-ಸೋಮಶೇಖರ್ ಪಡುಕರೆ
ಕೆಲವೊಂದು ಹವ್ಯಾಸಗಳು ನಮ್ಮ ಬದುಕಿಗೆ ಅಡ್ಡಿಯನ್ನುಂಟು ಮಾಡುತ್ತವೆ. ಜವಾಬ್ದಾರಿಯನ್ನು ಮರೆತು ಹವ್ಯಾಸದ ಬೆನ್ನು ಹಿಡಿದರೆ ಏನಾಗುತ್ತದೆ ಎಂಬುದಕ್ಕೆ ಸೈಮಂಡ್ಸ್ ಅವರ ಬದುಕಿನ ಘಟನೆಯೊಂದು ಉತ್ತಮ ನಿದರ್ಶನ. ೨೦೦೮ರ ಆಗಸ್ಟ್ನಲ್ಲಿ ಬಾಂಗ್ಲಾ ದೇಶದ ವಿರುದ್ಧ ಸರಣಿಯನ್ನಾಡಲು ಸೈಮಂಡ್ಸ್ ಅವರನ್ನು ಡಾರ್ವಿನ್‌ಗೆ ಕಳುಹಿಸಲಾಗಿತ್ತು. ಆದರೆ ತಂಡದ ಸಭೆಯಲ್ಲಿ ಪಾಲ್ಗೊಳ್ಳುವ ಬದಲು ಸೈಮಂಡ್ಸ್ ಮೀನು ಹಿಡಿಯಲು ಹೋಗಿದ್ದರು. ಇದರಿಂದಾಗಿ ತಂಡದ ಆಡಳಿತ ಮಂಡಳಿ ಅಶಿಸ್ತಿನಿಂದ ವರ್ತಿಸಿದ ಸೈಮಂಡ್ಸ್ ಅವರನ್ನು ಮನೆಗೆ ಕಳುಹಿಸಿತ್ತು. ಸೈಮಂಡ್ಸ್ ಅವರ ಕ್ರಿಕೆಟ್ ಬದುಕು ವೈವಿಧ್ಯತೆಯಿಂದ ಕೂಡಿತ್ತು. ತಂಡ ವೈಫಲ್ಯದ ಹಾದಿ ಹಿಡಿದಾಗ ಎಚ್ಚರಿಕೆಯಿಂದ ಜವಾಬ್ದಾರಿಯುತ ಆಟವಾಡಿ ಮೆಚ್ಚುಗೆಗೆ ಪಾತ್ರವಾಗಿದ್ದ ಸೈಮಂಡ್ಸ್ಗೆ ಮಂಕಿಗೇಟ್ ಹಗರಣ ಮುಳುವಾಯಿತು. ಮತ್ತು ಅವರ ಕ್ರಿಕೆಟ್ ಜೀವನವನ್ನು ಅಂತ್ಯಗೊಳಿಸಿತು.

ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೇನ್ ವಾರ್ನ್ ಸಾವಿನ ಸೂತಕ ಮರೆಯಾಗುತ್ತಿದ್ದಂತೆ, ಆ ದೇಶದ ಮತ್ತೊಬ್ಬ ಶ್ರೇಷ್ಠ ಕ್ರಿಕೆಟಿಗ ಆಂಡ್ರುö್ಯ ಸೈಮಂಡ್ಸ್ ರಸ್ತೆ ಅಪಘಾತದಲ್ಲಿ ದುರಂತ ಸಾವನ್ನು ಕಂಡಿದ್ದಾರೆ. ಇದರೊಂದಿಗೆ ಕ್ರಿಕೆಟ್ ಜಗತ್ತು ಮತ್ತೊಬ್ಬ ಶ್ರೇಷ್ಠ ಕ್ರಿಕೆಟಿಗನನ್ನು ಕಳೆದುಕೊಂಡAತಾಗಿದೆ.
೪೬ ವರ್ಷದ ಸೈಮಂಡ್ಸ್ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಲ್‌ರೌಂಡರ್. ಎರಡು ಬಾರಿ ವಿಶ್ವಕಪ್ ಗೆದ್ದ ಆಟಗಾರ ಚಲಾಯಿಸುತ್ತಿದ್ದ ಕಾರು ಕ್ವೀನ್ಸ್ಲ್ಯಾಂಡ್‌ನ ಟೌನ್ಸ್ವಿಲ್ಲೆಯಿಂದ ೫೦ ಕಿ.ಮೀ. ದೂರದಲ್ಲಿರುವ ಹೆರ್ವಿರೇಂಜ್‌ನಲ್ಲಿ ಅಪಘಾತಕ್ಕೀಡಾಯಿತು. ಅವರನ್ನು ಉಳಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಕ್ರಿಕೆಟ್ ಜಗತ್ತು ಕಂಡ ಅತ್ಯಂತ ವಿವಾದ, ವಿಶೇಷ ಹಾಗೂ ವಿಭಿನ್ನ ಆಟಗಾರ ಸೈಮಂಡ್ಸ್, ಪತ್ನಿ ಲೌರಾ ಮತ್ತು ಮಕ್ಕಳಾದ ಕ್ಲಾಯ್ ಮತ್ತು ಬಿಲ್ಲಿಯನ್ನು ಅಗಲಿದ್ದಾರೆ. ಆಸ್ಟೆçÃಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಅವರು ನಿಧನರಾಗಿ ಇನ್ನೂ ಎರಡು ತಿಂಗಳು ಪೂರ್ಣಗೊಳ್ಳದಿರುವಾಗಲೇ ಆಸೀಸ್ ಕ್ರಿಕೆಟ್‌ಗೆ ಮತ್ತೊಂದು ದುರಂತ ಅಪ್ಪಳಿಸಿರುವುದು ನಿಜವಾಗಿಯೂ ಕ್ರಿಕೆಟ್ ಜಗತ್ತಿಗೆ ನುಂಗಲಾರದ ನಷ್ಟ.
ಸೈಮಂಡ್ಸ್ ಒಬ್ಬ ಸಾಮಾನ್ಯ ಕ್ರಿಕೆಟಿಗರಾಗಿರಲಿಲ್ಲ, ಜೂನಿಯರ್ ಕ್ರಿಕೆಟ್‌ನಲ್ಲಿ ದಾಖಲೆ ಬರೆದು ಅಂತಾರಾಷ್ಟಿçÃಯ ಕ್ರಿಕೆಟ್‌ಗೆ ಕಾಲಿಟ್ಟ ಪ್ರತಿಭೆ. ಆಸ್ಟೆçÃಲಿಯಾ ತಂಡ ಎರಡು ವಿಶ್ವಕಪ್ ಗೆಲ್ಲುವಲ್ಲಿ ಸೈಮಂಡ್ಸ್ ಅವರ ಪಾತ್ರ ಪ್ರಮುಖವಾಗಿತ್ತು. ಅಲ್ಲದೆ ಕ್ವೀನ್ಸ್ಲ್ಯಾಂಡ್‌ನ ಶ್ರೀಮಂತ ಕ್ರಿಕೆಟ್ ಇತಿಹಾಸಕ್ಕೆ ಸೈಮಂಡ್ಸ್ ಕೊಡುಗೆ ಅಪಾರವಾಗಿತ್ತು.

ವೆಸ್ಟ್ಇಂಡೀಸ್ ಸಂಜಾತ ಸೈಮಂಡ್ಸ್ ಅವರನ್ನು ಇಂಗ್ಲೆAಡ್‌ನ ದಂಪತಿ ದತ್ತು ಪಡೆದರು. ಗ್ಲೌಸಿಸ್ಟರ್‌ಶೈರ್, ಕೆಂಟ್, ಲ್ಯಾಂಕಾಶೈರ್ ಹಾಗೂ ಸರ್ರೆ ಪರ ಆಡಿರುವ ಸೈಮಂಡ್ಸ್ ಕೌಂಟಿ ಕ್ರಿಕೆಟ್‌ನಲ್ಲಿ ಗ್ಲಾಮರ್ಗಾನ್ ವಿರುದ್ಧದ ಪಂದ್ಯವೊAದರಲ್ಲಿ ೧೬ ಸಿಕ್ಸರ್ ಸಿಡಿಸಿ ೨೫೪ ರನ್ ಗಳಿಸಿದ್ದು ದಾಖಲೆಯಾಗಿತ್ತು. ಹೀಗೆ ದಾಖಲೆಯೊಂದಿಗೆ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ಸೈಮಂಡ್ಸ್, ಆಸೀಸ್ ಪರ ೨೬ ಟೆಸ್ಟ್ ಪಂದ್ಯಗಳನ್ನಾಡಿ ೧೪೬೨ ರನ್ ಮತ್ತು ೨೪ ವಿಕೆಟ್ ಗಳಿಸಿದ್ದರು. ಆಫ್ ಸ್ಪಿನ್ ಮತ್ತು ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಸೈಮಂಡ್ಸ್ ಹಲವಾರು ಪಂದ್ಯಗಳಿಗೆ ತಿರುವು ನೀಡಿದ ಆಲ್‌ರೌಂಡರ್. ೨೦೦೮ರಲ್ಲಿ ಭಾರತ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಸೈಮಂಡ್ಸ್ ಸಿಡಿಸಿದ ಅಜೇಯ ೧೬೨ ರನ್ ನೆರವಿನಿಂದ ಆಸ್ಟೆçÃಲಿಯಾ ೧೨೨ ರನ್‌ಗಳ ಜಯ ಗಳಿಸಿತ್ತು. ಈ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಹಾಗೂ ಸೈಮಂಡ್ಸ್ ನಡುವೆ ನಡೆದ ‘ಮಂಕಿಗೇಟ್ʼ ಪ್ರಕರಣ ಕ್ರಿಕೆಟ್ ಜಗತ್ತಿನ ಅತ್ಯಂತ ಕೆಟ್ಟ ಪ್ರಕರಣವಾಗಿ ದಾಖಲಾಯಿತು. ಹರ್ಭಜನ್ ಸಿಂಗ್ ಅವರು ತನ್ನನ್ನು “ಮಂಕಿ” ಎಂದು ನಿಂದಿಸಿದ್ದಾರೆ ಎಂದು ಸೈಮಂಡ್ಸ್ ಮ್ಯಾಚ್ ರೆಫರಿಗೆ ದೂರು ನೀಡಿದ್ದರು. ವಿಚಾರಣೆ ನಡೆದು ಹರ್ಭಜನ್ ಸಿಂಗ್ ಅವರಿಗೆ ಮೂರು ಪಂದ್ಯಗಳ ನಿಷೇಧ ಹೇರಲಾಯಿತು. ಇದರಿಂದ ಕುಪಿತಗೊಂಡ ಭಾರತ ತಂಡ ಪ್ರವಾಸ ಕೈಬಿಟ್ಟು ತಾಯ್ನಾಡಿಗೆ ಹಿಂದಿರುಗುವ ಎಚ್ಚರಿಕೆ ನೀಡಿತು. ಆಗ ಶಿಕ್ಷೆಯನ್ನು ಕಡಿಮೆಗೊಳಿಸಿದ ಐಸಿಸಿ ಶಿಸ್ತು ಸಮಿತಿ ಹರ್ಭಜನ್ ಅವರು ಪಂದ್ಯ ಶುಲ್ಕದಲ್ಲಿ ಶೇ. ೫೦ರಷ್ಟು ದಂಡ ತೆರಬೇಕಾಯಿತು.
ಏಕದಿನ ಕ್ರಿಕೆಟ್‌ನಲ್ಲೂ ಅದ್ಭುತ ಸಾಧನೆ ಮಾಡಿರುವ ಸೈಮಂಡ್ಸ್ ೧೯೮ ಏಕದಿನ ಪಂದ್ಯಗಳನ್ನಾಡಿ, ೫೦೮೮ ರನ್ ಹಾಗೂ ೧೩೩ ವಿಕೆಟ್ ಗಳಿಸಿರುತ್ತಾರೆ. ಆಸ್ಟೆçÃಲಿಯಾ ತಂಡ ೨೦೦೩ ಮತ್ತು ೨೦೦೭ರ ವಿಶ್ವಕಪ್ ಗೆಲ್ಲುವಲ್ಲಿ ಸೈಮಂಡ್ಸ್ ಅವರ ಪಾತ್ರ ಪ್ರಮುಖವಾಗಿತ್ತು. ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ ಸೈಮಂಡ್ಸ್ ಈ ಎರಡು ವಿಶ್ವಕಪ್ ಜಯದ ಸೂತ್ರಧಾರರೆನಿಸಿದ್ದರು. ೨೦೦೩ರ ವಿಶ್ವಕಪ್‌ನಲ್ಲಿ ವಾಸಿಂ ಅಕ್ರಮ್ ನಾಯಕತ್ವದ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ೧೪೩ ರನ್ ಸಿಡಿಸುವ ಮೂಲಕ ವಿಶ್ವಕಪ್‌ಗೆ ದಿಟ್ಟ ಹೆಜ್ಜೆ ಇಟ್ಟರು. ೧೨೫ ಎಸೆತಗಳನ್ನು ಎದುರಿಸಿದ ಸೈಮಂಡ್ಸ್ ಅವರ ಇನಿಂಗ್ಸ್ನಲ್ಲಿ ೧೮ ಬೌಂಡರಿ ಮತ್ತು ಎರಡು ಸಿಕ್ಸರ್ ಸೇರಿತ್ತು. ಆ ಸಮಯದಲ್ಲಿ ಆಸ್ಟೆçÃಲಿಯಾ ಪರ ವಿಶ್ವಕಪ್‌ನಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು. ಸೆಮಿಫೈನಲ್ ಪಂದ್ಯದಲ್ಲಿ ಆಸ್ಟೆçÃಲಿಯಾ, ಒಂದು ಹಂತದಲ್ಲಿ ೫೩ ರನ್‌ಗೆ ೩ ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಅಂಗಳಕ್ಕಿಳಿದ ಸೈಮಂಡ್ಸ್, ಗಳಿಸಿದ ೯೧ ರನ್ ನೆರವಿನಿಂದ ಆಸೀಸ್ ಜಯ ಗಳಿಸಿತ್ತು. ೨೦೦೭ರ ವಿಶ್ವಕಪ್‌ನಲ್ಲಿ ಆಸ್ಟೆçÃಲಿಯಾ ತಂಡಕ್ಕೆ ಪ್ರಶಸ್ತಿ ಗೆಲ್ಲಲು ಹೆಚ್ಚು ಪರಿಶ್ರಮ ಪಡಬೇಕಾಗಿರಲಿಲ್ಲ. ಲೀಗ್ ಹಂತದ ಪಂದ್ಯಗಳಲ್ಲಿ ಸುಲಭವಾಗಿ ಜಯ ಗಳಿಸಿ ಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸುವ ಮೂಲಕ ಸೈಮಂಡ್ಸ್ ಎರಡನೇ ವಿಶ್ವಕಪ್‌ಗೆ ಮುತ್ತಿಟ್ಟರು. ಸೈಮಂಡ್ಸ್ ಅಂಗಳದಲ್ಲಿರುವಾಗ ಸಿಂಗಲ್ಸ್ ಬಗ್ಗೆ ಹೆಚ್ಚು ಯೋಚಿಸದೆ ಬೌಂಡರಿಯ ಬಗ್ಗೆ ಗಮನ ಹರಿಸುತ್ತಿದ್ದರು. ಸುಲಭವಾಗಿ ಬೌಂಡರಿ ಗಳಿಸುವ ಸೈಮಂಡ್ಸ್ ಎದುರಾಳಿ ತಂಡವನ್ನು ದುಃಸ್ವಪ್ನವಾಗಿ ಕಾಡುತ್ತಿದ್ದರು. ಅಷ್ಟೇ ಅಲ್ಲ ಅದ್ಭುತ ಕ್ಯಾಚ್‌ಗಳನ್ನು ಕಬಳಿಸುವುದು ಮತ್ತು ಪಿಚ್ ಪ್ರವೇಶಿಸಿದ ಕ್ರಿಕೆಟ್‌ನ ತುಂಟ ಅಭಿಮಾನಿಗಳನ್ನು ಹಿಡಿದು ಹೊರದಬ್ಬುವಲ್ಲಿಯೂ ಸೈಮಂಡ್ಸ್ ನಿಸ್ಸೀಮರು.
ಟಿ-೨೦ ಕ್ರಿಕೆಟ್‌ನಲ್ಲೂ ಸೈಮಂಡ್ಸ್ ಅವರ ಪ್ರವೇಶ ಅದ್ಭುತವಾಗಿಯೇ ಪ್ರವೇಶ ಕಂಡಿದ್ದರು. ೨೦೦೪ರಲ್ಲಿ ಮಿಡ್ಲ್ ಸೆಕ್ಸ್ ವಿರುದ್ಧದ ಟಿ-೨೦ ಪಂದ್ಯದಲ್ಲಿ ಸೈಮಂಡ್ಸ್ ೩೪ ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ೨೦೧೩ರಲ್ಲಿ ಕ್ರಿಸ್ ಗೇಲ್ ಈ ದಾಖಲೆಯನ್ನು ಮುರಿದರು, ಬೆನ್‌ಸ್ಟೋಕ್ಸ್ ಕೂಡ ಸೈಮಂಡ್ಸ್ ಅವರ ೧೬ ಸಿಕ್ಸರ್‌ಗಳ ದಾಖಲೆಯನ್ನು ಮುರಿದರು.

ಪ್ರೇಕ್ಷಕರಿಂದ ನಿಂದನೆ
ತಮ್ಮ ದೇಶದ ತಂಡವೇ ಗೆಲ್ಲಬೇಕು, ನಮಗೆ ಇಷ್ಟವಾದ ಆಟಗಾರರೇ ಆಡಬೇಕು. ಎದುರಾಳಿಗಳಿರುವುದೇ ಸೋಲಲಿಕ್ಕೆ ಎಂಬ ಕೆಟ್ಟ ನಿಲುವನ್ನು ಹೊಂದಿರುವ ಪ್ರೇಕ್ಷಕರು ಜಗತ್ತಿನ ಎಲ್ಲ ಭಾಗಗಳಲ್ಲೂ ಕಾಣಸಿಗುತ್ತಾರೆ. ಮನೆಯಂಗಳಕ್ಕೆ ಪ್ರವಾಸಕ್ಕೆ ಬಂದ ವಿದೇಶಿ ಆಟಗಾರರನ್ನು ಗುರಿಯಿಟ್ಟುಕೊಂಡು ಟೀಕೆ ಮಾಡುವವರಿದ್ದಾರೆ, ಸೈಮಂಡ್ಸ್ ಅವರ ಕೇಶ ವಿನ್ಯಾಸ, ಅವರು ತುಟಿಗೆ ಬಳಸುವ ಕ್ರೀಮ್ ಇವುಗಳಿಂದಾಗಿ ಅವರು ವಿಭಿನ್ನವಾಗಿ ಕಾಣುತ್ತಾರೆ. ಆಸ್ಟೆçÃಲಿಯಾ ಕ್ರಿಕೆಟ್ ತಂಡದ ಆಟಗಾರರು ಮತ್ತು ಅಲ್ಲಿಯ ಪ್ರೇಕ್ಷಕರು ಪ್ರವಾಸಿ ತಂಡಗಳ ಆಟಗಾರರನ್ನು ಅವಾಚ್ಯವಾಗಿ ನಿಂದಿಸುವುದು ಸಾಮಾನ್ಯವಾಗಿರುತ್ತದೆ. ಇದು ಆಸ್ಟೆçÃಲಿಯಾ ಕ್ರಿಕೆಟ್‌ನ ಅವಿಭಾಜ್ಯ ಅಂಗ ಎಂಬ ರೀತಿಯಲ್ಲಿ ಅಲ್ಲಿಯ ಆಟಗಾರರು ಮತ್ತು ಪ್ರೇಕ್ಷಕರು ಅನುಸರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇತರ ರಾಷ್ಟçಗಳು ಈ ನಿಂದನೆ ಮಾತುಗಳನ್ನಾಡುವುದು, ರೇಗಿಸುವುದನ್ನು ತಮ್ಮ ಅಸ್ತçವನ್ನಾಗಿ ಮಾಡಿಕೊಂಡಿವೆ. ಆಸ್ಟೆçÃಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಸೈಮಂಡ್ಸ್ ಅವರು ಅಂಗಳಕ್ಕಿಳಿದಾಗ ಪ್ರೇಕ್ಷಕರಲ್ಲಿ ಕೆಲವರು “ಮಂಗ” ಎಂದು ನಿಂದಿಸಿದ್ದರು. ಈ ಬಗ್ಗೆ ವಿರೋಧ ವ್ಯಕ್ತವಾದಾಗ ಅದು ರಾಮನ ಭಂಟ ಹನುಮಂತನ ನಾಮಸ್ಮರಣೆ ಎನ್ನಲಾಗಿತ್ತು. ಆದರೆ ಅದು ಇತರ ಕ್ರೀಡಾಂಗಣಗಳಲ್ಲೂ ಪುನರಾವರ್ತನೆಗೊಂಡಾಗ ಸೈಮಂಡ್ಸ್ ಅವರನ್ನು ಗುರಿಯಾಗಿಸಿಕೊಂಡು ನಿಂದಿಸುತ್ತಿರುವುದು ಎಂಬುದು ಸ್ಪಷ್ಟವಾಗಿತ್ತು. ಈ ಎಲ್ಲ ನಿಂದನೆಯ ನಡುವೆಯೂ ಒಬ್ಬ ಚಾಂಪಿಯನ್ ಆಟಗಾರ ಶತಕ ಸಿಡಿಸಿ ಕುಸಿದ ತಂಡಕ್ಕೆ ನೆರವಾದುದು ಅದ್ಭುತ.

ಸದಾ ಕಾಡುವ ಮಂಕಿ ಗೇಟ್ ಪ್ರಕರಣ
ಎದುರಿಗಿರುವ ವ್ಯಕ್ತಿಗೆ ನಮ್ಮ ಭಾಷೆ ಅರ್ಥವಾಗುವುದಿಲ್ಲ ಎಂದು ನಾವು ಏನೆಲ್ಲ ಮಾತನಾಡಬಾರದು. ಎರಡು ಅವಾಚ್ಯ ಪದಗಳಲ್ಲಿ ಒಂದು ಬಹಳ ಕೀಳಾಗಿದ್ದು, ಇನ್ನೊಂದು ಸಾಮಾನ್ಯವಾಗಿದ್ದರೆ, ಕೀಳು ಪದ ಬಳಸಿದವ ಯಾವ ರೀತಿಯಲ್ಲಿ ತಪ್ಪಿಸಿಕೊಳ್ಳಬಲ್ಲ ಎಂಬುದಕ್ಕೆ ೨೦೦೮ರ “ಮಂಕಿ ಗೇಟ್” ಪ್ರಕರಣ ಉತ್ತಮ ನಿದರ್ಶನ. ೨೦೦೮ರಲ್ಲಿ ಸಿಡ್ನಿಯಲ್ಲಿ ನಡೆದ ಭಾರತ ಹಾಗೂ ಆಸ್ಟೆçÃಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೈಮಂಡ್ಸ್ ಮತ್ತು ಹರ್ಭಜನ್ ಸಿಂಗ್ ವಿವಾದದ ಕೇಂದ್ರವಾದರು. ಸೈಮಂಡ್ಸ್ ಎರಡನೇ ಟೆಸ್ಟ್ ಶತಕ (೧೬೨*) ಸಿಡಿಸಿ ತಂಡಕ್ಕೆ ನೆರವಾದರು. ಈ ಟೆಸ್ಟ್ ಪಂದ್ಯಲ್ಲಿ ಸಾಕಷ್ಟು ಮಾತಿನ ಚಕಮಕಿ ನಡೆದಿತ್ತು. ಆದರೆ ಹರ್ಭಜನ್ ಸಿಂಗ್ ಹೇಳಿದ್ದರೆನ್ನಲಾದ “ಮಂಕಿ” ಅಂದರೆ ಮಂಗ ಎಂದು ಸೈಮಂಡ್ಸ್ ಅವರನ್ನು ಕರೆದಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇದರಲ್ಲಿ ಹರ್ಭಜನ್ ಸಿಂಗ್ ತಪ್ಪಿತಸ್ಥರೆಂದು, ಅವರಿಗೆ ಮೂರು ಪಂದ್ಯಗಳಿಗೆ ನಿಷೇಧ ಹೇರಬೇಕೆಂದು ತೀರ್ಮಾನಿಸಲಾಯಿತು. ಹರ್ಭಜನ್ ಸಿಂಗ್ ಹೇಳಿರುವುದೇನು, ಸೈಮಂಡ್ಸ್ಗೆ ಕೇಳಿರುವುದೇನು ಎಂಬುದು ತೀರ್ಪಿನ ನಂತರ ಅನೇಕ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. “ತೇರಿ ಮಾ ಕಿ”…ಮತ್ತು ‘ಮಂಕಿʼ ಎಂಬ ಎರಡು ನಿಂದನೆಯ ಪದಗಳ ಬಗ್ಗೆ ಚರ್ಚೆ ನಡೆದಿದೆ. ಹರ್ಭಜನ್ ಸಿಂಗ್ ಅವರ ಪರ ವಕೀಲ ವಿ.ಆರ್. ಮನೋಹರ್ ವಿಚಾರಣೆ ವೇಳೆ ಸೈಮಂಡ್ಸ್ ಅವರಿಗೆ ಕೇಳಿದ ಪ್ರಶ್ನೆ ಹರ್ಭಜನ್ ನಿಜವಾಗಿಯೂ ಬಳಸಿದ ಪದ ಯಾವುದೆಂಬುದರ ಬಗ್ಗೆ ಯೋಚಿಸುವಂತೆ ಮಾಡುತ್ತದೆ. “ನಿಮಗೆ ಬಳಸಿದ ನಿಂದನೆಯ ಪದಗಳಲ್ಲಿ “ತೇರಿ ಮಾ ಕಿʼ’ ಇದ್ದಿತ್ತೇ? ಎಂದು ಮನೋಹರ್ ಅವರು ಸೈಮಂಡ್ಸ್ ಅವರಲ್ಲಿ ವಿಚಾರಣೆ ವೇಳೆ ಕೇಳುತ್ತಾರೆ, ಇರಬಹುದು. ಅದರೆ ನನಗೆ ಬಳಸಿದ ಭಾಷೆಯ ಬಗ್ಗೆ ಗೊತ್ತಿಲ್ಲ ಎಂದರು. ಕೊನೆಗೆ ತೇರಿ ಮಾ ಕಿಯನ್ನು ಮಂಕಿ ಮಾಡಿ ಪ್ರಕರಣವನ್ನು ತಿಳಿಗೊಳಿಸಲಾಗಿತ್ತು. ಹರ್ಭಜನ್ ಸಿಂಗ್ ಈ ರೀತಿಯಲ್ಲಿ ಉತ್ತರ ಭಾರತ ಬೈಗುಳದ ಕೊನೆಯ ಆಯ್ಕೆಯ ಪದವನ್ನು ಬಳಸಬೇಕಾದರೆ ಆಸ್ಟೆçÃಲಿಯಾದ ಆಟಗಾರರು ಯಾವ ರೀತಿಯ ಪದವನ್ನು ಬಳಸಿರಬಹುದು ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. “ನಿನ್ನ ತಲೆಯ ಮೇಲೆ ತರಡು ಇದೆ” ಎಂದು ಟರ್ಬನ್ ಧರಿಸಿದ್ದ ಸಿಖ್‌ಗೆ ಹೇಳಿದರೆ ಎಷ್ಟು ಸಿಟ್ಟು ಬರಲಿಕ್ಕಿಲ್ಲ, ಈ ಪ್ರಕರಣದ ಸತ್ಯಾಂಶವನ್ನು ಹರ್ಭಜನ್ ಸಿಂಗ್ ನಿವೃತ್ತಿಯ ನಂತರ ಹೇಳಿಕೊಂಡಿದ್ದರು. ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ಇದೆಲ್ಲ ಅಂಗಳದಲ್ಲಿ ನಡೆದ ಘಟನೆ, ಆದರೆ ಈಗ ಸೈಮಂಡ್ಸ್ ನಮ್ಮ ಮುಂದಿಲ್ಲ. ನೆನಪಿನಂಗಳದಲ್ಲಿ ಉಳಿಯುವುದು ಅವರು ಜಾಗತಿಕ ಕ್ರಿಕೆಟ್‌ಗೆ ನೀಡಿದ ಸಾಧನೆ ಮಾತ್ರ.

ಮೀನು ಹಿಡಿಯಲು ಹೋಗಿ ತಂಡದಿಂದ ಹೊರಕ್ಕೆ
ಕೆಲವೊಂದು ಹವ್ಯಾಸಗಳು ನಮ್ಮ ಬದುಕಿಗೆ ಅಡ್ಡಿಯನ್ನುಂಟು ಮಾಡುತ್ತವೆ. ಜವಾಬ್ದಾರಿಯನ್ನು ಮರೆತು ಹವ್ಯಾಸದ ಬೆನ್ನು ಹಿಡಿದರೆ ಏನಾಗುತ್ತದೆ ಎಂಬುದಕ್ಕೆ ಸೈಮಂಡ್ಸ್ ಅವರ ಬದುಕಿನ ಘಟನೆಯೊಂದು ಉತ್ತಮ ನಿದರ್ಶನ. ೨೦೦೮ರ ಆಗಸ್ಟ್ನಲ್ಲಿ ಬಾಂಗ್ಲಾ ದೇಶದ ವಿರುದ್ಧ ಸರಣಿಯನ್ನಾಡಲು ಸೈಮಂಡ್ಸ್ ಅವರನ್ನು ಡಾರ್ವಿನ್‌ಗೆ ಕಳುಹಿಸಲಾಗಿತ್ತು. ಆದರೆ ತಂಡದ ಸಭೆಯಲ್ಲಿ ಪಾಲ್ಗೊಳ್ಳುವ ಬದಲು ಸೈಮಂಡ್ಸ್ ಮೀನು ಹಿಡಿಯಲು ಹೋಗಿದ್ದರು. ಇದರಿಂದಾಗಿ ತಂಡದ ಆಡಳಿತ ಮಂಡಳಿ ಅಶಿಸ್ತಿನಿಂದ ವರ್ತಿಸಿದ ಸೈಮಂಡ್ಸ್ ಅವರನ್ನು ಮನೆಗೆ ಕಳುಹಿಸಿತ್ತು.
ಹೀಗೆ ಸೈಮಂಡ್ಸ್ ಅವರ ಕ್ರಿಕೆಟ್ ಬದುಕು ವೈವಿಧ್ಯತೆಯಿಂದ ಕೂಡಿತ್ತು. ತಂಡ ವೈಫಲ್ಯದ ಹಾದಿ ಹಿಡಿದಾಗ ಎಚ್ಚರಿಕೆಯಿಂದ ಜವಾಬ್ದಾರಿಯುತ ಆಟವಾಡಿ ಮೆಚ್ಚುಗೆಗೆ ಪಾತ್ರವಾಗಿದ್ದ ಸೈಮಂಡ್ಸ್ ಭಾರತ ತಂಡದೊAದಿಗೆ ಟೀಕೆಯ ವಿವಾದದಲ್ಲಿ ಕೇಂದ್ರವಾಗಿದ್ದರೂ ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ನಂತರ ಬಿಗ್ ಬಾಸ್‌ನಲ್ಲೂ ಕಾಣಿಸಿಕೊಂಡಿದ್ದರು. ವೀಕ್ಷಕ ವಿವರಣೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇನ್ನು ಆಂಡ್ರುö್ಯ ಸೈಮಂಡ್ಸ್ ನೆನಪಿನಂಗಳದಲ್ಲಿ ಮಾತ್ರ ಉಳಿಯಲಿದ್ದಾರೆ.
ಕೊನೆಗೆ ಉಳಿಯುವುದು ಪ್ರೀತಿ ಮಾತ್ರ
ಆಂಡ್ರುö್ಯ ಸೈಮಂಡ್ಸ್ ಅವರು ಶನಿವಾರ ಕಾರಿನಲ್ಲಿ ಪ್ರಯಾಣಿಸುವಾಗ ಎರಡು ನಾಯಿ ಮರಿಗಳೊಂದಿಗೆ ತೆರಳಿದ್ದರು. ಕಾರು ಅಪಘಾತಕ್ಕೀಡಾದಾಗ ಎರಡೂ ನಾಯಿ ಮರಿಗಳು ಸಾವಿನಿಂದ ಪಾರಾಗಿದ್ದವು, ಆದರೆ ಸೈಮಂಡ್ಸ್ ಇಹಲೋಕವನ್ನು ಅಗಲಿದರು. ತಮ್ಮ ಒಡೆಯ ಸಾವಿಗೀಡಾದ ಸಂಗತಿ ಆ ನಾಯಿ ಮರಿಗಳಿಗೆ ಗೊತ್ತಾಗಿರಬೇಕು. ಅವುಗಳು ಅಪಘಾತದ ಸ್ಥಳದಿಂದ ಹಿಂದಿರುಗಲು ನಿರಾಕರಿಸಿದವು ಎಂದು ಆಸ್ಟೆçÃಲಿಯಾದ ಮಾಧ್ಯಮಗಳು ವರದಿ ಮಾಡಿವೆ. ನಾಯಿಗೆ ಇರುವ ನಿಯತ್ತು ಇತರ ಜೀವಿಗಳಲ್ಲಿ ಕಾಣುವುದು ಕಷ್ಟ.