21.8 C
Bengaluru
Thursday, March 16, 2023
spot_img

ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತೆ ಕಪ್ಪು ಚಿರತೆ ಪ್ರತ್ಯಕ್ಷ!

ವನ್ಯಜೀವಿಗಳ ಸಾಂದ್ರತೆ ಹೆಚ್ಚಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತೆ ಕಪ್ಪು ಚಿರತೆ ಕಾಣಿಸಿಕೊಂಡಿದೆ. ವನ್ಯಪ್ರೇಮಿಗಳಲ್ಲಿ ರೋಮಾಂಚನ ಮೂಡಿಸಿದೆ. ಅಪರೂಪದ ಕರಿ ಚಿರತೆ ಸಂಕುಲ ಕರ್ನಾಟಕದ ಅರಣ್ಯಗಳಲ್ಲಿ ಜೀವಂತವಿರುವುದು ದೃಢಪಟ್ಟಿದೆ.

ಹೊಳೆಮತ್ತಿ ನೇಚರ್ ಫೌಂಡೇಷನ್‌ನ ಡಾ. ಸಂಜಯ್ ಗುಬ್ಬಿ ತಂಡದವರು ಚಿರತೆ ಅಧ್ಯಯನಕ್ಕೆ ನಡೆಸಿದ್ದ ಕ್ಯಾಮೆರಾ ಟ್ರಾö್ಯಪ್‌ನಲ್ಲಿ ಚಿರತೆ ಗೋಚರವಾಗಿದೆ. ಈ ಮುನ್ನ ೨೦೨೦ರ ಡಿಸೆಂಬರ್‌ನಲ್ಲಿ ಇದೇ ಗಂಡು ಚಿರತೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ. ಪಾಳ್ಯ ವಲಯದಲ್ಲಿ ಕಾಣಿಸಿಕೊಂಡಿತ್ತು. ಇದೀಗ ಈ ಚಿರತೆಗೆ ಆರು ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳ ನಡುವೆ ೧.೬ ಕಿ.ಮೀ. ಅಗಲದ ವನ್ಯಜೀವಿ ಕಾರಿಡಾರ್ ಇದೆ. ಈ ಎರಡೂ ವನ್ಯಧಾಮಗಳಲ್ಲಿ ಈ ಚಿರತೆಯ ಚಲನವಲನ ದಾಖಲಾಗಿರುವುದು ಈ ಕಾರಿಡಾರ್‌ನ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ವನ್ಯಜೀವಿ ಕಾರಿಡಾರ್‌ನನ್ನು ಸಂರಕ್ಷಿಸುವAತೆ ವನ್ಯ ಜೀವಿ ತಜ್ಞರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles