ಲೀಥಿಯಂ ಮತ್ತು ಕೊಬಾಲ್ಟ್ ಇವೆರಡೂ ಖನಿಜಗಳೂ ಬ್ಯಾಟರಿ ತಯಾರಿಕೆಯಲ್ಲಿ ಬೇಕಾಗುವ ವಸ್ತುಗಳು. ಚೀನಾವೇ ಪಾರಮ್ಯ ಸಾಧಿಸಿರುವ ಈ ಮಾರುಕಟ್ಟೆಯಲ್ಲಿ ಯಾವುದೇ ದೇಶ ತನ್ನ ಪೂರೈಕೆಯನ್ನು ಖಾತ್ರಿಪಡಿಸಿಕೊಳ್ಳದ ಹೊರತೂ ಲೀಥಿಯಂ-ಆಧರಿತ ಬ್ಯಾಟರಿ ನಂಬಿಕೊಂಡು ವಿದ್ಯುತ್ ಚಾಲಿತ ವಾಹನಗಳ ಕ್ರಾಂತಿ ಮಾಡುತ್ತೇವೆ ಎಂದು ಹೇಳಲಾಗುವುದಿಲ್ಲ. ವಾಹನೋದ್ಯಮ, ಕೆಲ ಲೋಹಗಳಲ್ಲಿ ಸವಕಳಿ ತಡೆಯುವ ಸಾಧನವಾಗಿಯೂ ಕೊಬಾಲ್ಟ್ನ ಬೇರೆ ಬೇರೆ ಉಪಯೋಗಗಳಿವೆ.

ಆಸ್ಟ್ರೇಲಿಯಾದಲ್ಲಿ ಲೀಥಿಯಂ ಮತ್ತು ಕೊಬಾಲ್ಟ್ ಗಣಿಗಳಲ್ಲಿ ಗಣಿಗಾರಿಕೆ ನಡೆಸುವ ಗುತ್ತಿಗೆಯನ್ನು ಭಾರತ ಪಡೆಯುತ್ತಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿರುವುದು ಈ ನಿಟ್ಟಿನಲ್ಲಿ ಒಂದು ಸ್ಪರ್ಧಾತ್ಮಕ ಬೆಳವಣಿಗೆಯಾಗಿದೆ.
ಈ ನಿಟ್ಟಿನಲ್ಲಿ ಭಾರತದ ಸರ್ಕಾರಿ ಸ್ವಾಮ್ಯದ ‘ಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್’, ಆಸ್ಟ್ರೇಲಿಯಾದ ‘ಕ್ರಿಟಿಕಲ್ ಮಿನರಲ್ಸ್ ಫೆಸಿಲಿಟೇಶನ್ ಆಫೀಸ್’ ಜತೆ ಪ್ರಾರಂಭಿಕ ಒಪ್ಪಂದವನ್ನು ಮಾಡಿಕೊಂಡಿದೆ.
