೫೪ ವರ್ಷದ ಬಳಿಕ ಕೂಲೆಸ್ಟ್ ಡೇ ರಿಪೀಟ್

ಮೇ ತಿಂಗಳಿನಲ್ಲಿ ನಿಗಿ ನಿಗಿ ಕೆಂಡದAತೆ ಸೂರ್ಯನ ಬಿಸಿಲು ಇರುವುದು ಸಾಮಾನ್ಯ. ಆದರೆ ಈ ಬಾರಿ ಅಸಾನಿ ಚಂಡಮಾರುತದ ಪರಿಣಾಮ ವರುಣನ ಆರ್ಭಟ ತಂಪು ಗಾಳಿ, ಚುಮುಚುಮು ಚಳಿಯಿಂದಾಗಿ ಬೆಂಗಳೂರಿನ ವಾತಾವರಣ ಊಟಿ, ಶಿಮ್ಲಾವನ್ನು ಮೀರಿಸಿ ದಾಖಲೆ ಬರೆದಿದೆ.
ಅಸಾನಿ ಚಂಡಮಾರುತ ಬೆಂಗಳೂರಿನಲ್ಲಿ ೫೪ ವರ್ಷದ ಹಿಂದಿನ ದಾಖಲೆ ರಿಪೀಟ್ ಮಾಡಿದೆ. ೫೪ ವರ್ಷದ ಬಳಿಕ ಕಳೆದ ಗುರುವಾರ ಬೆಂಗಳೂರಿನ ವೆದರ್ ಸೆಕೆಂಡ್ ಕೂಲೆಸ್ಟ್ ಡೇ ಎಂದು ದಾಖಲೆ ಸೃಷ್ಟಿಯಾಗಿದೆ.
೧೯೭೨ರಲ್ಲಿ ಮೇ ೧೪ರಂದು ೨೨.೨ ಡಿಗ್ರಿ ಸೆಲ್ಸಿಯಸ್ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗಿತ್ತು. ಆದರೆ ಗುರುವಾರ ಬೆಂಗಳೂರಿನಲ್ಲಿ ೨೩ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅಲ್ಲದೆ ಇದು ಎರಡನೇ ಅತ್ಯಂತ ಕೂಲೆಸ್ಟ್ ಡೇ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.