ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಭಾರತದಿಂದ ದೂರದ ವಿದೇಶದಲ್ಲಿ ಅದರಲ್ಲೂ ವಿಶ್ವದ ಯಾವುದೇ ಸಂಸತ್ತಿನಲ್ಲಿ ಸಂಸತ್ ಸದಸ್ಯನೊಬ್ಬ ಕನ್ನಡದಲ್ಲಿ ಮಾತನಾಡಿದ ಮೊದಲ ನಿದರ್ಶನ ಇತಿಹಾಸದಲ್ಲಿ ದಾಖಲಾಯಿತು.

ಅಂದ ಹಾಗೆ ಯಾರು ಈ ಚಂದ್ರ ಆರ್ಯ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನೆಟ್ಟಿಗರು ಅಂತರಜಾಲದಲ್ಲಿ ಜಾಲಾಡಿಬಿಟ್ಟರು. ಯಾರಿಗೂ ಸಿಗದ ಮಾಹಿತಿಯೆಂದರೆ ಚಂದ್ರ ಆರ್ಯ ಮೂಲತಃ ರಕ್ತಗತವಾಗಿಯೇ ನಾಯಕತ್ವದ ಗುಣಗಳನ್ನು ಗಳಿಸಿಕೊಂಡು ಬಂದವರು. ಅವರ ಕುಟುಂಬವೇ ರಾಜಕಾರಣದ ಹಿನ್ನೆಲೆಯನ್ನು ಹೊಂದಿದೆ. ರಾಷ್ಟçಪ್ರೇಮ, ಉದಾತ್ತ ಮೌಲ್ಯಗಳ ತಳಹದಿ ಹೊಂದಿದೆ ಎಂಬುದು. ಹೌದು. ಚಂದ್ರ ಆರ್ಯ ಅವರು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಕುಡಿ. ಶಿರಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಟಿ. ತಾರೇಗೌಡ ಅವರ ತಂಗಿ ಮೊಮ್ಮಗ.
ತಾರೇಗೌಡರು ಸ್ವಾತಂತ್ರö್ಯ ಹೋರಾಟಗಾರರಾಗಿದ್ದರು. ೧೯೫೭ರಿಂದ ೧೯೬೨ರವರೆಗೆ ಶಾಸಕರಾಗಿದ್ದರು. ರಾಜಕಾರಣದಲ್ಲಿ ಮೌಲ್ಯಗಳನ್ನು ಬಿತ್ತುತ್ತಾ ಜನಸೇವೆ ಮಾಡುತ್ತಿದ್ದರು. ಜಮೀನ್ದಾರರು ಆಗಿದ್ದ ಅವರು ಬಡವರಿಗೆ ಭೂಮಿ ಹಂಚಿಕೆ ಮಾಡಿ ತುಮಕೂರು ಭಾಗದಲ್ಲಿ ಹೆಸರುವಾಸಿಯಾಗಿದ್ದರು. ಇವರ ಇಡೀ ಕುಟುಂಬ ಸರಳ ಸಜ್ಜನಿಕೆಗೆ ಸುತ್ತಲ ಸೀಮೆಯಲ್ಲಿ ಜನರಿಂದ ಆದರಣೆ ಪಡೆದಿತ್ತು. ಇಂತಹ ಕುಟುಂಬದ ಹೆಣ್ಣುಮಗಳ ಮಗ ಗೋವಿಂದಯ್ಯ ಮತ್ತು ಜಯಲಕ್ಷö್ಮಮ್ಮ ದಂಪತಿ ಪುತ್ರರೇ ಚಂದ್ರ ಆರ್ಯ. ಇವರು ೧೯೬೩ರಲ್ಲಿ ಹುಟ್ಟಿದರು. ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾಗಿದ್ದ ತಂದೆಯವರ ಒತ್ತಾಸೆಯಂತೆ ಉತ್ತಮ ಶಿಕ್ಷಣ ಪಡೆದರು. ಚಿತ್ರದುರ್ಗದಲ್ಲಿ ಶಾಲಾ ಶಿಕ್ಷಣ ಪೂರೈಸಿ ಬಳ್ಳಾರಿಯಲ್ಲಿ ಕಾಲೇಜು ಶಿಕ್ಷಣ, ರಾಮನಗರದ ಗೌಸಿಯಾ ಕಾಲೇಜಿನಲ್ಲಿ ಇಂಜಿನಿಯರಿAಗ್, ಧಾರವಾಡದಲ್ಲಿ ಮ್ಯಾನೇಜ್‌ಮೆಂಟ್ ಶಿಕ್ಷಣ ಪಡೆದರು. ತಂದೆ ವರ್ಗಾವಣೆ ಆದಲ್ಲೆಲ್ಲಾ ಸಾಗಿ ಶಾಲಾ-ಕಾಲೇಜುಗಳನ್ನು ಬದಲಿಸಿದರೂ ಉನ್ನತ ವಿದ್ಯಾಭ್ಯಾಸಕ್ಕೆ ಯಾವುದೇ ಅಡೆತಡೆಯಾಗಲಿಲ್ಲ. ಶಿಕ್ಷಣ ಪೂರೈಸಿದ ನಂತರ ಅವರು ಕತಾರ್‌ಗೆ ತೆರಳುವ ಮೊದಲು ದೆಹಲಿಯಲ್ಲಿ ಡಿಆರ್‌ಡಿಒ ಮತ್ತು ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಕೆಲಸ ಮಾಡಿದ್ದರು. ಶಿಕ್ಷಕಿಯಾಗಿದ್ದ ಪತ್ನಿ ಸಂಗೀತಾ ಅವರು ಕೆಲಸಕ್ಕಾಗಿ ಕೆನಡಾಗೆ ತೆರಳಿದ ಕಾರಣ ಕತಾರ್‌ನಿಂದ, ಚಂದ್ರ ಆರ್ಯ ಕೆನಡಾಕ್ಕೆ ತೆರಳಿದರು. ಅಲ್ಲಿ ಅವರು ಪೂರ್ಣ ಪ್ರಮಾಣದ ರಾಜಕೀಯ ಜೀವನ ಆರಂಭಿಸಿದರು.
ಅವರಿಗೆ ಸಿದ್ಧಾಂತ್ ಎಂಬ ಮಗನಿದ್ದಾನೆ. ಅವರ ಅಣ್ಣ ಶ್ರೀನಿವಾಸ್ ತಂದೆ ಗೋವಿಂದಯ್ಯ ಅವರೊಂದಿಗೆ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಸಹೋದರಿಯರಾದ ಲೀಲಾ ಹಾಗೂ ಉಮಾದೇವಿ ಅವರು ಇಲ್ಲೇ ಇದ್ದಾರೆ. ತಾಯಿ ಜಯಲಕ್ಷö್ಮಮ್ಮ ಆರು ವರ್ಷಗಳ ಹಿಂದೆಯೇ ತೀರಿಹೋಗಿದ್ದಾರೆ. ಚಂದ್ರ ಆರ್ಯ ಕುಟುಂಬ ತಮ್ಮ ಸ್ವಗ್ರಾಮದೊಂದಿಗೆ ಇಂದಿಗೂ ಸಂಪರ್ಕ ಉಳಿಸಿಕೊಂಡಿದೆ.
ನೇಪಿಯನ್ ಪ್ರತಿನಿಧಿಸುವ ಚಂದ್ರ ಆರ್ಯ ಅವರು ೨೦೧೫ರಲ್ಲಿ ಮೊದಲ ಬಾರಿಗೆ ಕೆನಡಾದ ಸಂಸತ್ತಿಗೆ ಆಯ್ಕೆಯಾದರು ಮತ್ತು ನಂತರ ೨೦೧೯ರಲ್ಲಿ ಎರಡನೇ ಬಾರಿಗೆ ಆಯ್ಕೆಯಾದರು. ಈಗ ಅವರು ಸಂಸತ್‌ನ ಅಂತಾರಾಷ್ಟಿçÃಯ ವ್ಯಾಪಾರ ಸ್ಥಾಯಿ ಸಮಿತಿ ಸದಸ್ಯರಾಗಿದ್ದಾರೆ.