-ಶೌರ್ಯ ಡೆಸ್ಕ್
ಕ್ಷತ್ರಿಯ ಸಮಾವೇಶಕ್ಕೆ ರಾಜ್ಯದ ಮೂಲೆಮೂಲೆಯಿಂದ ಜನಸಾಗರವೇ ಹರಿದುಬಂದಿದ್ದರಿಂದ ರಾಜಧಾನಿಯ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಯಿತು. ಮೇಖ್ರಿ ವೃತ್ತ, ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ, ಅರಮನೆ ರಸ್ತೆ, ತುಮಕೂರು ರಸ್ತೆ, ಕೆ.ಆರ್.ಪುರ ಟಿನ್ ಫ್ಯಾಕ್ಟರಿ ಸುತ್ತಮುತ್ತ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಪರದಾಡಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಕ್ಷತ್ರಿಯ ಸಮಾವೇಶಕ್ಕೆ ರಾಜ್ಯದ ಮೂಲೆಮೂಲೆಯಿಂದ ಜನಸಾಗರವೇ ಹರಿದುಬಂದಿದ್ದರಿಂದ ರಾಜಧಾನಿಯ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಯಿತು. ಮೇಖ್ರಿ ವೃತ್ತ, ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ, ಅರಮನೆ ರಸ್ತೆ, ತುಮಕೂರು ರಸ್ತೆ, ಕೆ.ಆರ್.ಪುರ ಟಿನ್ ಫ್ಯಾಕ್ಟರಿ ಸುತ್ತಮುತ್ತ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಪರದಾಡಿದರು. ಕೆಂಪೇಗೌಡ ವಿಮಾನ ನಿಲ್ಧಾಣಕ್ಕೆ ಹೊರಟ ಪ್ರಯಾಣಿಕರು ಟ್ರಾಫಿಕ್ ಸಿಲುಕಿದರು.
ಉತ್ತರ ಕರ್ನಾಟಕ ಭಾಗದಿಂದ ನೂರಾರು ಬಸ್, ಮಿನಿಬಸ್, ಟೆಂಪೋ ಕ್ರೂಸರ್‌ಗಳು ಬೆಳ್ಳಂಬೆಳಗ್ಗೆ ನಗರಕ್ಕೆ ಎಂಟ್ರಿ ಕೊಟ್ಟಿದ್ದರಿಂದ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಪಾರ್ಲೆ-ಗೊರಗುಂಟೆಪಾಳ್ಯ ನಡುವಿನ ಮೇಲ್ಸೇತುವೆ ದುರಸ್ತಿಯಲ್ಲಿದ್ದು ಭಾರೀ ವಾಹನಗಳ ಸಂಚಾರಕ್ಕೆ ಆಸ್ಪದವಿಲ್ಲ. ಏಕಾಏಕಿ ಪ್ರವಾಹೋಪಾದಿಯಲ್ಲಿ ಬಸ್‌ಗಳು ಇದೇ ರಸ್ತೆಯಲ್ಲಿ ಆಗಮಿಸಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು. ಅರಮನೆ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ಯಶವಂತಪುರ-ಮೇಖ್ರಿ ವೃತ್ತದ ರಸ್ತೆಯಲ್ಲಿ ವಾಹನಗಳು ನಿಂತಲ್ಲಿಯೇ ನಿಂತಿದ್ದವು. ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನವನ್ನು ವಾಹನಗಳು ಪ್ರವೇಶಿಸಲು ಅನುವು ಮಾಡಿಕೊಡಲಾಗಿತ್ತು. ನಂದಿದುರ್ಗ ರಸ್ತೆ, ಕಂಟೋನ್ಮೆಂಟ್ ಮೂಲಕ ಕೋಲಾರ, ಮಾಲೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಡೆಯಿಂದ ಹೆಚ್ಚು ವಾಹನಗಳು ಬಂದಿದ್ದರಿಂದ ಈ ಭಾಗದಲ್ಲಿ ಮಧ್ಯಾಹ್ನದವರೆಗೂ ಟ್ರಾಫಿಕ್ ಇತ್ತು.