಡಿಗೂ ಕಾಡಿ ರಾಜ್ಯ ಪ್ರವಾಸ ಹೋಗದಂತೆ ತಡೆದು, ಅಕ್ಷರಶಃ ಬೆದರಿಸಿ ಅಂಕೆಯಲ್ಲಿಟ್ಟುಕೊAಡಿತ್ತು. ಪಕ್ಷದೊಳಗಿರುವ ಅವರ ಶತ್ರುಗಳು ರಾಜಕೀಯವಾಗಿ ಹಂತ ಹಂತವಾಗಿ ಮುಗಿಸುವ ಪ್ರಯತ್ನ ನಡೆಸುತ್ತಲೇ ಬಂದರು. ಒತ್ತಡ ಹೇರುವ ಹಿರಿಯ ನಾಯಕನ ತಂತ್ರಗಳಿಗೆ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿ ಬಾಯಿ ಕಟ್ಟಿ ಹಾಕಿದರು. ಪುತ್ರ ವಿಜಯೇಂದ್ರ, ರಾಘವೇಂದ್ರ ಅವರಿಗೆ ಪಕ್ಷ, ಸರ್ಕಾರದಲ್ಲಿ ಗೌರವ ಧಕ್ಕದಂತೆ ನೋಡಿಕೊಂಡರು. ಅದರಲ್ಲೂ ವಿಜಯೇಂದ್ರ ರಾಜಕೀಯ ಭವಿಷ್ಯದ ಬಗ್ಗೆ ಅಪಾರ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ಯಡಿಯೂರಪ್ಪ ಅವರ ಆಸೆಗಳಿಗೆ ಪದೇ ಪದೇ ತಣ್ಣೀರು ಎರಚಿದರು. ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಉತ್ಸವಮೂರ್ತಿ ಮಾಡಿ ಲಿಂಗಾಯತ ಮತ ಸೆಳೆಯಲು ಹುನ್ನಾರ ನಡೆಯುತ್ತಲೇ ಎಚ್ಚೆತ್ತುಕೊಂಡಿರುವ ಯಡಿಯೂರಪ್ಪ, ಬೊಮ್ಮಾಯಿ ಹಠಾವೋ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆ ಮೂಲಕ ಚುನಾವಣೆ ವೇಳೆಗೆ ಪಕ್ಷದ ಮೇಲೆ ಹಿಡಿತ ಸಾಧಿಸಲು ರಣವ್ಯೂಹ ರಚಿಸತೊಡಗಿದ್ದಾರೆ. ಕುತೂಹಲಕಾರಿ ಎಂದರೆ ಈ ರಣತಂತ್ರದ ಭಾಗವಾಗಿರುವುದು ಇದೇ ಯಡಿಯೂರಪ್ಪ ಹಿಂದೆ ಸಿಎಂ ಮಾಡಿದ್ದ ಜಗದೀಶ್ ಶೆಟ್ಟರ್!

ತಾವು ಮೌನವಾಗಿದ್ದುಕೊಂಡೇ ಬೊಮ್ಮಾಯಿಗೆ ಬತ್ತಿ ಇಡಲು ಶೆಟ್ಟರ್‌ಗೆ ಯಡಿಯೂರಪ್ಪ ಕುಮ್ಮಕ್ಕು ನೀಡತೊಡಗಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯದ ಹೊರತು, ನಮಗಿಬ್ಬರಿಗೂ ಉಳಿಗಾಲವಿಲ್ಲ ಎಂಬುದನ್ನು ಇಬ್ಬರೂ ನಾಯಕರು ಚರ್ಚಿಸಿಯೇ ನಾಯಕತ್ವ ಬದಲಾವಣೆಗೆ ಪ್ರಯತ್ನ ಆರಂಭಿಸಿದ್ದಾರೆ. ಕಳೆದ ವಾರ ಹೈಕಮಾಂಡ್ ಟಾಪ್ ನಾಯಕರನ್ನು ಭೇಟಿ ಮಾಡಿರುವ ಜಗದೀಶ್ ಶೆಟ್ಟರ್, ಬೊಮ್ಮಾಯಿ ಅವರ ಹುಳುಕುಗಳನ್ನು ಬಿಚ್ಚಿಟ್ಟು ಬಂದಿರುವುದಲ್ಲದೆ, ಅವರ ನಾಯಕತ್ವದಲ್ಲಿ ಚುನಾವಣೆಗೆ ಹೋದರೆ ಪಕ್ಷ ೭೦ ಸ್ಥಾನಗಳ ಗಡಿ ತಲುಪುವುದು ಅಸಾಧ್ಯ. ಆಡಳಿತ ವಿರೋಧಿ ಅಲೆ ಮರೆಮಾಚಲು ಕೂಡಲೇ ಅವರನ್ನು ನಾಯಕತ್ವದಿಂದ ಇಳಿಸಿ ನೀವು ಬಯಸಿದ ಕೇಡರ್ ಮೂಲದ ಯಾರನ್ನಾದರೂ ಸಿಎಂ ಮಾಡಿ. ಆದರೆ ಚುನಾವಣೆ ವರ್ಷಕ್ಕೆ ಹೊಸ ಸಿಎಂ ಬಂದರೆ ಮಾತ್ರ ಪಕ್ಷದ ವರ್ಚಸ್ಸು ವೃದ್ಧಿ ಸಾಧ್ಯ ಎಂಬುದನ್ನು ತಮ್ಮದೇ ಆದ ತರ್ಕದೊಂದಿಗೆ ವರಿಷ್ಠರ ಮುಂದೆ ಮಂಡಿಸಿ ಬಂದಿದ್ದಾರೆ. ಯಡಿಯೂರಪ್ಪ ಕೂಡಾ ಅಮಿತ್ ಷಾ ಹಾಗೂ ಆರೆಸ್ಸೆಸ್‌ನ ಹಿರಿಯ ನಾಯಕರ ಅತ್ಯಾಪ್ತರ ಬಳಿ ಇದೇ ಮಾತನ್ನು ಹೇಳತೊಡಗಿದ್ದಾರೆ.
ಇಷ್ಟಕ್ಕೂ ಯಡಿಯೂರಪ್ಪ ಬೊಮ್ಮಾಯಿ ಪದಚ್ಯುತಿಗೆ ತಂತ್ರ ಹೆಣೆಯಲು ಕಾರಣಗಳಿವೆ. ತಾವು ಮುಖ್ಯಮಂತ್ರಿ ಹುದ್ದೆಯಿಂದ ಇಳಿದಾಗಿನಿಂದಲೂ ಹೈಕಮಾಂಡ್ ಮಟ್ಟದಲ್ಲಿ ತಮ್ಮ ವಿರುದ್ಧ ಸಂಚು ಮಾಡುತ್ತಿರುವ ರಾಜ್ಯ ಮೂಲದ ಇಬ್ಬರು ನಾಯಕರಿಗೆ ಬೊಮ್ಮಾಯಿ ಸಹಕಾರ ಕೊಡುತ್ತಲೇ ಬಂದಿರುವುದು. ವಿಜಯೇಂದ್ರ ಸಂಪುಟ ಸೇರ್ಪಡೆಯಾದರೆ ಮತ್ತೊಂದು ಶಕ್ತಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ತಲೆಯೆತ್ತುತ್ತದೆ. ಅದರಲ್ಲೂ ಲಿಂಗಾಯತ ಸಮುದಾಯದಲ್ಲಿ ಆತನ ವರ್ಚಸ್ಸು ಏರುತ್ತದೆ ಎಂಬ ಕಾರಣಕ್ಕೆ ಹೈಕಮಾಂಡ್ ಮುಂದೆ ವಿಜಯೇಂದ್ರ ವಿರುದ್ಧ ಬೊಮ್ಮಾಯಿ ಮಸಲತ್ತು ಮಾಡುತ್ತಲೇ ಬಂದಿದ್ದಾರೆ ಎಂಬುದೂ ಬಿಎಸ್‌ವೈಗೆ ತಿಳಿದಿದೆ. ತಮ್ಮ ಪುರಾತನ ಶತ್ರು, ಈಗ ಕೇಂದ್ರದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯ ಇಶಾರೆಯಂತೆ ತಮ್ಮನ್ನು ರಾಜಕೀಯವಾಗಿ ಮುಗಿಸಲು ಹಂತ ಹಂತವಾಗಿ ಕಾರ್ಯ ಯೋಜನೆ ರೂಪಿಸುತ್ತಿದ್ದಾರೆ ಎಂಬುದು ಬಿಎಸ್‌ವೈ ಗಮನಕ್ಕೆ ಬಂದಿದೆ. ಇಂತಹ ಬೊಮ್ಮಾಯಿ ಅಧಿಕಾರದಿಂದ ಇಳಿದು, ಶತ್ರುಗಳ ಕೈಯೊಳಗಿನ ಅಸ್ತçವಾಗಿ ತಮ್ಮನ್ನು ಬಾಧಿಸುತ್ತಿರುವ ವ್ಯಕ್ತಿಯ ಬದಲಿಗೆ ಅನ್ಯ ಸಮುದಾಯದ ನಾಯಕ ಬಂದು ಕುಳಿತರೆ, ತಮಗೆ ಖಂಡಿತಾ ವರದಾನವಾಗಲಿದೆ. ತಮ್ಮ ಪುತ್ರನ ಮಾರ್ಗವೂ ಸುಗಮವಾಗಲಿದೆ. ಅಲ್ಲದೆ ಲಿಂಗಾಯತ ನಾಯಕತ್ವದ ವಾರಸುದಾರಿಕೆಗೆ ವಿಜಯೇಂದ್ರ ಹತ್ತಿರವಾಗುತ್ತಾರೆ ಎಂಬ ಲೆಕ್ಕಾಚಾರ ಯಡಿಯೂರಪ್ಪ ಅವರದು ಎನ್ನಲಾಗಿದೆ. ಇನ್ನು ಜಗದೀಶ್ ಶೆಟ್ಟರ್‌ಗೆ ಬೊಮ್ಮಾಯಿ ಮುಖ್ಯಮಂತ್ರಿಯಾದ ದಿನದಿಂದಲೂ ಇನ್ನಿಲ್ಲದ ಅಸಹನೆ ಇದೆ. ಜನತಾ ದಳದಲ್ಲಿದ್ದ ಬಸವರಾಜ ಬೊಮ್ಮಾಯಿಯನ್ನು ತಮ್ಮ ನಾಯಕತ್ವಕ್ಕೆ ಎಂತಹ ಸಂದರ್ಭದಲ್ಲೂ ಸೆಡ್ಡು ಹೊಡೆಯದಂತೆ ಷರತ್ತುವೊಡ್ಡಿ ಬಿಜೆಪಿಗೆ ಕರೆತಂದಿದ್ದ ಶೆಟ್ಟರ್, ಹುಬ್ಬಳ್ಳಿಯಲ್ಲಿ ಬೊಮ್ಮಾಯಿ ಹವಾ ನಡೆಯದಂತೆ ನೋಡಿಕೊಳ್ಳುತ್ತಲೇ ಬಂದಿದ್ದರು. ೧೯೯೪ರಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿ ಸೋತಿದ್ದ ಬೊಮ್ಮಾಯಿ ರಾಜಕೀಯವಾಗಿ ಬಿಜೆಪಿಯಲ್ಲಿ ಬೆಳೆಯಲು ಕಾರಣಕರ್ತರೂ ಆಗಿದ್ದರು. ಆದರೀಗ ತಾವೇ ಕರೆತಂದ ವ್ಯಕ್ತಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮೆರೆಯುತ್ತಿರುವುದನ್ನು ಶೆಟ್ಟರ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅಲ್ಲದೆ ಲಿಂಗಾಯತ ನಾಯಕ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ನಮ್ಮ ರಾಜಕೀಯ ಬದುಕು ಮುಗಿದಂತೆಯೇ ಎಂಬುದು ಶೆಟ್ಟರ್‌ಗೆ ಅರ್ಥವಾಗಿರುವುದರಿಂದಲೇ ಯಡಿಯೂರಪ್ಪ ಅವರ ಜೊತೆ ಕೈ ಜೋಡಿಸಿ ಬೊಮ್ಮಾಯಿ ವಿರುದ್ಧ ಸಮರ ಸಾರಿದ್ದಾರೆ. ಬೊಮ್ಮಾಯಿ ಪದಚ್ಯುತಿ ಸಾಧ್ಯವಾಗದಿದ್ದೆರ ಈ ಇಬ್ಬರು ನಾಯಕರು ಲಿಂಗಾಯತ ವೋಟ್ ಬ್ಯಾಂಕ್‌ಗೆ ಗುನ್ನಾ ಇಡುವುದರಲ್ಲಿ ಸಂಶಯವಿಲ್ಲ.