-ಎಸ್.ವಿ. ಜ್ಯೋತಿ
ಖಾದಿ ಬಟ್ಟೆ ಸ್ವದೇಶಿಯತೆಯ ಹೆಗ್ಗುರುತು. ಸ್ವಾತಂತ್ರö್ಯ ಹೋರಾಟದಲ್ಲಿ ವಸ್ತçಸಂಹಿತೆಯ ಭಾಗವಾಗಿದ್ದ ಖಾದಿ ಅನಂತರ ಗಾಂಧಿವಾದಿಗಳ ಬ್ರಾಂಡ್ ಆಯಿತು. ಮುಂದೆ ಸ್ವಾತಂತ್ರö್ಯ ಬಂದ ನಂತರ ರಾಜಕಾರಣಿಗಳ ವಸ್ತç ಸಂಸ್ಕೃತಿಯಾಗಿ ರೂಪುಗೊಂಡಿತ್ತು. ಮಹಿಳಾ ರಾಜಕಾರಣಿಗಳು ಖಾದಿ ಉಡತೊಡಗಿದರು. ಈಗಂತೂ ಖಾದಿ ಫ್ಯಾಷನ್ ಆಗಿಬಿಟ್ಟಿದೆ.

ಕಾಲೇಜು ಯುವತಿಯರು, ಮಹಿಳಾ ರಾಜಕಾರಣಿಗಳು, ಸೆಲೆಬ್ರಟಿ ನಟಿಯರಿಗೂ ಖಾದಿ ವಸ್ತçಗಳು ಅಚ್ಚುಮೆಚ್ಚಾಗುತ್ತಿದೆ. ದೇಶದ ಸ್ವಾಭಿಮಾನದ ಸಂಕೇತವಾಗಿರುವ ಖಾದಿಯನ್ನು ವಸ್ತç ವಿನ್ಯಾಸಕಾರರು ನವ ನವೀನ ಡಿಸೈನ್ ಮೂಲಕ ಮುನ್ನೆಲೆಗೆ ತರುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ಖಾದಿಯಲ್ಲಿ ಕುರ್ತಾ, ಟಾಪ್, ಸ್ಕರ್ಟ್, ದುಪ್ಪಟ್ಟಾ ಹೀಗೆ ಆಧುನಿಕ ವಿನ್ಯಾಸಗಳು ಬಂದಿವೆ. ಫ್ಯಾಷನ್ ಪ್ರಿಯರಿಗೆ ಹತ್ತಿರವಾಗಿವೆ.
ಫ್ಯಾಷನ್‌ನಲ್ಲಿ ಹೊಸ ಹೆಜ್ಜೆ
ಖಾದಿ ವಸ್ತç ಎನ್ನುವುದು ಎಲ್ಲ ಕ್ಷೇತ್ರದ ಮಹಿಳೆಯರಿಗೂ ಆಪ್ತವಾಗಬೇಕು ಎಂಬ ನಿಟ್ಟಿನಲ್ಲಿ ವಸ್ತçವಿನ್ಯಾಸಕರು ತರಹೇವಾರಿ ಫ್ಯಾಷನ್ ಸೃಷ್ಟಿಸುತ್ತಿದ್ದಾರೆ. ಇವರ ಕೈಚಳಕದ ಹಿನ್ನೆಲೆ ರೇಷ್ಮೆ ಸೀರೆಗಳಿಗೆ ಮುತ್ತು, ಕುಂದನ್, ಜರ್ದೋಸಿ ವರ್ಕ್ಗಳಿಂದ ಡಿಸೈನರ್ ರವಿಕೆ ಹೊಲಿಸಿಕೊಳ್ಳುವುದು ಟ್ರೆಂಡ್ ಆಗಿದೆ. ಇತ್ತೀಚೆಗೆ ಸೀರೆಗಿಂತ ರವಿಕೆಗಳ ವಿನ್ಯಾಸಗಳೇ ಕಣ್ಸೆಳೆಯುವಂತಿರುತ್ತವೆ. ರೇಷ್ಮೆ ಸೀರೆಯ ಡಿಸೈನರ್ ರವಿಕೆ ಟ್ರೆಂಡ್‌ನ್ನು ಖಾದಿಗೆ ವರ್ಗಾಯಿಸಿದ್ದಾರೆ ಡಿಸೈನರ್‌ಗಳು. ಸೆಲೆಬ್ರಟಿಗಳ ಮೂಲಕವೇ ಖಾದಿ ಡಿಸೈನರ್ ಬ್ಲೌಸ್‌ಗಳನ್ನು ಜನಪ್ರಿಯಗೊಳಿಸುವ ಆಲೋಚನೆ ಅವರದು.
ಈ ಬ್ಲೌಸ್ ವಿನ್ಯಾಸ ಮಾಡುವಾಗ ಬ್ಲೌಸ್ ಬೆನ್ನಿನ ಭಾಗ ಹಾಗೂ ತೋಳಿನಲ್ಲಿ ಗಂಡಭೇರುAಡ ಹಾಗೂ ನವಿಲಿನ ವಿನ್ಯಾಸವನ್ನು ವಿಶೇಷವಾಗಿ ಮಾಡುತ್ತಾರೆ. ನವಿಲು ನಮ್ಮ ರಾಷ್ಟçಪಕ್ಷಿ ಹಾಗೂ ಗಂಡಭೇರುAಡ ಮೈಸೂರು ಅರಸರ ಲಾಂಛನ. ಈ ಎಂಬ್ರಾಯ್ಡರಿ ವಿನ್ಯಾಸವನ್ನು ಕೈಯಿಂದಲೇ ಮಾಡುತ್ತಾರೆ. ಗ್ರಾಹಕರೂ ಇಷ್ಟಪಟ್ಟಲ್ಲಿ ಮುತ್ತು, ಕುಂದನ್, ಹರಳುಗಳನ್ನು ಬಳಸಿ ವಿಶೇಷವಾಗಿ ವಿನ್ಯಾಸ ಮಾಡಿಕೊಡುತ್ತಾರೆ. ಈ ಬ್ಲೌಸ್‌ಗಳು ಅದ್ಧೂರಿ ವಿನ್ಯಾಸದಿಂದ ಗಮನ ಸೆಳೆಯುವುದರ ಜೊತೆಗೆ ಸೀರೆ ಉಟ್ಟಾಗ ಶ್ರೀಮಂತ ನೋಟ ಸಿಗುತ್ತದೆ.
ಹಿತಕರವೆನಿಸುವ ವಸ್ತç
ಖಾದಿ ಸೀರೆಗಳು ನೋಡಲು ಸುಂದರವಾಗಿರುವAತೆ ಧರಿಸಲು ಅಷ್ಟೇ ಹಿತಕರವೆನಿಸುತ್ತವೆ. ಈ ಸೀರೆಗಳಿಗೆ ಇಂತಹ ಡಿಸೈನರ್ ಬ್ಲೌಸ್ ಹೊಲಿಸಿಕೊಂಡರೆ ಮದುವೆಯಂತಹ ಅದ್ಧೂರಿ ಕಾರ್ಯಕ್ರಮಕ್ಕೂ ಸಲ್ಲುತ್ತದೆ ಎಂಬುದು ವಸ್ತçವಿನ್ಯಾಕಸರ ಮಾತು. ಇದಲ್ಲದೇ ಖಾದಿಯಿಂದ ಗೌನ್, ಸ್ಕರ್ಟ್ನಂತಹ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ.
ಮೊದಲೆಲ್ಲಾ ಬಿಳಿ, ಕಂದು ಸೇರಿದಂತೆ ತಿಳಿ ಬಣ್ಣದಲ್ಲಿ ಮಾತ್ರ ಖಾದಿ ಬಟ್ಟೆಗಳು ಬರುತ್ತಿದ್ದವು. ಈಗ ತಿಳಿ, ಗಾಢ ಬಣ್ಣ, ಬಗೆಬಗೆ ವಿನ್ಯಾಸ, ಪ್ರಿಂಟ್‌ಗಳಲ್ಲಿ ಖಾದಿ ಸೀರೆ ಜೊತೆಗೆ ಜಾಕೆಟ್, ಕುರ್ತಾ ಕೂಡ ಈಗಿನ ಟ್ರೆಂಡ್. ಹೊಸ ಹೊಸ ಪ್ರಯೋಗದಿಂದ ಖಾದಿಯೂ ಹೊರತಾಗಿಲ್ಲ.