30.6 C
Bengaluru
Wednesday, March 15, 2023
spot_img

ತುಕ್ಕು ಹಿಡಿದ ತುಕಾಲಿ ರಾಜಕೀಯವೂ ಬೀಜ ಹೊಡೆಸಿಕೊಂಡ ಡೆಮೋಕ್ರೆಸಿಯೂ…

ಕರ್ನಾಟಕದಲ್ಲಿ ಇಲ್ಲಿಯೂ ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ ದಲಿತರನ್ನು ಮತ್ತು ಮುಸ್ಲಿಮರನ್ನು ಮತಗಳಿಗಾಗಿ ಓಲೈಸುವ ಭರದಲ್ಲಿ ಬಲಿಷ್ಠ ಜಾತಿಯ ಮತ್ತು ದೇಶಪ್ರೇಮ ಪ್ರಜೆಗಳ ಅಸಡ್ಡೆಗೆ ಒಳಗಾಗುತ್ತಿದೆ. ಜೊತೆಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮುಂತಾದ ನಾಯಕರಲ್ಲಿ ದೇವರಾಜ ಅರಸು ಮತ್ತು ಬಂಗಾರಪ್ಪನವರಲ್ಲಿ ಇದ್ದಂಥ ನಾಯಕತ್ವದ ಗುಣಗಳು ಕಾಣುವುದಿಲ್ಲ. ಜೊತೆಗೆ ಈ ನಾಯಕರ ಬಾಡಿ ಲಾಂಗ್ವೇಜ್ ಕೂಡಾ ಅತ್ಯಂತ ಕಳಪೆಯದ್ದಾಗಿದೆ. ಕರ್ನಾಟಕದ ಪ್ರಮುಖ ಮೂರು ಪಕ್ಷಗಳ ಕಾರ್ಯಸೂಚಿಗಳನ್ನು ನೋಡಿ. ಬಿಜೆಪಿ ರಾಷ್ಟ್ರೀಯತೆಯನ್ನು ತನ್ನ ರಾಜಕೀಯ ಆಯುಧವಾಗಿ ಬಳಸುತ್ತಿದ್ದರೆ, ಕಾಂಗ್ರೆಸ್‌ನವರು ಮುಸ್ಲಿಮರನ್ನು ಮತ್ತು ದಲಿತರನ್ನು ಓಲೈಸುತ್ತಿದ್ದಾರೆ. ಇನ್ನು ಬಲವಾದ ಪ್ರಾದೇಶಿಕ ಪಕ್ಷ ಜನತಾದಳ ನೀರಾವರಿ ಮಂತ್ರಗಳನ್ನು ಪಠಿಸುತ್ತಾ ರೈತ ಸಮುದಾಯವನ್ನು ತನ್ನ ಕಡೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಅಸೆಂಬ್ಲಿ ಚುನಾವಣೆ ಇನ್ನೂ ಒಂದು ವರ್ಷವಿರುವಾಗಲೇ ಮೂರು ಪಕ್ಷಗಳೂ ಚುನಾವಣಾ ವ್ಯಾಯಾಮವನ್ನು ಶುರುವಿಟ್ಟುಕೊಂಡಿವೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ನಮ್ಮ ಹಳ್ಳಿಗಾಡಿನ ಲೇಡಿ ಡಾನ್ (ಅಪ್ಪಟ ದೇಶಿ ನುಡಿಗಟ್ಟುಗಳನ್ನು ಮಾತಿನುದ್ದಕ್ಕೂ ಪೋಣಿಸುತ್ತಿದ್ದ ಧೈರ್ಯವಂತ ಮಹಿಳೆ. ಹಾಗೆಯೇ ಗಂಡಸಿನ ಸರಿಸಮನಾಗಿ ಬೇಸಾಯ ಮಾಡುತ್ತಿದ್ದಂತಹ ಹೆಣ್ಣು) ಕೆಂಪಚೌಡಮ್ಮನ ಹತ್ತಿರ ರಾಜಕೀಯ ನಾಯಕರ ಬಗ್ಗೆ, ರಾಜಕೀಯದ ಬಗ್ಗೆ ಮಾತನಾಡಿದರೆ ಬಾಯಲ್ಲಿ ಸ್ಟಾಕ್ ಇರುತ್ತಿದ್ದ ಎಲೆಯಡಿಕೆಯ ತೊಕ್ಕನ್ನು ತುಬಕ್ಕನೆ ಉಗಿದು ಸೆರಗಿನಿಂದ ಬಾಯೊರೆಸಿಕೊಂಡು “ಅಯ್ಯೋ ನೋಡಿದ್ದೀನಿ ಹೋಗತ್ತಾ ಇವರ ಪರಾಕ್ರಮನಾ. ಗೆದ್ರೆ ಅದ್ಕೆಯ್ತೀವಿ, ಇದ್ಕೆಯ್ತೀವಿ ಅಂಥ ಬೊಗುಳ್ತಾರೆ, ಗೆದ್ಮೇಲೆ ಅವ್ರಿವ್ರ ಹೆಂಡ್ತಿ ಹೇಲು ಬಾಚ್ಕಂಡ್ ತಿಂಬೋದೇ ಆಗ್ತೆöÊತೆ. ಈ ಸಾರಿ ಓಟು ಕೇಳ್ಕಂಡ್ ಬರ್ಲಿ ನನ್ನ ಗಡ್ಡೆಗ್ಳು, ಪೊರ್ಕೆ ತಗಂಡು ನಿವಾಳಿಸ್ತೀನಿ” ಎಂದು ಭಾರತದ ಇಂದಿನ ರಾಜಕೀಯ ವ್ಯವಸ್ಥೆಯ, ರಾಜಕೀಯ ನಾಯಕರ ಬಣ್ಣವನ್ನು ಬಯಲು ಮಾಡುತ್ತಿದ್ದಳು. ಯಾರಾದ್ರೂ ರಾಜಕೀಯದ ಸುದ್ದಿ ಎತ್ತಿದ್ರೆ ನಮ್ಮಪ್ಪ “ಅಯ್ಯೋ ಯಾರು ಬಂದ್ರೂ ಮಾಡೋದು ಅಷ್ಟಾçಗೆ ಐತೆ ತಗಳ್ರಿ, ಭಗವಂತೊಬ್ಬ ಕಣ್ಣು ಬಿಟ್ಟು ಸರಿಯಾಗಿ ಮಳೆ ಬೆಳೆ ನೆಡಿಸಿದ್ರೆ ಯಾವ್ ದೊರೆನೂ ಬೇಕಿಲ್ಲ, ಯಾವ್ ಮಂತ್ರೀನೂ ಬೇಕಿಲ್ಲ, ದೇಶ ಅದ್ರಷ್ಟುಕದೆ ಸುಭಿಕ್ಷವಾಗಿತ್ತೆöÊðತೆ…” ಎಂದು ಮೋಟು ಬೀಡಿಯನ್ನು ಬಾಯಿಗಿಟ್ಟುಕೊಂಡು ಊದ್ರ ಬಿಡುತ್ತಿದ್ದ. ಬಡಗಿ ತಳವಾರ ಪಾಪನಾಯ್ಕ “ರಾಜ ಎಂಥೋನ್ ಬಂದ್ರು ಪ್ರಜೆಗಳು ರಾಗಿ ಬೀಸೋದು ತಪ್ಪಲ್ಲ, ಅದೇನು ರಾಜಕೀಯದ ಮಾತು ಬಿಡ್ರಿ ಅತ್ತ, ಅನ್ನಕ್ಕಿಲ್ಲ ಬಟ್ಟೆಗಿಲ್ಲ…” ಎಂದು ಬಾಳಚಿಯಿಂದ ನೇಗಿಲು ಮಾಡಲು ಜಾಲಿ ಮರದ ತುಂಡನ್ನು ಕೆತ್ತುತ್ತಿದ್ದ. ಇನ್ನು ನಿವೃತ್ತ ಮೇಷ್ಟುç ಪುಟ್ಟಾರಾಧ್ಯರು “ನನ್ನತ್ರ ಮಾತ್ರ ಹೊಲ್ಸ್ ರಾಜಕೀಯದ ಸುದ್ದಿ ಎತ್ಬೇಡ್ರಿ. ಕ್ವಿಟ್ ಇಂಡಿಯಾ ಮೂವ್ಮೆಂಟ್ನಲ್ಲಿ ಇಂಗ್ಲಿಷ್ನೋರ್ ಸರಕಿಗೆ ಬೆಂಕಿ ಇಟ್ಟೋನು ನಾನು. ನೆಹರು ಕಾಲದಿಂದ್ಲೂ ಈ ದೇಶದ ರಾಜಕೀಯ ನೋಡ್ತಾ ಬಂದಿರೋನು. ಇವೊತ್ತು ರಾಜಕೀಯದಲ್ಲಿರೊ ಯಾವೋನ್ಗೆ ಮಾನ ಮರ್ಯಾದೆ ಐತೆ ಹೇಳ್ರಿ ನೋಡೋಣ…” ಎಂದು ಎದೆಯಲ್ಲಿನ ಸಿಟ್ಟನ್ನು ಕಣ್ಣಲ್ಲಿ ತುಂಬಿಸಿಕೊAಡು ಮಾತಾಡುತ್ತಿದ್ದರು. ಆದರೆ ಮುಂದೆ ಪುಟ್ಟಾರಾಧ್ಯರ ಮಗ ಗಂಗಾಧರಪ್ಪನವರು ರಾಜಕಾರಣಿಯಾದರು. ಆದರೆ ಕಡೆಯವರೆಗೂ ಪ್ರಾಮಾಣಿಕತೆ ಮತ್ತು ಶುದ್ಧತೆಗಳನ್ನು ಉಸಿರಾಡಿಕೊಂಡಿದ್ದರು. ಈ ಇವರ ಮಾತುಗಳನ್ನು ನಾನು ಪ್ರೆöÊಮರಿ ಮತ್ತು ಮಿಡ್ಲಿಸ್ಕೂಲುಗಳಲ್ಲಿದ್ದಾಗ ಕೇಳಿಸಿಕೊಂಡಿದ್ದದ್ದು. ಈಗೇನಾದರೂ ಬದುಕಿದ್ದಿದ್ದರೆ ಇವರುಗಳ ಬಾಯಿಂದ ಮಾತುಗಳು ಉದುರುತ್ತಿದ್ದವೋ. ಜನನಾಟ್ಯ ಕಲಾ ಮಂಡಳಿಯ ಮುಖ್ಯಸ್ಥ ಗೆಳೆಯ ಗದ್ದರ್ “ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆ ಕೈಕಾಲು ಮುರಿದುಕೊಂಡ ಹೆಳವನಂತೆ ತೆವಳುತ್ತಿದೆ. ಹೃದಯಶೂನ್ಯರಾದ ಈ ದೇಶದ ರಾಜಕಾರಣಿಗಳು ಮುಗ್ಗಿದ ಮರವನ್ನು ಗೆದ್ದಲು ತಿನ್ನುವಂತೆ ತಿನ್ನುತ್ತಿದ್ದಾರೆ. ಪ್ರಜಾಪ್ರಭುತ್ವದ ರೆಂಬೆ ಕೊಂಬೆಗಳನ್ನು ಕಟುಕರಂತೆ ಕಡಿದು ಕೆಡವುತ್ತಿದ್ದಾರೆ” ಎಂದು ಆಕ್ರೋಶಗೊಳ್ಳುತ್ತಾರೆ.


ಮೇಲಿನ ಮಾತುಗಳು ಪ್ರಸ್ತುತ ಕರ್ನಾಟಕವೇ ಅಲ್ಲದೆ ಇಡೀ ಭಾರತದ ರಾಜಕೀಯ ವ್ಯವಸ್ಥೆಗೆ ಹಿಡಿದ ಒಡೆದ ಕನ್ನಡಿಯ ಚೂರುಗಳಂತಿವೆ. ಪ್ರಪಂಚದಲ್ಲಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟçಗಳಲ್ಲಿ ಒಂದಾದ ಭಾರತ ವೈವಿಧ್ಯಮಯವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕನ್ನು ಒಳಗೊಂಡಿರುವ ವಿಶಿಷ್ಟ ಸಂಯುಕ್ತ ರಾಷ್ಟçವಾಗಿದೆ. ಭಾರತದಲ್ಲಿ ನೆಲೆಗೊಂಡಿರುವಷ್ಟು ಜಾತಿ, ಧರ್ಮ, ಪರಂಪರೆ, ಭಾಷೆ, ಸಂಪ್ರದಾಯ, ನಂಬಿಕೆಗಳು ಜಗತ್ತಿನ ಬೇರೆ ಯಾವ ರಾಷ್ಟçಗಳಲ್ಲೂ ನೆಲೆಗೊಂಡಿಲ್ಲ. ಹಾಗಾಗಿಯೇ ರಾಜಕೀಯವಾಗಿ ಕೂಡ ಭಾರತ ಜಗತ್ತಿನ ಬೇರೆಲ್ಲ ರಾಷ್ಟçಗಳಿಗಿಂತಲೂ ವಿಭಿನ್ನವಾಗಿಯೇ ಇದೆ. ಜಾತಿ, ಮತ, ಧರ್ಮ, ಭಾಷೆಗಳನ್ನು ಮೀರಿ ಭಾರತದ ನೆಲದಲ್ಲಿ ಏಕತೆ ಮತ್ತು ರಾಷ್ಟಿçÃಯತೆಯ ಭಾವನೆಯನ್ನು ಮೂಡಿಸಿದ್ದು ಗಟ್ಟಿಯಾಗಿ ಎರಡು ದಶಕಗಳ ಕಾಲ ಭಾರತದ ಉದ್ದಗಲಕ್ಕೂ ವ್ಯಾಪಿಸಿಕೊಂಡಿದ್ದ ಬ್ರಿಟಿಷರ ಆಡಳಿತ ಮತ್ತು ವ್ಯಾಪಾರ ವಹಿವಾಟುಗಳು. ಪ್ರಬಲ ರಾಷ್ಟಿçÃಯ ಹೋರಾಟದಿಂದಾಗಿ ಬ್ರಿಟಿಷರು ಭಾರತವನ್ನು ಬಿಡಬೇಕಾಯಿತು. ಜೊತೆಗೆ ೧೯೪೭ರಲ್ಲಿ ಉಂಟಾದ ಭಾರತ ಮತ್ತು ಪಾಕಿಸ್ತಾನದ ವಿಭಜನೆ ಧಾರ್ಮಿಕ ಸ್ವರೂಪವನ್ನು ಪಡೆದುಕೊಂಡು ಶತಮಾನಗಳ ಕಾಲ ಒಗ್ಗೂಡಿ ಬದುಕಿದ್ದ ಹಿಂದೂ-ಮುಸ್ಲಿ ಎರಡೂ ಕಡೆ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದು ಜಾಗತಿಕ ಇತಿಹಾಸದ ದೊಡ್ಡ ದುರಂತವೇ ಸರಿ. ಧರ್ಮ ಮತ್ತು ವಿಭಜನೆಯ ಫಲಗಳು ಇಂದಿಗೂ ತಮ್ಮ ಫಲ ಮತ್ತು ಪರಿಣಾಮಗಳನ್ನು ಭಾರತದ ರಾಜಕೀಯದ ಮೇಲೆ ಉಳಿಸಿಕೊಂಡೇ ಬಂದಿವೆ. ಇರಲಿ, ಸ್ವಾತಂತ್ರö್ಯ ನಂತರದ ರಾಜಕೀಯ ನೆಲೆ ಈಗಿನಷ್ಟು ಕಲುಷಿತಗೊಂಡಿರಲಿಲ್ಲ. ಮತ್ತು ಭ್ರಷ್ಟತೆಯಿಂದ ದೂರ ಕೂಡಾ ಇತ್ತು. ಆಗಿನ ಚುನಾವಣೆಗಳು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ತಳಹದಿಯ ಮೇಲೆ ನಡೆಯಲ್ಪಡುತ್ತಿದ್ದವು. ದೇಶದ ಆರ್ಥಿಕ ಅಭಿವೃದ್ಧಿ ಅಂದಿನ ರಾಜಕೀಯ ಪಕ್ಷಗಳ ಅಜೆಂಡಾ ಮತ್ತು ಚರ್ಚೆಯಾಗಿತ್ತು. ತತ್ವಾಧಾರಿತ ರಾಜಕಾರಣ ಅವತ್ತಿನ ತುರ್ತಾಗಿತ್ತು. ಆದರೆ ಇವೊತ್ತು ಯಾವ ರಾಜಕೀಯ ಪಕ್ಷಗಳಲ್ಲೂ ಸಾರ್ವಜನಿಕ ಹಿತಾಸಕ್ತಿಯಾಗಲೀ, ದೇಶಾಭಿವೃದ್ದಿಯಾಗಲೀ, ಪ್ರಜೆಗಳ ಕಲ್ಯಾಣವಾಗಲೀ ಗುರಿಯಾಗಿ ಉಳಿದುಕೊಂಡಿಲ್ಲ. ಹೇಗಾದರೂ ಅಧಿಕಾರವನ್ನು ಹಿಡಿಯುವುದು ಮತ್ತು ಪವರ್ ಸೆಂಟರ್‌ನಿAದ ಉತ್ಪಾದನೆಯಾಗುವ ಎಲ್ಲಾ ಲಾಭಗಳನ್ನು ಸ್ವಾರ್ಥಕ್ಕಾಗಿ ಕೊಳ್ಳೆ ಹೊಡೆಯುವುದೇ ಆಗಿದೆ. ದೀರ್ಘಾವಧಿಯ ಕಾಲ ಈ ದೇಶದ ಪ್ರಧಾನಿಯಾಗಿದ್ದ ಮಾನ್ಯ ಜವಾಹರಲಾಲ್ ನೆಹರೂರವರ ಮರಣದ ನಂತರ ಲಾಲ್ ಬಹದ್ದೂರ್ ಶಾಸ್ತಿçಯವರು ಅತ್ಯಂತ ಕ್ಲಿಷ್ಟಕರವಾದ ಸಂದರ್ಭದಲ್ಲಿ ಭಾರತದ ಪ್ರಧಾನಿಯಾಗುತ್ತಾರೆ.

ತಾಷ್ಕೆಂಟ್ ಒಪ್ಪಂದದ ಸಮಯದಲ್ಲಿ ಶಾಸ್ತಿಜಿಯವರು ಅಕಾಲಿಕ ಮರಣಕ್ಕೆ ತುತ್ತಾದ ನಂತರ ಶ್ರೀಮತಿ ಇಂದಿರಾ ಗಾಂಧಿಯವರು ಪ್ರಧಾನಿಯಾಗುತ್ತಾರೆ. ಅಲ್ಲಿಂದ ಅನೇಕ ವರ್ಷಗಳ ಕಾಲ ಭಾರತದ ರಾಜಕೀಯ ನೆಹರು ಕುಟುಂಬದ ನಿಯಂತ್ರಣದಲ್ಲಿರುತ್ತದೆ. ಸುಮಾರು ಅರವತ್ತು-ಅರವತ್ತೆöÊದು ವರ್ಷಗಳ ಕಾಲ ಕಾಂಗ್ರೆಸ್ ದೇಶದ ಚುಕ್ಕಾಣಿಯನ್ನು ಹಿಡಿಯಲು ಕಾರಣವಾಗಿದ್ದು ಕೇಂದ್ರದಲ್ಲಿ ಪ್ರಬಲವಾದ ವಿರೋಧ ಪಕ್ಷಗಳಾಗಲೀ ಮತ್ತು ರಾಜ್ಯಗಳಲ್ಲಿ ವ್ಯಾಪಕವಾಗಿ ಪ್ರಾದೇಶಿಕ ರಾಜಕೀಯ ಪಕ್ಷಗಳಾಗಲೀ ಇಲ್ಲದ್ದಿದ್ದೇ ಆಗಿತ್ತು. ಎಮರ್ಜೆನ್ಸಿಯ ನಂತರ ದೇಶದ ರಾಜಕಾರಣದಲ್ಲಿ ದೊಡ್ಡ ಪ್ರಮಾಣದ ರಾಜಕೀಯ ಬದಲಾವಣೆಗಳುಂಟಾದವು. ಕಾಂಗ್ರೆಸ್ ನೆಹರು ಕುಟುಂಬದಿAದಾಚೆಗೆ ಒಳ್ಳೆಯ ರಾಜಕೀಯ ನಾಯಕರನ್ನು ಹುಟ್ಟುಹಾಕಲಿಲ್ಲ. ಈಗಲೂ ರಾಹುಲ್ ಗಾಂಧಿ, ಜಿಗ್ನೇಶ್ ಮೆವಾನಿ, ಕನ್ಹಯ್ಯಕುಮಾರ್ ಮುಂತಾದ ಚಿಲ್ಲರೆಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಮತ್ತು ಈ ಹೊತ್ತಿಗೆ ರಾಜಕೀಯ ಲಾಭದ ರುಚಿ ಸಾರ್ವಜನಿಕವಾಗಿ ವ್ಯಾಪಕವಾಗಿಯೇ ಪ್ರಕಟಗೊಂಡಿತ್ತು. ಇಂತಹ ಹಿನ್ನೆಲೆಯಲ್ಲಿ ಇವೊತ್ತಿನ ರಾಜಕೀಯವನ್ನು ವಿಶ್ಲೇಷಿಸುವುದು ಸಂದರ್ಭೋಚಿತ ತುರ್ತಾಗಿದೆ.
ಇತ್ತೀಚೆಗೆ ಅಂದರೆ ಕಳೆದ ಮಾರ್ಚ್ ತಿಂಗಳಲ್ಲಿ ಉತ್ತರ ಭಾರತದ ಐದು ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಹಿನ್ನೆಲೆಯನ್ನಾಗಿ ಇಟ್ಟುಕೊಂಡು ಪ್ರಸ್ತುತ ಕರ್ನಾಟಕದ ರಾಜಕೀಯ ಕೆಸರೆರಚಾಟವನ್ನು ಗಮನಿಸೋಣ. ಐದು ರಾಜ್ಯಗಳ ಪೈಕಿ ಪಂಜಾಬ್ ಬಿಟ್ಟರೆ ಮಿಕ್ಕೆಲ್ಲ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳನ್ನು ರಚನೆ ಮಾಡಿದರೆ ಪಂಜಾಬ್‌ನಲ್ಲಿ ಆಮ್ ಆದ್ಮಿ ಸರ್ಕಾರ ರಚಿಸಿತು. ಎಲ್ಲಾ ಕಡೆಗೂ ಸರ್ಕಾರ ರಚಿಸುವ ಕಾಂಗ್ರೆಸ್ಸಿನ ಕನಸು ಭಗ್ನವಾಯಿತು. ಒಂದೊಮ್ಮೆ ತನ್ನ ರಾಜಕೀಯದ ಗಟ್ಟಿ ನೆಲೆಯಾಗಿದ್ದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲೆ ಕಚ್ಚಿ ಹೋಯಿತು. ಪಂಜಾಬಿನಲ್ಲಿ ಕಾಂಗ್ರೆಸ್ ಹೈಕಮಾಂಡಿನ ತಪ್ಪು ನಿರ್ಧಾರದಿಂದಾಗಿ ಇದ್ದ ಅಧಿಕಾರವನ್ನೂ ಕಳೆದುಕೊಂಡಿತು. ಬಹು ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಈ ಬಾರಿ ಯೋಗಿ ಆದಿತ್ಯನಾಥರ ಸರ್ಕಾರ ಪುನರಾಯ್ಕೆ ಆಗುವುದು ಕಷ್ಟಕರವೆಂದು ಬಹುಪಾಲು ರಾಜಕೀಯ ಪಂಡಿತರು ಭವಿಷ್ಯ ನುಡಿದಿದ್ದರು. ಇನ್ನು ಪ್ರಧಾನಿ ಮೋದಿಯವರ ರಾಜಕೀಯ ವಿರೋಧಿಗಳು ಹಾಗೂ ಘನ ಎಡಪಂಥೀಯ ಪಂಡಿತ, ಪಾಮರ, ಬುದ್ಧಿಜೀವಿಗಳು ಆದಿತ್ಯನಾಥ್ ಮತ್ತು ಮೋದಿಯವರ ಹಿಂದುತ್ವದಿAದಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗ್ಯಾರೆಂಟಿ ಮಣ್ಣು ಮುಕ್ಕುತ್ತದೆಂದು ಸಂಭ್ರಮಪಟ್ಟಿದ್ದರು. ಒಂದು ವರ್ಷ ಕಾಲ ನಡೆದ ರೈತ ಹೋರಾಟ ಕೂಡ ಫಲಿತಾಂಶದ ಮೇಲೆ ಘನತರವಾದ ಪ್ರಭಾವ ಬೀರುತ್ತದೆಂದೂ ರ‍್ರಾಬರ‍್ರಿ ಬೊಂಬ್ಡಾ ಬಜಾಯಿಸಿದ್ದರು. ಆದರೆ ಪ್ರಜಾಪ್ರಭುತ್ವದಲ್ಲಿ ಯಾರು ಅತಿ ಹೆಚ್ಚು ಮತಗಳನ್ನು ಗಳಿಸುತ್ತಾರೋ ಅವರೇ ರಾಜರು. ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಆದಿತ್ಯನಾಥ್ ಯುಪಿಯಲ್ಲಿ ಅನೇಕ ಜನಾನುರಾಗಿ ಕೆಲಸಗಳನ್ನು ಕೈಗೊಂಡಿರುವುದು ಚುನಾವಣಾ ಫಲಿತಾಂಶ ಜಗಜ್ಜಾಹೀರುಗೊಳಿಸಿದೆ. ಯೋಗಿ ಮತ್ತು ಮೋದಿ ಮುಸ್ಲಿಂ ವಿರೋಧಿಗಳಾಗಿದ್ದರೆ ಆಗ್ರಾದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದು ಹೇಗೆ ಮಂತ್ರಿಯೂ ಆಗುತ್ತಾರೆಂಬ ಯಕ್ಷಪ್ರಶ್ನೆಗೆ ಮೋದಿ ವಿರೋಧಿ ಚಿಂತಕರು ಉತ್ತರ ಕೊಡಬಲ್ಲರೆ. ಕಾಂಗ್ರೆಸ್, ಬಹುಜನ ಸಮಾಜವಾದಿ ಪಾರ್ಟಿ ಆಡಳಿತ ಕಾಲದಲ್ಲಿ ಮೆರೆಯುತ್ತಿದ್ದ ರೌಡಿಸಂಗೆ ಕೇವಲ ಆರು ತಿಂಗಳಲ್ಲೇ ಆದಿತ್ಯನಾಥ್ ಹೆಡೆಮುರಿ ಕಟ್ಟಿ ಮಹಿಳೆಯರ ಮತ್ತು ಮಧ್ಯಮ ವರ್ಗದ ಜನರ ಮೆಚ್ಚುಗೆಯನ್ನು ಪಡೆದಿದ್ದರು. ಕಾಂಗ್ರೆಸ್ ಸೋಲಿಗೆ ನಾಯಕತ್ವದ ಕೊರತೆ, ರಾಷ್ಟç ವಿರೋಧಿ ನಿಲುವುಗಳೇ ಪ್ರಮುಖ ಕಾರಣವಾದವು. ಪಶ್ಚಿಮ ಬಂಗಾಳದಲ್ಲಿ ಇವೊತ್ತಿಗೂ ರಾಜಕೀಯ ಕೊಲೆಗಳು, ರಾಜಕೀಯ ದೊಂಬಿಗಳು ಸರ್ವೇ ಸಾಮಾನ್ಯವಾಗಿವೆ. ಅಂಥದ್ದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಉತ್ತರ ಪ್ರದೇಶ ಈಗ ನಿರುಮ್ಮಳವಾಗಿದೆ. ಇದು ಯಾವುದೇ ಒಂದು ರಾಜ್ಯದ ಅಭಿವೃದ್ಧಿಯ ಸಂಕೇತವಲ್ಲವೆ, ಕರ್ನಾಟಕದಲ್ಲಿ ಪ್ರಸ್ತುತ ಆಡಳಿತ ಪಕ್ಷಕ್ಕಾಗಲೀ, ವಿರೋಧ ಪಕ್ಷಗಳಿಗಾಗಲೀ ಜನರ ನೆಮ್ಮದಿಯ ಬದುಕು ಗಮನಾರ್ಹವಾದ ಸಂಗತಿಯೇ ಅಲ್ಲ. ಅಧಿಕಾರವನ್ನು ಉಳಿಸಿಕೊಳ್ಳಲು ಆಡಳಿತ ಪಕ್ಷ ಹೆಣಗಾಡುತ್ತಿದ್ದರೆ, ಆಡಳಿತವನ್ನು ಹಿಡಿಯಲು ವಿರೋಧ ಪಕ್ಷಗಳು ಹವಣಿಸುತ್ತಿವೆ.


ಪ್ರಸ್ತುತ ಕರ್ನಾಟಕದ ವಿಷಯಕ್ಕೆ ಬರೋಣ: ಇಲ್ಲಿಯೂ ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ ದಲಿತರನ್ನು ಮತ್ತು ಮುಸ್ಲಿಮರನ್ನು ಮತಗಳಿಗಾಗಿ ಓಲೈಸುವ ಭರದಲ್ಲಿ ಬಲಿಷ್ಠ ಜಾತಿಯ ಮತ್ತು ದೇಶಪ್ರೇಮ ಪ್ರಜೆಗಳ ಅಸಡ್ಡೆಗೆ ಒಳಗಾಗುತ್ತಿದೆ. ಜೊತೆಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮುಂತಾದ ನಾಯಕರಲ್ಲಿ ದೇವರಾಜ ಅರಸು ಮತ್ತು ಬಂಗಾರಪ್ಪನವರಲ್ಲಿ ಇದ್ದಂಥ ನಾಯಕತ್ವದ ಗುಣಗಳು ಕಾಣುವುದಿಲ್ಲ. ಜೊತೆಗೆ ಈ ನಾಯಕರ ಬಾಡಿ ಲಾಂಗ್ವೇಜ್ ಕೂಡಾ ಅತ್ಯಂತ ಕಳಪೆಯದ್ದಾಗಿದೆ. ಕರ್ನಾಟಕದ ಪ್ರಮುಖ ಮೂರು ಪಕ್ಷಗಳ ಕಾರ್ಯಸೂಚಿಗಳನ್ನು ನೋಡಿ. ಬಿಜೆಪಿ ರಾಷ್ಟಿçÃಯತೆಯನ್ನು ತನ್ನ ರಾಜಕೀಯ ಆಯುಧವಾಗಿ ಬಳಸುತ್ತಿದ್ದರೆ, ಕಾಂಗ್ರೆಸ್‌ನವರು ಮುಸ್ಲಿಮರನ್ನು ಮತ್ತು ದಲಿತರನ್ನು ಓಲೈಸುತ್ತಿದ್ದಾರೆ. ಇನ್ನು ಬಲವಾದ ಪ್ರಾದೇಶಿಕ ಪಕ್ಷ ಜನತಾದಳ ನೀರಾವರಿ ಮಂತ್ರಗಳನ್ನು ಪಠಿಸುತ್ತಾ ರೈತ ಸಮುದಾಯವನ್ನು ತನ್ನ ಕಡೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಅಸೆಂಬ್ಲಿ ಚುನಾವಣೆ ಇನ್ನೂ ಒಂದು ವರ್ಷವಿರುವಾಗಲೇ ಮೂರು ಪಕ್ಷಗಳೂ ಚುನಾವಣಾ ವ್ಯಾಯಾಮವನ್ನು ಶುರುವಿಟ್ಟುಕೊಂಡಿವೆ. ಇದಕ್ಕೆ ಮುಖ್ಯ ಕಾರಣ ಪಂಚರಾಜ್ಯಗಳ ಚುನಾವಣಾ ಫಲಿತಾಂಶ. ಆದರೆ ಕರ್ನಾಟಕದಲ್ಲಿ ಧಾರ್ಮಿಕ ಸಂಘರ್ಷಗಳು, ರಾಜಕೀಯ ಕೊಲೆಗಳು, ಕೋಮು ಗಲಭೆಗಳು ಮುಂತಾದ ಋಣಾತ್ಮಕ ಸಂಗತಿಗಳೇ ಎಲ್ಲಾ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಾಗಿವೆಯೇನೋ ಎನ್ನಿಸುತ್ತಿದೆ. ನಾಲ್ಕು ವರ್ಷಗಳ ಹಿಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಹುಮತಕ್ಕೆ ತೀರಾ ಹತ್ತಿರ ಬಂದ ಬಿಜೆಪಿ ಭದ್ರ ಸರ್ಕಾರವನ್ನು ರಚಿಸಲು ವಿಫಲವಾದಾಗ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಕಿಂಗ್‌ಮೇಕರ್ ಸ್ಥಾನದಲ್ಲಿದ್ದ ಜನತಾ ದಳದೊಂದಿಗೆ ಕೈ ಜೋಡಿಸಿ ಸಂಯುಕ್ತ ಸರ್ಕಾರ ರಚಿಸಲಾಯಿತು. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದೂ ಆಯಿತು. ಆದರೆ ಎರಡೂ ಪಕ್ಷಗಳ ನಡುವಿನ ಹೊಂದಾಣಿಕೆ ಹೆಚ್ಚು ಕಾಲ ಉಸಿರಾಡಲಿಲ್ಲ. ಇದಕ್ಕೆ ಮುಖ್ಯ ಕಾರಣರಾಗಿದ್ದು ಸಮನ್ವಯ ಸಮಿತಿಯ ಮುಖ್ಯಸ್ಥ (ಅಧ್ಯಕ್ಷ) ರಾಗಿದ್ದ ಸಿದ್ದರಾಮಯ್ಯ ಎಂಬುದು ಜನಜನಿತ. ಮಾನ್ಯ ಸಿದ್ದರಾಮಯ್ಯನವರೇ ಹಾಗೆ, ಅಧಿಕಾರ ಇಲ್ಲದಿದ್ದರೆ ನೀರಿನಿಂದ ಹೊರಬಿದ್ದ ಮೀನಿನಂತೆ ವಿಲವಿಲ ಒದ್ದಾಡುತ್ತಾರೆ. ತಮ್ಮದೇ ಪಕ್ಷದ ಡಿ.ಕೆ. ಶಿವಕುಮಾರ್‌ರವರೊಂದಿಗೆ ಸಹ ಸಿದ್ದರಾಮಯ್ಯ ಒಳ್ಳೆಯ ಸಂಬAಧವನ್ನು ಇಟ್ಟುಕೊಂಡಿಲ್ಲ. ಮಾತುಗಳು ಹದಮೀರಿ ಒಮ್ಮೊಮ್ಮೆ ಕಾಂಗ್ರೆಸ್‌ನಲ್ಲೇ ಗೇಲಿಗೊಳಗಾಗುತ್ತಾರೆ. ಇತ್ತೀಚೆಗೆ ಹಿಜಾಬ್ ಪರವಾಗಿ ಮಾತನಾಡುತ್ತಾ ಹಿಂದೂ ಮಹಿಳೆಯರು, ಮಠಾಧೀಶರು ತೊಡುವ ಬಟ್ಟೆಗಳ ಬಗ್ಗೆ ಮಾತನಾಡಿ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿದ್ದರು. ಹಿಜಾಬ್ ವಿಷಯ ಸುಪ್ರೀಂಕೋರ್ಟ್ನಲ್ಲಿ ಇದ್ದರೂ ಆರು ಮಂದಿ ಮುಸ್ಲಿಂ ಹೆಣ್ಣು ಮಕ್ಕಳು “ನಮಗೆ ಪರೀಕ್ಷೆಗಿಂತಲೂ ನಮ್ಮ ಧರ್ಮ ಮತ್ತು ಹಿಜಾಬೇ ಮುಖ್ಯ” ಎಂದು ಮಾಧ್ಯಮಗಳ ಮುಂದೆ ಬೊಬ್ಬಿಡುತ್ತಿರುವಾಗ ಅವರಿಗೆ ಬುದ್ಧಿವಾದವನ್ನು ಹೇಳಿ, ಪರೀಕ್ಷೆಗೆ ಕಳಿಸುವ ಕೆಲಸ ಮಾಡದೆ ಅವರಿಗೆ ಕುಮ್ಮಕ್ಕು ನೀಡಿದ್ದು ಸಿದ್ದರಾಮಯ್ಯನವರ ಯಾವ ರಾಜಕೀಯ ಮುತ್ಸದ್ದಿತನವೆಂದು ಹೇಳಬೇಕು? ಮುಸ್ಲಿಮರನ್ನು ಓಲೈಸುವ ಸಿದ್ದರಾಮಯ್ಯನವರು ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಮತ್ತಷ್ಟು ಅವನತಿಗೆ ತಳ್ಳುವುದಂತೂ ಗ್ಯಾರಂಟಿ. ಮೂರ್ನಾಲ್ಕು ಬಾರಿ ಸಿದ್ದರಾಮಯ್ಯನವರು ನಾಲಿಗೆ ತಪ್ಪಿ “ಕಾಂಗ್ರೆಸ್ ಪಾರ್ಟಿಯನ್ನು ಕರ್ನಾಟಕದಲ್ಲಿ ನಿರ್ನಾಮ ಮಾಡಬೇಕು…” ಎಂದು ಅಬ್ಬರಿಸಿದ್ದೂ ಉಂಟು. ಇದು ಸಿದ್ದರಾಮಯ್ಯನವರಲ್ಲಿನ ಹತಾಶೆಯನ್ನು ಬಯಲು ಮಾಡಿದೆ. ಹಿಜಾಬ್ ಜೊತೆಗೆ ಹಲಾಲ್ ಬೇರೆ. ಈ ಚಿಲ್ಲರೆ ಸಂಗತಿಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ದೊಡ್ಡದು ಮಾಡಿಕೊಂಡು ರಾಜಕೀಯ ದಾಳಗಳನ್ನು ಉರುಳಿಸಲು ಪ್ರಯತ್ನಿಸುತ್ತಿವೆ. ಜನತಾ ದಳದ ಕುಮಾರಸ್ವಾಮಿಯವರು ಕೂಡಾ ತಾವೇನೂ ಕಡಿಮೆಯಿಲ್ಲದಂತೆ ಮಾಧ್ಯಮಗಳ ಮುಂದೆ ವಿಷವನ್ನು ಕಕ್ಕುತ್ತಿದ್ದಾರೆ. ಎರಡೂ ಧರ್ಮಗಳ ಮಧ್ಯೆ ಸಾಮರಸ್ಯವನ್ನು ಮೂಡಿಸಿ ಸಹಬಾಳ್ವೆಗೆ ಅನುವು ಮಾಡಿಕೊಡುವಂಥ ಪ್ರಯತ್ನಗಳನ್ನು ಯಾವ ಪಕ್ಷದ ನಾಯಕರೂ ಮಾಡುತ್ತಿಲ್ಲದಿರುವುದು ಅವರ ಗೋಮುಖ ವ್ಯಾಘ್ರತನವನ್ನು ಅನಾವರಣಗೊಳಿಸಿದೆ. ಮುಂಬರುವ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ರಾಷ್ಟಿçÃಯತೆಯ ಮಂತ್ರದೊAದಿಗೆ ಮೋದಿಯ ದಾಳವನ್ನೂ ಉರುಳಿಸುವುದು ಗ್ಯಾರಂಟಿ. ಕರ್ನಾಟಕದ ಕೆಲವು ಬಿಜೆಪಿ ನಾಯಕರು ಸಾರ್ವಜನಿಕವಾಗಿಯೇ ಮುಸ್ಲಿಮರ ವಿರುದ್ಧ ಹರಿಹಾಯುತ್ತಿರುವುದು ಕಂಡರೆ ಬಿಜೆಪಿ ಮುಸ್ಲಿಂ ಮತಗಳನ್ನು ನಂಬಿಕೊAಡಿಲ್ಲವೆAದೇ ಅರ್ಥ. ಜನತಾದಳ ತನ್ನ ಮೀಸಲು ಮತಗಳನ್ನು ಗಳಿಸಿಕೊಂಡು ಕಿಂಗ್ ಮೇಕರ್ ಆಗುವುದರಲ್ಲಿ ಸಂಶಯವಿಲ್ಲ. ಎಲೆಕ್ಷನ್ ಇನ್ನೂ ಒಂದು ವರ್ಷ ಬಾಕಿಯಿದೆ ನೋಡೋಣ. ಈ ಲೇಖನವನ್ನು ಬರೆಯುತ್ತಿರುವ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ಕೋಮು ಗಲಭೆಯ ಸುದ್ದಿ ಪ್ರಸಾರವಾಗುತ್ತಿದೆ. ಧರ್ಮ ಗುರುವೊಬ್ಬ ಇನೋವಾ ಕಾರ್ ಮೇಲೆ ನಿಂತು ತಮ್ಮ ಧರ್ಮೀಯರನ್ನು ಪ್ರಚೋದಿಸುತ್ತಿರುವ ಚಿತ್ರ ನೋಡಿದರೆ ಧರ್ಮಗಳು ಯಾವ ದಾರಿ ಹಿಡಿಯುತ್ತಿವೆ ಎಂದು ಸ್ಪಷ್ಟವಾಗುತ್ತಿದೆ. ಈ ಪ್ರಕರಣವನ್ನು ಕಾಂಗ್ರೆಸ್ ಆಗಲಿ, ಕಾಂಗ್ರೆಸ್‌ನ್ನು ಬೆಂಬಲಿಸುತ್ತಿರುವ ಪ್ರಗತಿಪರ ಬುದ್ದಿಜೀವಿಗಳಾಗಲೀ ಖಂಡಿಸುತ್ತಿಲ್ಲ. ಎಂತಹ ಅದ್ಭುತ ಸೆಕ್ಯುಲರಿಸಂ ನಮ್ಮ ಪ್ರಗತಿಪರ ಬುದ್ಧಿಜೀವಿಗಳದ್ದು. ಆದರೆ ರಾಜಕೀಯ ತೀರ್ಮಾನ ಕೊಡುವುದರಲ್ಲಿ ಈ ದೇಶದ ಬುದ್ಧಿವಂತ ಅಕ್ಷರಸ್ಥರಿಗಿಂತ ಅನಕ್ಷರಸ್ಥರೇಎಷ್ಟೋ ಮೇಲು. “ಮಾನವೀಯತೆಯನ್ನು ಬೋಧಿಸದೆ ಕ್ರೌರ್ಯ, ಹಿಂಸೆಗಳನ್ನು ಬೋಧಿಸುವ ಜಗತ್ತಿನ ಯಾವ ಧರ್ಮವೂ ಅಸಲಿಗೆ ಧರ್ಮವೇ ಅಲ್ಲ” ಎಂಬ ಗಾಂಧೀಜಿಯವರ ಮಾತುಗಳು ನಮ್ಮ ಎಷ್ಟು ರಾಜಕಾರಣಿಗಳ, ಎಷ್ಟು ಚಿಂತಕರ ಮೆದುಳಿನಲ್ಲಿ ನೆಲೆಯೂರಿ ನಿಂತಿವೆ. ಭಾರತದ ಎಂಬತ್ತೆöÊದು ಪರ್ಸೆಂಟ್ ರಾಜಕಾರಣಿಗಳು, ಆಡಳಿತಗಾರರು ಹಗಲು ದರೋಡೆಕೋರರಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles