ವಿಶ್ವಾದ್ಯಂತದ ವಿಜ್ಞಾನಿಗಳು ಕಳೆದ ಹಲವು ವರ್ಷಗಳಿಂದ ಚಂದ್ರನ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಚಂದ್ರನ ಮೇಲ್ಮೆ ಮೇಲೆ ಮಾನವನ ಜೀವನದ ಕುರಿತು ಹಲವು ಸಂಶೋಧನೆಗಳು ನಡೆಯುತ್ತಿವೆ. ಇವೆಲ್ಲವುಗಳ ನಡುವೆ ಅಚ್ಚರಿಯ ಮಾಹಿತಿಯೊಂದು ಬಹಿರಂಗಗೊಂಡಿದೆ.
ವರದಿಗಳ ಪ್ರಕಾರ, ಚಂದ್ರನ ಮೇಲ್ಮೆ ಮೇಲಿನ ಮಣ್ಣಿನಲ್ಲಿ ಸಸ್ಯಗಳನ್ನು ಬೆಳೆಸಬಹುದು ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಇಂತಹ ಒಂದು ಪ್ರಯೋಗವನ್ನು ನಡೆಸಲಾಗಿದೆ. ಫ್ಲೋರಿಡಾ ವಿಶ್ವವಿದ್ಯಾನಿಲಯದ ಸಂಶೋಧಕರಾಗಿರುವ ಥೇಲ್ ಕ್ರೆಸ್, ಅರಬಿಡೋಪ್ಸಿಸ್ ಥಾಲಿಯಾನ ಸಸ್ಯಗಳು ಚಂದ್ರನಿAದ ತಂದ ಮಣ್ಣಿನಲ್ಲಿ ಯಶಸ್ವಿಯಾಗಿ ಮೊಳಕೆಯೊಡೆದಿವೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಈ ಸಂಶೋಧನೆಯ ನಂತರ ಚಂದ್ರನ ಮೇಲೆ ಆಹಾರ ಮತ್ತು ಆಮ್ಲಜನಕವನ್ನು ಪೂರೈಸುವ ಸಸ್ಯಗಳನ್ನು ಬೆಳೆಸಬಹುದು ಎಂಬ ಅಂದಾಜಿಗೆ ಬಲ ಸಿಕ್ಕಂತಾಗಿದೆ.

ವಿಶ್ವ ನಿರ್ಮಾಣದತ್ತ ಇಟ್ಟ ಒಂದು ದೊಡ್ಡ ಹೆಜ್ಜೆ
ಅಧ್ಯಯನದ ಸಹಲೇಖಕರಲ್ಲಿ ಒಬ್ಬರಾದ ರಾಬ್ ಫೆರೆಲ್, `ಚಂದ್ರನ ಮಣ್ಣಿನಲ್ಲಿ ಸಸ್ಯಗಳು ಬೆಳೆದಿರುವುದು ಬಹಿರಂಗಗೊAಡಿದೆ. ಇದರಿಂದ ಚಂದ್ರನ ವಸಾಹತುಗಳಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವಲ್ಲಿ ಮಾನವನು ಇಟ್ಟ ಒಂದು ದೊಡ್ಡ ಹೆಜ್ಜೆ ಇದಾಗಿದೆ’ ಎಂದಿದ್ದಾರೆ. ಈ ಸಸ್ಯವು ಸಾಸಿವೆ, ಹೂಕೋಸು ಮತ್ತು ಕೋಸುಗಡ್ಡೆಯಂತೆಯೇ ಒಂದೇ ಕುಟುಂಬಕ್ಕೆ ಸೇರಿದೆ. ಈ ಅಧ್ಯಯನದಲ್ಲಿ ತೊಡಗಿರುವ ಮತ್ತೊಬ್ಬ ಸಂಶೋಧಕಿ ಅನ್ನಾ-ಲಿಸಾ ಪೌಲ್ ಹೇಳುವ ಪ್ರಕಾರ, ಆಕ್ಸಿಡೇಟಿವ್ ಒತ್ತಡದ ಪ್ರತಿಕ್ರಿಯೆಗಳಿಗೆ ಹೆಚ್ಚು ಮತ್ತು ವೇಗವಾಗಿ ಪ್ರತಿಕ್ರಿಯಿಸುವ ಸಸ್ಯಗಳು ವಿಶೇಷವಾಗಿ ಅಪೊಲೊ ೧೧ನಿಂದ ತಂದ ಮಣ್ಣಿನ ಮಾದರಿಯಲ್ಲಿ ಬೆಳೆದಿವೆ ಮತ್ತು ಅವು ನೇರಳೆ ಬಣ್ಣಕ್ಕೆ ತಿರುಗಿವೆ ಎಂದಿದ್ದಾರೆ.

೧೨ ಗ್ರಾಂ ಮಣ್ಣಿನಲ್ಲಿ ಈ ಸಂಶೋಧನೆ ನಡೆಸಲಾಗಿದೆ
ನಾಸಾ ಈ ದಶಕದ ಅಂತ್ಯದಲ್ಲಿ ತನ್ನ ಆರ್ಟೆಮಿಸ್ ಕಾರ್ಯಕ್ರಮದ ಭಾಗವಾಗಿ ಚಂದ್ರನ ಮೇಲೆ ಮಾನವರನ್ನು ಕಳುಹಿಸಲು ಯೋಜನೆ ರೂಪಿಸುತ್ತಿರುವ ಹಿನ್ನೆಲೆ ಈ ಸಂಶೋಧನೆ ಪ್ರಕಟಗೊಂಡಿದ್ದು, ಇದೀಗ ಭಾರಿ ಮಹತ್ವ ಪಡೆದುಕೊಂಡಿದೆ. ಈ ಸಂಶೋಧನೆಯ ಉತ್ತಮ ಸಂಗತಿ ಎಂದರೆ ಎಲ್ಲಾ ಸಸ್ಯಗಳು ಮೊಳಕೆಯೊಡೆದಿವೆ. ಆದಾಗ್ಯೂ ಕೆಲವು ಸಸ್ಯಗಳು ವಿಭಿನ್ನ ಬಣ್ಣಗಳಲ್ಲಿ, ಗಾತ್ರಗಳಲ್ಲಿ ಮತ್ತು ಇತರ ಸಸ್ಯಗಳಿಗಿಂತ ನಿಧಾನ ಗತಿಯಲ್ಲಿ ಬೆಳೆದಿವೆ. ಈ ಸಸ್ಯಗಳಿಗೆ ಹೋಲಿಸಲು, ತಂಡ ಭೂಮಿಯ ಮಣ್ಣಿನಲ್ಲಿಯೂ ಕೂಡ ಕೆಲವು ಸಸ್ಯಗಳನ್ನು ನೆಟ್ಟಿದೆ.