24.7 C
Bengaluru
Friday, March 17, 2023
spot_img

ಕರ್ನಾಟಕಕ್ಕೆ ದೀದಿ ಪಕ್ಷ ಲಗ್ಗೆ!

ವಿವಿಧ ಪಕ್ಷಗಳ ನಾಯಕರ ಸೆಳೆಯಲು ಪ್ರಶಾಂತ್ ಕಿಶೋರ್ ಪ್ರಯತ್ನ

ಮೋದಿ ಮುಂದೆ ದೀದಿ ಧೂಳೀಪಟ ಎಂದವರ ಮಾತನ್ನು ಸುಳ್ಳು ಮಾಡಿದವರಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್ ಪ್ರಮುಖರು. ಪ್ರಶಾಂತ್ ಈ ಮೊದಲು ಮೋದಿ ಅಡ್ಡಾದಲ್ಲೇ ಕೆಲಸ ಮಾಡಿ ಬಂದವರು ಅನ್ನುವುದನ್ನು ಹೊಸದಾಗಿ ಏನೂ ಹೇಳಬೇಕಿಲ್ಲ. ಹಾಗಾಗೆ ಒಂದು ಮಟ್ಟದಲ್ಲಿ ಪ್ರಶಾಂತ್‌ಗಿದ್ದ ವರ್ಚಸ್ಸು ದೀದಿ ಗೆಲುವಿನ ಬಳಿಕ ಇಮ್ಮಡಿ ಆಗಿದೆ. ಅದೇ ರೀತಿ ಟಿಎಂಸಿ ಪಕ್ಷಕ್ಕೂ ಬಲ ಬಂದಂತಾಗಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧವೇ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಆದರೆ ಅದಕ್ಕೂ ಮುನ್ನ ಒಂದಷ್ಟು ಸಿದ್ದತೆಗಳಾಗಬೇಕಿದೆ. ಅದಕ್ಕಾಗಿ ದೀದಿ ಪಶ್ಚಿಮ ಬಂಗಾಳದ ಆಚೆಗೂ ಒಂದೊಂದೇ ರಾಜ್ಯದಲ್ಲಿ ಪಕ್ಷವನ್ನು ವಿಸ್ತರಣೆ ಮಾಡುತ್ತಾ ಬಂದಿದ್ದಾರೆ. ಇದರ ಭಾಗವಾಗಿ ಕರ್ನಾಟಕಕ್ಕೂ ಲಗ್ಗೆ ಇಡಲು ಮುಂದಾಗಿದ್ದಾರೆ.

ರಾಜ್ಯದಲ್ಲಿ ಬೇರೂರಿರುವ ಬಿಜೆಪಿ, ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಹೊಸ ಪಕ್ಷವೊಂದು ಜನ್ಮ ತಾಳಲು ಹೊರಟಿದ್ದು ಎಂಟ್ರಿಗೂ ಮುನ್ನವೇ ಮಿಂಚಿನ ಸಂಚಲನ ಸೃಷ್ಟಿಸಿದೆ. ಕಾಲಿಡುವ ಮುನ್ನವೇ ರಾಜ್ಯ ರಾಜಕೀಯ ನಾಯಕರ ನಿದ್ದೆಗೆಡಿಸಿ ಸದ್ದಿಲ್ಲದೇ ಕರ್ನಾಟಕದಲ್ಲಿ ಬೇರೂರಲು ತಯಾರಾಗುತ್ತಿರುವ ಪಕ್ಷ ಬೇರಾವುದೂ ಅಲ್ಲ. ಅದು ಬೆಂಗಾಲ್ ಟೈಗರ್ ಎಂದೇ ಬಿಂಬಿತವಾಗಿರುವ ದೀದಿಯ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ).
ಅಚ್ಚರಿಯೆನಿಸಿದರೂ ಈ ಸುದ್ದಿ ನಿಖರ ಹಾಗೂ ಸತ್ಯ. ಅಸಲಿಗೆ ಟಿಎಂಸಿ ಪಕ್ಷ ಹೆಸರಿನಂತೆ ತೃಣವಾಗಿಲ್ಲ. ಅಗಾಧವಾಗಿ ಬೆಳೆಯುವ ಕಸರತ್ತು ನಡೆಸುತ್ತಿದ್ದು ಟಿಎಂಸಿಯ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಇದೀಗ ರಾಜ್ಯದಲ್ಲೂ ಪಕ್ಷ ಸ್ಥಾಪಿಸುವ ಕೆಲಸವನ್ನು ತೆರೆಮರೆಯಲ್ಲಿ ಆರಂಭಿಸಿದ್ದಾರೆ. ಅಷ್ಟಕ್ಕೂ ದೀದಿಯವರ ಈ ಪ್ರಯತ್ನಕ್ಕೆ ಮೂಲ ಕಾರಣ ಅಂದರೆ ಅದು ಈ ದೇಶದ ಪ್ರಧಾನಿ ನರೇಂದ್ರ ಮೋದಿ.
ಭಾರತ ದೇಶದ ಅಗ್ರಗಣ್ಯ ನಾಯಕ ಎಂದೇ ಬಿಂಬಿತವಾಗಿರುವ ಪ್ರಧಾನಿ ಮೋದಿ ವಿರುದ್ಧ ಯಾರೂ ನಿಲ್ಲಲಾರರು ಹಾಗೂ ಮತ್ಯಾರೂ ಗೆಲ್ಲಲಾರರು ಅನ್ನೋ ಮಾತನ್ನು ಏಕಾಏಕಿ ಸುಳ್ಳಾಗಿಸಿದ್ದು ಎಂದರೆ ಅದು ಪಶ್ಚಿಮ ಬಂಗಾಳದ ದೀದಿ ಮಮತಾ ಬ್ಯಾನರ್ಜಿ. ಇದೇ ವರ್ಷದಾರಂಭದಲ್ಲಿ ಪಶ್ಚಿಮ ಬಂಗಾಳದ ಚುನಾವಣಾ ಕಣ ತಾರಕಕ್ಕೇರಿತ್ತು. ಇದೇ ಸಮಯದಲ್ಲೇ ಪ್ರಧಾನವಾಗಿ ಸುವೇಂದು ಅಧಿಕಾರಿ ಸೇರಿದಂತೆ ಅನೇಕ ಟಿಎಂಸಿ ನಾಯಕರು ಪಕ್ಷಕ್ಕೆ ಗುಡ್ ಬೈ ಹೇಳಿ ದೀದಿ ವಿರುದ್ಧವೇ ಕಣಕ್ಕಿಳಿದಿದ್ದರು. ಅಲ್ಲಿಂದ ರಂಗೇರಿದ್ದ ಚುನಾವಣಾ ಅಖಾಡದಲ್ಲಿ ಮೋದಿ ಹಾಗೂ ದೀದಿ ಸಮರ ಅಂತಾರಾಷ್ಟಿçÃಯ ಮಟ್ಟದಲ್ಲಿ ಸೌಂಡ್ ಆಗಿತ್ತು. ಗೆಲುವು ಯಾರದ್ದು ಅನ್ನುವ ಕುತೂಹಲ ಆ ರಾಜ್ಯದ ಮತದಾರರನ್ನು ಮಾತ್ರವಲ್ಲ ಇಡೀ ದೇಶದ ಮತದಾರರನ್ನು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿತ್ತು. ಆ ಮಟ್ಟಿಗಿದ್ದ ಹಣಾಹಣಿಯಲ್ಲಿ ದೀದಿ ಪಕ್ಷದ ಎದುರು ಮೋದಿ ಹಾಗೂ ಬಿಜೆಪಿ ಪಕ್ಷ ಮಂಡಿಯೂರಲೇ ಬೇಕಾಯ್ತು. ಆದರೆ ಇಷಾಗುತ್ತ್ತಿದ್ದ ಹಾಗೆ ಟಿಎಂಸಿ ಪಕ್ಷಕ್ಕಿಂತಲೂ ದೀದಿ ಜನಪ್ರಿಯರಾಗಿಬಿಟ್ಟಿದ್ದರು. ಮೋದಿ ಎದುರಾಳಿ ಯಾರೂ ಇಲ್ಲ ಅನ್ನುತ್ತಿದ್ದವರಿಗೆ ಶುಭ್ರ ಸೀರೆಯ ನಾರಿಯೊಬ್ಬರು ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ಕೊಟ್ಟರು.


ಮೋದಿ ವಿರುದ್ಧ ಹೋರಾಡಲಾಗದೇ ಶಸ್ತಾçಸ್ತçಗಳನ್ನೆಲ್ಲಾ ಕೈಚೆಲ್ಲಿ ಕೂತವರೆಲ್ಲಾ ದೀದಿ ಕಡೆ ಕತ್ತು ತಿರುಗಿಸಿ ನೋಡುವಂತಾಯಿತು. ಇತ್ತ ಪ್ರಚಂಡ ಮೋದಿ ವಿರುದ್ಧ ಸೆರಗು ಕಟ್ಟಿ ಗೆದ್ದ ದೀದಿ ಮೋದಿಗೆ ಪರ್ಯಾಯ ನಾಯಕಿಯಾಗಿ ಬಿಂಬಿತವಾಗುತ್ತಿದ್ದAತೆ ದೀದಿಯ ಫೇಮು ಕೂಡಾ ಹೆಚ್ಚಾಗಿದೆ. ಇಷ್ಟಾಗುತ್ತಿದ್ದಂತೆ ದೀದಿಯ ಗಮ್ಯ ಕೂಡ ದೆಹಲಿ ಗದ್ದುಗೆಯ ಕಡೆಗೆ ನೆಟ್ಟಿದೆ. ಇದೆಲ್ಲದರ ನಡುವೆ ಇದೀಗ ಬಿಜೆಪಿ ಮುಖಂಡರೇ ೨೦೨೪ರ ಮಹಾ ಸಂಗ್ರಾಮದಲ್ಲಿ ಮೋದಿ ವಿರುದ್ಧ ನಿಂತು ಗೆಲ್ಲಿ ಎಂದು ಪಂಥಾಹ್ವಾನ ನೀಡುತ್ತಿದ್ದು ಇದನ್ನು ಗಂಭೀರವಾಗೇ ಪರಿಗಣಿಸಿರುವ ದೀದಿ ದೇಶಾದ್ಯಂತ ತಮ್ಮ ಟಿಎಂಪಿ ಪಕ್ಷವನ್ನು ಹಂತ ಹಂತವಾಗಿ ವಿಸ್ತರಿಸಲು ಮುಂದಾಗಿದ್ದಾರೆ. ಇನ್ನು ಇದರ ಉಸ್ತುವಾರಿ ವಹಿಸಿರುವುದು ದೀದಿ ಗೆಲುವಿಗೆ ಕಾರಣರಾದ ಪ್ರಶಾಂತ್ ಕಿಶೋರ್.
ಮೋದಿ ಮುಂದೆ ದೀದಿ ಧೂಳೀಪಟ ಎಂದವರ ಮಾತನ್ನು ಸುಳ್ಳು ಮಾಡಿದವರಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್ ಪ್ರಮುಖರು. ಪ್ರಶಾಂತ್ ಈ ಮೊದಲು ಮೋದಿ ಅಡ್ಡಾದಲ್ಲೇ ಕೆಲಸ ಮಾಡಿ ಬಂದವರು ಅನ್ನುವುದನ್ನು ಹೊಸದಾಗಿ ಏನೂ ಹೇಳಬೇಕಿಲ್ಲ. ಹಾಗಾಗೆ ಒಂದು ಮಟ್ಟದಲ್ಲಿ ಪ್ರಶಾಂತ್‌ಗಿದ್ದ ವರ್ಚಸ್ಸು ದೀದಿ ಗೆಲುವಿನ ಬಳಿಕ ಇಮ್ಮಡಿ ಆಗಿದೆ. ಅದೇ ರೀತಿ ಟಿಎಂಸಿ ಪಕ್ಷಕ್ಕೂ ಬಲ ಬಂದAತಾಗಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧವೇ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಆದರೆ ಅದಕ್ಕೂ ಮುನ್ನ ಒಂದಷ್ಟು ಸಕಲ ಸಿದ್ದತೆಗಳಾಗಬೇಕಿದೆ. ಅದಕ್ಕಾಗಿ ದೀದಿ ಪಶ್ಚಿಮ ಬಂಗಾಳದ ಆಚೆಗೂ ಒಂದೊAದೇ ರಾಜ್ಯದಲ್ಲಿ ಪಕ್ಷವನ್ನು ವಿಸ್ತರಣೆ ಮಾಡುತ್ತಾ ಬಂದಿದ್ದಾರೆ. ಇದರ ಭಾಗವಾಗಿ ಇದೀಗ ಮೇಘಾಲಯದಲ್ಲಿ ೧೨ ಮಂದಿ ಕಾಂಗ್ರೆಸ್ಸಿಗರನ್ನು ಟಿಎಂಸಿಗೆ ಸೆಳೆದುಕೊಂಡು ಪ್ರಮುಖ ಪ್ರತಿಪಕ್ಷ ಸ್ಥಾನಕ್ಕೇರಿ ಟ್ರೇಲರ್ ತೋರಿಸಲಾಗಿದೆ. ಮೇಘಾಲಯದ ಜೊತೆಗೆ ಮಣಿಪುರದಲ್ಲೂ ಟಿಎಂಸಿ ಇಂದು ಪ್ರಬಲ ವಿರೋಧ ಪಕ್ಷ ಸ್ಥಾನಕ್ಕೇರಿದೆ.


ರಾಜ್ಯದ ಬಿಕೆ ಜೊತೆ ಪಿಕೆ ಗುಪ್ತ ಚರ್ಚೆ
ದೀದಿಯನ್ನು ದೆಹಲಿಯ ಗಾದಿಗೇರಿಸುವ ಹೊಣೆ ಹೊತ್ತಿರುವ ಪ್ರಶಾಂತ್ ಕಿಶೋರ್ ಅವರಿಗೆ ಮೊದಲು ದೇಶಾದ್ಯಂತ ಪಕ್ಷವನ್ನು ವಿಸ್ತರಿಸುವ ಸವಾಲು ಎದುರಾಗಿದೆ. ಈ ಸವಾಲಿನಲ್ಲಿ ಮೇಘಾಲಯದ ಮೆಗಾ ಆಪರೇಷನ್ ಸಕ್ಸಸ್ ಆಗಿದೆ. ಇದೇ ಹುರುಪಿನಲ್ಲಿ ಮತ್ತೊಂದಡಿ ಹೆಜ್ಜೆ ಮುಂದಡಿ ಇಟ್ಟಿರುವ ಪಿಕೆ ಕರ್ನಾಟಕದಲ್ಲೂ ಟಿಎಂಸಿ ಪಕ್ಷ ವಿಸ್ತರಿಸಲು ಒಳಗೊಳಗೇ ಕಸರತ್ತು ನಡೆಸಿದ್ದಾರೆ. ಇದರ ಬೆನ್ನಲ್ಲೇ ಕಿಂಚಿತ್ತೂ ಸದ್ದಿಲ್ಲದೇ ಬೆಂಗಳೂರಿಗೆ ಆಗಮಿಸಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿರುವ ಅತೃಪ್ತ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅದರಲ್ಲೂ ಪ್ರಶಾಂತ್ ಬಿಜೆಪಿ-ಕಾಂಗ್ರೆಸ್‌ನಲ್ಲಿ ತಟಸ್ಥವಾಗಿರುವ ನಾಯಕರನ್ನು ಸೆಳೆಯಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಲಿಂಗಾಯತ ಮತಗಳ ಬುಟ್ಟಿಗೆ ಕೈ ಹಾಕುವ ಪ್ರಯತ್ನಕ್ಕೆ ಪ್ರಶಾಂತ್‌ಗೆ ಆರಂಭದಲ್ಲೇ ಹಿನ್ನೆಡೆ ಆಗಿದೆ. ಯಾಕೆಂದರೆ ರಾಜ್ಯದ ಲಿಂಗಾಯತ ನಾಯಕರ ಭೇಟಿ ಪ್ರಯತ್ನ ಮೊದಲ ಪ್ರಯತ್ನದಲ್ಲಿ ವಿಫಲವಾಗಿದೆ.
ಬಿಜೆಪಿ, ಕಾಂಗ್ರೆಸ್ ಮಾತ್ರವಲ್ಲದೇ ಜೆಡಿಎಸ್ ಜೊತೆಗೂ ಪ್ರಶಾಂತ್ ಕಿಶೋರ್ ಚರ್ಚೆ ನಡೆಸಿದ್ದಾರೆ. ಅಲ್ಲದೇ ಇದಾಗಲೇ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವಿನ ಮಂತ್ರ ಬೋಧಿಸುತ್ತಿರುವುದೇ ಇದೇ ಪಿಕೆ. ಹಾಗಾಗಿ ಒಂದು ವೇಳೆ ರಾಜ್ಯದಲ್ಲಿ ಜೆಡಿಎಸ್ ಏನಾದರೂ ಪಿಕೆ ತಂತ್ರಗಾರಿಕೆಯಿAದಾಗಿ ಕೊಂಚ ಮಟ್ಟಿಗೆ ಸುಧಾರಿಸಿದ್ದೇ ಆದರೆ ಟಿಎಂಸಿ ಪಕ್ಷದೊಂದಿಗೆ ಜೊತೆಯಾಗುವಂತೆ ಕುಮಾರಣ್ಣನ ಬಳಿ ಕೇಳಿಕೊಂಡಿದ್ದಾರAತೆ. ಕುಮಾರಣ್ಣ ಅವರೂ ಕೂಡ ಇದಕ್ಕೆ ತಲೆ ಆಡಿಸಿದ್ದಾರೆನ್ನಲಾಗ್ತಿದೆ. ಮೊದಲೇ ದೊಡ್ಡಗೌಡರಿಗೆ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಬೇಕೆಂಬ ಹಠವೂ ಇದೆ. ಜೊತೆಗೆ ಪ್ರಾದೇಶಿಕ ಪಕ್ಷದಿಂದಲೇ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಅನ್ನುವುದು ಅವರ ಬಲವಾದ ನಂಬಿಕೆಯೂ ಆಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ದೀದಿ ಪಕ್ಷದ ಜೊತೆ ಕೈ ಜೋಡಿಸಿದರೂ ಅಚ್ಚರಿಯೇನೂ ಇಲ್ಲ.
ಎಲ್ಲೆಲ್ಲಿ ಟಿಎಂಸಿ ಪಕ್ಷ
ಒಂದೊAದೇ ರಾಜ್ಯದಲ್ಲಿ ಸ್ಥಳೀಯ ಘಟಕ ಸ್ಥಾಪಿಸುತ್ತಿರುವ ಟಿಎಂಸಿ ಪಕ್ಷ ಗೋವಾದಲ್ಲಿ ಮಾಜಿ ಸಿಎಂ ಲುಯಿಜೆನೋ ಫೆಲೆರೋ, ಟೆನಿಸ್ ಕ್ರೀಡಾಪಟು ಲಿಯಾಂಡರ್ ಫೇಸ್ ಸೇರಿದಂತೆ ಹಲವರನ್ನು ಸೆಳೆದು ಪಕ್ಷದ ಜವಾಬ್ದಾರಿ ನೀಡಿದೆ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೂ ಗಾಳ ಹಾಕಲಾಗಿದೆ. ಉತ್ತರ ಪ್ರದೇಶದಲ್ಲಿ ಫೈರ್ ಬ್ರಾಂಡ್ ಖ್ಯಾತಿಯ ವರುಣ್ ಗಾಂಧಿ ಟಿಎಂಸಿ ಸೇರುತ್ತಾರೆ ಎಂಬ ಮಾತಿದೆ. ಇದರ ಹೊರತಾಗಿಯೂ ತಮಿಳುನಾಡು, ಪಂಜಾಬ್, ತ್ರಿಪುರಾ, ಅಸ್ಸಾಂ ರಾಜ್ಯಗಳಲ್ಲೂ ಟಿಎಂಸಿ ಹಂತ ಹಂತವಾಗಿ ನೆಲೆಯೂರುತ್ತಿದೆ. ಇದರ ಬೆನ್ನಲ್ಲೇ ಈಗ ರಾಜ್ಯದಲ್ಲೂ ಘಟಕ ಸ್ಥಾಪಿಸಲು ಮುಂದಾಗಿರುವ ದೀದಿ ಈ ಪ್ರಯತ್ನದಲ್ಲಿ ಯಶಸ್ಸು ಪಡೆಯುತ್ತಾರೆಯೋ ಕಾದು ನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles