ಸಂಜನಾ ಗಲ್ರಾಣಿ ಗೊತ್ತಲ್ಲ, ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಕ್ಕಿಂತ ವಿವಾದಗಳನ್ನು ಮೈಮೇಲೆಳೆದುಕೊಂಡು ಫೇಮಾಸ್ಸಾಗಿದ್ದೇ ಹೆಚ್ಚು. ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಇವಳು ತಗುಲಿಕೊಂಡಿದ್ದು ಈಕೆಯ ಹೆಸರನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ. ಲೊಟಲೊಟ ಮಾತಾಡೋದನ್ನೇ ಬಂಡವಾಳ ಮಾಡಿಕೊಂಡಿರುವ ಸಂಜನಾಳ ಹೆಸರನ್ನು ಕೇಳಿದರೆ ಮೀಡಿಯಾ ಮಂದಿ ಉರಿದುರಿದು ಬೀಳುತ್ತಿದ್ದಾರೆ. ವಿಚಾರ ಅದಲ್ಲ. ಇತ್ತೀಚೆಗೆ ಈಕೆಯ ತಂಗಿ ನಿಕ್ಕಿ ಗಲ್ರಾಣಿ ಆದಿ ಪಿನ್ನಿಶೆಟ್ಟಿ ಜೊತೆ ಎಂಗೇಜ್ ಆಗಿದ್ದಾಳೆ.

ಸಂಜನಾಗೆ ಹೋಲಿಸಿದರೆ ಅಂದ ಚೆಂದ, ನಡೆ ನುಡಿ, ಪ್ರತಿಭೆ, ಗುಣಗಳಲ್ಲಿ ನಿಕ್ಕಿ ಬೇರೆಯೇ ಆಗಿದ್ದಾಳೆ. ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾಳೆ. ಹಿಟ್ ಸಿನಿಮಾಗಳ ಭಾಗವಾಗಿದ್ದಾಳೆ. ಕೆರಿಯರ್ ಪೀಕ್ ಲೆವೆಲ್ಲಿನಲ್ಲಿ ಇರುವಾಗಲೇ ಪಿನ್ನಿಶೆಟ್ಟಿಯನ್ನು ಪ್ರೀತಿಸಿ ಮದುವೆಯಾಗುತ್ತಿದ್ದಾಳೆ. ವಿಚಿತ್ರವೆಂದರೆ ತಂಗಿಯ ಎಂಗೇಜ್‌ಮೆAಟ್ ಕಾರ್ಯಕ್ರಮದಲ್ಲಿ ಸಂಜನಾ ಗೈರುಹಾಜರಾಗಿದ್ದಳು.

ನಿಜ ಸಂಗತಿಯೆಂದರೆ, ನಿಕ್ಕಿ ಅವಕಾಶಕ್ಕಾಗಿ ಕಾದು ಕುಂತಿದ್ದಾಗ ಆಕೆಗೆ ಅಡ್ಡಗಾಲಾಗಿದ್ದವಳು ಸಿಸ್ಟರ್ ಸಂಜನಾ ಅಲ್ಲದೇ ಬೇರೆ ಯಾರೂ ಅಲ್ಲ. ಕೂಳೆ ಬಿದ್ದ ಕುದುರೆ ಥರಾ ಇದ್ದ ಸಂಜನಾಳನ್ನು ನೋಡಹೋದವರು ತಂಗಿ ನಿಕ್ಕಿಯ ಕಾಲ್‌ಶೀಟ್ ಕೇಳಿದ್ದಿದೆ. ಇದು ಸಂಜನಾಳ ಹೊಟ್ಟೆಕಿಚ್ಚಿಗೆ ಕಾರಣವಾಗಿತ್ತು. ನಿಕ್ಕಿ ಒಂದು ಹಂತದ ಹೆಸರು ಮಾಡಿದ ನಂತರವೂ ಆಕೆಗೆ ಅವಕಾಶಗಳನ್ನು ತಪ್ಪಿಸುವ ದುಷ್ಟ ಕೆಲಸವನ್ನೂ ಸಂಜನಾ ನಿಯತ್ತಿನಿಂದ ನಿಭಾಯಿಸಿದ್ದಳು. ಅಕ್ಕ ಮಾಡಿದ ಕುತಂತ್ರಗಳು ನಿಕ್ಕಿಗೆ ಗೊತ್ತಿಲ್ಲದೇ ಏನೂ ಇಲ್ಲ. ಆದರೆ ಎಲ್ಲೂ ಸಂಜನಾ ಬಗ್ಗೆ ಏನೂ ಹೇಳಿಕೊಳ್ಳದೆ ದೊಡ್ಡತನ ಮೆರೆದಿದ್ದಳು ಈ ಹುಡುಗಿ. ಈಗ ನಿಶ್ಚಿತಾರ್ಥ ಸಮಾರಂಭದಲ್ಲೂ ಸಂಜನಾ ಗಾಯಬ್ ಆಗಿರುವುದು ಅಕ್ಕ ತಂಗಿಯರ ನಡುವೆ ಎಲ್ಲವೂ ಸರಿಯಿಲ್ಲ ಅನ್ನುವುದನ್ನು ಸಾರಿದೆ.
