
ಬ್ರಿಟನ್‌ನಲ್ಲಿ ವಾಸಿಸುವ ಮಹಿಳೆಯೊಬ್ಬರು ಈಗ ಪ್ರಪಂಚದಾದ್ಯAತ ಸುದ್ದಿಯಲ್ಲಿದ್ದಾರೆ. ವಾಸ್ತವವಾಗಿ, ಸಣ್ಣ ಹಕ್ಕಿಯೊಂದಿಗೆ ಈಕೆ ಸ್ನೇಹಿತರಾಗಿದ್ದರು. ಇದಾದ ಬಳಿಕ ಮಹಿಳೆಯ ಕೂದಲಿನಲ್ಲಿ ಹಕ್ಕಿ ಗೂಡು ಕಟ್ಟಿತ್ತು. ಹೆಂಗಸಿನ ಕೂದಲಲ್ಲಿ ಗೂಡು ಕಟ್ಟಿಕೊಂಡು ೮೪ ದಿನಗಳ ಕಾಲ ಈ ಹಕ್ಕಿ ಅಲ್ಲಿಯೇ ಉಳಿದುಕೊಂಡಿತ್ತು ಎಂದು ತಿಳಿದರೆ ಅಚ್ಚರಿ ಆಗದೇ ಇರದು.
ಡೈಲಿ ಸ್ಟಾರ್‌ನ ಸುದ್ದಿ ಪ್ರಕಾರ, ಬ್ರಿಟನ್‌ನ ನಿವಾಸಿ ಹಾನಾ ಬೌರ್ನ್ ಟೇಲರ್ ಲಂಡನ್‌ನಿAದ ಘಾನಾಗೆ ಸ್ಥಳಾಂತರಗೊAಡಿದ್ದರು. ಇಲ್ಲಿ ಅವರಿಗೆ ಪುಟ್ಟ ಹಕ್ಕಿಯೊಂದು ಸಿಕ್ಕಿತ್ತು. ಬಳಿಕ ಇವರು ಹಕ್ಕಿಯೊಂದಿಗೆ ಸ್ನೇಹ ಬೆಳೆಸಿದ್ದರು. ಈ ಹಕ್ಕಿಯೊಂದಿಗಿನ ಹಾನಾ ಅವರ ಸ್ನೇಹ ಎಷ್ಟು ಗಾಢವಾಯಿತು ಎಂದರೆ ಅವರ ಸ್ನೇಹ ಪ್ರಪಂಚದಾದ್ಯAತ ಸುದ್ದಿಯಾಯಿತು.
ಹಾನಾ ೨೦೧೩ರಲ್ಲಿ ತನ್ನ ಪತಿಯೊಂದಿಗೆ ಘಾನಾಗೆ ತೆರಳಿದರು. ಪತಿ ರಾಬಿನ್ ತಮ್ಮ ಕೆಲಸದಲ್ಲಿ ನಿರತರಾಗಿದ್ದರಿಂದ ಹನಾಗೆ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಹನಾ ಅವರಿಗೆ ತುಂಬಾ ಒಂಟಿತನ ಕಾಡುತ್ತಿತ್ತು. ತನ್ನ ಒಂಟಿತನವನ್ನು ಹೋಗಲಾಡಿಸಲು ಹನಾ ಪ್ರಕೃತಿಯೊಂದಿಗೆ ಬೆರೆಯಲು ಮನಸ್ಸು ಆರಂಭಿಸಿದರು. ಅಷ್ಟರಲ್ಲಿ ಘಾನಾಗೆ ಚಂಡಮಾರುತ ಅಪ್ಪಳಿಸಿತು. ಈ ಚಂಡಮಾರುತದ ಸಮಯದಲ್ಲಿ, ಅವರು ಪುಟ್ಟ ಹಕ್ಕಿಯೊಂದು ನೆಲದ ಮೇಲೆ ಮಲಗಿರುವುದನ್ನು ಕಂಡುಕೊAಡರು. ಈ ಹಕ್ಕಿ ತನ್ನ ಹಿಂಡಿನಿAದ ಬೇರ್ಪಟ್ಟಿದೆ ಎಂದು ಹಾನಾ ಹೇಳುತ್ತಾರೆ. ಚಂಡಮಾರುತದಲ್ಲಿ ಹಕ್ಕಿಯ ಗೂಡು ಕೂಡ ನಾಶವಾಗಿತ್ತು. ಹಾನಾ ಈ ಪಕ್ಷಿಯನ್ನು ಕಂಡುಕೊAಡಾಗ, ಅದು ತುಂಬಾ ದುರ್ಬಲವಾಗಿತ್ತಂತೆೆ.
ಇನ್ನು ಪಕ್ಷಿ ಕುರಿತಂತೆ ಹಾನಾ ತಜ್ಞರೊಂದಿಗೆ ಮಾತನಾಡಿದಾಗ, ಕನಿಷ್ಠ ೧೨ ವಾರಗಳ ನಂತರವೇ ಪಕ್ಷಿಯನ್ನು ಕಾಡಿಗೆ ಕಳುಹಿಸಬಹುದು ಎಂದು ಅವರು ಹೇಳಿದ್ದರಂತೆ. ಇದಾದ ನಂತರ ಹಾನಾ ಈ ಹಕ್ಕಿಯ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಹಕ್ಕಿಗಾಗಿ ಹಾನಾ ರಟ್ಟಿನ ಗೂಡನ್ನೂ ನಿರ್ಮಿಸಿದ್ದರು. ಈ ಸಂದರ್ಭದಲ್ಲಿ ಹಕ್ಕಿ ಕೂಡಾ ಹಾನಾಳನ್ನು ತುಂಬಾ ಹಚ್ಚಿಕೊಂಡಿತ್ತು. ವಿಚಿತ್ರವಾದ ಸಂಗತಿಯೆAದರೆ, ಸದಾ ಹಾನಾ ಜೊತೆಗೆ ಕಾಲ ಕಳೆಯುತ್ತಿದ್ದ ಹಕ್ಕಿ ಆಕೆ ಮಲಗಿದ್ದಾಗ ಅವರ ಕೂದಲಿನಲ್ಲೇ ಗೂಡು ಕಟ್ಟಲು ಆರಂಭಿಸಿತ್ತು. ಪಕ್ಷಿ ತಮ್ಮ ಉದ್ದನೆಯ ಕೂದಲನ್ನು ಗೂಡಿನಂತೆ ಮಾಡಿ ಒಳಗೆ ಪ್ರವೇಶಿಸುತ್ತಿತ್ತು. ಇದು ಮುಂದುವರೆಯಿತು. ಹಾನಾ ಕೂಡ ಇದೊಂದು ಸುಂದರ ಅನುಭವ ಎಂದು ಹಕ್ಕಿಗೆ ತಮ್ಮ ಕೂದಲಿನಲ್ಲೇ ಸೂರು ನೀಡಿದರು. ಈಗ ಆಕೆ ತಮ್ಮ ಅನುಭವವನ್ನು ಹಂಚಿಕೊAಡಿದ್ದಾರೆ.