-ನವರಂಗ್ ಕೊಬ್ಬೆ
navarangkobbe@gmail.com
ಭಾರತ ಪ್ರಜಾಪ್ರಭುತ್ವ ವ್ಯವಸ್ಥೆ ಅಮೃತ ಮಹೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ಅತ್ಯಂತ ತಳ ಸಮುದಾಯದ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಪ್ರಪ್ರಥಮ ಬಾರಿಗೆ ದೇಶದ ಪ್ರಥಮ ಪ್ರಜೆ ಸ್ಥಾನಕ್ಕೇರಿದ್ದಾರೆ. ದ್ರೌಪದಿ ಮುರ್ಮು ಅವರು ಎನ್‌ಡಿಎ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಭರ್ಜರಿ ಬಹುಮತದೊಂದಿಗೆ ಗೆದ್ದು ಅತ್ಯುಚ್ಛ ಪದವಿಯನ್ನು ಅಲಂಕರಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಶಕ್ತಿಯನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ. ದ್ರೌಪದಿ ಮುರ್ಮು ಅವರ ಜೀವನ ಸಾಲು ಸಾಲು ವೈಯಕ್ತಿಕ ದುರಂತಗಳಿAದ ಘಾಸಿಗೊಳಗಾಗಿದೆ. ಆದರೂ ಅವರು ಜನಸೇವೆಯಲ್ಲಿಯೇ ತಮ್ಮೆಲ್ಲ ನೋವುಗಳಿಗೆ ಸಾಂತ್ವನ ಕಂಡವರು. ಅವರ ಒಬ್ಬ ಮಗ ೨೦೦೯ರಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರು. ಮತ್ತೊಬ್ಬ ಮಗ ೨೦೧೨ರಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದರು. ಅವರ ಪತಿ ಶ್ಯಾಮಚರಣ್ ಮುರ್ಮು ಕೂಡ ಹೃದಯಾಘಾತದಿಂದ ನಿಧನರಾಗಿದ್ದರು. ಪ್ರಸ್ತುತ ಅವರಿಗೆ ಒಬ್ಬ ಮಗಳು ಇತಿಶ್ರೀ ಮಾತ್ರ ಇದ್ದಾರೆ.
ಪ್ರಜಾಪ್ರಭುತ್ವ ಎಂದರೆ ಯಾವುದೇ ವರ್ಗ, ಗುಂಪು ಅಥವಾ ವ್ಯಕ್ತಿಯ ಅಧೀನದಲ್ಲಿಲ್ಲದೆ ಜನತೆಯ ಅಧೀನದಲ್ಲಿರುವ ವ್ಯವಸ್ಥೆ. ಪ್ರತಿಯೊಬ್ಬರಿಗೂ ಇಲ್ಲಿ ಅವಕಾಶವಿದೆ. ಭೇದ ಭಾವವಿಲ್ಲದೆ ಪ್ರತಿಯೊಬ್ಬನ ಹಿತಕ್ಕೆ ಅನುಗುಣವಾದ ಸಾಮಾಜಿಕ ವ್ಯವಸ್ಥೆ ಇರುತ್ತದೆ. ಪ್ರಜಾಪ್ರಭುತ್ವದ ಸೌಂದರ್ಯವೇ ಅದು. ಭಾರತ ಪ್ರಜಾಪ್ರಭುತ್ವ ವ್ಯವಸ್ಥೆ ಅಮೃತ ಮಹೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ಅತ್ಯಂತ ತಳ ಸಮುದಾಯದ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ಪ್ರಪ್ರಥಮ ಬಾರಿಗೆ ದೇಶದ ಪ್ರಥಮ ಪ್ರಜೆ ಸ್ಥಾನಕ್ಕೇರಿದ್ದಾರೆ. ದ್ರೌಪದಿ ಮುರ್ಮು ಅವರು ಎನ್‌ಡಿಎ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಭರ್ಜರಿ ಬಹುಮತದೊಂದಿಗೆ ಗೆದ್ದು ಅತ್ಯುಚ್ಛ ಪದವಿಯನ್ನು ಅಲಂಕರಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಶಕ್ತಿಯನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.
ರಾಷ್ಟçಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಘೋಷಣೆಯಾದ ಮರುದಿನವೇ ದ್ರೌಪದಿ ಮುರ್ಮು ಅವರ ವಿಡಿಯೋ ಒಂದು ವೈರಲ್ ಆಗಿತ್ತು. ದ್ರೌಪದಿ ಅವರು ದೇವಾಲಯವೊಂದರ ಆವರಣದಲ್ಲಿರುವ ಕಸವನ್ನು ಗುಡಿಸುತ್ತಿರುವ ದೃಶ್ಯವಿದ್ದ ವಿಡಿಯೋ ಅದು. ತಾವು ದೇಶದ ಪ್ರಥಮ ಪ್ರಜೆಯ ಸ್ಥಾನವನ್ನು ಅಲಂಕರಿಸಿ ಸಂವಿಧಾನ, ಪ್ರಜಾಪ್ರಭುತ್ವದ ದಂಡವನ್ನು ಹಿಡಿಯುತ್ತೇನೆ ಎಂಬುದನ್ನು ಎಂದಿಗೂ ಕನಸಿನಲ್ಲೂ ಎಣಿಸದ ಮುರ್ಮು ತಮ್ಮ ಜನ್ಮ ಪಾವನವಾಯಿತೆಂದು ದೇವರ ಸನ್ನಿಧಿಯಲ್ಲಿ ಸ್ವಚ್ಛ ಕಾರ್ಯ ಮಾಡುತ್ತಿದ್ದರು. ಜೀವನದ ಆರಂಭದಲ್ಲಿ ಸಾಮಾನ್ಯ ಶಾಲಾ ಶಿಕ್ಷಕಿಯಾಗಿದ್ದ ಅವರಿಗೆ ರಾಷ್ಟçಪತಿ ಹುದ್ದೆ ಒಲಿದುಬರುತ್ತದೆ ಎಂಬ ಕನಸೇಕೆ ಬೀಳುತ್ತದೆ ಹೇಳಿ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದು ಅವರು ಅತ್ಯುನ್ನತ ಹುದ್ದೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ.
ದ್ರೌಪದಿ ಮುರ್ಮು ಹಿನ್ನೆಲೆ
ದ್ರೌಪದಿ ಮುರ್ಮು ಅವರು ಬಿಹಾರ, ಪೂರ್ವ ಭಾರತದ ಒಡಿಶಾ, ಛತ್ತೀಸ್‌ಘಡ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ಭಾರತದ ತ್ರಿಪುರಾ, ಅಸ್ಸಾಂನಲ್ಲಿ ಅಂದಾಜು ಒಂದು ಕೋಟಿಯಷ್ಟು ಜನಸಂಖ್ಯೆ ಇರುವ ಸಂತಾಲಾ ಬುಡಕಟ್ಟಿಗೆ ಸೇರಿದ್ದಾರೆ. ರಾಜಕೀಯ ಪ್ರವೇಶಿಸುವ ಮುನ್ನ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು, ನಂತರ ಸಹಾಯಕ ಪ್ರಾಧ್ಯಾಪಕರಾಗಿ, ಒಡಿಶಾ ಸರ್ಕಾರದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕಿಯಾಗಿದ್ದರು. ನಂತರ ೧೯೯೭ರಲ್ಲಿ ರಾಜಕೀಯಕ್ಕೆ ಕಾಲಿರಿಸಿದರು. ರಾಜಕೀಯ ಮತ್ತು ಸಾಂವಿಧಾನಿಕ ಹುದ್ದೆಗಳಲ್ಲಿ ಮೇಲೇರುತ್ತಲೇ ಬಂದರು.
ರಾಜಕಾರಣವು ದ್ರೌಪದಿ ಅವರಿಗೆ ಅವರ ತವರು ಮನೆಯ ಬಳುವಳಿ ಎಂದರೆ ತಪ್ಪಾಗಲಾರದು. ಒಡಿಶಾದ ಮಯೂರ್‌ಬಂಜ್ ಜಿಲ್ಲೆಯ ಬೈಡಾಪೋಸಿ ದ್ರೌಪದಿ ಅವರ ಹುಟ್ಟೂರು. ಅವರ ತಂದೆ ಬಿರಂಚೀ ನಾರಾಯಣ ಟುಡು ಅವರು, ಬೈಡಾಪೋಸಿ ಗ್ರಾಮದ ಮುಖ್ಯಸ್ಥರಾಗಿದ್ದರು. ಅದಕ್ಕೂ ಮೊದಲು ಅವರ ತಾತ ಆ ಹುದ್ದೆ ನಿರ್ವಹಿಸಿದ್ದರು. ಹೀಗೆ ಗ್ರಾಮಾಡಳಿತ ಅನುಭವವಿದ್ದ ಟುಡು ಕುಟುಂಬದಲ್ಲಿ ದ್ರೌಪದಿ ಅವರು ೧೯೫೮ರ ಜೂನ್ ೨೦ರಂದು ಜನಿಸಿದರು. ಮಯೂರ್‌ಬಂಜ್‌ನಲ್ಲಿ ಶಾಲಾ ಶಿಕ್ಷಣ, ಭುವನೇಶ್ವರದಲ್ಲಿ ಕಾಲೇಜು ಶಿಕ್ಷಣ ಪೂರೈಸಿದ ಅವರು ಕಲಾ ಪದವಿ ಪಡೆದರು. ನಂತರ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡರು. ಬ್ಯಾಂಕರ್ ಶ್ಯಾಮ್ ಚರಣ್ ಮುರ್ಮು ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
ಇದರ ಮಧ್ಯೆಯೇ ೧೯೯೭ರಲ್ಲಿ ಅವರು ಒಡಿಶಾದ ರಾಯ್‌ರಂಗಪುರ ನಗರಾಡಳಿತ ಸಂಸ್ಥೆಯ ಸದಸ್ಯರಾಗಿ ಚುನಾಯಿತರಾದರು. ಅದೇ ವರ್ಷ ನಗರಾಡಳಿತ ಸಂಸ್ಥೆಯ ಉಪಾಧ್ಯಕ್ಷೆಯೂ ಆದರು. ಅದರ ಬೆನ್ನಲ್ಲೇ ಒಡಿಶಾ ರಾಜ್ಯ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾದ ಉಪಾಧ್ಯಕ್ಷೆಯಾಗಿ ಅವರನ್ನು ಆಯ್ಕೆ ಮಾಡಲಾಯಿತು. ೨೦೦೦ದಲ್ಲಿ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ರಾಯ್‌ರಂಗಪುರ ಕ್ಷೇತ್ರದಿಂದ ಕಣಕ್ಕೆ ಇಳಿದು ಆರಿಸಿ ಬಂದರು. ಬಿಜೆಡಿ-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ದ್ರೌಪದಿ ಸಚಿವೆಯೂ ಆದರು. ಈ ಸರ್ಕಾರದಲ್ಲಿ ಅವರು ಮೀನುಗಾರಿಕೆ, ಹೈನುಗಾರಿಕೆ, ಸಾರಿಗೆ ಮತ್ತು ವಾಣಿಜ್ಯ ಇಲಾಖೆಗಳನ್ನು ನಿರ್ವಹಿಸಿದರು. ೨೦೦೪ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾದರು. ೨೦೦೯ರಲ್ಲಿ ಅವರನ್ನು ಬಿಜೆಪಿಯ ರಾಜ್ಯ ಪರಿಶಿಷ್ಟ ಪಂಗಡ ಮೋರ್ಚಾದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿತ್ತು.
೨೦೧೩ರಲ್ಲಿ ಬಿಜೆಪಿಯ ಪರಿಶಿಷ್ಟ ಪಂಗಡ ಮೋರ್ಚಾದ ರಾಷ್ಟಿçÃಯ ಕಾರ್ಯಕಾರಿಣಿ ಸದಸ್ಯರಾಗಿ ಅವರು ಆಯ್ಕೆಯಾದರು. ನಂತರ ೨೦೧೫ರಲ್ಲಿ ಜಾರ್ಖಂಡ್‌ನ ರಾಜ್ಯಪಾಲೆಯಾಗಿ ಅವರನ್ನು ಆಯ್ಕೆ ಮಾಡಲಾಯಿತು. ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರು ಎಂಬ ಹೆಗ್ಗಳಿಕೆ, ರಾಜ್ಯಪಾಲರ ಹುದ್ದೆಗೆ ಏರಿದ ಒಡಿಶಾದ ಮೊದಲ ಮಹಿಳೆ ಎಂಬAತಹ ಹೆಗ್ಗಳಿಕೆಗೆ ಪಾತ್ರರಾದರು. ಜಾರ್ಖಂಡ್‌ನ ರಾಜ್ಯಪಾಲರಾಗಿ ಪೂರ್ಣಾವಧಿಯನ್ನು ಪೂರೈಸಿದ ಮೊದಲಿಗರು ಎಂಬ ಹೆಗ್ಗಳಿಕೆಯೂ ಅವರಿಗೆ ಇದೆ.
ಬೆಂಕಿಯಲ್ಲಿ ಅರಳಿದ ಹೂವು
ದ್ರೌಪದಿ ಮುರ್ಮು ಅವರ ಜೀವನವೇ ದುರಂತಮಯ. ಕಡು ಬಡತನ, ಶೋಚನೀಯ ಸಾಮಾಜಿಕ ಸ್ಥಿತಿಯಂತಹ ನೂರಾರು ಸಂಕಷ್ಟಗಳ ನಡುವೆಯೇ ಅವರು ಬೆಳೆದುನಿಂತ ಪರಿ ಅಚ್ಚರಿ ಹಾಗೂ ಸ್ಫೂರ್ತಿದಾಯಕ.
ದ್ರೌಪದಿ ಮುರ್ಮು ಅವರ ಜೀವನ ಸಾಲು ಸಾಲು ವೈಯಕ್ತಿಕ ದುರಂತಗಳಿAದ ಘಾಸಿಗೊಳಗಾಗಿದೆ. ಆದರೂ ಅವರು ಜನಸೇವೆಯಲ್ಲಿಯೇ ತಮ್ಮೆಲ್ಲ ನೋವುಗಳಿಗೆ ಸಾಂತ್ವನ ಕಂಡವರು. ಅವರ ಒಬ್ಬ ಮಗ ೨೦೦೯ರಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರು. ಮತ್ತೊಬ್ಬ ಮಗ ೨೦೧೨ರಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದರು. ಅವರ ಪತಿ ಶ್ಯಾಮಚರಣ್ ಮುರ್ಮು ಕೂಡ ಹೃದಯಾಘಾತದಿಂದ ನಿಧನರಾಗಿದ್ದರು. ಪ್ರಸ್ತುತ ಅವರಿಗೆ ಒಬ್ಬ ಮಗಳು ಇತಿಶ್ರೀ ಮಾತ್ರ ಇದ್ದಾರೆ. ಅವರು ಮದುವೆಯಾಗಿ ಭುವನೇಶ್ವರದಲ್ಲಿ ನೆಲೆಸಿದ್ದಾರೆ. ಯುಕೋ ಬ್ಯಾಂಕ್‌ನಲ್ಲಿ ಇತಿಶ್ರೀ ಕೆಲಸ ಮಾಡುತ್ತಿದ್ದು, ಅವರ ಪತಿ ಗಣೇಶ್ ಹೆಂಬ್ರಮ್ ರಗ್ಬಿ ಆಟಗಾರರಾಗಿದ್ದಾರೆ.
ದ್ರೌಪದಿ ಮುರ್ಮು ಅವರ ೨೫ ವರ್ಷದ ಮಗ ಲಕ್ಷö್ಮಣ್ ಮುರ್ಮು ೨೦೦೯ರ ಅಕ್ಟೋಬರ್‌ನಲ್ಲಿ ಮೃತಪಟ್ಟಿದ್ದರು. ಪತ್ರಪದ ಪ್ರದೇಶದಲ್ಲಿರುವ ಚಿಕ್ಕಪ್ಪನ ಮನೆಯಲ್ಲಿದ್ದ ಅವರು, ರಾತ್ರಿ ಗೆಳೆಯರ ಜತೆ ಊಟಕ್ಕೆಂದು ಹೊರಗೆ ತೆರಳಿದ್ದರು. ಆದರೆ ಮರಳಿ ಬರುವಾಗ ಅವರ ಸ್ಥಿತಿ ಅಸ್ಥಿರವಾಗಿತ್ತು. ನಿದ್ದೆಯಲ್ಲಿದ್ದಾರೆ ಎಂದು ಕುಟುಂಬದವರು ಬೇರೇನೂ ಕೇಳಿರಲಿಲ್ಲ. ಆದರೆ ಬೆಳಿಗ್ಗೆ ಏಳದ ಕಾರಣ ಪರಿಶೀಲಿಸಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ, ಆಗಲೇ ಮೃತಪಟ್ಟಿದ್ದರು. ಬೈಕ್‌ನಿಂದ ಬಿದ್ದು ತಲೆಯ ಒಳಗೆ ಗಾಯವಾಗಿ ಈ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಪೊಲೀಸರು ಈ ಬಗ್ಗೆ ತೀವ್ರ ತನಿಖೆ ನಡೆಸಿದ್ದರೂ, ಅವರ ಸಾವಿನ ರಹಸ್ಯ ಇದುವರೆಗೂ ಬಯಲಾಗಿಲ್ಲ.
ಬಿಜೆಪಿಗೆ ರಾಜಕೀಯ ಲಾಭ
ದ್ರೌಪದಿ ಮುರ್ಮು ಅವರನ್ನು ರಾಷ್ಟçಪತಿ ಹುದ್ದೆಗೆ ಆಯ್ಕೆಯಾಗುವಂತೆ ಮಾಡಿರುವುದರ ಹಿಂದೆ ಬಿಜೆಪಿ ರಾಜಕೀಯ ಲೆಕ್ಕಾಚಾರವೂ ಇದೆ. ಗುಜರಾತ್, ಮಧ್ಯ ಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್‌ಘಡದ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಮುರ್ಮು ಅವರಿಗೆ ಮಣೆ ಹಾಕಿದೆ. ಈ ನಾಲ್ಕು ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ೧೨೮ ವಿಧಾನಸಭಾ ಕ್ಷೇತ್ರಗಳನ್ನು ಮೀಸಲಿರಿಸಲಾಗಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ೩೫ ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಹೀಗಾಗಿ ಈ ಬಾರಿ ಸಿಂಹಪಾಲು ಗೆಲ್ಲಲು ಅದೇ ಪರಿಶಿಷ್ಟ ಪಂಗಡದ ಮುರ್ಮು ಅವರನ್ನು ರಾಷ್ಟçಪತಿ ಹುದ್ದೆಗೆ ಆಯ್ಕೆಯಾಗುವಂತೆ ನೋಡಿಕೊಂಡಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ದ್ರೌಪದಿ ಮುರ್ಮು ಅವರ ಗೆಲುವಿನ ವಿಜಯೋತ್ಸವದ ಮೆರವಣಿಗೆಗಳನ್ನು ಒಡಿಶಾ, ಛತ್ತೀಸ್‌ಘಡ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಆಯೋಜಿಸಲಾಗಿದ್ದು ಇದರ ಹಿಂದೆ ಕೂಡಾ ಬಿಜೆಪಿ ಆದಿವಾಸಿ ಮಹಿಳೆಯೊಬ್ಬರನ್ನು ಅತ್ಯುನ್ನತ ಹುದ್ದೆಗೆ ಏರಿಸಿದೆ ಎಂಬುದನ್ನು ಜನತೆಯಲ್ಲಿ ಅಚ್ಚೊತ್ತುವಂತೆ ಮಾಡುವ ಇರಾದೆಯಿದೆ ಎನ್ನಲಾಗಿದೆ.
ಮುಸ್ಲಿಂ ವ್ಯಕ್ತಿಯನ್ನು ರಾಷ್ಟçಪತಿ ಮಾಡಿದ್ದು ನಾವೇ. ದಲಿತ ವ್ಯಕ್ತಿಯನ್ನು ರಾಷ್ಟçಪತಿ ಮಾಡಿದ್ದು ನಾವೇ. ಹಿಂದು ಮಹಿಳೆ ಅದು ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟçಪತಿ ಮಾಡಿರುವುದು ನಾವೇ. ಏಕೆಂದರೆ ನಾವು ಜಾತಿವಾದಿಗಳಲ್ಲ. ರಾಷ್ಟçವಾದಿಗಳು ಎಂಬ ಸಂದೇಶವನ್ನು ದೇಶದೆಲ್ಲೆಡೆ ಬಿತ್ತಲು ಬಿಜೆಪಿ ಮುಂದಾಗಿದೆ.