ಪ್ರಪಂಚದ ಹಲವಾರು ದೇಶಗಳಲ್ಲಿ ಚಿತ್ರ-ವಿಚಿತ್ರವಾದ ಕಾನೂನುಗಳಿವೆ. ಹಲವು ದೇಶಗಳಲ್ಲಿರುವ ಕಾನೂನು ಕಟ್ಟಳೆಗಳನ್ನು ತಿಳಿದುಕೊಂಡರೆ ಅಚ್ಚರಿಯಾಗುತ್ತದೆ. ಪ್ರಪಂಚದ ಅನೇಕ ದೇಶಗಳಲ್ಲಿ ಗರ್ಲ್ ಫ್ರೆಂಡ್ಸ್ ಹೊಂದುವ ಬಗ್ಗೆ ವಿಲಕ್ಷಣ ಕಾನೂನುಗಳಿವೆ.

ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಇರುವ ಇಂತಹ ಒಂದು ಕಾನೂನಿನ ಕಾರಣಕ್ಕೆ ಅಲ್ಲಿನ ಯಾವುದೇ ಯುವಕರು ಗರ್ಲ್ ಫ್ರೆಂಡ್ಸ್ ಹೊಂದಲು ಸಾಧ್ಯವಿಲ್ಲ.
ಪಾಕಿಸ್ತಾನದಲ್ಲಿ ಯುವಕನೊಬ್ಬ ತನ್ನ ಗೆಳತಿಯೊಂದಿಗೆ ಸಿಕ್ಕಿಬಿದ್ದರೆ ಜೈಲಿಗೆ ಕಳುಹಿಸಲಾಗುತ್ತದೆ. ಅಲ್ಲಿ ಯಾವುದೇ ಹುಡುಗ ಹುಡುಗಿಯೊಂದಿಗೆ ಸ್ನೇಹ ಮಾಡಲು ಸಾಧ್ಯವಿಲ್ಲ. ಮದುವೆಗೂ ಮುನ್ನ ಗುಂಡು ಮತ್ತು ಹೆಣ್ಣು ಒಟ್ಟಿಗೆ ಇರುವಂತಿಲ್ಲ, ಓಡಾಡುವಂತಿಲ್ಲ ಎಂಬ ಕಠಿಣ ಕಾನೂನು ಪಾಕಿಸ್ತಾನದಲ್ಲಿದೆ.
ಪಾಕಿಸ್ತಾನದಂತೆಯೇ ಯುನೈಟೆಡ್ ಅರಬ್ ಎಮಿರೇಟ್ಸ್ ಸಹ ಗರ್ಲ್ ಫ್ರೆಂಡ್ಸ್ ಹೊಂದುವ ಬಗ್ಗೆ ವಿಚಿತ್ರ ಕಾನೂನು ಹೊಂದಿದೆ. ಇಲ್ಲಿ ಯಾವ ಯುವಕನೂ ಬಹಿರಂಗವಾಗಿ ತನ್ನ ಗೆಳತಿಯ ಕೈ ಹಿಡಿಯುವಂತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಗೆಳತಿಯೊಂದಿಗೆ ಕಂಡುಬAದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲಿ ಸಾರ್ವಜನಿಕವಾಗಿ ಚುಂಬಿಸುವುದು ಮತ್ತು ಅಪ್ಪಿಕೊಳ್ಳುವುದನ್ನು ಸಹ ನಿಷೇಧಿಸಲಾಗಿದೆ.
ನಮ್ಮ ನೆರೆಯ ಚೀನಾದಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗುತ್ತಾರೆ. ಇಲ್ಲಿ ಒಂಟಿ ಹುಡುಗರು ಗೆಳತಿಯರಿಗಾಗಿ ಹೆಚ್ಚು ಚಿಂತಿಸಬೇಕಾಗಿಲ್ಲ. ಇಲ್ಲಿ ಅವರು ತಮ್ಮ ಗರ್ಲ್ ಫ್ರೆಂಡ್ಸ್ ಆಗಿ ಬಾಡಿಗೆ ಹುಡುಗಿಯರನ್ನು ಪಡೆದು ಡೇಟಿಂಗ್ ಮಾಡಬಹುದು. ಚೀನಾದ ಗುವಾಂಡಾAಗ್‌ನಲ್ಲಿ ಯಾವುದೇ ಪುರುಷನು ಸುಂದರವಾಗಿರುವ ಯುವತಿಯರನ್ನು ಇಷ್ಟಪಡಬಹುದು ಮತ್ತು ಬಾಡಿಗೆ ಗೆಳತಿಯನ್ನಾಗಿಸಿಕೊಂಡು ತನ್ನೊಂದಿಗೆ ಕರೆದೊಯ್ಯಬಹುದು.