ಸಾಮಾನ್ಯವಾಗಿ ಅವಳಿ ಸಹೋದರರು ಅಥವಾ ಸಹೋದರಿಯರು ಮುಂದೆ ಬಂದರೆ ಸಹಜವಾಗಿ ಅವರತ್ತ ಗಮನಹರಿಯುತ್ತದೆ. ಆದರೆ, ನೀವು ನಂಬಲು ಅಸಾಧ್ಯವಾದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.

ಹೌದು, ಜಿಲ್ ಜಸ್ಟಿನಿಯಾನಿ ಮತ್ತು ಎರಿನ್ ಚೆಪ್ಲಕ್ ಹೆಸರಿನ ಅವಳಿ ಸಹೋದರಿಯರು ಒಂದೇ ರೀತಿ ಹೋಲುವ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಶ್ಚರ್ಯದ ವಿಷಯ ಎಂದರೆ ಅವರ ಮಕ್ಕಳು ಬೇರೆ ಬೇರೆ ತಾಯಂದಿರರಿಗೆ ಹೂಡದಿದರೂ ಕೂಡ ನಿಬ್ಬೆರಗಾಗಿಸುವ ಸಮಾನತೆಯನ್ನು ಹೊಂದಿದ್ದಾರೆ.
ಅವಳಿ ಸಹೋದರಿಯರಿಗಿರಲಿಲ್ಲ ಈ ಅಂದಾಜು
ಅಮೆರಿಕದ ಕ್ಯಾಲಿಫೋರ್ನಿಯಾದ ಜಿಲ್ ಜಸ್ಟಿನಿಯಾನಿ ಮತ್ತು ಎರಿನ್ ಚೆಪ್ಲಕ್ ಅವರು ಒಂದೇ ಸಮಯದಲ್ಲಿ ಗರ್ಭಧರಿಸಲು ಪ್ರಯತ್ನಿಸಿದ್ದರು, ಆದರೆ, ಅವರಿಗೆ ತಾವು ಒಂದೇ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ ಗಂಡುಮಕ್ಕಳಿಗೆ ಜನ್ಮ ನೀಡುತ್ತೇವೆ ಎಂಬ ಯಾವ ಕಲ್ಪನೆಯೂ ಇರಲಿಲ್ಲ. ಅವರ ಮಕ್ಕಳ ಮುಖಗಳು ಸಹ ಪರಸ್ಪರ ಹೋಲುತ್ತವೆ ಮತ್ತು ಅವರು ತೂಕವೂ ಕೂಡ ಪರಸ್ಪರ ಹೋಲುತ್ತದೆ.
ಈ ಅವಳಿ ಸಹೋದರಿಯರು ತಮ್ಮ ಮಕ್ಕಳಿಗಾಗಿ ಏಕಕಾಲಕ್ಕೆ ಗರ್ಭಿಣಿಯಾಗುವ ವಿಶೇಷ ಯೋಜನೆ ರೂಪಿಸಿದ್ದರು. ಆದರೆ, ಒಂದೇ ದಿನದಲ್ಲಿ ಗಂಡು ಮಕ್ಕಳು ಜನಿಸಲಿದ್ದಾರೆ ಎಂಬ ಅಂದಾಜು ಅವರಿಗಿರಲಿಲ್ಲ. ಅವರು ತಾಯ್ತನವನ್ನು ಒಟ್ಟಿಗೆ ಆನಂದಿಸಲು ಬಯಸಿದ್ದರು. ಜಿಲ್‌ಗೆ ಮೇ ೫ರಂದು ಸಿ-ಸೆಕ್ಷನ್‌ಗೆ ನಿಗದಿಪಡಿಸಲಾಗಿತ್ತು. ಆದರೆ ಅದೇ ಸಮಯದಲ್ಲಿ ಎರಿನ್‌ಗೂ ಕೂಡ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮೇ ೫ರ ಬೆಳಗ್ಗೆ ಇಬ್ಬರಿಗೂ ತಾಯ್ತನದ ಉಡುಗೊರೆ ಸಿಕ್ಕಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.